Blog number 2107. ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ನಿಡುಗೋಡಿ ದಟ್ಟ ಅರಣ್ಯದ ಮಧ್ಯದಲ್ಲಿರುವ ನಿಗೂಡ ಜಲಪಾತ ಕುಂಚಿಕಲ್ ಪಾಲ್ಸ್ ನಮ್ಮ ದೇಶದ ಅತಿ ಎತ್ತರದ ಜಲಪಾತವೆಂದು ದಾಖಲೆ ಆಗಿರುವ ಹಿಮಾಚಲ ಪ್ರದೇಶದ ನೋಹಾಕಾಲಿಕೈ ಜಲಪಾತಕ್ಕಿಂತ ದೊಡ್ಡದೆಂದು ಹರಡಿರುವ ಸುದ್ದಿ ಸತ್ಯವಾ?
#ನನ್ನ_ಆತ್ಮೀಯ_ಗೆಳೆಯ_ಕುಣುಬಿ_ಈರಪ್ಪಣ್ಣರ_ಸಹೋದರ
#ಮಾಸ್ತಿಕಟ್ಟೆ_ಕೆಪಿಸಿ_ದೇವೇಂದ್ರ_ನನ್ನ_ಅತಿಥಿ
#ಕುಣುಬಿ_ಸಮಾಜ_ಸಂಘಟನೆಗೆ_ಈರಪ್ಪಣ್ಣರ_ಅಡಿಪಾಯ
#ವರಾಹಿ_ಡ್ಯಾಂ_ಇವರ_ಜಮೀನಿನ_ಮೇಲೆ_ನಿರ್ಮಾಣವಾಗಿದೆ
#ನಮ್ಮ_ಗ್ರಾಮ_ಪಂಚಾಯಿತಿ_ಘಂಟಿನಕೊಪ್ಪದಲ್ಲಿ_ಕೃಷಿ_ಮಾಡುತ್ತಿರುವ_ಕುಟುಂಬ
#ದೇವೇಂದ್ರರಿಗೆ_ಕೆಪಿಸಿ_ಕೆಲಸ_ಕೊಡಿಸಿದ_ಆರಗ_ಜ್ಞಾನೇಂದ್ರ
#ಈರಪ್ಪಣ್ಣ_ನೇತೃತ್ವದಲ್ಲಿ_ದೇಶದ_ಅತಿ_ದೊಡ್ಡ_ಜಲಪಾತ_ಕುಂಚಿಕಲ್_ಪಾಲ್ಸ್_ಅನ್ವೇಷಣೆ_ವಿಫಲವಾಗಿದ್ದು
#ಈಗಲೂ_ನಿಗೂಡವಾಗಿರುವ_ಪಾಲ್ಸ್_ನೋಡಿದವರು_ಯಾರು?
#ಅದನ್ನು_ಅಳೆದವರು_ಯಾರು?
#ಈ_ಬಗ್ಗೆ_ಸರ್ಕಾರ_ಸ್ಪಷ್ಟ_ಉತ್ತರ_ನೀಡೀತಾ?
ಇವತ್ತು ಮಾದರಿ ಶಿಕ್ಷಕ ಮಿತ್ರ ಮಂಜುನಾಥ್ ಆರ್. ಸಿ. ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯೆ ನಿಗೂಡವಾಗಿರುವ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಸುದ್ದಿ ವಿಡಿಯೋ ಹಂಚಿಕೊಂಡಿದ್ದರು.
https://www.facebook.com/share/v/3QUhXA3vswQfxBVc/?mibextid=qi2Omg
ಈ ನಿಗೂಡ ಪಾಲ್ಸ್ ನೋಡಿದ್ದ ಕುಣುಬಿ ಈರಪ್ಪಣ್ಣ ಈ ಬಗ್ಗೆ ಆಸಕ್ತರಾಗಿದ್ದ ನಮ್ಮನ್ನು ಅಲ್ಲಿಗೆ ಕರೆದೊಯ್ಯುವ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಇದಕ್ಕಾಗಿ ನಾವು ನಮ್ಮದೇ ಒಂದು ತಂಡದೊಂದಿಗೆ ಸಜ್ಜಾಗಿದ್ದೆವು.
ದುರ್ಗಮ ಮಾಗ೯ದಲ್ಲಿ ನಮ್ಮ ತಂಡ ಕರೆದೊಯ್ಯಲು ದಾರಿ ಮಾಡಿ ಕೊಡಲು, ಊಟ-ಉಪಹಾರ, ವನ್ಯ ಪ್ರಾಣಿಗಳ ದಾಳಿ ತಡೆಯಲು ಬಂದೂಕು ದಾರಿಗಳು, ವಿಡಿಯೋ ಪೋಟೋ ಗ್ರಾಪರ್ ಹೀಗೆ ತಯಾರಾಗಿದ್ದ ನಮ್ಮ ಕ್ಯಾರ್ ವಾನ್ ಕೊನೆಗೂ ಟೇಕ್ ಆಫ್ ಆಗಲಿಲ್ಲ.
ನಾವೆಣಿಸಿದಂತೆ ಸರಾಗವಾಗಿ ನಡೆದಿದ್ದರೆ ಈ ನಿಗೂಡವಾದ ಹಾಗೂ ನಮ್ಮ ದೇಶದಲ್ಲೇ ಅತ್ಯಂತ ಎತ್ತರದ ವಾಟರ್ ಪಾಲ್ಸ್ ಪ್ರಪಂಚಕ್ಕೆ ಪರಿಚಯಿಸಿದ ಮೊದಲಿಗರು ಎಂಬ ದಾಖಲೆ ನಮ್ಮದಾಗಿಸಿಕೊಂಡು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಅವಕಾಶ ಇತ್ತು.
ಈ ಯೋಜನೆ ಟೇಕ್ ಆಫ್ ಆಗದೇ ಇರಲು ಕಾರಣ ನಾವು ಹೋಗ ಬೇಕೆಂದಿದ್ದ ಸಮಯ ಕಾಳಿಂಗ ಸರ್ಪಗಳು ಮೊಟ್ಟೆ ಇಟ್ಟು ಕಾವು ಕೊಡುವ ಕಾಲವಾಗಿತ್ತು ಇದರ ಬಗ್ಗೆ ಜಾಗೃತೆವಹಿಸ ಬೇಕೆಂದು ಈರಪ್ಪಣ್ಣ ಹೇಳದಿದ್ದರೆ ಎಲ್ಲರೂ ಉತ್ಸಾಹದಿಂದ ಹೊರಡುತ್ತಿದ್ದರು....ಆದರೆ ಕಾಳಿಂಗ ಸರ್ಪದ ಕಥೆ ಒಬ್ಬೊಬ್ಬರಾಗಿ ಎಲ್ಲರೂ ನಿಗೂಡವಾದ ಕುಂಚಿಕಲ್ ಪಾಲ್ಸ್ ಎಕ್ಸ್ ಪ್ಲೋರಿಂಗ್ ಟೀಂನಿಂದ ಬರಕಾಸ್ತು ಆಗಲು ಕಾರಣವಾಯಿತು.
ಕುಂಚಿಕಲ್ ಪಾಲ್ಸ್ ಇರುವುದು ಹೌದು ಅನುಮಾನವಿಲ್ಲ ಅದು ದಟ್ಟ ಅರಣ್ಯದ ಮಧ್ಯದಲ್ಲಿ ದಾರಿಯಿಲ್ಲದ ಪ್ರದೇಶದಲ್ಲಿದೆ. ಅಲ್ಲಿ ಅದರ ವೀಕ್ಷಣೆಗೆ ಸರಿಯಾದ ವೀವ್ ಪಾಯಿಂಟ್ ಕೂಡ ಇಲ್ಲದಂತೆ ಘಟ್ಟದ ಅಂಚಿನಿಂದ ದಟ್ಟ ಹಸಿರು ಮರಗಿಡ ಬಳ್ಳಿಗಳ ಮರೆಯಲ್ಲಿ ಮಳೆಗಾಲದಲ್ಲಿ ವರಾಹಿ ನದಿಯ ಒಂದು ಪಾತ್ರ ಅಲ್ಲಿ ದುಮ್ಮಿಕ್ಕುತ್ತದೆ ಅದರ ಪೂರ್ಣ ದೃಶ್ಯ ತುದಿಯಿಂದ ಬುಡದವರೆಗೆ ಒಂದೇ ಕೋನದಲ್ಲಿ ನೋಡಲು ಅಥವ ಸೆರೆಹಿಡಿಯಲು ಸಾಧ್ಯವೇ ಇಲ್ಲವಂತೆ.
ಅದರ ಪೋಟೋ ಯಾರಾದರೂ ತೆಗೆದಿದ್ದಾರಾ? ಗೊತ್ತಿಲ್ಲ... ಅಷ್ಟೆ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೋ ವಿಡಿಯೋ ಈ ಪಾಲ್ಸ್ ನ ಅಸಲಿಯಾ ಅನ್ನುವುದು ಕೂಡ ಗೊತ್ತಿಲ್ಲ, ಹಾಗೆಯೆ ಈ ಕುಂಚಿಕಲ್ ಪಾಲ್ಸ್ ಎತ್ತರ ಮೀಟರ್ ಗಳಲ್ಲಿ ಕರಾರುವಕ್ಕಾಗಿ ನಮೂದಿಸಿದ್ದಾರೆ ಹಾಗಾದರೆ ಅಳತೆ ಮಾಡಿದವರು ಯಾರು? ಅದೂ ಗೊತ್ತಿಲ್ಲ.
ಆದರೆ ದೇಶದ ಅತಿ ಎತ್ತರದ ಜಲಪಾತ ಹಿಮಾಚಲ ಪ್ರದೇಶದ #ನೋಹಾಕಾಲಿಕೈ ಪಾಲ್ಸ್ ಹೆಸರಲ್ಲಿದೆ ಅದು 1115 ಅಡಿ ಎತ್ತರದಿಂದ ದುಮ್ಮಿಕ್ಕುತ್ತಿದೆ.
ನಮ್ಮ ಜಿಲ್ಲೆಯ ಕುಂಚಿಕಲ್ ಪಾಲ್ಸ್ ಎತ್ತರ 1433 ಅಡಿ ಎಂಬ ಸುದ್ದಿ ಸತ್ಯವಾಗಿದ್ದರೆ ದೇಶದ ಜಲಪಾತಗಳ ಪಟ್ಟಿ ಪರಿಷ್ಕರಣೆ ಆಗ ಬೇಕೆಂದು ನಾನು ಕೆಲ ವರ್ಷದ ಹಿಂದೆ ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2023/03/blog-number-1276.html.
ಕುಣುಬಿ ಈರಪ್ಪಣ್ಣರ ಪ್ರೇರಣೆ ಒತ್ತಾಯದಿಂದ ಬಳ್ಳಿಬೈಲು ಮಂಜಪ್ಪ (ಈಗ ಸಾಗರ ನ್ಯಾಯಾಲಯದಲ್ಲಿ ವಕೀಲರು ಮತ್ತು ರಾಷ್ಟ್ರೀಯ ಕುಣುಬಿ ಸಂಘಟನೆ ಪದಾದಿಕಾರಿ) ಸಹಕಾರದಿಂದ ನಮ್ಮ ಊರು ಆನಂದಪುರಂನಲ್ಲಿ ಜಿಲ್ಲೆಯ ಮೊದಲ ಕುಣುಬಿ ಸಮಾಜದ ಸಮಾವೇಶ ಮತ್ತು ಎರಡನೆ ಸಮಾವೇಶ ಭಟ್ಕಳ ಸಮೀಪದ ನಾಗವಳ್ಳಿಯ ದೇವಗಾರಿನಲ್ಲಿ ನಡೆಸಿದ್ದೆವು.
ವರಾಹಿ ವಿದ್ಯುತ್ ಯೋಜನೆಗೆ ಕಟ್ಟಿದ ಡ್ಯಾಂ ಈರಪ್ಪಣ್ಣರ ಕುಟುಂಬದ ಪಿತ್ರಾರ್ಜಿತ ಅಡಿಕೆ ತೋಟದ ಮೇಲೆ, ಅಲ್ಲಿ ಜಮೀನು ಕಳೆದುಕೊಂಡು ನಮ್ಮ ಊರಿನ ಸಮೀಪದ ಘಂಟಿನಕೊಪ್ಪದಲ್ಲಿ ಕೃಷಿ ಭೂಮಿ ಖರೀದಿಸಿ ಈರಪ್ಪಣ್ಣರ ಕುಟುಂಬಗಳು ಜೀವನ ನಡೆಸಿದ್ದಾರೆ.
ಈರಪ್ಪಣ್ಣರ ಕಿರಿಯ ಸಹೋದರ ದೇವೇಂದ್ರರಿಗೆ KPC ಯಲ್ಲಿ ಅನುಕಂಪದ ಉದ್ಯೋಗ ಕೊಡಿಸಲು ಈರಪ್ಪಣ್ಣ ತುಂಬಾ ಶ್ರಮ ಪಟ್ಟರು, ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರು ನಮ್ಮ ಬೇಡಿಕೆ ಈಡೇರಿಸಿ ದೇವೇಂದ್ರರಿಗೆ ಉದ್ಯೋಗ ಕೊಡಿಸಿದ್ದು ಮರೆಯುವಂತಿಲ್ಲ.
ಈರಪ್ಪಣ್ಣ ಮರಣಿಸಿದಾಗ ಅವರ ಸಮಾದಿ ಆಗುವ ತನಕ ನಾನು ರಾತ್ರಿ ಅಲ್ಲಿದ್ದೆ, ಕುಣುಬಿ ಸಮಾಜದವರ ಸಮಾದಿಗಳು ಆದಿವಾಸಿ ಗುಡ್ಡಗಾಡು ಜನಾಂಗದವರ ಶೈಲಿ ಮತ್ತು ಪದ್ದತಿಯದ್ದು.
ಘಂಟಿನಕೊಪ್ಪದಲ್ಲಿ ನೆಲೆಸಿರುವ ಈ ಆರೇಳು ಕುಟುಂಬ ಈಗಲೂ ರೇಷನ್ ಕಾರ್ಡ್ ಕೂಡ ಹೊಂದಿಲ್ಲ ಎಂಬ ಸುದ್ದಿ ದೇವೇಂದ್ರರಿಂದ ತಿಳಿದು ಬೇಸರ ತರಿಸಿತು.
Comments
Post a Comment