ಭಾಗ - 14 ಪುರಾಣದಲ್ಲಿ ಶ್ರೀಕೃಷ್ಣನ ಮುಳುಗಿದ ದ್ವಾರಕೆ ನಗರಿ ಸಂಶೋದಿಸಿದ ಡಾಕ್ಟರ್ ಎಸ್.ಆರ್.ರಾವ್ ಜನಿಸಿದ್ದು ಆನಂದಪುರಂನಲ್ಲಿ, ಅವರಿಗೆ ಪುರ ದೈವ ರಂಗನಾಥ ಎಂದು ನಾಮಕಾರಣಕ್ಕೆ ಕಾರಣವಾದ ಆ ಘಟನೆ.
#ಭಾಗ_14.
#ಅಂತರಾಷ್ಟ್ರಿಯ_ಪ್ರಖ್ಯಾತಿ_ಪಡೆದ_ಆಕಿ೯ಯಾಲಾಜಿಸ್ಟ್.
#ಶ್ರೀಕೃಷ್ಣನ_ಮುಳುಗಿದ_ದ್ವಾರಕಾ_ನಗರಿ
#ಇಂಡಸ್_ನಾಗರಿಕತೆಯ_ಹರಪ್ಪ_ಮಹೆಂಜೊದಾರ್_ಉತ್ಕನನ
#ಇಂಡಸ್_ಕಾಲದ_ಬಂದರು_ಲೋಥಲ್_ಹೀಗೆ_ಅನೇಕ_ಸಂಶೋದನೆ_ಉತ್ಕನದ_ನೇತೃತ್ವ_ಇವರದ್ದು.
#ಭಾರತದ_ಮಹಾಭಾರತದ_ಶ್ರೀಕೃಷ್ಣ_ಕಾಲ್ಪನಿಕ_ಅಲ್ಲ_ಸತ್ಯ_ಎಂದು_ಸಾಬೀತು_ಮಾಡಿದ_ಸಂಶೋದನೆ.
ಇವರ ತಂದೆ ಕೃಷ್ಣ ಪ್ರಸಾದರು ಆನಂದಪುರದಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಶೇಖ್ದಾರರು,ಇವರು ಶಿಕಾರಿಪುರ ಮೂಲದ ಮಾದ್ವ ಬ್ರಾಹ್ಮಣರು,ಆನಂದಪುರಂ ನಲ್ಲಿ ಉದ್ಯೋಗಕ್ಕೆ ಬಂದಾಗ ಆನಂದಪುರದ ರಂಗನಾಥ ಸ್ವಾಮಿ ದೇವಾಲಯದ ಅಗ್ರಹಾರದ ವೇದನಾನಾರಾಯಣ ಭಟ್ಟರ ಕುಟುಂಬಕ್ಕೆ (ರಂಗನಾಥ ಭಟ್ಟರ ತಂದೆ) ಸೇರಿದ ಮನೆಯಲ್ಲಿ ವಾಸವಾಗಿರುತ್ತಾರೆ, ಈ ಮನೆ ಎದುರೇ ಮಾಧ್ವ ಬ್ರಾಹಣರಾದ ಶಿಕ್ಷಕರಾಗಿದ್ದ ಶೇಷಾಚಾರ್ (ಪ್ರಾಣೇಶ್ ಆಚಾರ್ ತಂದೆ) ಮನೆ, ಈಗ ಇವರಿದ್ದ ಮನೆ ಜಾಗದಲ್ಲಿ ರಂಗನಾಥ ಭಟ್ಟರ ಸಹೋದರ ಸುಂದರೇಶ್ ಮನೆ ಇದೆ.
ಒಂದು ವಿಶೇಷ ಘಟನೆ ಇಲ್ಲಿ ನಮೂದಿಸಬೇಕು, ಎಸ್ ರಾವ್. ತಾಯಿ ಹೊಟ್ಟೆಯಲ್ಲಿದ್ದಾಗ ನಡೆದದ್ದು, ತಾಯಿಗೆ ಹೆರಿಗೆ ದಿನ ಸಮೀಪಿಸುವಾಗ ಅವರ ಸಂಪ್ರದಾಯದಂತೆ ನೀರು ಎರೆಸಿಕೊಳ್ಳಲು ತಯಾರಾಗಿ ತಮ್ಮ ಆಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಭದ್ರಪಡಿಸಿಡುತ್ತಾರೆ.ಪ್ರಾಣೇಶ್ ಆಚಾರ ರ ಅಜ್ಜಿ ಆ ಕಾಲದಲ್ಲಿ ಪ್ರಸಿದ್ಧ ಪ್ರಸೂತಿ ತಜ್ಞರಂತೆ ಹೆಸರುವಾಸಿ ಆಗಿದ್ದ ಭಾಗಿರಥೀ ಬಾಯಿ ನೇತೃತ್ವದಲ್ಲಿ ನೀರು ಎರೆಯುತ್ತಾರೆ.
ಅವತ್ತೆ ತಮ್ಮ ಉದ್ಯೋಗ ನಿಮಿತ್ತ ಬೇರೆ ಊರಿಗೆ ಹೋಗಿದ್ದ ಪತಿ ಕೃಷ್ಣ ಪ್ರಸಾದರಿಗೆ ರಾತ್ರಿ ಮನೆಗೆ ವಾಪಾಸ್ ಬರಲಾಗುವುದಿಲ್ಲ, ಆದರೆ ಅವರಿಗೆ ಕನಸೊಂದು ಬೀಳುತ್ತದೆ ಕಳ್ಳ ಇವರ ಮನೆಗೆ ನುಗ್ಗಿ ಬಂಗಾರದ ಪೆಟ್ಟಿಗೆ ಕದ್ದೊಯ್ದು, ಆನಂದಪುರಂ ಮುರುಘಾ ಮಠಕ್ಕೆ ಹೋಗುವ ಗುಂಡಿಬೈಲು ಜಮೀನು ಮಧ್ಯದ ಹೆದ್ದಾರಿಯ ಮಟ್ಟಿ ಒಂದರಲ್ಲಿ ಅಡಗಿಸುವ೦ತ ಕನಸು ಅದಾಗಿರುತ್ತದೆ.
ಬೆಳಿಗ್ಗೆ ಮನೆಗೆ ಬಂದಾಗ ಕನಸಿನಲ್ಲಿ ಕಂಡಂತೆ ಕಳ್ಳತನ ಆಗಿರುತ್ತದೆ,ವಿಷಯ ತಿಳಿದು ಬಂದಿದ್ದ ಅಮಾಲ್ದಾರರಿಗೆ ಕನಸಲ್ಲಿ ಕಂಡ ವಿಚಾರ ತಿಳಿಸಿದಾಗ ಎಲ್ಲರೂ ಸೇರಿ ಹೆದ್ದಾರಿಗೆ ಹೋಗಿ ಹುಡುಕಿದಾಗ,ಕನಸಲ್ಲಿ ಕಂಡಂತೆ ಆಭರಣದ ಪೆಟ್ಟಿಗೆ ಸಿಗುವುದು ಸೋಜಿಗದ ವಿಚಾರ ಅಗುತ್ತೆ. ಇದರಿಂದ ಇಡೀ ಕುಟುಂಬ ಊರ ದೈವ ರಂಗನಾಥನೇ ತಮ್ಮನ್ನು ಕಾಪಾಡಿದನೆಂದು ಭಾವಿಸುತ್ತಾರೆ ಮತ್ತು ಹುಟ್ಟುವ ಮಗು ಗಂಡಾದರೆ ರಂಗನಾಥ ಎಂದು ನಾಮಕರಣ ಮಾಡುವುದಾಗಿ ಹರಕೆ ಹೊರುತ್ತಾರೆ.
ಹೀಗೆ ದಿನಾಂಕ 1- ಜುಲೈ -1922ರಂದು ಜನಿಸಿದ ಮಗುವೇ ಈ ಮನೆತನದ ಶಿಕಾರಿಪುರ ಹೆಸರಿನ ಜೊತೆ ಆನಂದಪುರ ದೈವ ರಂಗನಾಥ ಸೇರಿಸಿ ಶಿಕಾರಿಪುರ ರಂಗನಾಥ (S.R.Rao) ಎಂದೇ ವಿಶ್ವ ವಿಖ್ಯಾತರಾಗುತ್ತಾರೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆಯುತ್ತಾರೆ, ಜವಹರಲಾಲ್ ಪೆಲೋಶಿಪ್ ಪಡೆಯುತ್ತಾರೆ, ಭಾರತೀಯ ಅಕಿ೯ಯಾಲಾಜಿ ಇಲಾಖೆ ಮುಖ್ಯಸ್ಥರಾಗುತ್ತಾರೆ, ಮೆರಿನ್ ಆಕಾ೯ಲಾಜಿ ಸಂಶೋದನಾ ಸಂಸ್ಥೆ ಸ್ಥಾಪಕರಾಗುತ್ತಾರೆ 1980ರಲ್ಲಿ ನಿವೃತ್ತರಾದರು ಕೇಂದ್ರ ಸರ್ಕಾರ ಇವರ ಅದ್ವಿತಿಯ ಸಾಧನೆಗಳಿಂದ ಇವರನ್ನು ಪುನಃ ವಿಶೇಷವಾಗಿ ASI ನಿರ್ದೇಶಕರಾಗಿ ನೇಮಿಸುತ್ತದೆ.
ಕ್ರಿಸ್ತ ಪೂರ್ವದ ಒಂದು ಸಾವಿರ ವರ್ಷ ಭಾರತದ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾಗಿತ್ತು , ಶ್ರೀಕೃಷ್ಣನ ದ್ವಾರಕೆ ಮುಳುಗಿದ್ದು ಅಧಿಕೃತ ಎಂಬುದಿರಲಿಲ್ಲ ಆದರೆ ಹಿಂದೂ ಪವಿತ್ರ ಗ್ರಂಥ ಮಹಾಭಾರತದಲ್ಲಿ ಮಾತ್ರ ಇದು ಉಲ್ಲೇಖ ಆಗಿದ್ದರು ಇದೊಂದು ನೀತಿ ಕಥೆಯಾಗಿರಬೇಕೆಂಬ ತರ್ಕಗಳು ಇತ್ತು.
ಡಾ. S.R. ರಾವ್ ರ ನೇತೃತ್ವದ ತಂಡ ಮುಳುಗಿದ ದ್ವಾರಕಾ ನಗರ ಸಂಶೋದನೆ ಮಾಡುತ್ತದೆ,ಕ್ರಿ.ಪೂ. 1528 ರಲ್ಲಿ ಈ ಸುಸಜ್ಜಿತ ನಗರ ಪುರಾಣದ ಉಲ್ಲೇಖದ ದ್ವಾರಕಾ ನಗರ ಎಂದು ಪ್ರಪಂಚಕ್ಕೆ ತಿಳಿಯುತ್ತದೆ.
ಇವರ ಅನೇಕ ಸಂಶೋದನೆಗಳಲ್ಲಿ ಮುಖ್ಯವಾಗಿರುವ ಇಂಡಸ್ ವ್ಯಾಲಿ ನಾಗರೀಕತೆಯ ಹರಪ್ಪೊ ಸಂಶೋದನೆ ಸಿಪ್ರಸ್, ಸಿರಿಯಾದ ತಾಮ್ರಯುಗಕ್ಕಿಂತ ಪುರಾತನ ನಾಗರೀಕತೆ ಭಾರತದ್ದು ಎಂದು ಸಾಬೀತು ಪಡಿಸಿತು.
ಪುರಾತನ ಲೋಥಲ್ ಬಂದರು ಉತ್ಕನನ ಸಂಶೋಧನೆ, ರಂಗಪುರ್, ಅಮರಲಿ, ಭಾಗತ್ರವ್, ಹನೂರು, ಐಹೊಳೆ, ಕಾವೇರಿಪಟ್ಟಣಂ ಉತ್ಕನನಗಳು, ತಾಜ್ ಮಹಲ್ ನಂತ ರಾಷ್ಟ್ರೀಯ ಸ್ಮಾರಕಗಳ ಸುರಕ್ಷಣೆ ಹೀಗೆ ಸಾಗುತ್ತದೆ ಇವರ ಮಹತ್ತರವಾದ ಕಾರ್ಯಗಳು .
3 ಜನವರಿ 2013ರಲ್ಲಿ ಇಹಲೋಕ ತ್ಯಜಿಸಿದ ಮಹಾನ್ ವ್ಯಕ್ತಿ ಆನಂದಪುರದಲ್ಲಿ ಜನಿಸಿದರು, ಇವರ ತಂದೆ ಆನಂದಪುರದಲ್ಲಿ ಶೇಖ್ದಾರರಾಗಿದ್ದರು, ಇವರ ಹೆರಿಗೆ ಮಾಡಿಸಿದ ಬಾಗಿರಥೀ ಬಾಯಿ ಆನಂದಪುರಂ ನ ಪ್ರಖ್ಯಾತರಾಗಿದ್ದ ಶಿಕ್ಷಕರಾದ ಶೇಷಾಚಾರ್ ತಾಯಿ, ಇವರು ವಾಸ ಇದ್ದ ಮನೆ ಆನಂದಪುರಂನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದ ವೇದನಾರಾಯಣ ಭಟ್ಟರದ್ದು, ಆನಂದಪುರಂನ ಪುರ ದೇವರಾದ ಶ್ರೀರಂಗನಾಥನ ಕೃಪೆಯಿಂದ ಕಳ್ಳ ಕದ್ದಿದ್ದ ಆಭರಣ ಸಿಕ್ಕಿದ್ದು ಈ ಕಾರಣದಿಂದ ಜನಿಸಿದ ಮಗುವಿಗೆ ರಂಗನಾಥನೆಂದೇ ನಾಮಕಾರಣ ಮಾಡಿದ್ದು ಎಲ್ಲಾ ಆನಂದಪುರಂನ ಇತಿಹಾಸಕ್ಕೆ ಮುಕುಟವಾದ ಘಟನೆಗಳು.
ಮುಂದೆ ಅವರು ವಿಶ್ವ ವಿಖ್ಯಾತರಾಗಿ #ಡಾಕ್ಟರ್_SR_ರಾವ್ ಎಂದೇ ಖ್ಯಾತಿ ಪಡೆಯುತ್ತಾರೆ.
ತಾನು ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿ ಜನಿಸಿದ್ದೆಂದು ಎಲ್ಲಾ ಕಡೆ ಹೇಳುತ್ತಿದ್ದರು ಇದು ಅವರಿಗೆ ಅವರ ಹುಟ್ಟಿದ ಊರಾದ ಆನಂದಪುರಂ ಬಗ್ಗೆ ಇದ್ದ ಅಭಿಮಾನ ತೋರಿಸುತ್ತದೆ.
(ನಾಳೆ ಭಾಗ - 15)
https://youtu.be/Zc2dWngyZH4
Comments
Post a Comment