Blog number 2142.ಸ್ಥೂಲ ಕಾಯದವರೇ ಗಮನಿಸಿ 2019 ರ ನನ್ನ ಪೋಟೋಕ್ಕೂ 2023ರ ಮತ್ತು ಇವತ್ತಿನ 2024ರ ಪೋಟೋಗು ಇರುವ ವ್ಯತ್ಯಾಸ ಗಮನಿಸಿ.
#ಸ್ಥೂಲಕಾಯದವರೆ_ಗಮನಿಸಿ
#ಆರು_ವರ್ಷದ_ಹಿಂದೆ_ಇದೇ_ದಿನದ_ಚಿತ್ರ_26_ಮೇ_2019.
#ನಾಲ್ಕು_ವರ್ಷದ_ಹಿಂದಿನ_ಇದೇ_ದಿನದ_ನನ್ನ_ಚಿತ್ರ_2023.
#ಇವತ್ತಿನ_26_ಮೇ_2024_ನನ್ನ_ಪೋಟೋ
#ಮನಸ್ಸು_ಮಾಡಿದರೆ_ಎಲ್ಲದೂ_ಸಾಧ್ಯ_ಅನ್ನುತ್ತಿದೆ.
26-ಮೇ -2019 ರಂದು ಉಡುಪಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದ ಮಂಜುನಾಥ ಬಂದಿದ್ದರು ಅವರು ಉಡುಪಿಗೆ ವರ್ಗಾವಣೆ ಮೊದಲು ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಟಿಪ್ ಕಾಪ್ ಎಂಬ ಬಿರುದು ಪಡೆದವರು.
ಅವತ್ತು ನನ್ನ ತೂಕ 140 ಕೆ.ಜಿ. ದಾಟಿ ದಾಪುಗಾಲು ಹಾಕುತ್ತಾ ಹೋಗುತ್ತಿತ್ತು, ಹತ್ತು ಹೆಜ್ಜೆ ಹಾಕಲು ಅಸಾಧ್ಯ ಅನ್ನಿಸಿ ಬಿಟ್ಟಿತ್ತು, ಮಲಗಿದ ತಕ್ಷಣ ಘೋರ ಗೊರಕೆಯೊಂದಿಗೆ ಗಾಡ ನಿದ್ದೆ, ಹೊಟ್ಟೆ ಹೊಕ್ಕುಳಲ್ಲಿ ಹರ್ನಿಯಾ, ಅನಿಯಂತ್ರಿತ ಬಿಪಿ -ಶುಗರ್ ಒಟ್ಟಾರೆ ಜೀವನೋತ್ಸವ ಸತ್ತೇ ಹೋಗಿದ್ದ ನರಕವಾಗಿತ್ತು.
2020 ಕೊರಾನಾ ಲಾಕ್ ಡೌನ್ ದಿನಗಳಲ್ಲಿ ರಾತ್ರಿ ಊಟ ಬಿಟ್ಟೆ, ಬೆಳಿಗ್ಗೆ ಒಂದು ಗಂಟೆ ವಾಕಿಂಗ್ ಗಳಿಂದ ಸುಮಾರು 30 ಕೆ.ಜಿ ತೂಕ ಇಳಿಯಿತು, ಗೊರಕೆ ನಾಪತ್ತೆ ಆಯಿತು, ಹರ್ನಿಯಾ ಇಲ್ಲವಾಯಿತು, ಬಿಪಿ - ಶುಗರ್ ನಾರ್ಮಲ್ ಆಯಿತು ಪುನಃ ಜೀವನೋತ್ಸವ ಪುಟಿದೇಳಿತು.
ಅವತ್ತಿನ ನನ್ನ ಪೋಟೋ ನೋಡಿ ಡೊಳ್ಳು ಹೊಟ್ಟೆ, ತಾಮ್ರದ ತೊಪ್ಪಲೆಯಂತ ಮುಖ ಕಳೆದ ವರ್ಷದ 26 - ಮೇ -2023 ರ ಪೋಟೋದಲ್ಲಿ ಇಲ್ಲವಾಗಿದೆ.
Comments
Post a Comment