Skip to main content

Posts

Showing posts with the label WORLD FAMOUS ARCHEOLOGISTS DR S.R.RAO BORN PLACE

ಭಾಗ - 14 ಪುರಾಣದಲ್ಲಿ ಶ್ರೀಕೃಷ್ಣನ ಮುಳುಗಿದ ದ್ವಾರಕೆ ನಗರಿ ಸಂಶೋದಿಸಿದ ಡಾಕ್ಟರ್ ಎಸ್.ಆರ್.ರಾವ್ ಜನಿಸಿದ್ದು ಆನಂದಪುರಂನಲ್ಲಿ, ಅವರಿಗೆ ಪುರ ದೈವ ರಂಗನಾಥ ಎಂದು ನಾಮಕಾರಣಕ್ಕೆ ಕಾರಣವಾದ ಆ ಘಟನೆ.

#ಭಾಗ_14. #ಅಂತರಾಷ್ಟ್ರಿಯ_ಪ್ರಖ್ಯಾತಿ_ಪಡೆದ_ಆಕಿ೯ಯಾಲಾಜಿಸ್ಟ್. #ಡಾಕ್ಟರ್_ಶಿಕಾರಿಪುರ_ರಂಗನಾಥರಾವ್_ಹುಟ್ಟಿದ್ದು_ಆನಂದಪುರದಲ್ಲಿ. #ಶ್ರೀಕೃಷ್ಣನ_ಮುಳುಗಿದ_ದ್ವಾರಕಾ_ನಗರಿ #ಇಂಡಸ್_ನಾಗರಿಕತೆಯ_ಹರಪ್ಪ_ಮಹೆಂಜೊದಾರ್_ಉತ್ಕನನ #ಇಂಡಸ್_ಕಾಲದ_ಬಂದರು_ಲೋಥಲ್_ಹೀಗೆ_ಅನೇಕ_ಸಂಶೋದನೆ_ಉತ್ಕನದ_ನೇತೃತ್ವ_ಇವರದ್ದು. #ಭಾರತದ_ಮಹಾಭಾರತದ_ಶ್ರೀಕೃಷ್ಣ_ಕಾಲ್ಪನಿಕ_ಅಲ್ಲ_ಸತ್ಯ_ಎಂದು_ಸಾಬೀತು_ಮಾಡಿದ_ಸಂಶೋದನೆ.       ಇವರ ತಂದೆ ಕೃಷ್ಣ ಪ್ರಸಾದರು ಆನಂದಪುರದಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಶೇಖ್ದಾರರು,ಇವರು ಶಿಕಾರಿಪುರ ಮೂಲದ ಮಾದ್ವ ಬ್ರಾಹ್ಮಣರು,ಆನಂದಪುರಂ ನಲ್ಲಿ ಉದ್ಯೋಗಕ್ಕೆ ಬಂದಾಗ ಆನಂದಪುರದ ರಂಗನಾಥ ಸ್ವಾಮಿ ದೇವಾಲಯದ ಅಗ್ರಹಾರದ ವೇದನಾನಾರಾಯಣ ಭಟ್ಟರ ಕುಟುಂಬಕ್ಕೆ (ರಂಗನಾಥ ಭಟ್ಟರ ತಂದೆ) ಸೇರಿದ ಮನೆಯಲ್ಲಿ ವಾಸವಾಗಿರುತ್ತಾರೆ, ಈ ಮನೆ ಎದುರೇ ಮಾಧ್ವ ಬ್ರಾಹಣರಾದ ಶಿಕ್ಷಕರಾಗಿದ್ದ ಶೇಷಾಚಾರ್ (ಪ್ರಾಣೇಶ್ ಆಚಾರ್ ತಂದೆ) ಮನೆ, ಈಗ ಇವರಿದ್ದ ಮನೆ ಜಾಗದಲ್ಲಿ ರಂಗನಾಥ ಭಟ್ಟರ  ಸಹೋದರ ಸುಂದರೇಶ್ ಮನೆ ಇದೆ.     ಒಂದು ವಿಶೇಷ ಘಟನೆ ಇಲ್ಲಿ ನಮೂದಿಸಬೇಕು, ಎಸ್ ರಾವ್. ತಾಯಿ ಹೊಟ್ಟೆಯಲ್ಲಿದ್ದಾಗ ನಡೆದದ್ದು, ತಾಯಿಗೆ ಹೆರಿಗೆ ದಿನ ಸಮೀಪಿಸುವಾಗ ಅವರ ಸಂಪ್ರದಾಯದಂತೆ ನೀರು ಎರೆಸಿಕೊಳ್ಳಲು ತಯಾರಾಗಿ ತಮ್ಮ ಆಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಭದ್ರಪಡಿಸಿಡುತ್ತಾರೆ.ಪ್...