Blog number 2024.ಸಹ್ಯಾದ್ರಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾಗಿರುವ ಸಿರಾಜ್ ಅಹಮದ್ ಅವರ ನನ್ನ ಮೊದಲ ಮುಖತಃ ಭೇಟಿಗೆ ಕಾರಣವಾದ ಸಾಮಾಜಿಕ ಜಾಲತಾಣ
#ಸಾಮಾಜಿಕ_ಜಾಲತಾಣದ_ಶಕ್ತಿ_ಮಹಿಮೆ
#ಎಲ್ಲಿಂದೆಲ್ಲಿಗೂ_ಸಮಾನ_ಮನಸ್ಕರನ್ನ_ಬೆಸೆಯುತ್ತದೆ
#ಎನ್ನುವುದಕ್ಕೆ_ಉದಾಹರಣೆ_ಈ_ಗೌರವಾನ್ವಿತರ_ಬೇಟಿ
ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿರುವ ಸಹ್ಯಾದ್ರಿ ಕಾಲೇಜು ರಾಜ್ಯದಲ್ಲಿನ ಅನೇಕ ಪ್ರಸಿದ್ದ ಸಾಹಿತಿಗಳ-ಪತ್ರಕರ್ತರ_ರಾಜಕಾರಣಿಗಳ_ಹೋರಾಟಗಾರರನ್ನ ಸೃಷ್ಟಿಸಿದ ನಮ್ಮ ರಾಜ್ಯದ JNU (ದೆಹಲಿ JNU ಪ್ರಸಿದ್ದಿ ಪಡೆದಂತೆ) ಇದ್ದಂತೆ.
ಲಂಕೇಶರು ಇಲ್ಲಿ ಉಪನ್ಯಾಸಕರಾಗಿದ್ದರು, ನಿಸಾರ್ ಅಹಮದ್ ಅವರ ಪ್ರಖ್ಯಾತ ನಿತ್ಯೋತ್ಸವ ಅವರ ಮನದಲ್ಲಿ ಅರಳಿದ್ದು ಅವರು ಇಲ್ಲಿ ಉಪನ್ಯಾಸಕರಾಗಿದ್ದಾಗಲೇ...ಹೀಗೇ ಸಾವಿರಾರು ಸಾದಕರು ಇಲ್ಲಿ ರೂಪುಗೊಂಡಿದ್ದಾರೆ.
ಇಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿರುವ ಸಿರಾಜ್ ಅಹಮದ್ ಮತ್ತು ನನ್ನ ಗೆಳೆತನ ಸಾಮಾಜಿಕ ಜಾಲತಾಣದಿಂದಲೇ, ನನ್ನ ಎಲ್ಲಾ ಲೇಖನ ಓದುವ ಪ್ರತಿಕ್ರಿಯಿಸಿ ಬೆನ್ನುತಟ್ಟುವ ದೊಡ್ಡ ತನ ಹೊಂದಿದವರು ಅವರನ್ನ ಮುಖತಃ ಭೇಟಿ ಆಗಿರಲಿಲ್ಲ.
ಮೊನ್ನೆ ಬುಧವಾರ ನನ್ನ ಕಛೇರಿಯಿಂದ ರಾತ್ರಿ 9ಕ್ಕೆ ಮನೆಗೆ ಹೋಗಲು ತಯಾರಾಗುತ್ತಿರುವಾಗ ಸಿರಾಜ್ ಆಹಮದರ ಪೋನ್ ಬಂತು ನೋಡಿದರೆ ಆಫೀಸಿನ ಬಾಗಿಲಿನಲ್ಲಿ ಹಸನ್ಮುಖರಾಗಿ ನಿಂತಿದ್ದಾರೆ ಅವರ ಜೊತೆ ಶ್ರೀಮತಿ ಲತಾ, ನಿವೃತ್ತ ಹೆಲ್ತ್ ಎಜುಕೇಷನ್ ಆಫೀಸರ್ ನಿಸಾರ್ ಆಹಮದ್ ಮತ್ತು ಅವರ ಪುತ್ರಿ ನಮ್ಮ ಊರಿನ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾಕ್ಟರ್ ಪ್ರಿಯಾಂಕ ಬಂದಿದ್ದರು.
ಇವರೆಲ್ಲ ಬುಧವಾರ ಸಂಜೆ ಹೆಗ್ಗೋಡಿನ ನಿನಾಸಂನಲ್ಲಿ ಒಡಲಾಳ ನಾಟಕ ನೋಡಿ ವಾಪಾಸಾಗುವಾಗ ಬಂದಿದ್ದರು.
ಇದೆಲ್ಲ ಸಾಧ್ಯವಾಗಿದ್ದು ಸಾಮಾಜಿಕ ಜಾಲತಾಣದಿಂದ ಎಂಬುದು ವಿಶೇಷ.
Comments
Post a Comment