ಸಾಗರದ ಮೆಸ್ಕಾಂ ವಿದ್ಯತ್ ಗುತ್ತಿಗೆದಾರ ಶ್ರೀಕಾಂತ್ ಕಾಮತ್ ಮತ್ತು ಅವರ ಇಬ್ಬರು ಗೆಳೆಯರು ಇಹ ಲೋಕ ತ್ಯಜಿಸಿದವರ ಶರೀರ ಮುಕ್ತಿಗೆ ಸಹಕರಿಸುವ ನಿರಂತರ ಕಾಯ೯ ಅಭಿನಂದನೀಯ.
#ಇಹದಲ್ಲಿ_ಉಳಿದವರು_ಇಹಯಾತ್ರೆ_ಮುಗಿಸಿದವರ_ಶರೀರ_ಮುಕ್ತಿಗೆ_ಸಹಕರಿಸಬೇಕು.
#ಸಾಗರದ_ವಿದ್ಯುತ್_ಗುತ್ತಿಗೆದಾರ_ಶ್ರೀಕಾಂತ್_ಕಾಮತ್_ಮತ್ತು_ಸಂಗಡಿಗರ_ಅಂತಿಮ_ಯಾತ್ರೆಗೆ_ಸಹಕರಿಸುವ_ಪರಿ
ನಿನ್ನೆ ಗೆಳೆಯರಾದ ನಾಗೇಂದ್ರ ಸಾಗರ್ ಅವರ ಪೋಸ್ಟ್ ನಲ್ಲಿ ಅವರ ಗೆಳೆಯ ಕಮಲಾಕ್ಷ ಪಡಿಯಾರ್ ( ಹಾಲಿ ಯಡಜಿಗಳೆಮನೆಯಲ್ಲಿ ಪ್ರಾವಿಜನ್ ಸ್ಟೋರ್) ತಾಯಿ ಮೃತರಾದ ಬಗ್ಗೆ, ಅವರು ಅಲ್ಲಿಗೆ ಹೋದಾಗ ಸಾಗರದ ಶ್ರೀಕಾಂತ್ ಕಾಮತ್ ಮತ್ತು ಗೆಳೆಯರು ಕಮಲಾಕ್ಷರಿಗೆ ಅವರ ತಾಯಿಯ ಅಂತ್ಯ ಸಂಸ್ಕಾರದ ಬಗ್ಗೆ ಸಹಕರಿಸಿದ ಬಗ್ಗೆ ಬರೆದಿದ್ದರು.
2012ರಿಂದ ನಮ್ಮ ಸಂಸ್ಥೆಯ ವಿದ್ಯುತ್ ಸಂಬಂದ ಪಟ್ಟ ಎಲ್ಲಾ ಕಛೇರಿ ಕೆಲಸ ಸಾಗರದ ವಿದ್ಯುತ್ ಗುತ್ತಿಗೆದಾರರಾದ ಶ್ರೀಕಾಂತ್ ಕಾಮತ್ ರದ್ದೆ, ನಾನು ವಿಶೇಷವಾಗಿ ಇವರನ್ನು ಇಷ್ಟ ಪಡಲು ಕಾರಣ ಇವರು ಮೆಸ್ಕಾಂ ನ ಎಲ್ಲಾ ಕಾನೂನು ಕಾಯ್ದೆ ಆಯಾ ಕಾಲಕ್ಕೆ ಅನುಗುಣವಾಗಿ ಓದಿರುತ್ತಾರೆ, ವಿದ್ಯುತ್ ಬಳಕೆದಾರರ ಹಕ್ಕುಗಳ ಬಗ್ಗೆ ವಿವರಿಸುತ್ತಾರೆ, ತಪ್ಪು ಮಾಹಿತಿ ಯಾವ ಕಾರಣಕ್ಕೂ ನೀಡುವುದಿಲ್ಲ, ಹಣದ ಬಗ್ಗೆ ದುರಾಸೆ ಇಲ್ಲ.
ನಮ್ಮ ಊರ ದೇವಾಲಯ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಕೆಲ ಗುತ್ತಿಗೆದಾರರು ವಿಪರೀತ ಹಣ ಪಡೆಯುತ್ತಾ ಇದ್ದರು, ಈಗ ಶ್ರೀಕಾಂತ್ ಕಾಮತ್ ರು ಸುಮಾರು 2008ರಿಂದ ಅವರ ಸೇವಾ ಶುಲ್ಕ ಪಡೆಯದೇ ಪ್ರತಿ ವರ್ಷದ ಜಾತ್ರಾ ಮಹೋತ್ಸವಕ್ಕೆ ಸಹಕರಿಸುತ್ತಾರೆ.
ಇವತ್ತು ಮಧ್ಯಾಹ್ನದ ತನಕ ನನ್ನ ಉದ್ದಿಮೆಗೆ ಸಂಬಂದಿಸಿದ ಕಡತದ ಬಗ್ಗೆ ವಿಚಾರಿಸಲು ಶ್ರೀಕಾಂತ್ ಕಾಮತ್ ರಿಗೆ ಫೋನಾಯಿಸಿದರೆ ಸಿಗಲಿಲ್ಲ.
ಸಂಜೆ ಅವರೇ ಪೋನ್ ವಾಪಾಸ್ ಮಾಡಿದರು ನನ್ನ ವ್ಯವಹಾರದ ಮಾತಿನ ನಂತರ ಗೆಳೆಯ ಕಮಲಾಕ್ಷ ಪಡಿಯಾರ್ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಸಹಾಯ ಮಾಡಿದ ಬಗ್ಗೆ ಧನ್ಯವಾದ ಹೇಳಿದೆ.
"ಅದೇನು ದೊಡ್ಡ ಸಹಾಯ ಅಲ್ಲ ಸಾರ್, ಇವತ್ತು ಮಧ್ಯಾಹ್ನ ಕೂಡ ಬೇರೆ ಸಮಾಜದ ಗೆಳೆಯನ ತಾಯಿ ಅಂತ್ಯ ಸಂಸ್ಕಾರಕ್ಕೆ ಹೋದ ಬಗ್ಗೆ ವಿವರಿಸಿ ಆದ್ದರಿಂದ ನನ್ನ ಪೋನಿಗೆ ಉತ್ತರಿಸಲಾಗಲಿಲ್ಲ" ಅಂದರು.
ಶ್ರೀಕಾಂತ್ ಕಾಮತ್ ತಂದೆ ಶಿವಮೊಗ್ಗದ ಗಾಜನೂರಿನಲ್ಲಿ PWD ಸೂಪರ್ ವೈಸರ್ ಆಗಿದ್ದರು, ಅವರಿಗೆ 9 ಮಕ್ಕಳು, ಅವರು ಗಾಜನೂರಿನಲ್ಲಿ ಮೃತರಾದಾಗ ಅಂತ್ಯ ಸಂಸ್ಕಾರದಲ್ಲಿ ಅನುಭವಿಸಿದ ಸಮಸ್ಯೆಗಳು ಶ್ರೀಕಾಂತ್ ಕಾಮತ್ ರಿಗೆ ಅದನ್ನು ಪರಿಹರಿಸುವ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.
ಇವರ ಅಜ್ಜ ಸಾಗರದಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು ಕಾಮತರು ಓದಿ ಸಾಗರದಲ್ಲಿ ವಿದ್ಯುತ್ ಇಲಾಖೆ ಗುತ್ತಿಗೆದಾರರಾದ ಮೇಲೆ ಸಮಾನ ಮನಸ್ಕ ಇನ್ನಿಬ್ಬರು ಗೆಳೆಯರ ಜೊತೆ ಈ ಸೇವೆ ಅನೇಕ ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ.
ಮೃತರ ಮನೆಯವರು ಇವರಿಗೆ ವಿಷಯ ತಿಳಿಸಿದರೆ ಸಾಕು ಮುಂದಿನ ಸಂಪೂರ್ಣ ವಸ್ತುಗಳ, ಪೂಜಾ ಸಾಮಗ್ರಿ, ಅಂತ್ಯಸಂಸ್ಕಾರದ ಕಟ್ಟಿಗೆ ಸೇರಿ ಎಲ್ಲಾ ವ್ಯವಸ್ಥೆ ಮಾಡಿ ಇವರೂ ಮತ್ತು ಇವರ ಗೆಳೆಯರು ಸ್ವತಃ ಬಾಗವಹಿಸುತ್ತಾರೆ.
ಈ ಎಲ್ಲಾ ವಸ್ತುಗಳ ವೆಚ್ಚ ಸಂಬಂದಪಟ್ಟವರು ನಂತರ ತಪ್ಪದೇ ಪಾವತಿ ಮಾಡುತ್ತಾರೆ ಯಾರೂ ಬಾಕಿ ಉಳಿಸಿಕೊಳ್ಳುವುದಿಲ್ಲ, ನಮ್ಮ ಸೇವೆ ಮತ್ತು ಭಾಗವಹಿಸುವಿಕೆಗೆ ನಾವು ಯಾವುದೇ ಶುಲ್ಕ ಪಡೆಯುವುದಿಲ್ಲ ಅಂದರು.
ಯಾವ ಕಾರಣಕ್ಕೂ ಇದನ್ನು ಇವರು ಹೇಳಿಕೊಳ್ಳುವುದಿಲ್ಲ, ಪ್ರಚಾರ ಪಡೆಯುವುದಿಲ್ಲ, ಇದೊಂದು ಪುಣ್ಯ ಕೆಲಸ ಅಂತ ಮಾಡುತ್ತಿದ್ದಾರೆ. ಬಹುಶಃ ಇದನ್ನು ಇಲ್ಲಿ ಬರೆದದ್ದು ಅವರಿಗೆ ಖಂಡಿತಾ ಮುಜುಗರ ಆಗುತ್ತದೆ ಅಂತ ನನಗೆ ಗೊತ್ತು ಆದರೆ ನನ್ನ ಉದ್ದೇಶ ಪ್ರತಿ ಊರಿನಲ್ಲೂ ಇಹದಲ್ಲಿ ಉಳಿದವರು ಇಹ ಯಾತ್ರೆ ಮುಗಿಸಿದವರ ಅಂತ್ಯ ಸಂಸ್ಕಾರ ಯಾವುದೇ ತೊಂದರೆ ಗೊಂದಲ ಇಲ್ಲದೆ ನಡೆಸುವಂತ ವ್ಯವಸ್ಥೆ ಆಗಬೇಕು ಶ್ರೀಕಾಂತ್ ಕಾಮತ್ ಮತ್ತು ಇನ್ನಿಬ್ಬರು ಗೆಳೆಯರ (ಹೆಸರು ಗೊತ್ತಿಲ್ಲ) ಈ ಪವಿತ್ರ ಕಾಯ೯ ಬೇರೆಯವರಿಗೆ ಪ್ರೇರಣೆ ಆಗಲಿ ಎಂದು ಶ್ರೀಕಾಂತ್ ಕಾಮತ್ ರ ಕ್ಷಮೆ ಕೇಳಿ ಇಲ್ಲಿ ಪೋಸ್ಟ್ ಮಾಡಿದ್ದೇನೆ.
Comments
Post a Comment