Skip to main content

Posts

Showing posts with the label organic milk and Ghee

ಶುದ್ಧ ಸಾವಯವ ತುಪ್ಪ ಮಲೆನಾಡು ಗಿಡ್ದ ಗೋವಿನ ತುಪ್ಪ ಈಗ ಅಪರೂಪ

#ಇದು_ಅಂತಿಂತ_ತುಪ್ಪ_ಅಲ್ಲ_ಮಲೆನಾಡು_ಗಿಡ್ದ_ತಳಿಯ_ದನದ_ಸುವಾಸನೆಯ_ಹರಳು_ಹರಳು_ತುಪ್ಪ     ಮಲೆನಾಡು ಗಿಡ್ದ ತಳಿ ಪಶ್ಚಿಮ ಘಟ್ಟದ ಗೋತಳಿ, ದಿನನಿತ್ಯ ಕಾಡಂಚಿನಲ್ಲಿ ಮೇಯ್ದು ಸಂಜೆ ಕೊಟ್ಟಿಗೆ ಸೇರಿ ಅದರ ಗಾತ್ರಕ್ಕೆ ತಕ್ಕಂತೆ ಕೊಂಚ ಹಾಲು ನೀಡುತ್ತದೆ ಹಾಗಾಗಿ ಇವತ್ತಿನ ಹತ್ತಾರು ಲೀಟರ್ ಹಾಲು ನೀಡುವ ಸುದಾರಿತ ತಳಿಯಿಂದ ಮಲೆನಾಡು ಗಿಡ್ಡ ಮಲೆನಾಡಿನ ಕೊಟ್ಟಿಗೆಗಳಲ್ಲಿಯೇ ಕಾಣುವುದಿಲ್ಲ.   ಇಂತಹ ಅಲ್ಪ ಪ್ರಮಾಣದ ಹಾಲು ಒಂದು ರೀತಿ ಸಾವಯವ ಹಾಲು ಕೂಡ ಯಾಕೆಂದರೆ ಮಲೆನಾಡು ಗಿಡ್ದಕ್ಕೆ ಪಶು ಆಹಾರ, ಹಾರ್ಮೋನ್ ಚುಚ್ಚುಮದ್ದು ಯಾರೂ ಹಾಕುವುದಿಲ್ಲ.    ಈ ದನಗಳ ಹಾಲು ಕರೆಯುವುದು ಕೂಡ ಸ್ವಲ್ಪ ಕಷ್ಟ ಸಾಧ್ಯ ಹಾಗಾಗಿ ಇದರ ಹಾಲು ಹೆಪ್ಪು ಹಾಕಿ ಮೊಸರು ಮಾಡಿ ಕಡೆದು ಬೆಣ್ಣೆ ತೆಗೆದು ತುಪ್ಪ ಮಾಡುವ ಆದುನಿಕ ಗೃಹಣಿಯರ ಸಂಖ್ಯೆ ಕೂಡ ಕಡಿಮೆ ಹಾಗಾಗಿ ಮಾರುಕಟ್ಟೆಯಲ್ಲಿ ಎಮ್ಮೆ, ಸುದಾರಿತ ತಳಿಯ ಬೆಣ್ಣೆ ತುಪ್ಪ ಸುಲಭದಲ್ಲಿ ಸಿಕ್ಕ ಹಾಗೆ ಮಲೆನಾಡು ಗಿಡ್ಡದ ಬೆಣ್ಣೆ ತುಪ್ಪ ಮಾತ್ರ ಸಿಗುವುದಿಲ್ಲ.    ಮಲೆನಾಡು ಗಿಡ್ಡ ದನದ ಗಿಣ್ಣಿನ ಹಾಲಿನ ಗಿಣ್ಣ ತಿನ್ನಿಸಿದ ಗೆಳೆಯರಾದ ಶಿವರಾಂ ಪಾಟೀಲರು ಮಲೆನಾಡು ಗಿಡ್ಡದ ತುಪ್ಪ ತಂದುಕೊಟ್ಟಿದ್ದಾರೆ, ಅದನ್ನು ಬಿಸಿ ಮಾಡಿದಾಗ ಇಡೀ ಮನೆ ತುಂಬ ನಿಜ ತುಪ್ಪದ ಸುವಾಸನೆ, ತಣ್ಣಗಾದಂತೆ ಹರಳು ಹರಳು ಆದ ಪ್ರಪಂಚದಲ್ಲೇ ಅತ್ಯಂ...