Blog number 2127. ಅಕ್ಕಿ ಹಪ್ಪಳ ಪಶ್ಚಿಮ ಘಟ್ಟದ ಮಲೆನಾಡಿನ ಸಿಗ್ನೇಚರ್ ರೆಸಿಪಿ ಆದರೆ ಇದನ್ನು ಜನಪ್ರಿಯಗೊಳಿಸುವ ಕೆಲಸ ಆಗೇ ಇಲ್ಲ.
#ಊಟಕ್ಕೆರೆಡು_ಹಪ್ಪಳ_ಆದರೆ_ಊಟವೇ_ಹಪ್ಪಳ_ಆಗುವುದು
#ಮಲೆನಾಡಿನ_ಅಕ್ಕಿ_ಹಪ್ಪಳ_ಮಾತ್ರ
#ಒಂದು_ಕಿಲೋ_ಅಕ್ಕಿಯಲ್ಲಿ_ಸಣ್ಣ_ಗಾತ್ರದ_ನೂರು_ಹಪ್ಪಳ
#ಅಕ್ಕಿ_ಅದಕ್ಕೆ_ರುಚಿಗೆ_ತಕ್ಕ_ಉಪ್ಪು_ಮಸಾಲೆ_ಸೇರಿಸಿ_ರುಬ್ಬಿ_ಹುದುಗು_ಬರೆಸಿ
#ಹಬೆಯಲ್ಲಿ_ಇಡ್ಲಿಯಂತೆ_ತಟ್ಟೆಯಲ್ಲಿ_ಬೇಯಿಸಿ
#ಬಿಸಿಲಲ್ಲಿ_ಒಣಗಿಸಿ_ಗಾಳಿಯಾಡದ_ಡಬ್ಬದಲ್ಲಿ_ತುಂಬಿಟ್ಟರೆ
#ಮುಂಗಾರಿನ_ಮಳೆ_ಗಾಳಿ_ತರುವ_ಮುಸಂಜೆಯ_ಚಳಿ_ಜೊತೆಗೆ
#ಬಿಸಿ_ಬಿಸಿ_ಚಹಾ_ಕಾಫಿಯ_ಜೊತೆ_ಕುರಂ_ಕರಂ_ಎಂದು
#ಬಾಯಲ್ಲಿ_ಕರಗುವ_ಅಕ್ಕಿ_ಹಪ್ಪಳದ_ಜೋಡಿ.
https://youtube.com/shorts/FW0tuWawgL4?feature=shared
ನನ್ನ ಹಿಂದಿನ ಲೇಖನದಲ್ಲಿ ಅಕ್ಕಿ ಹಪ್ಪಳದ ತಯಾರಿಯ ವಿಡಿಯೋ ಸಹಿತ ಲೇಖನ ಬರೆದಿದ್ದೆ ಇವತ್ತಿನದ್ದು ಕೊಬ್ಬರಿ ಎಣ್ಣೆಯಲ್ಲಿ ಕರಿದ ಅಕ್ಕಿ ಹಪ್ಪಳ ನಾನು ಮತ್ತು ನನ್ನ ಪ್ರೀತಿಯ ಶಂಭೂರಾಮ ಪಾಲುದಾರಿಕೆಯಲ್ಲಿ ಗುಳುಂ ಮಾಡಿದ್ದು.
ಊಟಕ್ಕೆ ಉಪ್ಪಿನ ಕಾಯಿಯಂತೆ ಹಪ್ಪಳ ಕೂಡ ಒಂದೋ ಎರೆಡೋ ತಿಂದರೆ ಹೆಚ್ಚು ಆದರೆ ಈ ಅಕ್ಕಿ ಹಪ್ಪಳದ ವಿಶೇಷ ತಟ್ಟೆ ತುಂಬಾ ಅಕ್ಕಿ ಹಪ್ಪಳ ಕರಿದದ್ದು ತಿಂದರೂ ಹೊಟ್ಟೆ ತುಂಬುವುದಿಲ್ಲ.
ಎಷ್ಟು ತಿಂದರೂ ಹೊಟ್ಟೆಗೆ ತಟ್ಟೆಗೆ ಬಾದಕವಿಲ್ಲ ಈ ಹಪ್ಪಳ ಮಲೆನಾಡಿನ ಪೂರ್ವಿಕರ ಮನೆಯಲ್ಲಿ ಮುಂಗಾರಿಗೆ ಮುನ್ನ ಉಪ್ಪಿನಕಾಯಿ ಜೊತೆ ಜೊತೆಗೆ ತಯಾರಿಸುವ ಪರಂಪರೆಯ ಕಾಯಕವಾಗಿತ್ತು.
ಬಿಸಿಲಲ್ಲಿ ಒಣಗಿಸಿದ ಗರಿ-ಗರಿ ಹಪ್ಪಳ ಗಾಳಿ ಆಡದ ಡಬ್ಬಿಯಲ್ಲಿ ತುಂಬಿ ಇಟ್ಟು ಮಧ್ಯ ಮುಂಗಾರಿನ ಮಳೆಗಾಲದ ಮಳೆ ಉಂಟು ಮಾಡುವ ತಂಡಿ ಶೀಥದ ಕುಳಿರ್ಗಾಳಿಯ ಮುಸ್ಸಂಜೆಯಲ್ಲಿ ಬಿಸಿ ಕಾಪಿ ಟೀ ಪಾನಿಯದ ಜೊತೆ ಕರಿದ ಈ ಹಪ್ಪಳ ಒಳ್ಳೆಯ ಜೋಡಿ.
ಅಕ್ಕಿ ಹಪ್ಪಳದಲ್ಲೂ ವಿವಿದ ರೆಸಿಪಿ ಇದೆ ವಿವಿದ ಮಸಾಲೆಯುಕ್ತ ಮತ್ತು ಮಸಾಲೆ ರಹಿತವಾಗಿ ಮತ್ತು ಕರಿಯಲು ಬಳಸುವ ಎಣ್ಣೆಗಳಾದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ ಪ್ರತ್ಯೇಕ ರುಚಿ - ಘಮ ನೀಡುತ್ತದೆ.
Comments
Post a Comment