Blog number 2141. ಹಿಂದೂ ಪತ್ರಿಕೆ ವರದಿಗಾರಿಕೆ ತೊರೆದು ಕಾನೂನು ಪದವಿ ವ್ಯಾಸಂಗ ಪೂರೈಸುತ್ತಿರುವ ವೀರೇಂದ್ರರ ನೆನಪಿನ ಶಕ್ತಿ ಅಗಾದ
#ಹೀಗೂ_ಉಂಟೆ?
#ಇವರು_ನನ್ನ_ವಿಶೇಷ_ಅತಿಥಿ
#ಶಿವಮೊಗ್ಗ_ಜಿಲ್ಲೆಯ_ಹಿಂದೂ_ಪತ್ರಿಕೆ_ವರದಿಗಾರರಾಗಿದ್ದರು
#ಈಗ_ಪತ್ರಿಕೆ_ತೊರೆದು_ಅಂತಿಮ_ಕಾನೂನು_ಪದವಿ_ವಿದ್ಯಾರ್ಥಿ
#ವೀರೇಂದ್ರ_ಮತ್ತು_ಅವರ_ಸಹಪಾಠಿ_ಜಯಂತ್
#ಇತಿಹಾಸ_ಸಂಶೋದಕ_ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಜೊತೆ
ರಾಷ್ಟ್ರಮಟ್ಟದ ಹಿಂದೂ ಪತ್ರಿಕೆಯ ಶಿವಮೊಗ್ಗ ಜಿಲ್ಲೆಯ ವರದಿಗಾರರಾಗಿ ಆ ಹುದ್ದೆ ತ್ಯಜಿಸಿ ಕಾನೂನು ಪದವಿಯ ವಿದ್ಯಾರ್ಥಿ ಆಗುವುದು ಉಹಿಸಲಾಗದ ಸಂಗತಿಯೇ...
ವೀರೆಂದ್ರ ಪಿ.ಎಂ. ಇದಕ್ಕೆ ಉದಾಹರಣೆ ಆಗಿದ್ದಾರೆ ಅವರು ಶಿವಮೊಗ್ಗ ಜಿಲ್ಲಾ ಹಿಂದೂ ಪತ್ರಿಕೆ ವರದಿಗಾರರಾಗಿದ್ದಾಗ ಸಾಗರದಲ್ಲಿ ವಿವಾಹ ಒಂದಕ್ಕೆ ಭಾಗವಹಿಸಲು ಹಾಯ್ ಬೆಂಗಳೂರ್ ವರದಿಗಾರರಾದ ಶೃಂಗೇಶ್ ಜೊತೆ ನನ್ನ ಆಫೀಸಿಗೆ ಬಂದಿದ್ದರು.
ಈಗ ಈ ಹುದ್ದೆ ತೊರೆದು ಕಾನೂನು ಪದವಿ ವ್ಯಾಸಂಗ ಮಾಡುತ್ತಾ ಅಂತಿಮ ಕಾನೂನು ಪದವಿ ವಿದ್ಯಾರ್ಥಿ ಆಗಿ ಅವರ ಕ್ಲಾಸ್ ಮೇಟ್ ಜಯಂತ್ ಮತ್ತು ಇತಿಹಾಸ ಸಂಶೋದಕ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರರ ಜೊತೆ ನನ್ನ ಆಫೀಸಿಗೆ ಬಂದಿದ್ದರು.
ಅವರ 42ನೇ ವಯಸ್ಸಲ್ಲಿ ಸೇಪರ್ ಝೋನ್ ತೊರೆದು ಕಾನೂನು ವಿದ್ಯಾಬ್ಯಾಸಕ್ಕೆ ದುಮುಕಿಸಿರುವುದು ಅವರ ಇಷ್ಟದ ಮಾರ್ಗದ ಅನ್ವೇಷಣೆಯೇ ಆಗಿದೆ.
ಇವರ ಜೊತೆ ಹೆಚ್ಚು ಸಮಯ ಕಳೆದರೂ ಕ್ಷಣ ಮಾತ್ರ ಅನ್ನಿಸಿತು, ಇವರ ನೆನಪಿನ ಶಕ್ತಿ ಅಗಾದವಾಗಿದೆ, ಇವರಿಗೆ ನಮ್ಮ ಆನಂದಪುರಂ ಇತಿಹಾಸದ ಜೊತೆ ಈಗಿನ ನಮ್ಮ ಊರಿನ ಪ್ರತಿಷ್ಠಿತರ ಪರಿಚಯವಿದೆ.
ಇಡೀ ಜಿಲ್ಲೆಯ ಇತಿಹಾಸ, ಸ್ಥಳ ಚರಿತ್ರೆ ಇವರ ನೆನಪಿನಲ್ಲಿ ದಾಖಲಾಗಿರುವುದು ನನಗೆ ಇವರ ಇಂಟಿಲಿಜೆಂಟ್ ಕೋಶಾಂಟ್ ( IQ) ಬಗ್ಗೆ ಯೋಚಿಸುವಂತಾಯಿತು.
ಇನ್ನೂ ನಾಕಾರು ಗಂಟೆ ಮಾತಾಡಿದರೂ ಮಾತು ಮುಗಿಯುತ್ತಿರಲಿಲ್ಲ, ಡಾಕ್ಟರ್ ಪ್ರೀತಂ ಬರೆದ #ಡಯಾಬಿಟೀಸ್_ರಿವರ್ಸಲ್ ಪುಸ್ತಕ ನೀಡಿ ಇನ್ನೋಮ್ಮೆ ಬರಲು ವಿನಂತಿಸಿ ಬಿಳ್ಕೊಟ್ಟೆ.
Comments
Post a Comment