Blog number 2107. ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ನಿಡುಗೋಡಿ ದಟ್ಟ ಅರಣ್ಯದ ಮಧ್ಯದಲ್ಲಿರುವ ನಿಗೂಡ ಜಲಪಾತ ಕುಂಚಿಕಲ್ ಪಾಲ್ಸ್ ನಮ್ಮ ದೇಶದ ಅತಿ ಎತ್ತರದ ಜಲಪಾತವೆಂದು ದಾಖಲೆ ಆಗಿರುವ ಹಿಮಾಚಲ ಪ್ರದೇಶದ ನೋಹಾಕಾಲಿಕೈ ಜಲಪಾತಕ್ಕಿಂತ ದೊಡ್ಡದೆಂದು ಹರಡಿರುವ ಸುದ್ದಿ ಸತ್ಯವಾ?
#ನನ್ನ_ಆತ್ಮೀಯ_ಗೆಳೆಯ_ಕುಣುಬಿ_ಈರಪ್ಪಣ್ಣರ_ಸಹೋದರ #ಮಾಸ್ತಿಕಟ್ಟೆ_ಕೆಪಿಸಿ_ದೇವೇಂದ್ರ_ನನ್ನ_ಅತಿಥಿ #ಕುಣುಬಿ_ಸಮಾಜ_ಸಂಘಟನೆಗೆ_ಈರಪ್ಪಣ್ಣರ_ಅಡಿಪಾಯ #ವರಾಹಿ_ಡ್ಯಾಂ_ಇವರ_ಜಮೀನಿನ_ಮೇಲೆ_ನಿರ್ಮಾಣವಾಗಿದೆ #ನಮ್ಮ_ಗ್ರಾಮ_ಪಂಚಾಯಿತಿ_ಘಂಟಿನಕೊಪ್ಪದಲ್ಲಿ_ಕೃಷಿ_ಮಾಡುತ್ತಿರುವ_ಕುಟುಂಬ #ದೇವೇಂದ್ರರಿಗೆ_ಕೆಪಿಸಿ_ಕೆಲಸ_ಕೊಡಿಸಿದ_ಆರಗ_ಜ್ಞಾನೇಂದ್ರ #ಈರಪ್ಪಣ್ಣ_ನೇತೃತ್ವದಲ್ಲಿ_ದೇಶದ_ಅತಿ_ದೊಡ್ಡ_ಜಲಪಾತ_ಕುಂಚಿಕಲ್_ಪಾಲ್ಸ್_ಅನ್ವೇಷಣೆ_ವಿಫಲವಾಗಿದ್ದು #ಈಗಲೂ_ನಿಗೂಡವಾಗಿರುವ_ಪಾಲ್ಸ್_ನೋಡಿದವರು_ಯಾರು? #ಅದನ್ನು_ಅಳೆದವರು_ಯಾರು? #ಈ_ಬಗ್ಗೆ_ಸರ್ಕಾರ_ಸ್ಪಷ್ಟ_ಉತ್ತರ_ನೀಡೀತಾ? ಇವತ್ತು ಮಾದರಿ ಶಿಕ್ಷಕ ಮಿತ್ರ ಮಂಜುನಾಥ್ ಆರ್. ಸಿ. ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯೆ ನಿಗೂಡವಾಗಿರುವ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಸುದ್ದಿ ವಿಡಿಯೋ ಹಂಚಿಕೊಂಡಿದ್ದರು. https://www.facebook.com/share/v/3QUhXA3vswQfxBVc/?mibextid=qi2Omg ಈ ನಿಗೂಡ ಪಾಲ್ಸ್ ನೋಡಿದ್ದ ಕುಣುಬಿ ಈರಪ್ಪಣ್ಣ ಈ ಬಗ್ಗೆ ಆಸಕ್ತರಾಗಿದ್ದ ನಮ್ಮನ್ನು ಅಲ್ಲಿಗೆ ಕರೆದೊಯ್ಯುವ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಇದಕ್ಕಾಗಿ ನಾವು ನಮ್ಮದೇ ಒಂದು ತಂಡದೊಂದಿಗೆ ಸಜ್ಜಾಗಿದ್ದೆವು. ದುರ್ಗಮ ಮಾಗ೯ದಲ್ಲಿ ನಮ್ಮ ತಂಡ ಕರೆದೊಯ್ಯಲು ...