ಸಾಮಾಜಿಕ_ಮಾಧ್ಯಮ
ಜನಸಾಮಾನ್ಯರ_ಧ್ವನಿ
ಒಂದು ಕಾಲದಲ್ಲಿ ಜನ ಸಾಮಾನ್ಯರ ಧ್ವನಿ ಆಗಿದ್ದ ಮುಖ್ಯವಾಹಿನಿ ಮಾಧ್ಯಮಗಳು ಈಗ TRP ಮತ್ತು ಕಾರ್ಪೋರೆಟ್ ಹಿತಾಸಕ್ತಿಯಿಂದ ಮೂಲೆಗುಂಪಾಗಿದೆ.
ಹೀಗೆ ಬರೆದವರು 90 ರ ದಶಕದಲ್ಲಿ ಕನ್ನಡದ ಉದಯ TV ಬ್ಯೂರೋ ಚೀಪ್ ಆಗಿದ್ದ #ರುದ್ರಪ್ಪನವರು ಇದು ಸತ್ಯ ಕೂಡ.
ಅವರು ಬರೆದದ್ದು ...
Yes, mainstream news media was once proactive. It regularly took up issues of public interest on its own. That role has now shifted to social media. #Mainstream_media has become largely reactive — it begins reporting only after an issue has already gained momentum. Today, the real hero of the masses, the downtrodden, women and children is #social_media.
ಅವರ ಪೇಸ್ ಬುಕ್ ಲೇಖನದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಹಿಂದೆ ಸಮಾಜದ ಧ್ವನಿಯಾಗಿ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ತಾವಾಗಿಯೇ ಮುನ್ನೆಲೆಗೆ ತರುತ್ತಿದ್ದವು.
ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಮುಖ್ಯವಾಹಿನಿ ಮಾಧ್ಯಮಗಳು ಕೇವಲ 'ಪ್ರತಿಕ್ರಿಯಾತ್ಮಕ' (Reactive) ಆಗಿ ಉಳಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯವೊಂದು ವೈರಲ್ ಆದ ನಂತರವಷ್ಟೇ ಜಾಗೃತಗೊಳ್ಳುತ್ತಿವೆ.
ಸಾಮಾಜಿಕ ಮಾಧ್ಯಮ ಇಂದಿನ ನಿಜವಾದ ಜನಸಾಮಾನ್ಯರ ಧ್ವನಿ ಆಗಿದೆ.
ಒಂದು ಕಾಲದಲ್ಲಿ ಪತ್ರಿಕೆಗಳು ಮತ್ತು ನ್ಯೂಸ್ ಚಾನೆಲ್‌ಗಳು ಶೋಷಿತರ, ಶೋಷಣೆಗೆ ಒಳಗಾದ ಮಹಿಳೆಯರ, ಮಕ್ಕಳ ಮತ್ತು ಸಾಮಾನ್ಯ ಜನರ ದನಿಯಾಗಿದ್ದವು.
ಆದರೆ ಇಂದು ಟಿಆರ್‌ಪಿ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ನಡುವೆ ನೈಜ ಸಮಸ್ಯೆಗಳು ಮೂಲೆಗುಂಪಾಗಿವೆ.
ಈ ಖಾಲಿ ಜಾಗವನ್ನು ಇಂದು ಸೋಷಿಯಲ್ ಮೀಡಿಯಾ ಭರ್ತಿ ಮಾಡಿದೆ.
ತಕ್ಷಣದ ಸ್ಪಂದನೆ ಮತ್ತು ತಳಮಟ್ಟದ ಸತ್ಯ, ಗ್ರಾಮೀಣ ಪ್ರದೇಶದ ಸಣ್ಣ ಅನ್ಯಾಯವಾಗಲಿ ಅಥವಾ ಶೋಷಣೆಯಾಗಲಿ ಇಂದು ಕೇವಲ ಒಂದು ಫೇಸ್‌ಬುಕ್ ಪೋಸ್ಟ್, ಎಕ್ಸ್ (ಟ್ವಿಟರ್) ಟ್ವೀಟ್ ಅಥವಾ ವಿಡಿಯೋ ಇಡೀ ದೇಶದ ಗಮನ ಸೆಳೆಯುತ್ತದೆ.
ಇದರಿಂದ ಸಾಮಾನ್ಯನ ಕೈಯಲ್ಲಿ ಅಧಿಕಾರ ಬಂದಿದೆ, ಯಾವುದೇ ಮಾಧ್ಯಮದ ಹಸ್ತಕ್ಷೇಪವಿಲ್ಲದೆ ಸಾಮಾನ್ಯ ಪ್ರಜೆಯೂ ನೇರವಾಗಿ ತನ್ನ ಕಷ್ಟವನ್ನು ಜಗತ್ತಿನ ಮುಂದೆ ಇಡಲು ಇಂದು ಸಾಮಾಜಿಕ ಜಾಲತಾಣಗಳು ವೇದಿಕೆ ಕಲ್ಪಿಸಿವೆ.
ಇದರಿಂದ ಆದ ಅನುಕೂಲಕರ ಬದಲಾವಣೆ ಏನೆಂದರೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ತುಳಿತಕ್ಕೊಳಗಾದವರ ಹಕ್ಕುಗಳ ಹೋರಾಟ ಇಂದು ಸಾಮಾಜಿಕ ಮಾಧ್ಯಮಗಳ ಮೂಲಕವೇ ಸಾರ್ವಜನಿಕ ಚಳವಳಿಯಾಗಿ ರೂಪುಗೊಳ್ಳುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗುವ ಸಾರ್ವಜನಿಕ ಒತ್ತಡಕ್ಕೆ ಹೆದರಿ ಸರ್ಕಾರಗಳು ಮತ್ತು ಆಡಳಿತ ಯಂತ್ರ ತಕ್ಷಣ ಕ್ರಮಕೈಗೊಳ್ಳುವಂತಾಗಿದೆ.
ಮುಖ್ಯವಾಹಿನಿ ಮಾಧ್ಯಮಗಳು ಕಣ್ಣು ಮುಚ್ಚಿ ಕುಳಿತಾಗ, ಸಮಾಜಕ್ಕೆ ಕಣ್ಣು, ಕಿವಿ ಮತ್ತು ಧ್ವನಿಯಾಗಿ ನಿಂತಿರುವುದು ಇದೇ ಸಾಮಾಜಿಕ ಮಾಧ್ಯಮಗಳು,
ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆಗೆ ಬಳಸದೆ, ಅನ್ಯಾಯದ ವಿರುದ್ಧದ ಅಸ್ತ್ರವಾಗಿ ಮತ್ತು ಸಮಾಜದ ಒಳಿತಿಗಾಗಿ ಜವಾಬ್ದಾರಿಯಿಂದ ಬಳಸುವುದು ಇಂದಿನ ಅಗತ್ಯವಾಗಿದೆ.
ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.
#SocialMediaPower #PublicVoice #MainstreamMedia #SocialJustice #KannadaArticle #udayatvrudrappa
Comments
Post a Comment