#ಆತ್ಮೀಯ_ಮಿತ್ರ_ಶೃಂಗೇರಿ_ಶ್ರೀನಿವಾಸ_ಮೂರ್ತಿ
#ಅವರ_ಬಾಲ್ಯದ_ಕಷ್ಟ_ತುತ್ತು_ತುತ್ತಿಗೂ_ಬರ
#ಹಣ_ಹೆಸರಿನ_ಹಿಂದೆ_ಓಡುವ_ಸಮಾಜ_ನಮ್ಮ_ಅಕ್ಕ_ಪಕ್ಕದ_ನತದೃಷ್ಟರನ್ನ_ಗಮನಿಸಲು_ಸಾಧ್ಯವೇ?
#ಬಾಲ್ಯದಿಂದಲೇ_ಕಷ್ಟವನ್ನೆ_ಹಾಸಿ_ಹೊದೆದು_ಬೂದಿಯಿಂದ_ಎದ್ದು_ಬಂದ_ಶ್ರೀನಿವಾಸ_ಮೂರ್ತಿ
#ವಾಸ್ತವವಾದಿ_ಪತ್ನಿ_ಪುತ್ರಿ_ಪುತ್ರ_ಹಸುಗಳು_ನಾಯಿ_ಬೆಕ್ಕುಗಳ_ಪುಟ್ಟ_ಪರಿವಾರ
#ದೂರದ_ಶೃಂಗೇರಿಯ_ದಟ್ಟ_ಕಾನನದ_ಬೆಟ್ಟದಲ್ಲಿ_ಪುಟ್ಟ_ಮನೆ_ಕೃಷಿ
#ಈಗ_ಅನಾರೋಗ್ಯದಿಂದ_ಆಸ್ಪತ್ರೆ_ಸೇರಿದ್ದಾರೆ
#ಚಿಕಿತ್ಸೆ_ಯಶಸ್ವಿಯಾಗಿ_ಗುಣವಾಗಿ_ಮನೆಗೆ_ಮರಳಿ_ಬರಲಿ_ಎಂದು_ದೇವರಲ್ಲಿ_ಪ್ರಾರ್ಥಿಸಿದ್ದೇನೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವರ ಗೆಳೆತನ ಪೂರ್ವಜನ್ಮದಿಂದ ಆಯಿತಾ ಅನ್ನಿಸುವಂತಾ ಮಿತ್ರತ್ವ ಬೆಳೆದು ಬಿಡುತ್ತದೆ, ಪೇಸ್ ಬುಕ್ ಅವರ ಸ್ವಭಾವ ಬಾಲ್ಯ ಎಲ್ಲಾ ಪರಿಚಯಿಸುವುದರಿಂದ ಶೃಂಗೇರಿಯ ಶ್ರೀನಿವಾಸ್ ಮೂರ್ತಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದರು.
ಅವರ ತಂದೆ ಅಡಿಕೆ ಕೊಯ್ಲು ಮಾಡುತ್ತಾ ಸಂಸಾರ ನಿರ್ವಹಣೆ ಮಾಡುತ್ತಿದ್ದರು ಆಗಿನ ಬಡತನದ ಕಾಲದಲ್ಲಿ ಅವರ ಪ್ರಾಮಾಣಿಕ ದುಡಿಮೆ ಸಂಸಾರದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ, ಮಕ್ಕಳು ಚಿಕ್ಕವರಿರುವಾಗಲೇ ಅಡಿಕೆ ಮರದಿಂದ ಬಿದ್ದು ಮಣಿಪಾಲ್ ಸೇರಿದಾಗ ಈ ಸಂಸಾರದ ನೌಕೆ ದಿಕ್ಕು ತಪ್ಪಿತು ಇದೇ ದುರಂತದಲ್ಲಿ ತಂದೆ ಸಾವು ನಂತರ ತಾಯಿ, ಇದರಿಂದ ಈ ಕುಟುಂಬ ಇವರ ಸಹೋದರಿಯ ಪಾಲನೆಯಲ್ಲಿ ಕಷ್ಟದ ಕ್ಷಣ ಕ್ಷಣದ ಜೀವನ ಇವರು ಬರೆದ ಪೇಸ್ ಬುಕ್ ಲೇಖನದಲ್ಲಿ ಓದಿ ನಾನು ಕಣ್ಣೀರಾಗಿದ್ದೆ.
ಇವರ ತೋಟದ ಮಧ್ಯ ಹರಿಯುವ ಹಳ್ಳಕ್ಕೆ ಇವರೆ ಸ್ವಂತ ಶ್ರಮದಿಂದ ಸಣ್ಣ ಸಿಮೆಂಟ್ ಕಿರು ಸೇತುವೆ ಮಾಡಿದ್ದು, ಸ್ವಂತ ಕೃಷಿ ಕೆಲಸ ಇದಕ್ಕೆ ಇವರಿಗೆ ಸಹಕರಿಸುವ ಮಕ್ಕಳು ಪತ್ನಿ ಹೀಗೆ ಎಲ್ಲವೂ ಇವರ ಜೀವನದ ತೆರೆದ ಪುಟಗಳು ಇವರ ಪೇಸ್ ಬುಕ್ ನಲ್ಲಿ ದಾಖಲಾಗಿದೆ.
ಇವರ ಮಕ್ಕಳು ಜೋಗ ಜಲಪಾತವನ್ನು ನೋಡುವ ಆಸೆ ವ್ಯಕ್ತಪಡಿಸುತ್ತಿದ್ದ ಬಗ್ಗೆ ಬರೆದಿದ್ದರು, ನಾನು ಇವರ ಜೋಗ್ ಪ್ರವಾಸವನ್ನು ಸ್ಪಾನ್ಸರ್ ಮಾಡುವುದಾಗಿ ಮತ್ತು ನನ್ನ ಅತಿಥಿ ಆಗಿ ಬರಬೇಕಾಗಿ ವಿನಂತಿಸಿದ್ದೆ ಆದರೆ ಸ್ವಾಬಿಮಾನಿ ಶ್ರೀನಿವಾಸ್ ಮೂರ್ತಿ ಪ್ರವಾಸ ಮುಂದು ಹಾಕುತ್ತಲೇ ಬಂದಿದ್ದಾರೆ.
ಇತ್ತೀಚಿಗೆ ಸಹಿಸಲಾಗದ ಬೆನ್ನುನೋವಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸಮೀಪದ ಕೋಟೇಶ್ವರದ ಸರ್ಜನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಇಲ್ಲಿನ ವೈದ್ಯರು ಶೃಂಗೇರಿಯ ಇವರ ಪರಿಚಿತರು, ಇವತ್ತು ಅಥವ ನಾಳೆ ಆಪರೇಷನ್ ಇದೆ ಅಂತ ನಿನ್ನೆ ರಾತ್ರಿ ಇವರಿಗೆ ಪೋನ್ ಮಾಡಿದಾಗ ತಿಳಿಸಿದರು.
ಬಯಾಪ್ಸಿ ರಿಪೋರ್ಟ್ ಇನ್ನೂ ಬಂದಿಲ್ಲ ಈ ಬಗ್ಗೆ ಶ್ರೀನಿವಾಸ್ ಮೂರ್ತಿ ಕುಟುಂಬ ಧೈರ್ಯದಲ್ಲಿದೆ, ಏನೇ ವರದಿ ಬಂದರೂ ಎದುರಿಸುವ ದೈರ್ಯ ಶ್ರೀನಿವಾಸ್ ಮೂರ್ತಿ ಬಾಲ್ಯದಿಂದಲೇ ಕಲಿತಿದ್ದಾರೆ.
ಶ್ರೀನಿವಾಸ್ ಮೂರ್ತಿಗೆ ದೇವರು ಆರೋಗ್ಯ ಭಾಗ್ಯ ನೀಡಬೇಕಿತ್ತು ಅಂತ ಅನ್ನಿಸಿತು, ಏನೇ ಆದರೂ ಅವರು ಮತ್ತು ಅವರ ಕುಟುಂಬ ದೃತಿಗೆಡ ಬೇಕಾಗಿಲ್ಲ ಅವರು ಗುಣವಾಗಿ ಮನೆಗೆ ಬಂದು ಮೊದಲಿನಂತಾಗುತ್ತಾರೆ ಅದಕ್ಕೆ ಸ್ವಲ್ಪ ಸಮಯ ಬೇಕು.
Comments
Post a Comment