Blog number 2112. ಬೌಗೋಳಿಕ ವಿಸ್ತೀರ್ಣದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ 175 ಕಿ.ಮಿ. ಉದ್ದದ ಶಿವಮೊಗ್ಗ ಜಿಲ್ಲೆಯ ಹೊಸನಗರ ವಿದಾನಸಭಾ ಕ್ಷೇತ್ರದ ಮೂರು ಅವಧಿಯ ಶಾಸಕರಾಗಿದ್ದ ಬಿ.ಸ್ವಾಮಿ ರಾವ್ ನನ್ನ ಅತಿಥಿ.
#ಹೊಸನಗರದ_ಮಾಜಿ_ಶಾಸಕರಾದ_ಬಿ_ಸ್ವಾಮಿರಾಯರು_ನನ್ನ_ಇವತ್ತಿನ_ಅತಿಥಿ
#ತೊಂಬತ್ನಾಲ್ಕು_ವರ್ಷ_ತುಂಬಿದ_ಸಾರ್ಥಕ_ಜೀವನ_ಅವರದ್ದು
#ಖ್ಯಾತ_ಪತ್ರಕರ್ತ_ದಿನೇಶ್_ಅಮೀನ್_ಮಟ್ಟು_ಅವರಿಗೆ_ನೀಡಿದ_ಸಲಹೆಯಂತೆ
#ಅವರ_ಹೃದಯಾಂತರಾಳದ_ಜೀವನ_ವೃತ್ತಾಂತ_ಬಿಡುಗಡೆ_ಆಗಿದೆ
#ಹೊಸನಗರದ_ಖ್ಯಾತ_ಪತ್ರಕರ್ತ_ಶ್ರೀಕಂಠ_ಹೆಚ್_ಆರ್_ಒಂದು_ವರ್ಷ_ಕಾಲ
#ಸ್ವಾಮಿರಾವ್_ಅವರ_ಜೀವನದ_ವೃತ್ತಾಂತಗಳ_ದಾಖಲಿಸಿ_ಪುಸ್ತಕ_ಮಾಡಿದ್ದಾರೆ
#ಸ್ವಾಮಿ_ರಾವ್_ಅವರ_94ನೇ_ಹುಟ್ಟು_ಹಬ್ಬದಂದು_ಬಿಡುಗಡೆ_ಆದ_ನಾನು_ಹೇಳುವುದೆಲ್ಲ_ಸತ್ಯ
#ಸ್ವಾಮಿರಾವ್_ಸ್ಟಹಸ್ತಾಕ್ಷರದಿಂದ_ನನ್ನ_ಕಛೇರಿಗೆ_ಬಂದು_ನೀಡಿದ್ದು_ನನ್ನ_ಭಾಗ್ಯ
94 ನೇ ವಯಸ್ಸಿನಲ್ಲೂ ಬಿಪಿ ಶುಗರ್ ಇಲ್ಲದ, ತಮ್ಮ ಅಗಾದ ನೆನಪಿನ ಶಕ್ತಿಗೆ ಯಾವುದೇ ಕುಂದುಂಟಾಗದೆ ನಿರರ್ಗಳವಾಗಿ ಮಾತನಾಡುವ ಶಿವಮೊಗ್ಗ ಜಿಲ್ಲೆಯ ಅತ್ಯಂತ ವಿಸ್ತಾರವಾದ ವಿಧಾನಸಭಾ ಕ್ಷೇತ್ರದ ಮೂರು ಅವಧಿಗೆ ಶಾಸಕರಾಗಿದ್ದ ಬಿ.ಸ್ವಾಮಿರಾವ್ ಇವತ್ತು ನನ್ನ ಅತಿಥಿಗಳು.
ಇವರ ಜೀವನ ವೃತ್ತಾಂತ #ನಾನು_ಹೇಳುವುದೆಲ್ಲ_ಸತ್ಯ ಪುಸ್ತಕ ಬರೆದು ಪ್ರಕಟಿಸಿದ ಪತ್ರಕರ್ತ ಶ್ರೀಕಂಠ ಹೆಚ್.ಆರ್. ಜೊತೆಯಾಗಿ ಇವತ್ತು ಸಂಜೆ ನನ್ನ ಕಛೇರಿಗೆ ಬಂದು ಇವರ ಜೀವನ ವೃತ್ತಾಂತ ಪುಸ್ತಕಕಕ್ಕೆ ಸ್ಟ ಹಸ್ತಾಕ್ಷರ ಮಾಡಿ ನನಗೆ ನೀಡಿದ್ದು ನನಗೆ ಸೌಬಾಗ್ಯವೇ ಸರಿ.
ನಮ್ಮ ಸಂಸ್ಥೆ ವತಿಯಿಂದ ಗೌರವಿಸಿ ನಮ್ಮ #ಮಲ್ಲಿಕಾ_ವೆಜ್ ನ ಅವರಿಗೆ ಇಷ್ಟವಾದ ತೋಯಿಸಿದ ಮಂಡಕ್ಕಿ - ಮಿರ್ಚಿ ಬೋಂಡ ಮತ್ತು ಸಕ್ಕರೆ ಹಾಕಿದ ಚಹಾ ನೀಡಿ ಸತ್ಕರಿಸಿದೆ.
ಇವರ ತಂದೆ ಹೊಸನಗರ ಬಸ್ ನಿಲ್ದಾಣದ ಎದರು #ದೀವರ_ವಿದ್ಯಾವರ್ದಕ_ಸಂಘ ಸ್ಥಾಪಿಸಿ ವಿದ್ಯಾರ್ಥಿನಿಲಯ ನಿರ್ಮಿಸಿದವರು ಸ್ವತಃ ಸ್ವಾಮಿ ರಾವ್ ಅಲ್ಲಿಂದಲೇ ವಿದ್ಯಾಬ್ಯಾಸ ಮಾಡಿದವರು.
ಶಿವಮೊಗ್ಗ ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಲಯ ಪ್ರಾರಂಬಿಸಿದವರು.
ದಕ್ಷಿಣ ಭಾರತದ ಎವರೆಸ್ಟ್ ಎಂದು ಕರೆಯುವ ಕೊಡಚ್ಚಾದ್ರಿ ಬೆಟ್ಟದಲ್ಲಿ ಸುಸಜ್ಜಿತ ಪ್ರವಾಸಿ ಮುಂದಿರ ನಿರ್ಮಿಸಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪರ ಕರೆಸಿ ಉದ್ಘಾಟಿಸಿದ್ದರು.
ಅವತ್ತು ಬಂಗಾರಪ್ಪರ ಇಷ್ಟದ ವಿಶೇಷವಾದ ಮಲೆನಾಡಿನ ಬೋಜನ ಬಡಿಸಿದವರು.
Comments
Post a Comment