ಭಾಗ_21, ಇಬ್ಬರು ಮುಖ್ಯಮಂತ್ರಿಗಳಾದ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗ್ಗಡೆಯವರ ಆಪ್ತ ಮತ್ತು ವಿಶೇಷಾದಿಕಾರಿ ಆಗಿದ್ದ ತಾಳಗುಪ್ಪ ಕೆ.ರಾಮಪ್ಪ ವಿದ್ಯಾ ಮಂತ್ರಿ ಬದರಿನಾರಾಯಣ ಅಯ್ಯಂಗಾರ್ ಓದಿದ ಆನಂದಪುರಂ ಪ್ರಾಥಮಿಕ ಶಾಲೆಯಲ್ಲೇ ಓದಿದವರು.
#ಭಾಗ_21.
#ತಾಳಗುಪ್ಪ_ರಾಮಪ್ಪ
#ಆನಂದಪುರಂನಲ್ಲಿ_ಪ್ರಾಥಮಿಕ_ಮತ್ತು_ಮಾಧ್ಯಮಿಕ_ಶಿಕ್ಷಣ.
#ಮುಖ್ಯಮಂತ್ರಿ_ಗುಂಡೂರಾವ್_ಮತ್ತು_ರಾಮಕೃಷ್ಣಹೆಗಡೆಗೆ_ಆಪ್ತ_ಮತ್ತು_ವಿಶೇಷ_ಕರ್ತವ್ಯಾದಿಕಾರಿ.
ಬದರಿನಾರಾರಾಯಣ್ ಆಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ಆಪ್ತರಾಗಿದ್ದ ಆನಂದಪುರಂ ಆರ್ಟಿಸನ್ ಟ್ರೈನಿಂಗ್ ಸೆಂಟರ್ ನಲ್ಲಿ (ATI ಆಗ ಚಾಪೆ ತರಬೇತಿ) ತರಬೇತುದಾರರಾಗಿದ್ದ ಪುಟ್ಟಪ್ಪ ತಾಳಗುಪ್ಪ ಮೂಲದವರು.
ಆಗ ಈ ತರಬೇತಿ ಕೇಂದ್ರ ಬೆಲ್ಲದ ಶೇಷಪ್ಪನವರ ಕಟ್ಟಡದಲ್ಲಿ ಇತ್ತು (ನಂತರ ಯಾಹ್ಯಾ ಸಾಹೇಬರು ಈ ಜಾಗ ಖರೀದಿಸಿ ದಿನಸಿ ಅಂಗಡಿ ಮಾಡುತ್ತಾರೆ) ತರಬೇತಿದಾರರಾದ ಪುಟ್ಟಪ್ಪ ಮತ್ತು ಚೌಡಮ್ಮ ದಂಪತಿಗಳಿಗೆ ಹಾಲಪ್ಪ, ಗಣಪತಿ, ರಾಮಪ್ಪ ಮತ್ತು ಮಂಜಪ್ಪ ಎಂಬ ನಾಲ್ಕು ಪುತ್ರರು.
ದೊಡ್ಡ ಮಗ ಹಾಲಪ್ಪ ಶಿಕ್ಷಕರು, ಗಣಪತಿ ಜೋಗದಲ್ಲಿ ದಿನಸಿ ವ್ಯಾಪಾರ, ರಾಮಪ್ಪನವರು ವಿಧಾನ ಸೌದದ ಸಚಿವಾಲಯದಲ್ಲಿ ಮತ್ತು ಮಂಜಪ್ಪ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಕೆ.ರಾಮಪ್ಪರ ಮನೆತನದ ಹೆಸರು ಕರಡಿ ಮನೆತನ, ಇವರು ತಂದೆ ಆನಂದಪುರಂನಲ್ಲಿ ಉದ್ಯೋಗದಲ್ಲಿ ಇದ್ದಿದ್ದರಿಂದ ರಾಮಪ್ಪನವರ ಪ್ರಾಥಮಿಕ ಶಿಕ್ಷಣ ಮತ್ತು ಮಾಧ್ಯಮಿಕ ಶಿಕ್ಷಣ ಆನಂದಪುರಂ ನಲ್ಲೇ ನಡೆಯುತ್ತದೆ, ರಂಗನಾಥ ಭಟ್ಟರು ಇವರ ಶಾಲಾ ಸಹಪಾಠಿಗಳು.
ಇವರು ವ್ಯಾಸಂಗ ಮಾಡಿದ ಶಾಲೆ ವಿದ್ಯಾ ಮಂತ್ರಿ ಬದರಿನಾರಾಯಣ್ ಆಯ್ಯಂಗಾರರು ಪ್ರಾಥಮಿಕ ಶಿಕ್ಷಣ ಪಡೆದ ಆನಂದಪುರಂನ ಪ್ರಾಥಮಿಕ ಶಾಲೆಯೇ.
ನಂತರ ಇಲಾಖೆಯಲ್ಲಿ 34 ವರ್ಷ ಸೇವೆ ಸಲ್ಲಿಸುತ್ತಾರೆ ಇವರ 34 ವರ್ಷದ ಸೇವಾ ದಾಖಲೆಯಲ್ಲಿ ಇವರು ಪಡೆದ ರಜೆ ಕೇವಲ 22 ದಿನ ಮಾತ್ರ ಇದರಲ್ಲಿ 25 ವರ್ಷ ವಿದಾನ ಸೌದದ ಸಚಿವಾಲಯದಲ್ಲಿ ಇದರಲ್ಲಿ ರಾಜ್ಯದ ಇಬ್ಬರು ಮುಖ್ಯಮಂತ್ರಿಗಳಾದ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗ್ಗಡೆಯವರ ಜೊತೆ ಎಂಟೂವರೆ ವರ್ಷ ದೀರ್ಘ ಕಾಲ ಆಪ್ತ ಮತ್ತು ವಿಶೇಷ ಅಧಿಕಾರಿ ( Asst cam Special officer) ಆಗಿ ಸೇವೆ ಸಲ್ಲಿಸಿದ್ದು ಸರ್ವಕಾಲಿಕ ದಾಖಲೆ.
1972-73ರಲ್ಲಿ ನಿಜಲಿಂಗಪ್ಪರ ಸರ್ಕಾರದಲ್ಲಿ ರಾಮಕೃಷ್ಣ ಹೆಗ್ಗಡೆಯವರು ಆರ್ಥಿಕ ಸಚಿವರಾದಾಗ ಅವರ ಜೊತೆ ಕಾರ್ಯನಿರ್ವಹಿಸುತ್ತಾರೆ, 1980-83 ರಲ್ಲಿ ಮುಖ್ಯಮಂತ್ರಿ ಗುಂಡೂರಾಯರ ಜೊತೆ, 1983ರಿಂದ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಜೊತೆ ಕಾಯ೯ನಿರ್ವಹಿಸುತ್ತಾರೆ ಇವರ ಸೇವೆ ಬಗ್ಗೆ ರಾಮಕೃಷ್ಣ ಹೆಗ್ಗಡೆಯವರು ಬರೆದ ಗೌಪ್ಯ ಸೇವಾ ವರದಿ ಇವರ ಕಾರ್ಯದ ಕನ್ನಡಿ.
1990 ರಲ್ಲಿ ರಾಮಕೃಷ್ಣ ಹೆಗ್ಗಡೆಯವರು ಯೋಜನಾ ಆಯೋಗದ ಉಪಾಧ್ಯಾಕ್ಷರಾದಾಗಲೂ ದೆಹಲಿಯಲ್ಲಿ ಅವರ ಜೊತೆ ಕಾರ್ಯನಿರ್ವಹಿಸುತ್ತಾರೆ.
8-4-1934 ರಲ್ಲಿ ಜನಿಸುತ್ತಾರೆ, ಇವರ ಪತ್ನಿ ಕುಂಸಿ ಮೂಲದವರು ಇವರಿಗೆ ನಾಗೇಶ್, ಚಂದ್ರಿಕಾ, ರೇಣುಕಾ ಮತ್ತು ಮಂಜುನಾಥ ಎಂಬ ಮಕ್ಕಳು.
ತಮ್ಮ ಪ್ರಾಥಮಿಕ ಶಿಕ್ಷಣದ ಸಮಯದಲ್ಲಿ ಆನಂದಪುರಂನ ರಂಗನಾಥ ಸ್ವಾಮಿ ಭಕ್ತರಾದ ರಾಮಪ್ಪನವರು ತಾಳಗುಪ್ಪದ ಗುಡ್ಡದ ರಂಗನಾಥನ ಭಕ್ತರೂ ಹೌದು ಹಾಗಾಗಿಯೆ ತಾಳಗುಪ್ಪದಲ್ಲಿ ತಮ್ಮ ಮಾತಾ ಪಿತೃಗಳ ಸ್ಮರಣಾಥ೯ "ಶ್ರೀರಂಗನಾಥ ಸ್ವಾಮಿ" ಕಲ್ಯಾಣ ಮಂಟಪ ಮತ್ತು ವೀರಭದ್ರ ಮತ್ತು ದೇವಿ ದೇವಸ್ಥಾನ ನಿರ್ಮಿಸಿ ಕೊಟ್ಟಿದ್ದಾರೆ.
ಈ ದಂಪತಿಗಳ ಮೇಲೆ ಮಹದೇವ ಬಣಕಾರ್ ಎಂಬುವವರು ಬರೆದ ಪರಿಚಯದ ಕಿರು ಹೊತ್ತಿಗೆ "ರಾಮ -ಕ ಮಲ" ಇವರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುತ್ತದೆ.
ಈ ಕಿರು ಹೊತ್ತಿಗೆ,ರಾಮಪ್ಪ ದಂಪತಿಗಳ ಮತ್ತು ಕಲ್ಯಾಣ ಮಂಟಪದ ಪೋಟೊ ಮಾಹಿತಿಯನ್ನು ಸಕಾಲದಲಿ ದೊರಕಿಸಿ ಕೊಟ್ಟ ಪತ್ರಕರ್ತ ಮತ್ತು ಹೋರಾಟಗಾರ ತಾಳಗುಪ್ಪ ಓಂಕಾರ್ ಒದಗಿಸಿ ಕೊಟ್ಟು ಈ ಸರಣಿ ಲೇಖನ ಸಚಿತ್ರ ಮಾಡಲು ಕಾರಣರಾಗಿದ್ದಾರೆ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಈ ಸಂದರ್ಭದಲ್ಲಿ ಹೇಳಲೇ ಬೇಕು.
Comments
Post a Comment