Blog number 2135. ಸಹಾಯ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ, ಇವರ ಸಹಾಯ ಆ ಕುಟುಂಬಕ್ಕೆ ಆ ಕ್ಷಣಕ್ಕೆ ದೊಡ್ಡ ಆಸರೆ.
#ವೃತ್ತಿಯಿಂದ_ನಿವೃತ್ತರಾದರೂ
#ಸಮಾಜ_ಸೇವೆ_ಸಹಾಯ_ಮಾಡುವುದರಲ್ಲಿ
#ಸಕ್ರಿಯರಾಗಿರುವ_ಬಾಲಕೃಷ್ಣ_ಶ್ರೀನಿವಾಸರು
News first Karnataka ದಲ್ಲಿ ಹುಬ್ಬಳ್ಳಿಯ ಅಂಜಲಿ ಸಹೋದರಿ ತನ್ನ ಅಕ್ಕನ ಹತ್ಯೆಯ ನಂತರ ತಾವಿರುವ ಬಾಡಿಗೆ ಮನೆ ತೆರವು ಮಾಡಲು ಮನೆ ಮಾಲಿಕರು ಒತ್ತಾಯ ಮಾಡುತ್ತಿರುವ ಬಗ್ಗೆ ವಿವರಿಸುತ್ತಿದ್ದಾಗ ನೋಡಿದವರ ಹೃದಯ ಹಿಂಡುತ್ತಿತ್ತು.
ಇದನ್ನು ನೋಡಿದವರು ಅನೇಕರು ಪ್ರತಿಕ್ರಿಯಿಸುತ್ತಿದ್ದರು ಆಗಲೇ ಒಬ್ಬರ ಪ್ರತಿಕ್ರಿಯೆ ಗಮನ ಸೆಳೆಯಿತು " ನಿಮ್ಮ owner G pay ನಂ ಕೊಡು ಅಮ್ಮ... 3 ತಿಂಗಳ ಬಾಡಿಗೆ ಕಟ್ಟಿ ನಿಮಗೆ ತಿಳಿಸುತ್ತೇನೆ.... ಚಾನಲ್ ನಲ್ಲಿ ನಿಮ್ಮ ಫೋನ್ ನಂಬರ್ ಕೇಳಿದ್ದೇನೆ.
My Contact number 9845085667.Bendigere (ಹುಬ್ಬಳ್ಳಿ) ಪೋಲಿಸ್ ಸ್ಟೇಷನ್ ನಾಳೆ A/C ನಂ ತಿಳಿಸುವುದಾಗಿ ತಿಳಿಸಿದ್ದಾರೆ ಅಂತ ಬಾಲಕೃಷ್ಣ ಶ್ರೀನಿವಾಸ್ ಪ್ರತಿಕ್ರಿಯೆ ನೋಡಿ ಮನಸ್ಸು ಹಗುರಾಗಿತ್ತು.
ನಾನು ಅವರಿಗೆ "ನಿಮ್ಮ ಸಹೃದಯದ ಮಾತಿಗೆ ಅನಂತಾನಂತ ಧನ್ಯವಾದಗಳು ಈ ತಕ್ಷಣದ ಪರಿಹಾರ ಅವರಿಗೆ ದೊಡ್ಡ ಸಹಾಯ ಆಗಲಿದೆ ಮತ್ತು ಅನೇಕರಿಗೆ ಸಹಾಯ ಮಾಡಲು ಪ್ರೇರಣೆ ಆಗಿದೆ" ಎಂದು ಬರೆದಿದ್ದೆ ಅವರು thanks ದಾಖಲಿಸಿದ್ದರು.
ನಂತರ 20 - ಮೇ - 2024ರಂದು ಅವರು "ನಾನು ಗಂಗವ್ವ ಅಂಬಿಗೇರ್ ಅಕೌಂಟ್ ನಂಬರ್ 17061556687 ಗೆ ರೂ 15000 ಜಮ ಮಾಡಿದ್ದೇನೆ ಎಂಬ ಮರು ಸಂದೇಶ ನೋಡಿ ನನ್ನ ಹೃದಯ ತುಂಬಿ ಬಂತು.
ಈ ರೀತಿ ಸಹಾಯ ಮಾಡಿದವರು ಶಿವಮೊಗ್ಗ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕ್ಷಕ ಇಂಜಿನಿಯರ್ ಆಗಿ ನಿವೃತ್ತರಾಗಿರುವ ಬಿ.ಎಸ್ .ಬಾಲಕೃಷ್ಣರು ಅವರು ಉದ್ಯೋಗದಿಂದ ನಿವೃತ್ತರಾದರು ಅವರ ಪ್ರವೃತ್ತಿಯಿಂದ ನಿವೃತ್ತರಾಗಿಲ್ಲ.
ಬಾಲಕೃಷ್ಣರು ತೀರ್ಥಹಳ್ಳಿ ಆಗುಂಬೆ ರಸ್ತೆಗಳನ್ನ ಅತ್ಯುತ್ತಮವಾಗಿ ನಿರ್ಮಿಸಿದವರು ಅವರ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ರಾಜ್ಯ ಹೆದ್ದಾರಿ,ಜಿಲ್ಲಾ ಮುಖ್ಯ ರಸ್ತೆ, ಅವರ ಇಲಾಖಾ ವ್ಯಾಪ್ತಿಯ ಎಲ್ಲಾ ಕಟ್ಟಡ ಮತ್ತು ವಸತಿ ಗೃಹಗಳ ವಾರ್ಷಿಕ ನಿರ್ವಹಣೆ ಅತ್ಯುತ್ತಮವಾಗಿ ನಿರ್ವಹಿಸಿದ್ದಕ್ಕಾಗಿ 2017 ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರಿಗೆ ಅಭಿನಂದಿಸಿ ಪತ್ರಿಸಿದ್ದರು.
ಬಾಲಕೃಷ್ಣ ಶ್ರೀನಿವಾಸರ ಈ ಸಹಾಯಕ್ಕೆ ಅಭಿನಂದಿಸುತ್ತೇನೆ.
Comments
Post a Comment