Blog number 2145. ಸಾಹಸಿ ಆದರ್ಶ ಶಿಕ್ಷಕ ಆರ್.ಸಿ. ಮಂಜುನಾಥ್ ನೇತೃತ್ವದಲ್ಲಿ ಯೌವತ್ ಹಾಸ್ಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಅರಣ್ಯ ಇಲಾಖೆ ಮತ್ತು ಕನಾ೯ಟಕ ಪವರ್ ಕಾರ್ಪೋರೇಷನ್ ಅನುಮತಿಯೊಂದಿಗೆ 20 ಜನರ ತಂಡ ದೇಶದ ಅತ್ಯಂತ ಎತ್ತರದ ಜಲಪಾತವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ನಿಡಗೋಡು ಸಮೀಪದ ಕುಂಚಿಕಲ್ ಪಾಲ್ಸ್ ಅನ್ವೇಷಣೆ ಮಾಡಲಿದೆ.
#ನಮ್ಮ_ಜಿಲ್ಲೆಯ_ಆದರ್ಶ_ಶಿಕ್ಷಕ_ಆರ್_ಸಿ_ಮಂಜುನಾಥ್
#ನಮ್ಮ_ದೇಶದ_ಅತಿದೊಡ್ಡ_ಜಲಪಾತವಾದ_ವರಾಹಿ_ನದಿಯ
#ಮಾಸ್ತಿಕಟ್ಟೆ_ಸಮೀಪದ_ಕುಂಚಿಕಲ್_ಜಲಪಾತವನ್ನು_ಯೌವತ್_ಹಾಸ್ಟೆಲ್_ಸಹಯೋಗದಲ್ಲಿ
#ಇಪ್ಪತ್ತು_ಜನರ_ತಂಡದೊಂದಿಗೆ_ಅನ್ವೇಷಣೆ_ಹಮ್ಮಿ_ಕೊಂಡಿದ್ದಾರೆ
#ಶಿಕ್ಷಕರು_ಹೋಗಲು_ಇಷ್ಟಪಡದ_ಕುಗ್ರಾಮದ_ಶಾಲೆಗೆ_ಸಂತೋಷದಿಂದ_ಹೋಗಿ_ಪಾಠ_ಮಾಡುವ
#ಸದಾ_ಕಾಡು_ಮೇಡು_ಜಲಪಾತಗಳ_ಸುತ್ತುವ
#ಅಸಹಾಯಕರಿಗೆ_ಸಹಾಯ_ಹಸ್ತ_ಚಾಚುವ
#ಅಪರೂಪದ_ಶಿಕ್ಷಕರ_ಸಂಪರ್ಕ_ಸಂಖ್ಯೆ_9449165868.
ಅನೇಕ ದಿನಗಳಿಂದ ಆರ್.ಸಿ. ಮಂಜುನಾಥ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿನ ವರಾಹಿ ನದಿಯ #ಕುಂಚಿಕಲ್_ಪಾಲ್ಸ್ ಗೆ ಅನ್ವೇಷಣೆಗೆ ಹೋಗುವ ಉತ್ಸಾಹದಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.
ಅವರು 20 ಜನರ ಆಸಕ್ತ ತಂಡ ಒಂದನ್ನ ಒಟ್ಟು ಮಾಡಿ ಯೌವತ್ ಹಾಸ್ಟಲ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ಅನುಮತಿಯೊಂದಿಗೆ ಕುಂಚಿಕಲ್ ಪಾಲ್ಸ್ ಅನ್ವೇಷಣೆಗೆ ತಯಾರಾಗಿದ್ದಾರೆ.
ನಮ್ಮ ಜಿಲ್ಲೆಯ ಸಾಹಸಿ ತರುಣರ ಈ ಸಾಹಸ ಅಭಿನಂದನೀಯ ಅವರ ತಂಡಕ್ಕೆ ಈ ಹಿಂದೆ ಮಳೆಗಾಲದಲ್ಲಿ ಮಳೆ-ಗಾಳಿಯಲ್ಲಿಯೇ 2019 ರಲ್ಲಿ ಹೋಗಿ ಮೊದಲ ವಿಡಿಯೋ ಮಾಡಿದ ಸಮಾಜ ಸೇವಕರಾದ #ನಗರ_ನಾರಾಯಣ_ಕಾಮತರ ತಂಡವೂ ಕೈಜೋಡಿಸಲಿ ಎಂದು ಆಶಿಸುತ್ತೇನೆ.
ನಮ್ಮ ಊರು ಆನಂದಪುರಂನ ಸರ್ಕಾರಿ ಪ್ರೌಡ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿ ಶಿಕ್ಷಕ ವೃತ್ತಿಯಲ್ಲಿರುವ ಚೋರಡಿ ಸಮೀಪದ ತುಪ್ಪೂರಿನ R.C. ಮಂಜುನಾಥರು ಸಾಗರ ತಾಲ್ಲೂಕಿನ ತುಟ್ಟ ತುದಿಯಾದ ಕೊಲ್ಲೂರು ಸಮೀಪದ ಪಶ್ಚಿಮ ಘಟ್ಟದ ಅತಿ ಎತ್ತರದ ಅಂಬಾರಗುಡ್ಡದ ಮುರಳ್ಳಿಯ ಗುಡ್ಡಗಾಡು ವಾಸಿಗಳಾದ ಕುಣುಬಿ ಜನಾಂಗದ ಏಕ ಶಿಕ್ಷಕ ಶಾಲೆಯಲ್ಲಿ ಅತ್ಯುತ್ತಮವಾಗಿ ಶಿಕ್ಷಣ ನೀಡಿ ಅಲ್ಲಿನ ಮಕ್ಕಳು ವಿದ್ಯಾವಂತರಾಗಿ ಮುಂದಿನ ಶಿಕ್ಷಣಕ್ಕೆ ದಾರಿ ದೀಪ ಆಗಿದ್ದವರು.
ಮುರಳ್ಳಿಗೆ ಬಸ್ ಸೌಲಭ್ಯವಿಲ್ಲ, ವಿದ್ಯುತ್ ಇಲ್ಲದ ಆರು ತಿಂಗಳು ಮಳೆ, ಮೂರು ತಿಂಗಳು ವಿಪರೀತ ಚಳಿ, ಇಂಬುಳಗಳ ಕಾಟ ಅಲ್ಲಿ ಆದ್ದರಿಂದ ಅಲ್ಲಿನ ಶಾಲೆಗೆ ಶಿಕ್ಷಕರು ಹೋಗಲು ಒಪ್ಪುವುದಿಲ್ಲ.
ನಂತರ ವರ್ಗ ಆದಲ್ಲೆಲ್ಲ ಅಲ್ಲಿನ ಶಾಲೆ ನಂದ ಗೋಕುಲವಾಗಿಸಿ ಅಲ್ಲಿನ ವಿದ್ಯಾರ್ಥಿ ವೃಂದ ಮತ್ತು ಪೋಷಕರ ಪ್ರೀತಿ ಪಾತ್ರವಾಗುವ R C ಮಂಜುನಾಥ ಯಾವುದೇ ರಾಷ್ಟ್ರ ಪ್ರಶಸ್ತಿಗಿಂತ ದೊಡ್ಡ ಅರ್ಹತೆಯ ಯುವ ಶಿಕ್ಷಕರು.
ಲಾಕ್ ಡೌನ್ ನಲ್ಲಿ ಇವರ ಗೆಳೆಯರ ತಂಡ ಅನೇಕರಿಗೆ ಸಹಾಯ ಹಸ್ತ ಚಾಚಿತ್ತು.
ಇವತ್ತು ಇವರ ಪೇಸ್ ಬುಕ್ ನಲ್ಲಿ ಆಸಕ್ತರಿಗೆ ಆಹ್ವಾನ ನೀಡಿದ್ದಾರೆ
.........ಅಲ್ಲಿನ ಮೂಲ ನಿವಾಸಿಗಳ ಪ್ರಕಾರ ಅದು ಅತ್ಯಂತ ಮನಮೋಹಕ ಹಾಗೂ ಘನಘೋರ ವರ್ಣೀಸಲಾಗದ... ಅವರು ಹೇಳುವಂತೆ ಈ ವಿಡಿಯೋಗಳು ಜಲಪಾತದ ಕಟ್ಟ ಕಡೆಯ ಕೆಳಭಾಗ ಅಥವಾ ಮಧ್ಯ ಭಾಗದ ದೃಶ್ಯಗಳು... ಆದರೆ ಇದು ಭಾರತದ ಅತೀ ಎತ್ತರದ ಅಧಿಕೃತ ಅತ್ಯಂತ ಎತ್ತರದ ಜಲಪಾತ... ಈ ಜಲಪಾತ ವೀಕ್ಷಣೆಗೆ ಕರ್ನಾಟಕ ವಿದ್ಯುತ್ ಇಲಾಖೆ ಮತ್ತು ಕರ್ನಾಟಕ ಅರಣ್ಯ ಇಲಾಖೆ ಅನುಮತಿ ಅನಿವಾರ್ಯವಾಗಿದ್ದು ಮತ್ತು ಶಿವಮೊಗ್ಗ ಯುತ್ ಹಾಸ್ಟೆಲ್ ಸಹಯೋಗ ನೀಡಲು ಮುಂದಾಗಿದ್ದು ಆಸಕ್ತರ ಅಧಿಕೃತ ಒಪ್ಪಿಗೆಯೊಂದಿಗೆ ಚಾರಣ ಮಾಡಲು ನಾನು ಮೊದಲಿಗನಾಗಿ ಒಪ್ಪಿಗೆ ಕೋರಿದ್ದು... ತಾವುಗಳು ನಮ್ಮೊಂದಿಗೆ ಬರಲು ಸಿದ್ದರಿದ್ದರೆ ತಮ್ಮ ಅಭಿಪ್ರಾಯವನ್ನು ಇಲ್ಲಿ ಕಾಮೆಂಟ್ ಮೂಲಕ ದಾಖಲಿಸಲು ವಿನಂತಿ...
Arun Prasad ಸರ್ ಬರುವ ಪ್ರತಿಯೊಬ್ಬರ ಹೆಸರು ವಿಳಾಸ ದಾಖಲೆ ಸ್ವಯಂ ಒಪ್ಪಿಗೆಪತ್ರ ಎಲ್ಲವನ್ನು ಮುಂಚಿತವಾಗಿ ಬೆಂಗಳೂರು ಕೆ.ಪಿ.ಸಿ ಕಚೇರಿಗೆ ತಲುಪಿಸಿ ಅಧಿಕೃತವಾಗಿ ಅನುಮೋದನೆ ಪಡೆದು ಅವರು ತಿಳಿಸುವ ದಿನಾಂಕದಂದು ಹೋಗಬೇಕಂತೆ... ಕನಿಷ್ಠ ಇಪ್ಪತ್ತು ಜನರ ತಂಡವಾದರು ಆಗಬೇಕು...
ಅರಣ್ಯ ಇಲಾಖೆ ಒಬ್ಬ ಸಿಬ್ಬಂದಿ ಹಾಗೂ ಸ್ಥಳೀಯ ಮಾರ್ಗದರ್ಶಕರನ್ನು ಕರೆದೊಯ್ಯಬೇಕು...
ಎಂದು ಬರೆದಿದ್ದಾರೆ ನನ್ನ ಪ್ರೀತಿಯ ಆದರ್ಶ ಶಿಕ್ಷಕ, ಸಾಹಸಿ, ಪ್ರಕೃತಿ ಪ್ರೇಮಿ ಆರ್.ಸಿ.ಮಂಜುನಾಥ್.
ದೇಶದ ಅತ್ಯಂತ ಎತ್ತರದ ಕುಂಚಿಕಲ್ ಜಲಪಾತದ ಮೊದಲ ವ್ಯವಸ್ಥಿತ ತಯಾರಿಯ ಸಾಹಸ ಸಂಸ್ಥೆಯ ಸಹಯೋಗದ ಅನ್ವೇಷಣೆ ಯಾತ್ರೆ ಯಶಸ್ವಿಯಾಗಲಿ ಅಲ್ಲಿನ ಸುದ್ದಿ ಚಿತ್ರಗಳು ಹೆಚ್ಚು ಹೆಚ್ಚು ಬರಲಿ ಎಂದು ಹಾರೈಸುತ್ತೇನೆ.
1993 ರಲ್ಲಿ ಕುಂಚಿಕಲ್ ಪಾಲ್ಸ್ ಅನ್ವೇಷಣೆಗೆ ತಂಡವೊಂದು ರಚಿಸಿ ವಿಪಲನಾಗಿದ್ದ ನನಗೆ ಈಗಿನ ಯುವಕರು ವ್ಯವಸ್ಥಿತ ರೀತಿಯಲ್ಲಿ ತಯಾರಾಗುವುದು ನೋಡಿ ಖುಷಿಯಾಗುತ್ತಿದೆ.
Comments
Post a Comment