Blog number 2101. ಕೋಟೆಕೊಪ್ಪದ ಪರಮಾಪ್ತ ಶಿಷ್ಟ ಶೇಖ್ ಮೀರೂ ಸಾಹೇಬರು ಪುತ್ರಿಯ ವಿವಾಹ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.
#ಹೀಗೂ_ಇರುತ್ತಾರಾ?
#ಕೋಟೆಕೊಪ್ಪದ_ನನ್ನ_ಒಂದು_ಕಾಲದ_ಪರಮಾಪ್ತ
#ಮೀರೂ_ಸಾಹೇಬರು
#ಬುದ್ದಿವಂತ_ದೈರ್ಯವಂತ_ಚತುರ_ಕೆಲಸಗಾರ
#ಪರೋಪಕಾರಿ_ಜನನಾಯಕ
ಕೋಟೆಕೊಪ್ಪ ಎಂಬ ಹಳ್ಳಿ ಆನಂದಪುರಂ ಹೋಬಳಿ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿಯ ಸಣ್ಣ ಹಳ್ಳಿ ಅಂಚೆ ನೀಚಡಿ ಇಲ್ಲಿನ ಬುಡನ್ ಸಾಹೇಬರ ಪುತ್ರ ಶೇಖ್ ಮೀರ್ ಸಾಬ್ ನನ್ನ ಶಿಷ್ಯ ಮತ್ತು ನನ್ನ ಯಡೇಹಳ್ಳಿ ಊರಿನ ಅಳಿಯನೂ ಹೌದು.
ಬುದ್ಧಿವಂತ - ದೈಯ೯ವಂತ- ಚತುರ ಕೆಲಸಗಾರ, ಯಾವ ಕೆಲಸವೂ ಬರುವುದಿಲ್ಲ ಎನ್ನುವಂತಿಲ್ಲ ಅಷ್ಟೆ ಅಲ್ಲ ಪರೋಪಕಾರಿ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ (ಹಿರೇಬಿಲಗುಂಜಿ -ತ್ಯಾಗರ್ತಿ - ಗೌತಮಪುರ - ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ) ಪರಿಚಿತ ವ್ಯಕ್ತಿ.
1995- 2000ರ ಅವಧಿಯಲ್ಲಿ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಈ ವ್ಯಾಪ್ತಿಯ ಜನಪರವಾಗಿ ತಮ್ಮ ಹಳ್ಳಿಯ ಅಭಿವೃದ್ದಿಗೆ ಕಾಳಜಿವಹಿಸುವ ಕೆಲವರನ್ನು ಅವರ ಹಳ್ಳಿಯಲ್ಲಿ ನಡೆಯುವ ಸರ್ಕಾರದ ಅಭಿವೃದ್ದಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡುವ ನನ್ನ ಆಪ್ತ ಬಳಗ ಮಾಡಿಕೊಂಡಿದ್ದೆ ಗುತ್ತಿಗೆದಾರ ಮತ್ತು ಇಂಜಿನಿಯರ್ ಗಳು ಮೊದ ಮೊದಲು ಇದನ್ನು ಸಹಿಸಲಿಲ್ಲ ಆದರೆ ನಾನು ನನ್ನ ಪಟ್ಟು ಬಿಡಲಿಲ್ಲ ಆದ್ದರಿಂದ ಒ0ದೇ ವರ್ಷ 12 ಜನ ಇಂಜಿನಿಯರ್ ಓಡಿ ಹೋದರು.
ಈ ಆಪ್ತ ವಲಯದವರಿಗೆ ಎಸ್ಟಿಮೇಟ್ ನೋಡಿ ಅದರಂತೆ ಕೆಲಸ ಮಾಡಿಸುವ ಗುಣ ಮಟ್ಟ ಪರಿಶೀಲನೆ ಮಾಡುವ ತರಬೇತಿ ಕೊಟ್ಟಿದ್ದೆ ಅಷ್ಟೆ ಅಲ್ಲ ಅವರ ಹಳ್ಳಿಗಳಿಗೆ ಆದ್ಯತೆ ಮೇಲೆ ಆಗ ಬೇಕಾದ ಕಾಮಗಾರಿ ಪಟ್ಟಿ ಮಾಡುವುದು ಎಲ್ಲರೂ ಒಂದಾಗಿ ಪ್ರತಿ ವರ್ಷ ಪಾದಯಾತ್ರೆ ಮೂಲಕ ಸ್ಥಳ ಪರಿಶೀಲನೆ ಮಾಡುವುದು ಈ ಎಲ್ಲಾ ಗ್ರಾಮಾಭಿವೃದ್ಧಿ ಕೆಲಸಕ್ಕೆ ಎಲ್ಲಾ ಪಕ್ಷದವರನ್ನು ಭಾಗಿ ಆಗುವಂತೆ ಮಾಡುತ್ತಿದ್ದೆ.
ಇಂತಹ ಆಪ್ತವಲಯದ ಪ್ರಮುಖರು ಈ ಕೋಟೆಕೊಪ್ಪದ ಮೀರೂ ಸಾಹೇಬರು,ಇವರಿಂದನೇ ಇವರ ಊರಿಗೆ ಕುಡಿಯುವ ನೀರಿನ ಯೋಜನೆ, ಕೆರೆ ದುರಸ್ತಿ ತೆರೆದ ಬಾವಿ, ವಿದ್ಯುತ್ ಸಂಪರ್ಕ ರಸ್ತೆ ಇತ್ಯಾದಿ ಮಾಡಲು ಸಾಧ್ಯವಾಯಿತು.
ಇವರ ಹಳ್ಳಿಯ ಒಂದು ಕಡೆ ಇಪ್ಪತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ ಮೀರೂ ಸಾಹೇಬರ ಒತ್ತಾಯದಿಂದ ವಿದ್ಯುತ್ ಇಲಾಖೆಯ ಮೇಲಾದಿಕಾರಿಗಳ ಸಹಕಾರದಿಂದ ವಿದ್ಯುತ್ ಮಂಜೂರಾಗಿ ವಿದ್ಯುತ್ ಕಂಬಗಳು ಊರಿಗೆ ಬಂದಾಗ ಅವರಿಗೆಲ್ಲ ಸಂಭ್ರಮ.
ಎಲ್ಲಾ ಮನೆಗಳಿಗೆ ವೈರಿಂಗ್ ಮಾಡಿಸಿ ಕೊಡುವ ಜವಾಬ್ದಾರಿ ಗ್ರಾಮದವರು ಮೀರೂ ಸಾಹೇಬರಿಗೆ ವಹಿಸಿದರು, ಮೀರೂ ಸಾಹೇಬರು ತಮ್ಮ ಪರಿಚಯದ ವೈರಿಂಗ್ ಮಾಡುವವನನ್ನ ಕರೆತಂದು ಗುತ್ತಿಗೆ ಕೊಡಿಸಿ ಮುಂಗಡ ಕೊಡಿಸಿದರು.
ನಂತರ ಊರಿಗೆ ವಿದ್ಯುತ್ ಕಂಬ ನೆಟ್ಟು, ವೈರ್ ಎಳೆದು ಬೀದಿ ದೀಪ ಬೆಳಗಿದರೂ ಗುತ್ತಿಗೆದಾರ ನಾಪತ್ತೆ ಕೊನೆಗೂ ಆತ ಮುಂಗಡ ಹಣದೊಂದಿಗೆ ನಾಪತ್ತೆ ಇದನ್ನು ನನಗೆ ತಿಳಿಯದಂತೆ ಮೀರೂ ಸಾಹೇಬರೇ ಪರಿಹರಿಸಿದ ಕಥೆ ನನಗೆ ವಿಚಿತ್ರ ಅನ್ನಿಸಿತು.
ಯಾವುದೇ ಕೆಲಸ ನೋಡಿದರೂ ಮಾಡಿ ತೋರಿಸುವ ಹುಟ್ಟು ಕೌಶಲ್ಯದ ಮೀರೂ ಸಾಹೇಬರು ಇಡೀ ಊರಿನ ಮನೆಗೆ ವೈರಿಂಗ್ ಮಾಡಿ ಅವರ ಮನೆ ದೀಪ ಬೆಳಗಿಸಿದ್ದರು ಈ ಮೂಲಕ ಊರಿಗೆ ಮೋಸ ಮಾಡಿ ಮುಂಗಡ ಹಣದೊಂದಿಗೆ ನಾಪತ್ತೆ ಆಗಿದ್ದ ವಿದ್ಯುತ್ ವೈರಿಂಗ್ ಗುತ್ತಿಗೆದಾರನ ಕೆಲಸ ಇವರೆ ಕಲಿತು ಮಾಡಿದ್ದು ಆಶ್ರಯ೯ವಾದರೂ ಸತ್ಯ.
ಈಗ ಇವರ ಮಗ ಬೆಂಗಳೂರಲ್ಲಿ ವೈರಿಂಗ್ ಪ್ಲಂಬಿಂಗ್ ಕಲಿತು ಬಂದು ಸಾಗರದಲ್ಲಿ ಉತ್ತಮ ಕೆಲಸಗಾರನೆಂದು ಹೆಸರು ಗಳಿಸಿದ್ದಾರೆ.
Comments
Post a Comment