#ಕೊರಾನಾ ಲಾಕ್ ಡೌನ್ ಡೈರಿ - ಲೆಟರ್ ನಂ 5.
(ಕೆ.ಅರುಣ್ ಪ್ರಸಾದ್)
(25-ಮಾಚ್೯ - 2020 ರಿಂದ 3-ಏಪ್ರಿಲ್
- 2020
ವಿಶ್ವದಾದ್ಯಂತ ಈ ವೈರಸ್ ನಿಂದ ಆಗುತ್ತಿರುವ ಸಾವಿನ ಸರಣಿ ಕಣ್ಣೆದುರಲ್ಲಿ ಕಾಣುತ್ತಿದೆ, ಶ್ರೀಮಂತ ದೇಶಗಳೆ ಇದನ್ನ ನಿಯಂತ್ರಿಸಲಾಗದೆ ಕೈಚೆಲ್ಲಿದೆ.
ಇದಕ್ಕೆ ಇನ್ನೂ ಮದ್ದು ಕಂಡು ಹಿಡಿದಿಲ್ಲ ಯಾವುದೇ ರೋಗ ನಿರೋದಕ ಲಸಿಕೆ ಇಲ್ಲ ಇಂತಹ ಗಂಡಾ೦ತರಕಾರಿ ಸನ್ನಿವೇಷದಲ್ಲಿ ಬಾರತ ಸಕಾ೯ರ ಕೆಲ ಕಾಲ ಲಾಕ್ ಡೌನ್ ಪ್ರಾರಂಬಿಸಿದೆ.
ಇದರ ಉದ್ದೇಶ ಈ ವೈರಸ್ ಹರಡುವ ಕಾರಣವಾದ ಎಲ್ಲಾ ಸಾಮೂಹಿಕ ಪ್ರಾಥ೯ನೆ ಜಾತ್ರೆ ಸಂತೆ ಬಸ್ ರೈಲು ವಿಮಾನ ರದ್ದು ಮಾಡಿದೆ.
ಪರಸ್ಪರ ಅಂತರ ಪದೇ ಪದೇ ಕೈ ಸೋಪಿನಿಂದ ತೊಳೆಯುವುದು, ಹೊರ ದೇಶ ಅಥವ ರಾಜ್ಯದಿಂದ ಬಂದವರು ಆಯಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಅವರನ್ನ ಸೂಕ್ತ ಪರೀಕ್ಷೆ ಚಿಕಿತ್ಸೆಯಿಂದ ಈ ವೈರಾಣು ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸ ಆರೋಗ್ಯ ಇಲಾಖೆ ಜಿಲ್ಲಾ ಆಡಳಿತ ನಡೆಸಿದೆ.
ಇದೆಲ್ಲ ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಮುನ್ನೆಚ್ಚರಿಕೆ ಆಗಿದೆ.
ಆದರೆ ಎಲ್ಲದಕ್ಕೂ ಜಾತಿ ದಮ೯ ಬೆರೆಸುವ ಭಾರತದಲ್ಲಿ ಕೊರಾನ ವೈರಸ್ ನಲ್ಲೂ ಇದನ್ನ ಬೆರೆಸಿ ಬಿಟ್ಟಿದ್ದಾರೆ, ಇನ್ನೂ ಮುಂದೆ ಹೋಗಿರುವ ಅಲ್ಪಸಂಖ್ಯಾತ ಸಮೂದಾಯದ ದಾಮಿ೯ಕ ಗುರುಗಳ ಉಪದೇಶ ಮೋದಿ ಮತ್ತು ಬಿಜೆಪಿ ಪಕ್ಷದ ಷಡ್ಯಂತ್ರ,ಕೊರಾನಾ ಸುಳ್ಳು ಅನ್ನುವ ಸಂದೇಶ ಬಿತ್ತರಿಸುತ್ತಿದ್ದಾರೆ ಇದರಿಂದ ಸಕಾ೯ರದ ಎಲ್ಲಾ ಮುOಜಾಗೃತ ಕ್ರಮ ವಿರೋದಿಸುವ ಸಹಕಾರ ನೀಡದ ಅನೇಕ ಘಟನೆಗಳನ್ನ ನೋಡುತ್ತಿದ್ದೇವೆ.
ದೆಹಲಿಯ ನಿಜಾಮುದ್ದೀನ್ ಮಕಾ೯ಜ್ ನ ತಬ್ಲೀಕ್ ಸಮಾವೇಶದಲ್ಲಿ ಭಾಗವಹಿಸಿದವರಿಗೆ ಮತ್ತು ಇವರ ಸಂಪಕ೯ಕ್ಕೆ ಬಂದವರಿಗೆ ಹೆಚ್ಚಿನ ಜನಕ್ಕೆ
ಕೊರಾನ ವೈರಸ್ ಹರಡುತ್ತಿರುವುದು ಭಯ ಉoಟು ಮಾಡಿದೆ ಇಡೀ ದೇಶದಲ್ಲಿ .
ಮುಸ್ಲಿಂ ಸಮಾಜದ ಮುಖಂಡರುಗಳು ಈ ಬಗ್ಗೆ ಹೆಚ್ಚು ಜನ ಜಾಗೃತಿ ಮಾಡಲು ಮುಂದಾಗಬೇಕು, ಪರೀಕ್ಷಿಸಲು ಮಾಹಿತಿ ಸಂಗ್ರಹಿಸಲು ಬರುವ ಆರೋಗ್ಯ ಇಲಾಖೆ ಸಿಬ್ಬ೦ದಿಯ ಮೇಲೆ ಹಲ್ಲೆ ಮಾಡುವುದು, ಸಹಕರಿಸದಂತ ಘಟನೆ ಮರುಕಳಿಸದಂತೆ ಜಾಗೃತಿ ವಹಿಸಿಬೇಕಾಗಿದೆ.
ಮುಸ್ಲಿಂ ಸಮಾಜದ ವಿದ್ಯಾವಂತರು ಪ್ರಗತಿಪರರು ಈ ವಿಚಾರದಲ್ಲಿ ರಾಜಕೀಯ ಬೆರೆಸದೆ ಸಮೂದಾಯದ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ಅವರೆಲ್ಲ ಎದ್ದು ಮುಂದೆ ಬಂದರೆ ಮೌಡ್ಯ ಬಿತ್ತುವ ಜನರ ಸಾವು ನೋವಿಗೆ ಕಾರಣರಾಗುವ ದಮ೯ದ ಹೆಸರಲ್ಲಿ ಸಾಮೂಹಿಕವಾಗಿ ಜನರನ್ನ ತಪ್ಪು ದಾರಿಗೆ ಒಯ್ಯುವವರನ್ನ ದೂರ ಮಾಡಿ ಭಾರತ ದೇಶದಲ್ಲಿನ ಈ ಗಂಡಾಂತರ ಪಾರು ಮಾಡಲು ಸಾಧ್ಯವಿದೆ.
Comments
Post a Comment