Blog number 2095. ಹುಲಿಕಲ್ ನಟರಾಜ್ ಮುಖವಾಡ ಕಳಚಿದ ದೇವರ ಹೆಸರಿನಲ್ಲಿ ಮುಗ್ದ ಜನರನ್ನು ಶೋಷಣೆ ಮಾಡುವವರು ಹುಲಿಕಲ್ ನಟರಾಜರನ್ನ ಧರ್ಮ ವಿರೋದಿ ಎಂದು ಬಿಂಬಿಸುವ ಅಪ ಪ್ರಚಾರದಲ್ಲಿ ತೊಡಗಿದ್ದಾರೆ
#ಪವಾಡ_ಬಯಲು_ಹುಲಿಕಲ್_ನಟರಾಜ್_ಸಂದರ್ಶನ_ಭಾಗ_2
#ರಾಜ್ಯದ_ಯಾವ_ಹುಲಿಕಲ್_ನಟರಾಜ್_ಅವರ_ಊರು?
#ಎಡಪಂಥದವರ_ಬಲಪಂಥದವರಾ?
#ಆಸ್ತಿಕರೋ_ನಾಸ್ತಿಕರೋ?
#ಯಾಕೆ_ಇವರ_ವಿರುದ್ದ_ಅಪ_ಪ್ರಚಾರ ?
https://youtu.be/LfWJgfpwPrM?feature=shared
ರಾಜ್ಯದಲ್ಲಿ ದೇವರ ಹೆಸರಲ್ಲಿ ಮುಗ್ದರನ್ನು ಶೋಷಿಸುವವರಿಗೆ #ಹುಲಿಕಲ್_ನಟರಾಜ್ ಎಂಬ ಹೆಸರೇ ದುಃಸ್ವಪ್ನ, ಡೊಂಗಿ ಬಾಬಗಳು, ಕಾವಿ ಧರಿಸಿ ಮಾಡಬಾರದ್ದು ಮಾಡುವವರನ್ನ ಅವರ ಪವಾಡಗಳನ್ನ ಬಯಲು ಮಾಡುತ್ತಾ ರಾಜ್ಯದಾದ್ಯಂತ ಜನ ಜಾಗೃತಿ ಮೂಡಿಸುತ್ತಿರುವ ಹುಲಿಕಲ್ ನಟರಾಜ್ ಕಾರ್ಯಕ್ರಮಗಳಿಗೆ ಸಾವಿರಾರು ಜನ ಸೇರುತ್ತಾರೆ.
ಆದರೆ ಇವರ ಪವಾಡ ಬಯಲು ಅಭಿಯಾನದಿಂದ ದೇವರ ಹೆಸರಿನಿಂದ ಸಮಾಜದಲ್ಲಿ ಶೋಷಣೆ ಮಾಡುವವರ ಬಣ್ಣ ಬಯಲಾದ್ದರಿಂದ ಅಂತವರೆಲ್ಲ ಸೇರಿ ಹುಲಿಕಲ್ ನಟರಾಜ್ ವಿರುದ್ದ ಅಪಪ್ರಚಾರ ಪ್ರಾರಂಬಿಸಿದ್ದಾರೆ.
ಹುಲಿಕಲ್ ನಟರಾಜ್ ಕೇವಲ ಹಿಂದೂ ಧರ್ಮದ ವಿರುದ್ದವಾಗಿ ಇದ್ದಾರೆ, ವಿದೇಶದಿಂದ ಅನ್ಯ ಧರ್ಮಿಯರಿಂದ ಹಣ ಪಡೆದು ಇದೆಲ್ಲ ಮಾಡುತ್ತಿದ್ದಾರೆಂದು ಅನೇಕರು ಗುಲ್ಲೆಬ್ಬಿಸಿದ್ದಾರೆ ಆದರೆ ಇದು ಸುಳ್ಳು ಸುದ್ದಿ ಎಂಬುದು
ಕೆಲವರಿಗೆ ಮಾತ್ರ ಗೊತ್ತಿದೆ ಅವರು ಹುಲಿಕಲ್ ನಟರಾಜರ ಒಡನಾಡಿಗಳು ಮಾತ್ರ.
ಸತ್ಯ ಎಲ್ಲರಿಗೂ ತಿಳಿಯಲಿ ಎಂಬ ಸದುದ್ದೇಶದಿಂದ ಅವರ ಸಂದರ್ಶನದಲ್ಲಿ ಅವರಿಗೆ ಇದಕ್ಕೆ ಸಂಬಂದ ಪಟ್ಟ ಕೆಲ ಪ್ರಶ್ನೆಗಳನ್ನು ಕೇಳಿದೆ ಅದಕ್ಕೆ ಹುಲಿಕಲ್ ನಟರಾಜ್ ತುಂಬಾ ಸಮಾಧಾನದಿಂದ ಉತ್ತರಿಸಿದ್ದಾರೆ.
Comments
Post a Comment