ನನ್ನ_ಪ್ರತಿವರ್ಷದ_ಶ್ರಾವಣ_ಮಾಸದ
ಸದುಪಯೋಗ_ಹೀಗಿದೆ..
#ಇದು_ನನ್ನ_ಸ್ವಂತ_ಪ್ರಯೋಗ_ಯಶಸ್ವಿ_ಆದ_ಕಥೆ.
#ಇದು_ಪುಸ್ತಕ_ರೂಪದಲ್ಲೂ_ಬರಲಿದೆ.
ನೀವು ಕೂಡ ಹಂತ ಹಂತವಾಗಿ ಶ್ರಾವಣ ಮಾಸದಿಂದಲೇ ನಿಮ್ಮ ಸ್ಥೂಲಕಾಯ ನಿವಾರಣೆಗಾಗಿ, ಡಯಾಬಿಟೀಸ್ -ಬಿಪಿ ನಿಯಂತ್ರಣಕ್ಕಾಗಿ ಇದನ್ನು ಪ್ರಾರಂಭಿಸ ಬಹುದು.
ಇವತ್ತಿನಿಂದ ಶ್ರಾವಣ ಮಾಸ ಅಂದರೆ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭವಾಗಿ ಮುಂದಿನ ಅಮವಾಸ್ಯೆ ದಿನಾಂಕ 11 - ಸೆಪ್ಟೆಂಬರ್ -2026 ಶುಕ್ರವಾರದ ತನಕ ಇರಲಿದೆ.
ಶ್ರಾವಣ ಮಾಸ ಬಂತು ಎಂದರೆ ಹಬ್ಬಗಳ ಸಾಲು ಸಾಲು ಪ್ರಾರಂಭ..
ಶ್ರಾವಣ ಸೋಮವಾರ ಆಚರಣೆ, ವರಮಹಾಲಕ್ಷ್ಮಿ ವೃತ,ನಾಗರ ಪಂಚಮಿ, ರಕ್ಷಾ ಬಂಧನ, ಕೃಷ್ಣಾಷ್ಟಮಿಗಳು.
ಹಿಂದೂ ಧರ್ಮದಲ್ಲಿ ಪ್ರತಿ ಮನೆಗಳಳಲ್ಲಿ ಅಸ್ತಿಕ -ನಾಸ್ತಿಕರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ.
ಬೇರೆ ಧರ್ಮಗಳಲ್ಲಿ ನಾಸ್ತಿಕರಿಗೆ ಪ್ರಾರ್ಥನ ಮಂದಿರ ಮತ್ತು ಅವರ ಸಮಾದಿಗಳಲ್ಲಿ ಕೆಲವು ಕಠಿಣ ಕಟ್ಟುಪಾಡುಗಳಿದೆ ಆದರೆ ಹಿಂದೂ ಧರ್ಮದಲ್ಲಿ ನಾಮಕರಣ - ವಿವಾಹ ಮತ್ತು ಅಂತ್ಯ ಸಂಸ್ಕಾರದಲ್ಲಿ ಅಂತಹ ಕಟ್ಟು ಪಾಡು ಇಲ್ಲ.
ನಾನು ಪ್ರತಿ ವರ್ಷ ಶ್ರಾವಣ ಮಾಸವನ್ನ ನನ್ನದೇ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಆಚರಿಸುತ್ತೇನೆ.
ಇದರಲ್ಲಿ ನನ್ನ ತೂಕ ನಿಯಂತ್ರಣ, ಡಯಾಬಿಟೀಸ್ ಮತ್ತು ಬಿಪಿ ನಿಯಂತ್ರಣವನ್ನ ಕೇಂದ್ರಿಕರಿಸಿ ನನ್ನ ದೇಹ ಶುದ್ಧಿ (detox ) ಮಾಡುತ್ತೇನೆ.
ಇವತ್ತಿನಿಂದ ಶ್ರಾವಣ ಮಾಸ ಪೂರ್ತಿ ನಾನು ಕಾಫಿ ಅಥವ ಟೀ ಸೇವಿಸುವುದಿಲ್ಲ, ರಾತ್ರಿ ಊಟ ತ್ಯಜಿಸಿ ಏಳು ವರ್ಷ ಆಯಿತು ಅದು ಮುಂದುವರಿದಿದೆ.
ನಾನು ವಾರದಲ್ಲಿ ಸೋಮವಾರ ಮತ್ತು ಗುರುವಾರ ಉಪವಾಸ ಮಾಡುತ್ತೇನೆ ಉಳಿದ ಐದು ದಿನ ವಾರದಲ್ಲಿ ಮಧ್ಯಾಹ್ನ ಮಾತ್ರ ಊಟ ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ,ಧಾನ್ಯಗಳು (ಕಾರ್ಬೋಹೈಡ್ರೇಟ್ ) ಇದರಿಂದ ನನ್ನ ಡಯಾಬಿಟೀಸ್ ರಿವರ್ಸಲ್ ನಿರಂತರವಾಗಿ ಮುಂದುವರಿಯಲು ಅತ್ಯವಶ್ಯಕ.
ಇದೆಲ್ಲ ನಾನು ಕೆಲ ವರ್ಷಗಳ ಹಿಂದಿನ ಶ್ರಾವಣ ಮಾಸದಲ್ಲಿಯೇ ಒಂದೊಂದೆ ಆಚರಣೆ ಪ್ರಾರಂಬಿಸಿ ನಿತ್ಯ ಆಚರಣೆಗೆ ತಂದಿದ್ದು.
ಪ್ರತಿ ನಿತ್ಯದ ಒಂದು ಗಂಟೆ ವಾಕಿಂಗ್, ಸಿದ್ದ ಸಮಾಧಿ ಯೋಗದ ಧ್ಯಾನ, ಪ್ರಾಣಯಾಮ ಗಳು ಕೂಡ ಮುಂದುವರಿಯುತ್ತದೆ.
ನನ್ನ ಅವತ್ತಿನ 145 ಕಿಲೋ ತೂಕ ಈಗ 97 - 98 ರಲ್ಲಿದೆ, ಡಯಾಬಿಟೀಸ್ ನಿಯಂತ್ರಣಕ್ಕಾಗಿ ದಿನಕ್ಕೆ ಬೆಳಿಗ್ಗೆ ರಾತ್ರಿ ತೆಗೆದುಕೊಳ್ಳುತ್ತಿದ್ದ ಇನ್ಸುಲಿನ್ ಮಾತ್ರೆಗಳು ಈಗ ಇಲ್ಲ ಎಲ್ಲಾ ರೀತಿಯ ಸಿಹಿ ತಿಂದರೂ ಖಾಲಿ ಹೊಟ್ಟೆಯಲ್ಲಿ ಗರಿಷ್ಟ ಶುಗರ್ ಲೆವೆಲ್ 120 ಮತ್ತು ಊಟದ ನಂತರ 140 ದಾಟುತ್ತಿಲ್ಲ.
ಬಿಪಿ ನಾರ್ಮಲ್ ಇದೆ ಅದಕ್ಕೆ ಸಂಜೆ ಒಂದು ಮಾತ್ರೆ ಮಾತ್ರ ಇದೆ, ಗೊರಕೆ ಸಂಪೂರ್ಣ ನಿಂತಿದೆ, ಹೊಕ್ಕಳಿನ ಹರ್ನಿಯ ಮಾಯವಾಗಿದೆ ಇದು ನನ್ನ ಸ್ವಂತ ಪ್ರಾಯೋಗ ಯಶಸ್ವಿ ಆದ ಕಥೆ.
ಈ ಬಗ್ಗೆ ನಾನು ಬರೆದ ಪುಸ್ತಕ ಮುಂದಿನ ವರ್ಷದ ಶ್ರಾವಣ ಮಾಸದಲ್ಲಿ ಬಿಡುಗಡೆ ಮಾಡಬೇಕು ಅದಕ್ಕೆ ಏನು ಶೀರ್ಷಿಕೆ ಇಡಲಿ?...
#ನನ್ನ_ಡಯಾಬಿಟೀಸ್_ರಿವರ್ಸಲ್
#ಮತ್ತು_ಸ್ಥೂಲಕಾಯದ_ನಿವಾರಣೆ ಅಂತ ಇಡಬೇಕಂತ ಮಾಡಿದ್ದೇನೆ.
ಇದೆಲ್ಲ ನೀವು ಕೂಡ ಹಂತ ಹಂತವಾಗಿ ಶ್ರಾವಣ ಮಾಸದಿಂದಲೇ ನಿಮ್ಮ ಸ್ಥೂಲಕಾಯ ನಿವಾರಣೆಗಾಗಿ, ಡಯಾಬಿಟೀಸ್ -ಬಿಪಿ ನಿಯಂತ್ರಣಕ್ಕಾಗಿ ಪ್ರಾರಂಭಿಸ ಬಹುದು.
#shravanamasa #weightloss #obesity #diabetes #reversel #bp
#insulim #ssy #siddasamadiyoga #detoxing
Comments
Post a Comment