ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ವಾಸಿ ಟಿ.ಆರ್.ಕೃಷ್ಣಪ್ಪ ಜನಪರ ಹೋರಾಟಗಾರರು ಯಾವುದೇ ಪಕ್ಷ ಅಥವ ನಾಯಕರ ನಿಯಂತ್ರಣದಲ್ಲಿ ಇರದ ಏಕಾಂಗಿ ಹೋರಾಟ ಇವರದ್ದು.
ಸುಮಾರು ಹತ್ತಿರ ಹತ್ತಿರ 65 ವರ್ಷದ ವೃದ್ದಾಪ್ಯದ ಹೊಸ್ತಿಲಲ್ಲಿದ್ದರೂ ಇವರ ಉತ್ಸಾಹ ಮತ್ತು ಪಿಟ್ ನೆಸ್ 20 ರಿಂದ 30 ವರ್ಷದ ಯುವಕರೂ ನಾಚುವಂತಹದ್ದು ಇವರ ಪೆವರಿಟ್ ವಾಹನ ಸ್ಯೆಕಲ್, ಇವರ ಖಾಯಂ ಡ್ರೆಸ್ ಬಾಬಾ ಅಮ್ಟೆಯವರಂತೆ ಕಾಕಿ ಚೆಡ್ಡಿ ಮತ್ತು ಅರ್ದ ತೋಳಿನ ಅಂಗಿ.
ಜನ ಸಾಮಾನ್ಯರ, ಅತ್ಯಂತ ಬಡವರಲ್ಲಿ ಇವರ ಬಗ್ಗೆ ತುಂಬಾ ದೊಡ್ಡ ಅಭಿಮಾನ ಇದೆ, ಅವರ ಕೆಲಸ ಮಾಡಿಸಿ ಕೊಡದೆ ವಿರಮಿಸಿದ ಕೃಷ್ಣಣ್ಣ ಅಂತ ತುಂಬು ಬಾಯಿಯಿಂದ ಹರಿಸುತ್ತಾರೆ ಇದು ಸತ್ಯ ಕೂಡ.
ಕಳೆದ ವಷ೯ ಕೊರಾನಾ ಮೊದಲ ಅಲೆಯ ಲಾಕ್ ಡೌನ್ ನಲ್ಲಿ ಇವರು ಸಾಗರದಿಂದ ಬರುವಾಗ ಆನಂದಪುರಂ ನಲ್ಲಿ ಇವರನ್ನು ಪೋಲಿಸರು ತಡೆದು ಮಾಸ್ಕ್ ಹಾಕದ ಬಗ್ಗೆ ತಕರಾರು ಮಾಡಿದಾಗ ಇವರು ಸದಾ ಜೇಬಲ್ಲಿ ಇಟ್ಟುಕೊಂಡಿರುವ ಪತ್ರಿಕಾ ತುಣುಕು ತೆಗೆದು ತೋರಿಸಿ ಮಾಸ್ಕ ಕಡ್ಡಾಯ ಅಲ್ಲ ಅಂತ ವಾದಿಸಲು ಶುರು ಮಾಡಿದಾಗ ಪೋಲಿಸರು ತಮ್ಮ ಕೆಲಸಕ್ಕೆ ವಿನಾಃ ಕಾರಣ ತೊಂದರೆ ಅಂತ ಇವರನ್ನು ಬಿಟ್ಟು ಕಳಿಸಿದ್ದರು.
ಇವತ್ತು ರಿಪ್ಪನ್ ಪೇಟಿ ವೃತ್ತದಲ್ಲಿ ಮಾಸ್ಕ್ ಧರಿಸದ ಬಗ್ಗೆ ಟಿ.ಆರ್.ಕೃಷ್ಣಪ್ಪ ಮತ್ತು ಅಧಿಕಾರಿಗಳಿಗೆ ಜಟಾಪಟಿ ಆದ ಸುದ್ದಿ ಬಂದಿದೆ, ಸ್ಥಳದಲ್ಲೇ ಶಿರ್ಷಾಸನ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ ಪೋಟೋ ಇಲ್ಲಿ ಹಾಕಿದೆ, ಅಧಿಕಾರಿಗಳಿಗೆ ಮಾಸ್ಕ ದರಿಸಿಲ್ಲ ಅಂತ ಕೇಸ್ ಹಾಕಲು ಸಾಧ್ಯವಿಲ್ಲ ಆದರೆ ಮಾಸ್ಕ ವಿಚಾರದ ಜಟಾಪಟಿಯಲ್ಲಿ ಕರ್ತವ್ಯಕ್ಕೆ ತಡೆ ನೀಡಿದ ಕಾರಣ ನೀಡಿ ದೂರು ದಾಖಲಿಸಿ ಬಂದಿಸಿದ್ದಾರೆ.
ಈ ವಿಚಾರದಲ್ಲಿ ಕೊರಾನ ಗಂಡಾಂತರದ ಸಂದರ್ಭದಲ್ಲಿ ಪೋಲಿಸರು ಬುದ್ದಿ ಹೇಳಿ ಕಳಿಸುತ್ತಾರೋ ಅಥವ ನ್ಯಾಯಾದೀಶರ ಎದರು ಹಾಜರು ಪಡಿಸುತ್ತಾರೋ ಗೊತ್ತಿಲ್ಲ ಆದರೆ ಪೋಲಿಸು ಜೈಲು ಯಾವುದಕ್ಕೂ ಅಂಜದ ಟಿ.ಆರ್.ಕೃಷ್ಣಪ್ಪರಿಗೆ ಮಾಸ್ಕ್ ಬಗ್ಗೆ, ಗಂಡಾಂತರಕಾರಿ ಕೊರಾನಾ ಕಾಯಿಲೆ ಬಗ್ಗೆ ತಿಳಿ ಹೇಳುವುದು ಕಷ್ಟವಾಗಿದೆ.
#ಅಧಿಕಾರಿಗಳು_ಈ_ಜನಪರ_ಹೋರಾಟಗಾರ_ಮಾಸ್ಕ್_ದರಿಸದ_ವಿಚಾರದಲ್ಲಿ_ಕಠಿಣ_ಕ್ರಮ_ಜರುಗಿಸಬಾರದಾಗಿ_ನಾನು_ವಿನಂತಿಸುತ್ತೇನೆ.
Comments
Post a Comment