#ಭಾಗ_15
#ಸ್ವಾತಂತ್ರ್ಯಪೂರ್ವದ_ಆನಂದಪುರಂನ_ಕೊನೆಯ_ಪಟೇಲರು_ಶಾನುಬೋಗರು
#ಯಡೇಹಳ್ಳಿ_ಪಟೇಲರಾಗಿದ್ದ_ಸೋಮಶೇಖರಗೌಡರು
#ಆಚಾಪುರ_ಪಟೇಲರಾಗಿದ್ದ_ಮುರುಗೆಪ್ಪಗೌಡರು
#ಮಲಂದೂರಿನ_ಪಟೇಲರಾಗಿದ್ದ_ಚೆನ್ನಪ್ಪಗೌಡರು
#ಹೊಸೂರಿನ_ಪಟೇಲರಾಗಿದ್ದ_ಉಳ್ಳೂರು_ಶ್ರೀಕಂಠಯ್ಯ
#ಶ್ಯಾನುಬೋಗರಾದ_ವಿಜೇಂದ್ರರಾಯರು_ಮತ್ತು_ಗುಂಡಾಜೋಯಿಸರು.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬ್ರಿಟೀಷ್ ಆಡಳಿತದ ಪಟೇಲ್ ಗಿರಿ ಮತ್ತು ಶ್ಯಾನುಬೋಗಿಕೆ ಅಂತ್ಯ ಕಂಡಿತು ಆಗ ಆನಂದಪುರದಲ್ಲಿ ಪಟೇಲರಾಗಿದ್ದವರು ವೀರಭದ್ರ ಶೆಟ್ಟರು ಇವರು ಪೋಸ್ಟ ಈರಣ್ಣರ ತಂದೆ, ಪೋಸ್ಟ್ ಈರಣ್ಣರ ಮಗ ಚಂದ್ರು ಈಗ ಆನಂದಪುರದ ಬಸವನ ಬೀದಿ ಮನೇನಲ್ಲಿ ವಾಸ ಇದ್ದಾರೆ.
ವೀರಭದ್ರ ಶೆಟ್ಟರು ಶ್ರೀಮಂತರು ಆಗಿದ್ದರು ಆ ಕಾಲದಲ್ಲಿ ಆನಂದಪುರಂಗೆ ಮೊದಲ ಲಾರಿ ಖರೀದಿಸಿ ತಂದಿದ್ದವರು ಇವರಿಗೆ ಶ್ಯಾನುಬೋಗರು ಹುಲಿಮರಡಿ ಗುಂಡಾ ಜೋಯಿಸರೆಂದೇ ಕರೆಯುವ ಕೃಷ್ಣಸ್ವಾಮಿ ಜೋಯಿಸರು.
ಕೃಷ್ಣಸ್ವಾಮಿ ಜೋಯಿಸರು ತೀರ್ಥಹಳ್ಳಿ ತಾಲ್ಲೂಕಿನ ಆರಗ ಮೂಲದವರು ಇವರ ತಂದೆ ಹುಚ್ಚರಾಯಸ್ವಾಮಿಗೆ ಮೂವರು ಮಕ್ಕಳು. ದೊಡ್ಡವರು ಕೃಷ್ಣ ಸ್ವಾಮಿ ಜೋಯಿಸರು, ಎರಡನೆಯವರು ಸೂಯ೯ನಾರಾಯಣ ಜೋಯಿಸರು ಮತ್ತು ಮೂರನೆಯವರು ನಾಗರಾಜ ಜೋಯಿಸರು.
ಕೃಷ್ಣಸ್ವಾಮಿ ಜೋಯಿಸರು ಆನಂದಪುರಂ ಪಟೇಲರಾದ ವೀರಭದ್ರ ಶೆಟ್ಟರ, ಯಡೇಹಳ್ಳಿ ಪಟೇಲರಾದ ಸೋಮಶೇಖರಪ್ಪ ಗೌಡರ, ಆಚಾಪುರದ ಪಟೇಲರಾದ ಮುರುಗಪ್ಪ ಗೌಡರಿಗೆ ಶ್ಯಾನುಬೋಗರಾಗಿ ಕೆಲವು ದಶಕಗಳ ಕಾಲ ಕಾರ್ಯನಿರ್ವಹಿಸಿದ ಆಡಳಿತ ಚತುರತೆ ಹೊಂದಿದ ಅತ್ಯಂತ ಬುದ್ದಿವಂತ, ಶಿಸ್ತುಬದ್ದ ವ್ಯಕ್ತಿತ್ವ ಹೊಂದಿದವರೆಂಬ ಹೆಸರು ಪಡೆದಿದ್ದರು ಈಗ ಇವರ ದೊಡ್ಡ ಮಗ ಶ್ರೀದರ್ ಗ್ರಾಮ ಪಂಚಾಯತ್ ಪಿ.ಡಿ.ಓ ಆಗಿ ನಿವೃತ್ತರಾಗಿ ಆನಂದಪುರಂ ಸಮೀಪದ ತಾವರೇಹಳ್ಳಿ ಗ್ರಾಮದ ಹುಲಿಮರಡಿಯಲ್ಲಿ ಜಮೀನು ತೋಟ ನೋಡಿಕೊಂಡಿದ್ದಾರೆ, ಶ್ಯಾ೦ ಸುಂದರ ಮತ್ತು ಮೋಹನ ಬೇರೆ ಕಡೆ ನೆಲೆಸಿದ್ದಾರೆ.
ಇವರ ತಮ್ಮ ಸೂರ್ಯನಾರಾಯಣ ಜೋಯಿಸರು ಮಾದರಿ ಶಿಕ್ಷಕರಾಗಿ ಆನಂದಪುರಂ ಅಗ್ರಹಾರದಲ್ಲಿ ನೆಲೆಸಿದ್ದರು ಇವರ ಪುತ್ರ ಚಿದಂಬರ ಜೋಯಿಸರೂ ಶಿಕ್ಷಕರಾಗಿ ವೃತ್ತಿ ಮಾಡುತ್ತಿದ್ದಾರೆ.
ನಾಗರಾಜ ಜೋಯಿಸರು ಕೆಲ ಕಾಲ ಆನಂದಪುರಂ ನ ದೊಡ್ಡ ಪ್ರಮಾಣದ ಸಹಕಾರಿ ಸಂಘದ ಕಾರ್ಯದರ್ಶಿಗಳಾಗಿ ದ್ಧರು ಇವರ ಮಗ ವಾಸು ಜೋಯಿಸ್ ಸಂತೋಷ್ ರೈಸ್ ಮಿಲ್ ಉದ್ಯೋಗಿ ಆಗಿದ್ದರು, ರಮೇಶ್ ಜೊಯಿಸ್ ಅಂಚೆ ಉದ್ಯೋಗಿ ಆಗಿದ್ದಾರೆ, ಸಣ್ಣವರು ಶಿವಾನಂದ ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದಲ್ಲಿ ಪುರೋಹಿತರಾಗಿದ್ದಾರೆ.
ವಾಸು ಜೋಯಿಸರ ಮಗ ಗುರುಪ್ರಸಾದ್ ಆನಂದಪುರಂ ನಲ್ಲಿ ಸೈಬರ್ ಕೇಂದ್ರ, ಪ್ರೊಪೆಶನಲ್ ಕೊರಿಯರ್ ಇತ್ಯಾದಿ ನಡೆಸುತ್ತಾ ಊರಿನ ಅಭಿವೃದ್ಧಿಗಾಗಿ ಆನಂದಪುರಂ ಇತಿಹಾಸ ಪರಂಪರೆ ಉಳಿಸಿ ಅಭಿಯಾನದ ಸಂಘಟನೆಗಳಲ್ಲಿ ಮುಂದಾಳಾಗಿ ಜನರ ಅಭಿಮಾನಗಳಿಸಿದ್ದಾರೆ.
ಆಗ ಮಲಂದೂರಿನ ಪಟೇಲರಾಗಿದ್ದವರು ಚೆನ್ನಪ್ಪ ಗೌಡರು ಆಗ ಆನಂದಪುರದಲ್ಲಿ ಇವರ ಬಟ್ಟೆ ಅಂಗಡಿ ಪ್ರಸಿದ್ಧವಾಗಿತ್ತು ಇವರ ಮಗ ನಿಂಗಪ್ಪ ಗೌಡರು ಅತ್ಯುತ್ತಮ ಕಬ್ಬಡಿ ಆಟಗಾರರು ಮತ್ತು ಬೀಮನಕೋಣೆ ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಇನ್ನೊಬ್ಬ ಪುತ್ರ ರವೀಂದ್ರ ಪತ್ನಿ ಶ್ರೀಮತಿ ನವೀನ ರವೀಂದ್ರ ಹಾಲಿ ಆನಂದಪುರಂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗಿದ್ದಾರೆ.
ಇವರಿಗೆ ಶ್ಯಾನುಬೋಗರಾಗಿದ್ದವರು ವಿಜೇಂದ್ರ ರಾಯರು, ವಿಜೇಂದ್ರ ರಾಯರ ಮೂಲ ಆಯನೂರಿನ ಕೋಟೆ ಎಂಬ ಊರಿನವರು ಅವರ ಅಕ್ಕ ಬಾವ ಆನಂದಪುರ೦ನಲ್ಲಿನ ಅಗ್ರಹಾರವಾಸಿಗಳಾಗಿದ್ದು ದೊಡ್ಡ ಜಮೀನ್ದಾರರಾಗಿದ್ದರು ಇವರಿಗೆ ಪುತ್ರ ಸಂತಾನ ಇಲ್ಲದ್ದರಿಂದ ಇವರ ದತ್ತು ಪುತ್ರನಾಗಿ ಇವರನ್ನು ಸ್ವೀಕರಿಸುತ್ತಾರೆ.
ಹೊಸೂರು ಭಾಗದ ಪಟೇಲರಾಗಿದ್ದ ಉಳ್ಳೂರು ಶ್ರೀಕಂಠಯ್ಯನವರಿಗೂ ವಿಜೇಂದ್ರ ರಾಯರು ಶ್ಯಾನುಬೋಗರಾಗಿದ್ದರು.
ಆಚಾಪುರದ ಪಟೇಲರಾಗಿದ್ದ ಮುರುಗೆಪ್ಪ ಗೌಡರ ಪತ್ನಿ ಲಲಿತಮ್ಮ ಇವರ ಪುತ್ರ ಚೆನ್ನಪ್ಪರ ಮಗ ಶಶಿ ಪಾಟೀಲರ ಕುಟುಂಬ ಆಚಾಪುರದಲ್ಲಿ ನೆಲೆಸಿದ್ದಾರೆ.
ಯಡೇಹಳ್ಳಿ ಪಟೇಲರಾದ ಸೋಮಶೇಖರಪ್ಪ ಗೌಡರ ಪುತ್ರ ಭಾಲಗಂಗಾದರಪ್ಪ ಗೌಡರು ಆನಂದಪುರದ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿ ಹೆಸರುವಾಸಿ ಆಗಿದ್ದರು.
ಸ್ವಾತಂತ್ರ್ಯ ನಂತರ ಈ ಹುದ್ದೆಗಳು ರದ್ದಾಗಿ ತಹಸೀಲ್ದಾರ್, ಉಪತಹಸೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ವಿಲೇಜ್ ಅಕೌಂಟೆಂಟ್ ವ್ಯವಸ್ಥೆ ಜಾರಿಯಲ್ಲಿದೆ ಆಡಳಿತ ವ್ಯವಸ್ಥೆಯ ವರ್ಗಾವಣೆ ಇತ್ಯಾದಿ ಕಾರಣದಿಂದ ಸ್ಥಳಿಯ ರೈತ ಕುಟುಂಬದೊಂದಿಗೆ ಆಗಿನ ಕಾಲದ ಖಾಯಂ ದೀರ್ಘ ಆಡಳಿತ ನಡೆಸುತ್ತಿದ್ದ ಪಟೇಲರ ಶ್ಯಾನುಬೋಗರಂತ ಆತ್ಮೀಯತೆ ಸಂಬಂದಗಳು ಈಗಿಲ್ಲ.
(ನಾಳೆ ಭಾಗ- 16 )
Comments
Post a Comment