Skip to main content

#ಶೂನ್ಯದಿಂದ 10 ಸಾವಿರ ಜನರಿಗೆ ಕೊರಾನಾ ಸೋ೦ಕು ಹರಡಲು ತೆಗೆದುಕೊಂಡ ದಿನಗಳ ಪ್ರಕಾರ 10 ಸಾವಿರದಿಂದ ಒಂದು ಲಕ್ಷ ಜನಕ್ಕೆ ಈ ಸೋ೦ಕು ಎಷ್ಟು ದಿನದಲ್ಲಿ ಯಾವ ಯಾವ ದೇಶದಲ್ಲಿ ಹರಡಬಹುದೆಂಬ ಒಂದು ಅಂದಾಜು#

# ಕೊರಾನಾಲಾಕ್ ಡೌನ್ ಡೈರಿ 2020
 #ಲೆಟರ್ ನಂ -10.
#ದಿನಾ೦ಕ 9-ಏಪ್ರಿಲ್ -2020.

* ಇದು ಕೊರನಾ ವೈರಸ್ ಸೋ೦ಕು ಶೂನ್ಯದಿಂದ 10 ಸಾವಿರ ಜನರಿಗೆ ಹರಡಲು ಯಾವ ಯಾವ ದೇಶದಲ್ಲಿ ಎಷ್ಟು ದಿನ ತೆಗೆದುಕೊಂಡಿದೆ? ಮತ್ತು ಇದೇ ವೇಗದಲ್ಲಿ ಹರಡುತ್ತದೆ ಅಂದಾದರೆ ಒಂದು ಲಕ್ಷ ಜನರಿಗೆ ಯಾವ ಯಾವ ದೇಶದಲ್ಲಿ ಎಷ್ಟು ದಿನದಲ್ಲಿ ಹರಡಬಹುದೆಂಬ ಮಾಹಿತಿ*
   ಬೇರೆಲ್ಲ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಕೊರಾನಾ ವೈರಸ್ ಹರಡುವ ವೇಗ ನಿಧಾನ ಎನ್ನುವುದರಲ್ಲಿ ಅನುಮಾನವಿಲ್ಲ ಏಕೆಂದರೆ ಕೊರಾನಾ ಟಾಪ್ 10 ರಾಷ್ಟ್ರಗಳ ಈ ಕೆಳಕ೦ಡ ಪಟ್ಟಿ ನೋಡಿ.
 #ಶೂನ್ಯದಿಂದ ಹತ್ತು ಸಾವಿರ ಜನರಿಗೆ ಹರಡಿದ ವೇಗ .
1.ಯು.ಎಸ್.ಎ.28 ದಿನದಲ್ಲಿ 
2. ಸ್ಪೈನ್ 22 ದಿನದಲ್ಲಿ
3.ಇಟಲಿ 20 ದಿನದಲ್ಲಿ
4.ಜಮ೯ನ್ 21 ದಿನದಲ್ಲಿ
5.ಪ್ರಾನ್ಸ್ 22 ದಿನದಲ್ಲಿ
6,ಇರಾನ್ 22 ದಿನದಲ್ಲಿ
7.ಯುಕೆ.32 ದಿನದಲ್ಲಿ
8.ನೆದರ್ ಲ್ಯಾ೦ಡ್ 3ಂದಿನದಲ್ಲಿ
9. ಸೌತ್ ಕೊರಿಯಾ 17 ದಿನದಲ್ಲಿ 6600 (31 ದಿನದಲ್ಲಿ 10 ಸಾವಿರ ತಲುಪುವ ಸಾಧ್ಯತೆ)
10. ಭಾರತದಲ್ಲಿ 37 ದಿನದಲ್ಲಿ 5351 ಜನರಿಗೆ ಹರಡಿದೆ (42 ದಿನದಲ್ಲಿ 10 ಸಾವಿರ ತಲುಪುವ ಸಾಧ್ಯತೆ)
 
 ಬೇರೆ ದೇಶಕ್ಕಿ೦ತ ಭಾರತದಲ್ಲಿ ಇದರ ನಿದಾನಗತಿಗೆ ಅನೇಕ ಪ್ರಮುಖ ಕಾರಣಗಳನ್ನ ಅಂದಾಜಿಸಲಾಗಿದೆ ಆದರೆ ಇದು ಸಂಪೂಣ೯ ಸರಿ ಅನ್ನುವಂತಿಲ್ಲ ಅದೇನೆಂದರೆ
1. ಬೇಗನೆ ಲಾಕ್ ಡೌನ್ ಪ್ರಾರಂಬಿಸಿದ್ದು
2. ಬಾರತದ ಹವಾಮಾನದ ಉಷ್ಣತೆ ಹೆಚ್ಚಿರುವುದು.
 3. ಭಾರತೀಯರು ಮಲೇರಿಯಾ ಮತ್ತಿತರ ಔಷದಿ ಬಳಸುವುದರಿಂದ ಅವರಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಿರುವ ಸಾಧ್ಯತೆ.
4. ವಿದೇಶಿ ವಿಮಾನ ಸಂಚಾರ ರದ್ದು ಮಾಡಿರುವುದು.
 5. ಚೀನಾದೊ೦ದಿಗೆ ಕಡಿಮೆ ಜನ ಸಂಪಕ೯
6. ರೈಲು ಬಸ್ ಸಂಚಾರ ನಿಬ೯೦ದ ಮಾಡಿದ್ದು
7. ಇನಾಕ್ಯುಲೇಷನ್ ನಿಂದ ಬೇರೆ ವೈರಸ್ ಸಹಾಯ
8.ಭಾರತೀಯರಲ್ಲಿ ಹೆಚ್ಚಿನ ಸಂಖ್ಯೆ ಯುವ ಜನಾಂಗ ಇರುವುದು.
 ಕಾರಣ ಆಗಿರಬಹುದೆಂಬ ಅಂದಾಜಿದೆ ಆದರೆ ನಿಕರವಾಗಿ ಹೇಳಲು ಸದ್ಯ ಸಾಧ್ಯವಿಲ್ಲ.
  
     ಹಾಗಂತ ಭಾರತೀಯರು ಸೇಪರ್ ಜೋನ್ ನಲ್ಲಿ ಇದೀವಿ ಅಂತ ಭಾವಿಸ ಬಾರದು ಏಕೆಂದರೆ ಮೇ 2ನೇ ವಾರ ಎಲ್ಲಾ ಲೆಕ್ಕಾಚಾರ ಉಲ್ಟಾಪಲ್ಟಾ ಆಗಬಹುದು ದೇವರ ದಯೆಯಿಂದ ಮೇ 2ನೇ ವಾರದಲ್ಲಿ ಭಾರತದಲ್ಲಿ ಕೊರಾನಾ ವೈರಸ್ ನಿಯಂತ್ರಣಕ್ಕೆ ಬಂದರೆ ನಾವು ಬದುಕಿದಂತೆ.
  
          ಇದೇ ವೇಗದಲ್ಲಿ ವೈರಸ್ ಹರಡುತ್ತಿದ್ದರೆ 10 ಸಾವಿರದಿOದ ಒಂದು ಲಕ್ಷ ಜನರಿಗೆ ಹರಡಲು ಬೇಕಾದ ದಿನ ಈ ಕೆಳಕಂಡOತೆ ಆಯಾ ದೇಶದಲ್ಲಿ ಆಗಲಿದೆ
1.ಯು.ಎಸ್.ಎ.9 ದಿನದಲ್ಲಿ
2. ಸ್ಪೈನ್ 16 ದಿನದಲ್ಲಿ
3.ಇಟಲಿಯಲ್ಲಿ 20 ದಿನದಲ್ಲಿ
4.ಜಮ೯ನ್ ನಲ್ಲಿ 19 ದಿನದಲ್ಲಿ
5.ಪ್ರಾನ್ಸ್ 19 ದಿನದಲ್ಲಿ
6. ಇರಾನ್ ನಲ್ಲಿ 25 ದಿನದಲ್ಲಿ 62,589
7. ಯು.ಕೆ.12 ದಿನದಲ್ಲಿ 55, 242
8.ನೆದರ್ ಲ್ಯಾ೦ಡ್ 9 ದಿನದಲ್ಲಿ 19 ದಿನದಲ್ಲಿ 19,580
ಭಾರತದಲ್ಲಿ ಮೇ 2ನೇ ವಾರ.
      ಹಾಗಾಗಿ ನಾವೆಲ್ಲರೂ ಸಕಾ೯ರದ ಮಾನದಂಡವನ್ನ ಸರಿಯಾಗಿ ಪಾಲಿಸಬೇಕು ಸಾಮಾಜಿಕ ಅಂತರ ಕಾಪಾಡಬೇಕು ನಮ್ಮ ಆರೋಗ್ಯಕ್ಕಾಗಿ ಇವೆಲ್ಲ ಪಾಲನೆ ಮಾಡುವುದರಲ್ಲಿ ಹಿಂದೆ ಬಿದ್ದರೆ ಮೇ 2ನೇ ವಾರ ಭಾರತೀಯರಿಗೆ ಸಂಕಷ್ಟದ ದಿನ ಆಗುವುದರಲ್ಲಿ ಅನುಮಾನವಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...