ಸೋಮನಾಥ ಪೀರ್ ಬಾವೊಜಿ ಮೂಲ ಗ್ವಾಲಿಯರ್ (ಮಧ್ಯ ಪ್ರದೇಶ) ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥದ ಮಠದಲ್ಲಿ ಮಠಾದೀ ಶರಾಗಿದ್ದರು. ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಉತ್ತರ ಪ್ರದೇಶದ ಗೋರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ. ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬಮೇಳದ ನಂತರ ಹೊರಡುವ ಬಾರಾ ಪಂಥ ಜೋ೦ಡಿ ಪಾದಯಾತ್ರೆ ಇಲ್ಲಿ ಬಂದು ತಂಗುತ್ತದೆ, ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಆದರಲ್ಲಿ ತೃಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ ಆಗದಿದ್ದರೆ ತಮ್ಮ ಜೊತೆ ಬಂದ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸಿ ಮೊದಲಿದ್ದವರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ತಾರೆ. ಬಹುಶಃ 1978ರಲ್ಲಿ ಬಂದ ಜೋ೦ಡಿಯಾತ್ರೆಯಲ್ಲಿ ಶ್ರೀ ಸೋಮನಾಥಜಿ ಬಂದವರು, ನನ್ನ ಅವರ ಸಂಪಕ೯ 1997ರ ನಂತರದ್ದು, ಶಿವಮೊಗ್ಗ ಜಿಲ್ಲೆಯ ಕುಣುಬಿ ಎಂಬ ಸಣ್ಣ ಗುಡ್ಡಗಾಡು ಜನಾಂಗದ ಸಂಘಟನೆ, ಅಭಿವೃದ್ಧಿಗಾಗಿ ಓಡಾಡುವಾಗ ಅವರಲ್ಲಿ ಇವರ ಬಗ್ಗೆ, ನಾಥಪಂಥತ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತು. ನನ್ನ...