#ಕವಿ_ಮುದ್ದಣ್ಣನ_ಊರು_ನಂದಳಿಕೆಗೆ_ಹೋಗಿದ್ದೆ
#ಮುದ್ದಣ್ಣನ_ವಂಶಸ್ಥರಾದ_ರಘುರಾಮರ_ಬೇಟಿ_ಆಗಿದ್ದೆ
#ಟಿ_ಎ_ಪೈ_ಶಂಕುಸ್ಥಾಪನೆ_ಮಾಡಿದ್ದ_ವೀರೇಂದ್ರಹೆಗ್ಗಡೆ
#ಶಿವರಾಮ_ಕಾರಂತರ_ಉಪಸ್ಥಿತಿಯಲ್ಲಿ_ಉದ್ಘಾಟನೆಗೊಂಡಿರುವ_ಮುದ್ಧಣ್ಣ_ಸ್ಮಾರಕ_ಭವನ_ಇಲ್ಲಿದೆ
#ಮುದ್ದಣ್ಣ_ಮನೋರಮೆ_ಸಲ್ಲಾಪ_ಮರೆಯಲು
#ಮನೋರಮೆ_ಆಗಿದ್ದ_ಕಮಲಾ_ಬಾಯಿ_ಶಿವಮೊಗ್ಗ_ಜಿಲ್ಲೆಯ_ಕಾಗೆಕೊಡಮಗ್ಗಿ_ಊರಿನವರು.
"ಈ ತೆಱದೆ ಕಾಡುಂ ನಾಡುಂ ಮನೋಜ್ಞಮಾಗೆ ಸಂಪ್ರಾಪ್ತಮಾದ ವರ್ಷಾಕಾಲದೊಳೊಂದು ದೆವಸಂ ಬೈಗುಂಬೊೞನೊಳೆಂದಿನಂತಿರೋಲಗಂ ಪರಿಯೆ, ಕಬ್ಬಿಗರ ಬಲ್ಲಹಂ ಮುದ್ದಣನರಮನೆಯಿಂ ಪೊಱಮಟ್ಟು ನೆರೆವೀದಿವಿಡಿದು ಪೊರೆವೀಡಿಂಗೆಯ್ತರ್ಪುದುಮಾತನ ಮಡದಿ ಮನೋರಮೆ ದೂರದೆ ಕಂಡೆೞ್ದು ಇದಿರ್ವಂದು ಕಾಲ್ಗೆ ನೀರಂ ನೀಡಿ ಮತ್ತಂ ಕಯ್ವಿಡಿದೊಳಚೌಕಿಗೆಗುಯ್ದು ಮಣೆಯಿತ್ತು ಕುಳ್ಳಿರಿಸಿ ಒಡನೆಯೆ ತನಿವಣ್ಣಂ ತಿನಲಿತ್ತು ಕೆನೆವಾಲಂ ಕುಡಿವೊಡಿತ್ತು ಉಪಚರಿಸುತಿರ್ದಳ್. ಈವುಪಚಾರದಿನಾತನ ಪಸಿವುಂ ಬೞಲ್ಕೆಯುಂ ಮುಗಿಯೆ, ಕೆಳದಿ ನಱುದಂಬುಲಮಂ ಸವಿಯಲ್ಕೆಂದು ಮಡಿದೀಯುತುಮಿರೆ, ಇಂತು ಸುಖಸಲ್ಲಾಪಂಗೊಳುತಿರ್ದರ್, ಅದೆಂತೆನೆ" ....
ನನ್ನ ಅಕ್ಕ ಮತ್ತು ಅಣ್ಣನಿಗೆ ಇದು ಪಠ್ಯವಾಗಿತ್ತು ಅವರು ಓದುವುದು ಕೇಳಿಯೇ ಅದು ನನ್ನ ಮೆದುಳಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದೆ, ಈ ಸಲ್ಲಾಪದ "ತಿನ್ನಲು ತನಿ ಹಣ್ಣನ್ನು ಕುಡಿಯಲು ಕೆನೆ ಹಾಲನು ನೀಡಿದಳು ".... "ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಯಿತು"... ಎಂಬ ವಾಕ್ಯಕ್ಕೆ ಅಂದೆಂತಹ ಸಾಹಿತ್ಯದ ಶಕ್ತಿ ಇದೆ.
ನಂದಳಿಕೆಯ ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಿ ದಂಪತಿಗಳ ಪುತ್ರ ನಂದಳಿಕೆ ಲಕ್ಷ್ಮಿನಾರಾಯಣಪ್ಪ ದೈಹಿಕ ಶಿಕ್ಷಕರಾಗಿದ್ದರು ಅವರ ಪತ್ನಿ ಕಮಲಾಬಾಯಿ ತವರು ಶಿವಮೊಗ್ಗ ಜಿಲ್ಲೆಯ ಕಾಗೆಕೊಡಮಗ್ಗೆ.
ಇವರು ರಾಮಾಶ್ವಮೇದ ಎಂಬ ಹಳೆಗನ್ನಡದ ಗದ್ಯಕಾವ್ಯ ಬರೆಯುತ್ತಾರೆ ಅದರ ಪ್ರಾರಂಭದಲ್ಲಿ ಒಂದು ಕಾಲ್ಪಾನಿಕ ಪ್ರಸಂಗವಾದ ಮುದ್ದಣ್ಣ ಮನೋರಮೆ ಸಲ್ಲಾಪ ಸೇರಿಸುತ್ತಾರೆ.
ಈ ಪ್ರಸಂಗ ಮಳೆಗಾಲದ ಒಂದು ಮುಸ್ಸಂಜೆ ರಾಜನ ಆಸ್ಥಾನದ ದರ್ಭಾರು ಮುಗಿಸಿ ಆಯಾಸದಿಂದ ಮನೆಗೆ ಬರುವ ಕವಿ ಮುದ್ದಣ್ಣನಿಗೆ ಆತನ ಪತ್ನಿ ಮನೋರಮ ಕಾಲು ತೊಳೆಯಲು ನೀರನ್ನಿತ್ತು ಒಳಕರೆದೊಯ್ದು ಮಣೆ ಮೇಲೆ ಕುಳ್ಳಿರಿಸಿ ತಿನ್ನಲು ಹಣ್ಣು ನೀಡಿ, ಕುಡಿಯಲು ಕೆನೆ ಹಾಲು ನೀಡಿ ಉಪಚರಿಸುತ್ತಾಳೆ, ತನ್ನ ಬೇಸರ ಕಳೆಯಲು ಪತಿಗೆ ಕಥೆ ಹೇಳಲು ಒತ್ತಾಯಿಸುತ್ತಾಳೆ, ಆಗ ಕವಿ ಯಾವ ಕಥೆ ಹೇಳಲಿ ಎಂದಾಗ ಅವರಿಬ್ಬರ ಸಲ್ಲಾಪದ ಅಂತ್ಯಕ್ಕೆ ಮನೋರಮಾ ರಾಮಾಶ್ವಮೇದ ಕಥೆ ಕೇಳಲು ಒಪ್ಪುತ್ತಾಳೆ ಈ ರೀತಿ ರಾಮಾಶ್ವಮೇದ ಕಥೆ ಪ್ರಾರಂಭದ ಪೀಠಿಕೆ ಆಗಿರುವ ಮುದ್ದಣ್ಣ ಮನೋರಮ ಸಲ್ಲಾಪ ಜನಪ್ರಿಯವಾಗಿ ಜನಮಾನಸದಲ್ಲಿ ಅಳಿಯದೇ ಉಳಿದಿದೆ.
ನಂದಳಿಕೆಯ ಲಕ್ಷ್ಮೀನಾರಾಯಣಪ್ಪ ಎಂಬ ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿದ್ದವರು ಮುದ್ದಣ್ಣ ಎಂಬ ಕಾವ್ಯನಾಮದಿಂದ ಅವರ ಎಲ್ಲಾ ಸಾಹಿತ್ಯಗಳನ್ನ ರಚಿಸಿದ್ದಾರೆ.
ಮುದ್ದಣ್ಣರ ಮೂಲ ಮನೆ ಈಗಿಲ್ಲ ಇವರ ಅಜ್ಜನ ಸಹೋದರರ ಮರಿಮಗ ಶಿಕ್ಷಕರಾಗಿ ನಿವೃತ್ತರಾದ ರಘುರಾಮರು ಹೊಸದಾಗಿ ಮನೆ ನಿರ್ಮಿಸಿ ವಾಸವಿದ್ದಾರೆ.
ಮುದ್ಧಣ್ಣ ಸ್ಮಾರಕ ಮಂಡಳಿ ಪ್ರತಿ ವರ್ಷ ಜನವರಿ 24 ರಂದು ಕವಿ ಮುದ್ಧಣ್ಣರ ಹುಟ್ಟುಹಬ್ಬದಂದು ಊರಲ್ಲಿ #ಮುದ್ದಣ್ಣ_ಜಯಂತಿ ಕಾರ್ಯಕ್ರಮ ನಡೆಸುತ್ತದೆ ಆಗ ಮುದ್ದಣರ ಕುಟುಂಬದವರನ್ನ ಆಹ್ವಾನಿಸುತ್ತಾರಂತೆ ಆದರೆ ಈ ವರ್ಷ ಕಾಯ೯ಕ್ರಮ ನಡೆದಿಲ್ಲವಂತೆ.
ಕಳೆದ ಮೇ 2 ನೇ ತಾರೀಖು ಮೂಡುಬಿದಿರೆಯಲ್ಲಿ ನಡೆದ #ಅರವಿಂದ_ಚೊಕ್ಕಾಡಿ ಪುತ್ರನ ಉಪನಯನದಲ್ಲಿ ಭಾಗವಹಿಸಿ ನಂದಳಿಕೆಗೆ ಗೂಗಲ್ ಮ್ಯಾಪ್ ಆದರಿಸಿ ನಂದಳಿಕೆ ತಲುಪಿದಾಗ ಬಿರು ಬೇಸಿಗೆಯ ಮಧ್ಯಾಹ್ನ, ಜನಸಂಚಾರ ಇರಲಿಲ್ಲ ಅಲ್ಲಿನ ಅಂಗಡಿಯವರಿಗೆ, ದೇವಸ್ಥಾನದ ವಾಚ್ ಮನ್ ಗೆ, ನಂತರ ಕೋರಿಯರ್ ಬಾಯ್ ಗೆ ಕವಿ ಮುದ್ದಣ್ಣನ ಮನೆ ಸ್ಮಾರಕ ಎಲ್ಲಿದೆ ಅಂತ ಕೇಳಿದರೆ ಅವರಿಗೆ ಗೊತ್ತೇ ಇಲ್ಲ ಅಂದರು ನಂತರ ಬೇರೆ ರಸ್ತೆಗೆ ತಿರುಗಿದಾಗ ಅಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ತಾಯಿ ಮಗ ನಮಗೆ ಕವಿ ಮುದ್ದಣ್ಣನ ಮನೆ ಸ್ಮಾರಕ ತೋರಿಸಿ ಹೋದರು.
https://arunprasadhombuja.blogspot.com/2024/04/blog-number-2074_19.html
Comments
Post a Comment