#ಐವತ್ತು_ವರ್ಷಗಳ_ಹಿಂದಿನ_ಪಠ್ಯ_ಪುಸ್ತಕಗಳು
#ಅದರಲ್ಲಿನ_ಪಾಠ_ಪದ್ಯಗಳ_ಮೌಲ್ಯ_ಈಗಿನ_ಶಿಕ್ಷಣ_ನೀತಿಯಲ್ಲಿ_ಕಳೆದು_ಹೋಗಿದೆ
#ತಿರುಕನ_ಕನಸು_ಪದ್ಯ_ಇವತ್ತಿಗೂ_ಅಚ್ಚಳಿಯದೆ_ನೆನಪಿಲ್ಲಿದೆ
#ಇದನ್ನು_ಬರೆದವರು_ತಪಸ್ವಿ_ಮುಪ್ಪಿನ_ಷಡಕ್ಷರಿ
#ಅವರ_ಕಾಲ_500_ವರ್ಷದ_ಹಿಂದೆ
#ಅವರ_ದೇವಾಲಯ_ಚಾಮರಾಜನಗರ_ಜಿಲ್ಲೆಯ_ಯಳಂದೂರು_ತಾಲ್ಲೂಕಿನ
#ಯರಗಂಬಳಿ_ಗ್ರಾಮದಲ್ಲಿದೆ.
ಸರ್ಕಾರಿ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ತಿರುಕನ ಕನಸು ಪದ್ಯ ನಾಲಿಗೆ ತುದಿ ಮೇಲೆಯೇ ಇರುತ್ತಿತ್ತು ಕಾರಣ ತುಂಬಾ ಸರಳವಾಗಿ ಅರ್ಥಗರ್ಬಿತವಾಗಿ ರಾಗವಾಗಿ ಹಾಡುವಂತ ಪದ್ಯವಾಗಿತ್ತು.
#ಮುಪ್ಪಿನ_ಷಡಕ್ಷರಿ : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ,ಅವರ ದೇವಾಲಯ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳಿ ಗ್ರಾಮದಲ್ಲಿದೆ
ನಾಡಿನ ಪ್ರಖ್ಯಾತ ಡಿಜಿಟಲ್ ಮಾಧ್ಯಮ ಸಂಸ್ಥೆ ಈ ಊರಿನ ಬಗ್ಗೆ ಸವಿಸ್ತಾರ ಮಾಹಿತಿ ನೀಡಿರುವುದು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/90WiQjsszZg?feature=shared
ಆಗ ಅದನ್ನು ಬರೆದ ಕವಿ ಬಗ್ಗೆ ತಿಳಿದುಕೊಳ್ಳುವ ಬುದ್ಧಿ ನಮಗೆಲ್ಲ ಇರಲಿಲ್ಲ, ಅದೇ ರೀತಿ ಬೇರೆ ಕವಿಗಳು ಬರೆದ ಇವತ್ತಿಗೂ ನೆನಪಿನಲ್ಲಿ ಉಳಿದ ಪದ್ಯಗಳು...
ನಾಗರ ಹಾವೆ ಹಾವೊಳು ಹೂವೇ...
ಬಣ್ಣದ ತಗಡಿನ ತುತ್ತೂರಿ...
ಧರಣಿ ಮಂಡಲ ಮಧ್ಯದೊಳಗೆ...
ಹೀಗೆ ಮರೆಯಲಾರದ ಪದ್ಯಗಳು ಈಗಿನ ಪಠ್ಯ ಪುಸ್ತಕಗಳಲ್ಲಿದೆಯೋ ಇಲ್ಲವೊ ಗೊತ್ತಿಲ್ಲ.
ಊರಿನ ಮುರುಕು ಗುಡಿಸಲಲ್ಲಿ ಮಲಗಿದ್ದ ಸೋಮಾರಿ ಬಿಕ್ಷುಕನಿಗೆ ಬೀಳುವ ಸುಂದರ ಸ್ವಪ್ನವದು....
ಅಲ್ಲಿನ ರಾಜ ಮರಣಿಸಿದಾಗ ಅವನಿಗೆ ವಾರಸುದಾರರಿಲ್ಲದಾಗ ಪಟ್ಟದ ಆನೆಗೆ ಹೂವಿನ ಹಾರ ನೀಡಿ ಅದು ಬೀದಿಯಲ್ಲಿ ಯಾರ ಕೊರಳಿಗೆ ಹಾಕುತ್ತದೋ ಅವನನ್ನು ರಾಜನಾಗಿ ಪಟ್ಟಾಭಿಷೇಕ ಮಾಡುವ ಕಥೆ, ಆನೆ ಮುರುಕು ಮನೆಯ ತಿರುಕನ ಕೊರಳಿಗೆ ಹಾರ ಹಾಕಿದ್ದರಿಂದ ಆತ ರಾಜನಾಗುವುದು, ರಾಣಿಯನ್ನ ಮದುವೆ ಆಗುವುದು, ಮಕ್ಕಳಾಗುವುದು ,ರಾಜಕುಮಾರರ ಮದುವೆಯಲ್ಲಿ ಶತೃದಾಳಿಯಿಂದ ಸ್ವಪ್ನ ಭಗ್ನವಾಗಿ ಎಚ್ಚರವಾಗುವುದು ಪದ್ಯದ ಸಾರಾಂಶ.
ತಿರುಕನ ಕನಸು ಪದ್ಯ ಓದುವ - ಹಾಡುವ - ಕೇಳುವವರೂ ಈ ಸುಂದರ ಸ್ವಪ್ನದಿಂದ ಹೊರಬರಲು ಮನಸ್ಸು ಮಾಡುವುದಿಲ್ಲ, ಅದರಲ್ಲಿ ತಲ್ಲೀನರಾದವರಿಗೆ ನಿರಾಸೆ ಉಂಟಾಗುತ್ತದೆ.
ಹೀಗೆ ನಮ್ಮ ಮನಸು - ಹೃದಯದ ಬಾಗಿಲು ತಟ್ಟುವ ಈ ಪದ್ಯ ಈಗಲೂ ಓದಿದರೆ ಮನಸ್ಸು ಹಗುರಾಗುತ್ತದೆ ಒಮ್ಮೆ ಓದಿ ....
#ತಿರುಕನ_ಕನಸು
ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ |
ಪುರದ ರಾಜ ಸತ್ತರವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು || ೧ ||
ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ |
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮ ನಾದೆನೆಂದು ಹಿಗ್ಗುತಿರ್ದನು || ೨ ||
ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ |
ಭಟ್ಟನಿಗಳ ಕೂಡಿ ನಲ್ಲ
ನಿಷ್ಟ ಸುಖದೊಳಿರಲವನ್ಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ || ೩ ||
ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ |
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ || ೪ ||
ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ |
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ || ೫ ||
ಧನದ ಮದವು ರಾಜ್ಯ ಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು |
ಅನಿತರೊಳಗೆ ಮುನಿದ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ತಿರುಕ ಹೆದರಿ ಕಣ್ಣ ತೆರೆದನು ||೬ ||
ಮೆರೆಯುತಿದ್ದ ರಾಜ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಬೇಡುತಿದ್ದ ಹಿಂದಿನಂತೆಯೇ ||೭||[೧
Comments
Post a Comment