#ಕೊರಾನಾ ಲಾಕ್ ಡೌನ್ ಡೈರಿ - ಲೆಟರ್ ನಂ 5. (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 3-ಏಪ್ರಿಲ್ - 2020 #ಕೊರಾನವೈರಸ್ ಗೆ ಸಾವು ನೋವಿನಲ್ಲೂ ಕೋಮು ಸೌಹಾದ೯ಕ್ಕೆ ಕಂದಕ ನಿಮಾ೯ಣ# ವಿಶ್ವದಾದ್ಯಂತ ಈ ವೈರಸ್ ನಿಂದ ಆಗುತ್ತಿರುವ ಸಾವಿನ ಸರಣಿ ಕಣ್ಣೆದುರಲ್ಲಿ ಕಾಣುತ್ತಿದೆ, ಶ್ರೀಮಂತ ದೇಶಗಳೆ ಇದನ್ನ ನಿಯಂತ್ರಿಸಲಾಗದೆ ಕೈಚೆಲ್ಲಿದೆ. ಇದಕ್ಕೆ ಇನ್ನೂ ಮದ್ದು ಕಂಡು ಹಿಡಿದಿಲ್ಲ ಯಾವುದೇ ರೋಗ ನಿರೋದಕ ಲಸಿಕೆ ಇಲ್ಲ ಇಂತಹ ಗಂಡಾ೦ತರಕಾರಿ ಸನ್ನಿವೇಷದಲ್ಲಿ ಬಾರತ ಸಕಾ೯ರ ಕೆಲ ಕಾಲ ಲಾಕ್ ಡೌನ್ ಪ್ರಾರಂಬಿಸಿದೆ. ಇದರ ಉದ್ದೇಶ ಈ ವೈರಸ್ ಹರಡುವ ಕಾರಣವಾದ ಎಲ್ಲಾ ಸಾಮೂಹಿಕ ಪ್ರಾಥ೯ನೆ ಜಾತ್ರೆ ಸಂತೆ ಬಸ್ ರೈಲು ವಿಮಾನ ರದ್ದು ಮಾಡಿದೆ. ಪರಸ್ಪರ ಅಂತರ ಪದೇ ಪದೇ ಕೈ ಸೋಪಿನಿಂದ ತೊಳೆಯುವುದು, ಹೊರ ದೇಶ ಅಥವ ರಾಜ್ಯದಿಂದ ಬಂದವರು ಆಯಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಅವರನ್ನ ಸೂಕ್ತ ಪರೀಕ್ಷೆ ಚಿಕಿತ್ಸೆಯಿಂದ ಈ ವೈರಾಣು ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸ ಆರೋಗ್ಯ ಇಲಾಖೆ ಜಿಲ್ಲಾ ಆಡಳಿತ ನಡೆಸಿದೆ. ಇದೆಲ್ಲ ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಮುನ್ನೆಚ್ಚರಿಕೆ ಆಗಿದೆ. ಆದರೆ ಎಲ್ಲದಕ್ಕೂ ಜಾತಿ ದಮ೯ ಬೆರೆಸುವ ಭಾರತದಲ್ಲಿ ಕೊರಾನ ವೈರಸ್ ನಲ್ಲೂ ಇದನ್ನ ಬೆರೆಸಿ ಬಿಟ್ಟಿದ್ದಾರೆ, ಇನ್ನೂ ಮುಂದೆ ...