Skip to main content

4114. ಟಿ_ಪಿ_ಕೈಲಾಸಂಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.


ಟಿ_ಪಿ_ಕೈಲಾಸಂ

ಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.

  ​ಕೈಲಾಸಂ ಅವರು ಇಂಗ್ಲೆಂಡ್‌ನಿಂದ ಹಿಂದಿರುಗಿದಾಗ, ಭಾರತದಲ್ಲಿದ್ದ (ವಿಶೇಷವಾಗಿ ಮೈಸೂರು/ಬೆಂಗಳೂರು ಪ್ರಾಂತ್ಯದ) ಅಂದಿನ ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನು ಹತ್ತಿರದಿಂದ ನೋಡಿದರು. 

  ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲು ಬಾಯಿಪಾಠ (Rote learning) ಮಾಡುವುದನ್ನು, ಪೋಷಕರು ಅಂಕಗಳ ಆಧಾರದ ಮೇಲೆ ಮಕ್ಕಳನ್ನು ಅಳೆಯುವುದನ್ನು ಕಂಡು, ಆ ಪದ್ಧತಿಗೆ ವಿರೋಧವಾಗಿ ಹಾಗೂ ಜಾಗೃತಿ ಮೂಡಿಸಲು ಈ ನಾಟಕವನ್ನು ಬರೆದರು.

   ಇನ್ನೂ ಒಂದು ವಿಶೇಷ ಆ ನಾಟಕದ ಮೊದಲ ರಂಗ ಪ್ರಯೋಗ ಆಗಿದ್ದು ಕುಂಸಿಯಲ್ಲಿ.

 ಕುಂಸಿ -ಚೋರಡಿ ಮತ್ತು  ತುಪ್ಪೂರಿನಲ್ಲಿದ್ದ MML ಮ್ಯಾಂಗನೀಸ್ ಗಣಿಯ ಉನ್ನತಾಧಿಕಾರಿ ಆಗಿದ್ದರು ಟಿ.ಪಿ. ಕೈಲಾಸಂ.

  ಮಹಾನ್ ನಾಟಕಕಾರ ಸಾಹಿತಿ ಟಿ.ಪಿ.ಕೈಲಾಸಂ ಶಿವಮೊಗ್ಗ ಜಿಲ್ಲೆಯಲ್ಲಿ ನಾಟಕ ಬರೆದರು ಮತ್ತು ಅ ನಾಟಕ  ಪ್ರದರ್ಶನ ಕುಂಸಿ ಎಂಬ ಊರಲ್ಲಿ ಮಾಡಿಸಿದ್ದರು ಎಂಬುದೇ ವಿಶೇಷ ಸುದ್ದಿ.

    ಟಿ.ಪಿ.ಕೈಲಾಸಂ ಬರೆದ ಕೊ ಕೋ ಕೋಳಿಕೆ ರಂಗ ಎಂಬ ಹಾಡು ಕನ್ನಡದ ಖ್ಯಾತ ಗಾಯಕ ಕಾಳಿಂಗರಾವ್ ದ್ವನಿಯಲ್ಲ ಅದ್ಬುತವಾಗಿ ಮೂಡಿ ಬರುತ್ತಿತ್ತು ನೆನಪಿಸಿಕೊಳ್ಳಿ.

   ನಮ್ಮ ಶಿವಮೊಗ್ಗ ತಾಲ್ಲೂಕಿನ ಕುಂಸಿ, ಚೋರಡಿ ಮತ್ತುತುಪ್ಪೂರು ಬಾಗಗಳಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯನ್ನ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಕಂಪನಿ MML ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿತ್ತು.

  ಈಗಲೂ ಅಲ್ಲಿ ಮ್ಯಾಂಗನೀಸ್ ಅದರು ತೆಗೆದ ಗಣಿಗಳಿದೆ ಈಗ ಈ ಪ್ರದೇಶ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ಮ್ಯಾಂಗನೀಸ್ ಗಣಿಗಾರಿಕೆ ಇಲ್ಲಿ ಈಗ ಸ್ಥಗಿತವಾಗಿದೆ.
  
   ನಾಟಕಕಾರರು, ಕನ್ನಡ ಸಾಹಿತಿಗಳು ಆಗಿದ್ದ ಟಿ.ಪಿ ಕೈಲಾಸಂ'ರವರು 1918ರಲ್ಲಿ ಮೈಸೂರು ಮಿನರಲ್ಸ್  ಸಂಸ್ಥೆಯಲ್ಲಿ ಉನ್ನತ ಅಧಿಕಾರಿಗಳಾಗಿ ಕುಂಸಿ - ಚೋರಡಿ ಮತ್ತು ತುಪ್ಪೂರು ಭಾಗದ ಮ್ಯಾಂಗನೀಸ್ ಗಣಿಗಳ ಜವಾಬ್ದಾರಿ ವಹಿಸಿದ್ದರು. 

   ಆಗ ಅವರು ಶಿವಮೊಗ್ಗ ಪಟ್ಟಣದಲ್ಲಿ ವಾಸವಿದ್ದರು, ಅವರು MML ನಲ್ಲಿ ಕೆಲಸದಲ್ಲಿದ್ದಾಗಲೇ ಶಿವಮೊಗ್ಗದಲ್ಲಿದ್ದಾಗಲೇ ಅವರ ಖ್ಯಾತ ನಾಟಕ #ಟೊಳ್ಳುಗಟ್ಟಿ ಬರೆಯುತ್ತಾರೆ.

   ಟಿ.ಪಿ. ಕೈಲಾಸಂ ಅವರಿಗೆ  ರಂಗಾಸಕ್ತಿ ಹೆಚ್ಚು ಆದ್ದರಿಂದ ಈ ಬಾಗದ ಸ್ಥಳೀಯರನ್ನ ಸೇರಿಸಿಕೊಂಡು ಟೊಳ್ಳುಗಟ್ಟಿ ನಾಟಕ ನಿರ್ಧೇಶನ ಮಾಡಿ ಕುಂಸಿಯಲ್ಲಿ ಆ ನಾಟಕ ಪ್ರದರ್ಶನ ನೀಡಿದ್ದರು, ನಂತರವೂ ಅವರು ಇಲ್ಲಿ ಸೇವೆ ಸಲ್ಲಿಸುವಾಗ ಅನೇಕ ನಾಟಕ ಪ್ರದರ್ಶನ ಮಾಡಿಸಿದ್ದರಂತೆ. 

     ಟಿ.ಪಿ.ಕೈಲಾಸಂ ಅಂದರೆ #ತ್ಯಾಗರಾಜ_ಪರಮಶಿವ_ಕೈಲಾಸಂ  ಜನನ 29- ಜುಲೈ- 1884  ಮತ್ತು ಮರಣ 26 - ಡಿಸೆಂಬರ್-1946.

    ಒಬ್ಬ ಭಾರತೀಯ ನಾಟಕಕಾರ ಮತ್ತು ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರರಾಗಿದ್ದರು,ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶೆಯನ್ನು ಕೈಲಾಸಂ ತಮ್ಮ ಕೃತಿಗಳಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ.

   ಕನ್ನಡ ನಾಟಕೀಯ ಹಾಸ್ಯಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ಅವರಿಗೆ ಪ್ರಹಸನ ಪ್ರಪಿತಾಮಹ (ಹಾಸ್ಯ ನಾಟಕಗಳ ಮುತ್ತಜ್ಜ) ಎಂಬ ಬಿರುದು ದೊರಕಿತು ನಂತರ ಅವರನ್ನು "ಕನ್ನಡದ ಏಕೈಕ ಕೈಲಾಸಂ" ಎಂದು ಗೌರವಿಸಲಾಯಿತು.

   ಕೈಲಾಸಂ ಅವರ ಜೀವನವು ಸ್ಥಳೀಯ ರಂಗಭೂಮಿಗೆ ಮೀಸಲಾಗಿತ್ತು ಅವರ ಹಾಸ್ಯವು ಕನ್ನಡಿಗರ ಮೇಲೆ ಒಂದು ಪ್ರಭಾವ ಬೀರಿತು.

    ಅವರು ಕಂಪನಿ ರಂಗಭೂಮಿಯ ಪುರಾಣ ಮತ್ತು ರಾಜಮನೆತನದ ಕಥೆಗಳ ಗೀಳನ್ನು ವಿರೋಧಿಸಿದರು ಮತ್ತು ಅವರ ನಾಟಕಗಳಿಗೆ ಸಂಗೀತವನ್ನು ತುಂಬಲು ಇಷ್ಟ ಪಡಲಿಲ್ಲ ಬದಲಾಗಿ ಅವರು ಸರಳ, ವಾಸ್ತವಿಕ ಸೆಟ್‌ಗಳನ್ನು ಪರಿಚಯಿಸಿದರು. 

   ಕೈಲಾಸಂ 1945 ರಲ್ಲಿ ಮದ್ರಾಸ್‌ನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

     ಕೈಲಾಸಂ ಅವರು ಮೈಸೂರು ರಾಜ್ಯದ (ಈಗ ಕರ್ನಾಟಕ ) ಮೈಸೂರಿನಲ್ಲಿ ತಮಿಳು ಅಯ್ಯರ್  ಕುಟುಂಬದಲ್ಲಿ ಜನಿಸಿದರು.

  ಅವರ ತಂದೆ ತ್ಯಾಗರಾಜ ಪರಮಶಿವ ಅಯ್ಯರ್ ತಾಯಿ ಕಮಲಮ್ಮ  ಮೈಸೂರು ಸರ್ಕಾರದಲ್ಲಿ ಕಂದಾಯ ಸಂಗ್ರಾಹಕರಾಗಿದ್ದರು  ನಂತರ ಅವರು ಮೈಸೂರು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದರು.

 ಅವರ ತಂದೆಯ ಸಹೋದರ ಸರ್ ಟಿ. ಸದಾಶಿವ ಅಯ್ಯರ್  ತಿರುವಾಂಕೂರು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದರು.

   ಸರ್ ಸಿ.ವಿ. ರಾಮನ್ ಇವರ ತಂದೆಯ ಸೋದರಸಂಬಂಧಿ.

    ಕೈಲಾಸಂ ಉತ್ತಮ ಶಿಕ್ಷಣ ಪಡೆದರು, ಲಂಡನ್‌ನ ರಾಯಲ್ ಕಾಲೇಜ್ ಆಫ್ ಸೈನ್ಸ್‌ನಲ್ಲಿ ಭೂವಿಜ್ಞಾನವನ್ನು ಅಧ್ಯಯನ ಮಾಡಲು ಮಹಾರಾಜ ಕೃಷ್ಣರಾಜ ಒಡೆಯರ್ IV ಅವರ ಬೆಂಬಲವನ್ನು ಪಡೆದರು. 

     ಅವರ ಆಪ್ತ ಸ್ನೇಹಿತರು ಮತ್ತು ಸಹಪಾಠಿಗಳಾಗಿದ್ದವರು ಕೆ.ವಿ. ಅಯ್ಯರ್ ಮತ್ತು ವಿ. ಸೀತಾರಾಮಯ್ಯ.
 
  ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡುವಾಗ ರಂಗಭೂಮಿಯಲ್ಲಿ ಭಾಗವಹಿಸಿದ್ದರು.

ವಿಶಿಷ್ಟ ಸಂವೇದನೆಯ ನಾಟಕಕಾರ ಟಿ. ಪಿ. ಕೈಲಾಸಂ ಅವರ ಕೃತಿಗಳಲ್ಲಿ ಲಭ್ಯವಾದವು 17 ಕನ್ನಡ ಮತ್ತು 4 ಇಂಗ್ಲಿಷ್ ನಾಟಕಗಳು. 

   ಕಥಾ ಹಂದರವನ್ನು ನಿರೂಪಿಸಿ, ಪೂರ್ತಿಗೊಳಿಸಲಾರದವು ಅದೆಷ್ಟೋ.

    ಹಾಸ್ಯ ಸಾಹಿತ್ಯ, ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದ ಅವರು ಸ್ವತಃ ನಾಟಕಗಳನ್ನು ಬರೆಯುವುದರ ಹೊರತಾಗಿ ಇತರರಿಗೆ ಹೇಳಿ ಬರೆಸಿದ್ದೇ ಹೆಚ್ಚು. 

   ಟೊಳ್ಳೂಗಟ್ಟಿ, ಬಹಿಷ್ಕಾರ, ಗಂಡಸ್ಕತ್ರಿ, ಪೋಲಿಕಿಟ್ಟಿ, ಸೂಳೆ, ನಂತರ ಕನ್ನಡ ಸಾಮಾಜಿಕ ನಾಟಕಗಳನ್ನೂ ತಾವರೆಕೆರೆ (ಕಥಾಸಂಗ್ರಹ), ಕೋಳಿಕೇರಂಗ (ಹಾಡುಗಳು), ಕರ್ಣ, ಕೀಚಕ (ಇಂಗ್ಲಿಷ್ ನಾಟಕಗಳು) ಪ್ರಸಿದ್ದಿ ಪಡೆದ ಸಾಹಿತ್ಯಗಳು.

   #kumsi #shivamogga #mml #tuppuru #choradi
#TPKilasam #MML #Shivamogga
#karnatakastategovernment #mines #manganis #tpkilasam #drama #kilasam #kumsi #drama 
#tollugatti

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...