#ಕೊರಾನಾ ಲಾಕ್ ಡೌನ್ ಡೈರಿ- 2020
#ಲೆಟರ್ ನಂ -12.
*ಕೊರಾನಾ ನಿಮೂ೯ಲನೆಯ ಎರಡನೆ ಹಂತದಲ್ಲಿ ಆಹಾರ- ಔಷದಿ-ನೀರು ಬಡವರಿಗೆ ಮಾತ್ರವಲ್ಲ ಅವಶ್ಯ ಇದ್ದವರಿಗೆಲ್ಲ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು*
ಈವರೆಗೆ ಕೆಲವರು ಪ್ರಾಮಾಣಿಕವಾಗಿ, ಹೆಚ್ಚಿನವರು ಪ್ರಚಾರಕ್ಕಾಗಿ ಬಡವರಿಗೆ ಪಡಿತರದ ಕಿಟ್ ಕೊಡುವ ಕಾಯ೯ಕ್ರಮ ಮಾಡಿದ್ದಾರೆ.
ಇನ್ನು ಕೆಲವರು ಅವರ ಸ್ವಂತ ಹಣದಲ್ಲಿ ಸಾಮಗ್ರಿ ಖರೀದಿಸಿ ಅವಶ್ಯಕತೆ ಇದ್ದವರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಿದ್ದಾರೆ.
ಇನ್ನು ಕೆಲವರು ನಾವು ಬಡವರಿಗೆ ದಾನ ಮಾಡುತ್ತೇವೆ ನಿಮ್ಮ ಪಾಲು ಕೊಡಿ ಅಂತ ರೋಲ್ ಕಾಲ್ ಮಾಡಿದವರೂ ಇದ್ದಾರೆ.
ಈ ರೀತಿ ಆಹಾರದ ಕಿಟ್, ಮಾಸ್ಕ್ ಮು೦ತಾದ ಹಂಚಿಕೆ ಕಾಯ೯ಕ್ರಮದಲ್ಲಿ ಸಾಮಾಜಿಕ ಅಂತರ ಕಾಪಾಡುವಲ್ಲಿ ವಿಪಲತೆಯನ್ನ ನೋಡುತ್ತಿದ್ದೇವೆ ಇದರಿಂದ ಹಸಿವು ನಿವಾರಿಸಲು ಹೋಗಿ ರೋಗ ಹರಡಿಸಲು ಕಾರಣವಾಗುವ ಆಪಾಯವೇ ಹೆಚ್ಚು.
ಸರಿ ತಪ್ಪು ವಿಮಶೆ೯ ಮಾಡುವ ಕಾಲ ಇದಲ್ಲ ದೊಡ್ಡ ಮಠಗಳೇ ಅತಿವೃಷ್ಟಿಯಲ್ಲಿ ನೆರೆ ಪರಿಹಾರವಾಗಿ ಸಾವಿರಾರು ಮನೆ ಕಟ್ಟಿಕೊಡುವುದಾಗಿ ಭಕ್ತರಿಂದ ಕೋಟ್ಯಾoತರ ಹಣ ದಾನವಾಗಿ ಸಂಗ್ರಹಿಸಿ ಒಂದೇ ಒಂದು ಮನೆ ಕಟ್ಟದ ಉದಾಹರಣೆಯೆ ಇದೆ.
ಏಪ್ರಿಲ್ 14 ರಿಂದ ಕೊರಾನಾ ವೈರಸ್ ನಿಮೂ೯ಲನೆಗೆ ಸಕಾ೯ರ ನಿಧಿ೯ಷ್ಟ ಮತ್ತು ಕಠೋರವಾದ ಮು೦ಜಾಗೃತೆ ಕಾಯ೯ಕ್ರಮ ಹಾಕಲೇಬೇಕಾಗಿದೆ, ಸೊ೦ಕಿತರಿರುವ ಪ್ರದೇಶವನ್ನ ಸಂಪೂಣ೯ ಸೀಜ್ ಮಾಡಲೆಬೇಕು ಈ ಸಂದಭ೯ದಲ್ಲಿ ಈ ಪ್ರದೇಶದವರಿಗೆ ಅವಶ್ಯವಿರುವ ಆಹಾರ - ಔಷದ - ನೀರು ನಿಯಮಿತವಾಗಿ ತಲುಪಿಸುವ ಹೊಣೆ ಸಕಾ೯ರದ್ದಾಗಿರುತ್ತದೆ.
ಆಗ ಬಡವ ಶ್ರೀಮಂತ ಎಂದು ವಿಭಾಗಿಸಲು ಸಾಧ್ಯವಿಲ್ಲ ಮತ್ತು ಸಾವ೯ಜನಿಕರಿಗೆ ವಿತರಿಸಲು ಅವಕಾಶವಿರುವುದಿಲ್ಲ.
ದಾನಿಗಳು ಆಹಾರ ಸಾಮಗ್ರಿಗಳನ್ನ ಸಕಾ೯ರದ ಪ್ರತಿನಿದಿಗಳಿಗೇ ಹಸ್ತಾ೦ತರಿಸಬೇಕು.
ಹಾಗಾಗಿ ಸಮಾಜ ಸೇವೆಯ ಉತ್ಸಾಹದಲ್ಲಿರುವವರು ಆಹಾರ ಪದಾಥ೯ ಸ್ವತಃ ದಾನವಾಗಿ ನೀಡುವ ಕಾಯ೯ ಮಾಪಾ೯ಟು ಮಾಡಿ ಸಕಾ೯ರದೊ೦ದಿಗೆ ಸಹಕರಿಸಿ ಆದಷ್ಟು ಅವರವರ ಮನೆಯಲ್ಲಿ ಇರುವುದೇ ಕೊರಾನಾ ನಿಮೂ೯ಲನೆಗೆ ದೊಡ್ಡ ಸಹಕಾರವಾಗುತ್ತದೆ.
Comments
Post a Comment