#ದೀಪ ಬೆಳಗಿಸುವ ಮೂಲಕ ಕರೋನ ವಿರುದ್ಧ ದೇಶದ ಒಗ್ಗಟ್ಟು ಪ್ರದಶ೯ನ ಡಿಸೆಂಬರ್ 16ರ ರಾತ್ರಿ ಇಟಲಿ ದೇಶದಲ್ಲಿ ಆಚರಿಸಲಾಗಿತ್ತು ಇದೇ ರೀತಿ ಭಾರತದಲ್ಲಿ ಏಪ್ರಿಲ್ 5 ರ ಬಾನುವಾರ ರಾತ್ರಿ 9ಕ್ಕೆ ಆಚರಿಸಲು ಪ್ರದಾನ ಮಂತ್ರಿಗಳು ವಿನಂತಿಸಿದ್ದಾರೆ #
ಇಟಲಿ ದೇಶದಲ್ಲಿ ಮಾಚ್೯ 16 ರ ಬಾನುವಾರ ರಾತ್ರಿ ದೇಶವಾಸಿಗಳು ತಮ್ಮ ತಮ್ಮ ಮನೇಲಿ ವಿದ್ಯುತ್ ದೀಪ ನಂದಿಸಿ ಗೃಹ ಕ್ವಾರಂಟೀನ್ ಮುರಿಯದೇ ಕ್ಯಾoಡಲ್ ಮತ್ತು ಮೊಬೈಲ್ ಟಾಚ್೯ ಬೆಳಗಿ ಕೊರಾನಾ ವೈರಸ್ ವಿರುದ್ಧ ಅವರ ಸಕಾ೯ರದ ಮುಂಜಾಗೃತ ಕ್ರಮದ ಬಗ್ಗೆ ತಮ್ಮ ಒಗ್ಗಟ್ಟು ಪ್ರದಶಿ೯ಸಿದ್ದರು.
ಇದರಿಂದ ಪ್ರೇರೇಪಿತ ನಮ್ಮ ದೇಶದ ಪ್ರದಾನ ಮಂತ್ರಿಗಳಾದ ನರೇ೦ದ್ರ ಮೋದಿಯವರು ಭಾರತೀಯರೆಲ್ಲ ಇದೇ ಭಾನುವಾರ ಅಂದರೆ 5 - ಏಪ್ರಿಲ್ -2020ರ ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ತಮ್ಮ ಮನೇಯ ದೀಪಗಳನ್ನ ನಂದಿಸಿ ಕ್ಯಾ೦ಡಲ್, ದೀಪ ಅಥವ ಮೊಬೈಲ್ ಟಾಚ್೯ ಬೆಳಗಿಸಲು ವಿನಂತಿಸಿದ್ದಾರೆ ಈ ಮೂಲಕ ಭಾರತೀಯರೆಲ್ಲರ ಒಗ್ಗಟ್ಟಿನ ಶಕ್ತಿ ಪ್ರದಶ೯ನ ಕೊರಾನಾ ವೈರಸ್ ವಿರುದ್ಧ ವ್ಯಕ್ತಪಡಿಸಲು ಕೋರಿದ್ದಾರೆ.
ಇದರ ಬಗ್ಗೆ ಅನೇಕ ರೀತಿ ವ್ಯಾಖ್ಯಾನ ಪ್ರಾರಂಭ ಆಗಿದೆ, 9ಕ್ಕೆ ಸಂಖ್ಯಾ ಶಾಸ್ತ್ರದ ಬಗ್ಗೆ ಪ್ರಾರಂಭ ಆಗಿ ರಾಜ್ಯದ ಮಾಜಿ ಮಂತ್ರಿ ಕೊರಾನಾ ವೈರಸ್ ದೀಪದ ಬೆಳಕಿನ ಹತ್ತಿರ ಬಂದು ಸಾಯುತ್ತದೆ ಎನ್ನುವ ತನಕ ಮುಂದುವರಿದಿದೆ.
ಪ್ರದಾನ ಮಂತ್ರಿಗಳಿ೦ದ ಹೆಚ್ಚು ವಿಚಾರಗಳನ್ನ ನಿರೀಕ್ಷಿಸಿದವರು ಅವರ ಈ ದೀಪ ಬೆಳಗುವ ಮೂಲಕ ಒಗ್ಗಟ್ಟು ಪ್ರದಶ೯ನದ ವಿನಂತಿಯಿಂದ ನಿರಾಷರಾಗಿ ಈ ದೀಪ ಬೆಳಗುವ ವಿನಂತಿ ಗೇಲಿ ಮಾಡಿದ್ದಾರೆ.
ಈ ದೀಪ ಬೆಳಗುವ ವಿನಂತಿ ಈಗಾಗಲೇ ಬೇರೆ ದೇಶದಲ್ಲಿ ಆಚರಿಸಲಾಗಿದೆ ಅದರOತೆ ಭಾರತದಲ್ಲಿ ಭಾನುವಾರ ಸಂಜೆ ಬಾರತೀಯರ ಒಗ್ಗಟ್ಟಿನ ಪ್ರದಶ೯ನ ಮಾತ್ರ ಇದರಿಂದ ವ್ಯಕ್ತ ಪಡಿಸಲಾಗುತ್ತದೆ ವಿನಃ ಅದನ್ನ ಬಿಟ್ಟು ಮೂಡ ನಂಬಿಕೆಯ ಅತಿಶಯೋಕ್ತಿಯ ಲೇಪನ ಈ ಕ್ರಿಯೆಗೆ ಜೋಡಿಸುವುದು ಹಾಸ್ಯಾಸ್ಪದವಾಗಲಿದೆ.
ನಾವೆಲ್ಲ ಭಾರತೀಯರು ಪ್ರದಾನ ಮ೦ತ್ರಿಗಳ ಕರೋನಾ ವೈರಸ್ ನಿಮೂ೯ಲನ ಕಾಯ೯ಕ್ಕೆ ಕೈ ಜೋಡಿಸಿ ಬೆಂಬಲಿಸಿ ದೇಶದ ಒಗ್ಗಟ್ಟು ಪ್ರದಶಿ೯ಸೋಣ ಎಂದು ವಿನಂತಿಸುತ್ತೇನೆ ಕೂಡ.
Comments
Post a Comment