Blog number 2143.8000 ವರ್ಷಗಳಿಂದ ಕಾಡುದನ ಪಳಗಿಸಿ ಹಾಲು-ಮಾಂಸಕ್ಕಾಗಿ, ವದು ದಕ್ಷಿಣೆಗಾಗಿ,ದಂಡ ರೂಪಕ್ಕಾಗಿ ಒಂದು ರೀತಿ ಕರೆನ್ಸಿಯಾಗಿಯೂ ಈಶಾನ್ಯ ಭಾರತದಲ್ಲಿ ಬಳಸುವ ಮಿಥುನ್ ಗಳು
#ಕಾಡು_ಕೋಣಗಳ_ರೀತಿಯ_ಕಾಡು_ದನದ_ಡೊಮೆಸ್ಟಿಕ್_ಅನಿಮಲ್_ತಳಿ_ಈಶಾನ್ಯ_ಭಾರತದ
#ಮಿಥುನ್
#ಮಿಥುನ್_ವದು_ದಕ್ಷಿಣೆಯಾಗಿ_ಪಂಚಾಯಿತಿಗಳ_ದಂಡ_ರೂಪದಲ್ಲಿ_ಬಳಕೆ
#ಒಂದು_ಜೀವಂತ_ವಿಥುನ್_ಬೆಲೆ_80_ಸಾವಿರದಿಂದ_ಒಂದು_ಲಕ್ಷ
#ಅರುಣಾಚಲ_ಪ್ರದೇಶದಲ್ಲಿ_2019ರ_ಗಣತಿಯಲ್ಲಿ_3_ಲಕ್ಷದ_50_ಸಾವಿರ_ಮಿಥುನ್_ಇದೆ
ಮಲೆನಾಡಿನ ಕಾಡುಕೋಣಗಳ ಕೋಡುಗಳು ಈಶಾನ್ಯ ಭಾರತದಲ್ಲಿ 8000 ವರ್ಷಗಳ ಹಿಂದೆ ಪಳಗಿಸಿದ ಕಾಡುಕೋಣಗಳಂತ ಕಾಡು ದನಗಳಾದ ಮಿಥುನ್ ಗಳ ಕೋಡು ವ್ಯತ್ಯಾಸ ಇದೆ ಆದರೆ ಬೆನ್ನು ಮೇಲಿನ ಡುಬ್ಬ, ಕಾಲಿನ ಬಿಳಿ ಬಣ್ಣ, ಗಾತ್ರ ಮತ್ತು ಮಾಂಸದ ರುಚಿ ಮಾತ್ರ ಒಂದೇ ರೀತಿ ಅಂತೆ.
90ರ ದಶಕದಲ್ಲಿ ನಮ್ಮ ಊರಲ್ಲಿ ಉತ್ತರ ಪ್ರದೇಶದ ಹಜರತ್ ಈ ಊರಿನ ಡೊಮೆಸ್ಟಿಕ್ ಪ್ರಾಣಿ ಮಿಥುನ್ ಕಾಡು ಕೋಣದಂತೆ ಇದೆ ಎಂದು ತಿಳಿಸಿದಾಗ ನಂಬಲಾಗಿರಲಿಲ್ಲ.
ಈಶಾನ್ಯ ಭಾರತದ ನಿಶಿ ಗುಡ್ಡಗಾಡು ಸಮುದಾಯದ ವಿವಾಹದ ಸಂಪೂರ್ಣ ಚಿತ್ರೀಕರಣ ಮಾಡಿದ ಯೂಟ್ಯೂಬರ್ ಗೆಳೆಯ ಆಲ್ಫ್ರೆಡ್ ಆ ವಿವಾಹದಲ್ಲಿ ವದು ದಕ್ಷಿಣೆ ಆಗಿ ವಿಥುನ್ ನೀಡುವ ಬಗ್ಗೆ, ಮಿಥುನ್ ಮಾಂಸದ ಔತಣದ ಬಗ್ಗೆ ಮತ್ತು ಅಲ್ಲಿನ ಸಾಕುಪ್ರಾಣಿ ಆಗಿರುವ ಮಿಥುನ್ ಎಂಬ ಕಾಡು ದನದ ಬಗ್ಗೆ ಸುದ್ದಿ ಮಾಡಿದ್ದಾರೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/4HxlrAWA0o8?feature=shared
ನಮ್ಮ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಒಂದು ಆಡು ಮಾತು ಇದೆ ಕಾಡುಕೋಣದ ಹಾಲಿನಿಂದ ಔಷದಿ ಮಾಡುತ್ತಾರೆ ಆದರೆ ಕಾಡುಕೋಣ ಪಳಗಿಸಲು ಸಾಧ್ಯವಿಲ್ಲ ಅಂತ ಆದರೆ ಕಾಡಾನೆ ಪಳಗಿಸಲು ಸಾಧ್ಯವಿದೆ ಎಂಬ ಮಾತಿದೆ.
ಆದರೆ ಈಶಾನ್ಯ ಭಾರತದಲ್ಲಿ 8000 ವರ್ಷಗಳ ಹಿಂದೆಯೇ ಕಾಡುಕೋಣದಂತ ಕಾಡುದನಗಳನ್ನು ಪಳಗಿಸಿದ್ದಾರೆ, ಸಮುದ್ರ ಮಟ್ಟದಿಂದ 3000 ಅಡಿ ಎತ್ತರದ ಕಡಿಮೆ ಉಷ್ಣಾಂಶದ, ಕಡಿಮೆ ಸೂರ್ಯನ ಬೆಳಕಿನ ಗುಡ್ಡಗಾಡು ಪ್ರದೇಶದಲ್ಲಿ ಇದು ಡೊಮೆಸ್ಟಿಕ್ ಅನಿಮಲ್ ಆಗಿ ಹಾಲು ಮತ್ತು ಮಾಂಸಕ್ಕಾಗಿ ಸಾಕುತ್ತಾರೆ.
ಒಂದು ದೊಡ್ಡ ಗಾತ್ರದ ಮಿಥುನ್ ಬೆಲೆ 80 ಸಾವಿರದಿಂದ ಒಂದು ಲಕ್ಷವಿದೆ, ಒಂದು ಕಿಲೋ ಮಿಥುನ್ ಮಾಂಸದ ಬೆಲೆ ರೂ 300 ಕ್ಕಿಂತ ಹೆಚ್ಚಿದೆ.
2019ರಲ್ಲಿ ಮಿಥುನ್ ಗಣತಿಯಲ್ಲಿ #ಅರುಣಾಚಲಪ್ರದೇಶ ರಾಜ್ಯದಲ್ಲಿ 3,50,154 ವಿಥುನ್ ಗಳಿದೆ.
#ನಾಗಾಲ್ಯಾಂಡ್ ರಾಜ್ಯದಲ್ಲಿ 23, 183 ಮಿಥುನ್ ಗಳಿದೆ.
#ಮಣಿಪುರ ರಾಜ್ಯದಲ್ಲಿ 9,659 ಮಿಥುನ್ ಗಳನ್ನು ಸಾಕಿದ್ದಾರೆ.
#ಮಿಜೋರಾಂ ರಾಜ್ಯದಲ್ಲಿ 3,952 ಮಿಥುನ್ ಗಳಿದೆ.
#ಹಿಮಾಚಲಪ್ರದೇಶ ರಾಜ್ಯದಲ್ಲಿ 919 ಮಿಥುನ್.
#ಜಮ್ಮು_ಕಾಶ್ಮೀರದಲ್ಲಿ 57 ವಿಥುನ್ ಗಳ ಸಾಕಿದ ಮಾಹಿತಿ ಇದೆ.
ಮಿಥುನ್ ನಾಗಾಲ್ಯಾಂಡ್ ರಾಜ್ಯ ಪ್ರಾಣಿ ಆಗಿ ಘೋಷಣೆ ಆಗಿದೆ.
Comments
Post a Comment