#ಕರೋನಾ ವೈರಸ್ ಕಾರಣಕ್ಕಾಗಿ ಕಾಸರಗೋಡು ಕನ್ನಡಿಗರಿಗೆ ಮಂಗಳೂರು ಆಸ್ಪತ್ರೆಗೆ ಬರದಂತೆ ರಾ.ಹೆ. ಬಂದ್ ಮಾಡಿ ಅಂಬೂಲೆನ್ಸ್ ಕೂಡ ತಡೆ ಹಿಡಿದಿದ್ದು ಅನ್ಯಾಯ#
#ಕಾಸರಗೋಡು ಜಿಲ್ಲಾ ಕಾ೦ಗ್ರೇಸ್ ಪ್ರದಾನ ಕಾಯ೯ದಶಿ೯ಕುಂಬಳೆಯ ಕೇಶವ ಪ್ರಸಾದ್ ನಾಣಿತಿಲಿ ಕನಾ೯ಟಕ ಕೇರಳ ಬಾಡ೯ರ್ ಸಂಚಾರ ನಿಬ೯೦ದದಿಂದ ಕಾಸರಗೋಡಿನ ಕನ್ನಡಿಗರಿಗೆ ಆಗುತ್ತಿರುವ ತೊ೦ದರೆಯನ್ನು ನೋವಿನಿಂದ ವಿವರಿಸಿದ್ದಾರೆ ಓದಿ#
ಕೇರಳದ ಮಂಜೇಶ್ವರ ಮತ್ತು ಕಾಸರಗೋಡು ಅಸಂಬ್ಲಿ ಕೇರಳದಲ್ಲಿ ಇದ್ದರೂ ಸಂಪೂರ್ಣ ಕರ್ನಾಟಕವೆ.ಇಲ್ಲಿನ ಐದು ಪಂಚಾಯತುಗಳಲ್ಲಿ ಮಲೆಯಾಳ ಶಾಲೆಯೇ ಇಲ್ಲ. ನಮ್ಮ ಸಂಬಂಧಿಕರೆಲ್ಲ ಇರುವುದು ಕರ್ನಾಟಕ ರಾಜ್ಯದಲ್ಲಿ. ಹತ್ತನೇ ತರಗತಿ ನಂತರ ಈ ಕನ್ನಡಿಗರ ೯೦ ಶೇಕಡಾ ಜನರು ಕಲಿಯುವುದು ಕರ್ನಾಟಕದಲ್ಲಿ. ಮಲೆಯಾಳ ಅವಲಂಬನೆ ಇಲ್ಲದ್ದರಿಂದ ಚಿಕಿತ್ಸೆ ಪಡೆಯಲು ಮಂಗಳೂರಿಗೆ ಹೋಗುವುದು. ಹೆಚ್ಚೆಂದರೆ ಒಂದು ಗಂಟೆಯ ದಾರಿ ಈ ಕನ್ನಡಿಗರಿಗೆ ಮಂಗಳೂರು ತಲಪಲು ಬೇಕಾಗುವುದು..ಇನ್ನೊಂದು ವಿಷಯ ಇಲ್ಲಿ ಜನಸಂಖ್ಯೆಯ ೫೦ ಶೇಕಡಾ ಮುಸಲ್ಮಾನರು ಇದ್ದಾರೆ.ಅವರಲ್ಲಿ ಗಡಿ ಪಂಚಾಯತುಗಳ ಮುಸಲ್ಮಾನರು ಬ್ಯಾರಿ ಭಾಷೆ ಮಾತಾಡುವುದು. ಉಳಿದವರು ಕರ್ನಾಟಕದ ಅವಗಣನೆಯಿಂದಾಗಿ ಮಲೆಯಾಳಿಗಾಳಾಗುತ್ತಿದ್ದಾರೆ.ಮಂಜೇಶ್ವರದ ಅರ್ಧದಷ್ಟು ಮುಸಲ್ಮಾನರಿಗೆ ಮಲೆಯಾಳದ ಗಂಧಗಾಳಿ ಇಲ್ಲ. ಇಷ್ಟೆಲ್ಲಾ ಇದ್ದು ನಮ್ಮನ್ನು ಕರ್ನಾಟಕ ದೂರ ಮಾಡಿ ನಮ್ಮನ್ನು ತ್ರಿಶಂಕು ಸ್ಥಿತಿಯಲ್ಲಿ ಇಡುವುದು ಸರಿ ಅಲ್ಲ..ಕೊರೊನ ಕಾಸರಗೋಡಲ್ಲಿರುವುದು ವಿದೇಶದಿಂದ ಬಂದವರಿಗೆ.ಅದು ಕಂಟ್ರೋಲಲ್ಲಿ ಇದೆ..
ಈಗ ಮಾಡುತ್ತಿರುವುದು ರಾಜಕೀಯ
Comments
Post a Comment