Blog number 2140. ಭಾರತ ದೇಶದ ಅತ್ಯಂತ ಎತ್ತರದ (1493 ಅಡಿ / 455 ಮೀಟರ್) ಜಲಪಾತ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ಕುಂಚಿಕಲ್ ಅಬ್ಬಿ ಪಾಲ್ಸ್.
#ನಮ್ಮ_ಭಾರತ_ದೇಶದ_ಅತ್ಯಂತ_ಎತ್ತರದ_ಜಲಪಾತ
#ಇರುವ_ಜಿಲ್ಲೆ_ಶಿವಮೊಗ್ಗ_ಎಂಬ_ಹಿರಿಮೆ_ನಮ್ಮದು
#ಕರ್ನಾಟಕ_ರಾಜ್ಯದ_ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ
#ಮಾಸ್ತಿಕಟ್ಟೆಯ_ನಿಡುಗೋಡು_ಸಮೀಪದ_ವರಹಾ_ನದಿಯ_ಕುಂಚಿಕಲ್_ಅಬ್ಬಿ_ಪಾಲ್ಸ್
#ಇದರ_ಎತ್ತರ_1493_ಅಡಿ
#ಕರ್ನಾಟಕ_ಪವರ್_ಕಾರ್ಪೋರೇಷನ್_ಈ_ಜಲಪಾತದ_ಎತ್ತರ_ಅಳತೆ_ಮಾಡಿದೆ
#ದೇಶದ_ಜಲಪಾತಗಳ_ಕ್ರಮಾಂಕ_ಮರುಮಾರ್ಪಾಡು_ವಿಳಂಬವಾಗಿ_ದಾಖಲಾಗಿದೆ.
#ವರಾಹಿ_ನದಿಯ_ಕುಂಚಿಕಲ್_ಪಾಲ್ಸ್_ಮೊದಲು_ನೋಡಿದವರು_ಈ_ಭಾಗದ_ಕುಣುಬಿ_ಜನಾಂಗದವರು
#ಶಿವಮೊಗ್ಗ_ಜಿಲ್ಲಾ_ಕೇಂದ್ರದಲ್ಲಿ_ಈ_ಜಲಪಾತದ_ಬಗ್ಗೆ_1993ರಲ್ಲಿ_ಮೊದಲ_ಮಾಹಿತಿ
#ನೀಡಿದವರು_ಸಾವೆಹಕ್ಕಲಿನ_ಕಂಚಿನಕಲ್_ಈರಪ್ಪಣ್ಣ
#ಮೊದಲ_ವಿಡಿಯೋ_ಮಾಡಿದವರು_ನಗರನಾರಾಯಣ_ಕಾಮತರು
#ಇತ್ತೀಚಿನ_ವರ್ಷಗಳಲ್ಲಿ_ಅನೇಕ_ಸಾಹಸಿಗಳು_ಇಲ್ಲಿಗೆ_ಬೇಟಿ_ನೀಡಿ_ಚಿತ್ರಿಸಿದ್ದಾರೆ.
#ಈ_ಜಲಪಾತದ_ಬಗ್ಗೆ_ಹೆಲಿಕಾಪ್ಟರ್_ಬಳಸಿ_ಚಿತ್ರಿಕರಣ_ಮಾಡಲು_ಸುದ್ದಿ_ಸಂಸ್ಥೆ_ಒಂದು_ಮುಂದೆ_ಬಂದಿದೆ.
https://youtube.com/shorts/p3W5GfY7v_Q?feature=shared
ನಮ್ಮ ದೇಶದಲ್ಲಿನ ಅತ್ಯಂತ ಎತ್ತರದ ಜಲಪಾತಗಳ ಪಟ್ಟಿ ಪುನರ್ ರಚಿಸಲಾಗಿದೆ ಇದರಲ್ಲಿ ಮೊದಲ ಸ್ಥಾನದಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯ ನಿಡುಗೋಡು ಸಮೀಪದ ವರಾಹಿ ನದಿಯಿಂದ ಉಂಟಾಗಿರುವ ಕುಂಚಿಕಲ್ ಅಬ್ಬಿ ಫಾಲ್ಸ್ ಎಂದಾಗಿದೆ.
ಇದರ ಎತ್ತರ 1493 ಅಡಿ ಇದನ್ನು ಕರ್ನಾಟಕ ಪವರ್ ಕಾರ್ಪೋರೇಷನ್ ಈ ಜಲಪಾತದ ಅಳತೆ ಮಾಡಿ ತನ್ನ ವೆಬ್ ಸೈಟಿನಲ್ಲಿ ದಾಖಲಿಸಿದೆ.
2023ರ UPSC ಪರೀಕ್ಷೆಯಲ್ಲಿ ದೇಶದ ಅತಿ ಎತ್ತರದ ಜಲಪಾತಕ್ಕೆ ಸರಿ ಉತ್ತರ ಕುಂಚಿಕಲ್ ಪಾಲ್ಸ್ ಆಗಿದೆ.
ದೇಶದ ಅಗ್ರಶ್ರೇಯಾಂಕದ ಜಲಪಾತದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನಮ್ಮ ರಾಜ್ಯದ ನಮ್ಮ ಶಿವಮೊಗ್ಗ ಜಿಲ್ಲೆಯ ಕುಂಚಿಕಲ್ ಪಾಲ್ಸ್ 455 ಮೀಟರ್ (1493 ಅಡಿ),
ಎರಡನೆ ಸ್ಥಾನದಲ್ಲಿ ಒಡಿಶಾ ರಾಜ್ಯದ ಮಯೂರ ಭಂಜ್ ಜಿಲ್ಲೆಯ ಬರೇಹಿಪಾನಿ ಜಲಪಾತ 399 ಮೀಟರ್ (1309 ಅಡಿ), ಮೂರನೆಯದ್ದು ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ನೊಹ್ಕಲಿಕೈ ಜಲಪಾತ 340 ಮೀಟರ್ ( 1115 ಅಡಿ) ಎಂದು ಪುನರ್ವಿಂಗಡಣೆಯ ಜಲಪಾತದ ಪಟ್ಟಿಯಲ್ಲಿದೆ.
ಇದಕ್ಕೂ ಮೊದಲು ಈಗ ಮೂರನೆ ಸ್ಥಾನದಲ್ಲಿ ಈಗಿರುವ ನೊಹ್ಕಲಿಕೈ ಜಲಪಾತವೇ ದೇಶದ ಅತ್ಯಂತ ಎತ್ತರದ ಜಲಪಾತ ಅಂತಾಗಿತ್ತು.
1990ರಲ್ಲಿ ಜೋಗ ಜಲಪಾತಕ್ಕಿಂತ ಎತ್ತರದ ಜಲಪಾತ್ ಒಂದು ವರಾಹಿ ನದಿಯಿಂದ ಉಂಟಾಗಿದೆ ಎಂಬ ಸುದ್ದಿ ಹಬ್ಬಿತ್ತು ಆದರೆ ಅದನ್ನು ಯಾರೂ ದೃಡೀಕರಿಸಲು ಮುಂದೆ ಬಂದಿರಲಿಲ್ಲ ಆ ಸಂದರ್ಭದಲ್ಲಿ ಸಾವೆಹಕ್ಕಲು ನದಿಗೆ ಆಣೆ ಕಟ್ಟು ಕಟ್ಟಿದ ಜಾಗದಲ್ಲಿ ಕೃಷಿ ಜಮೀನು ತೋಟ ಮುಳುಗಡೆ ಆದ ಕುಣುಬಿ ಜನಾಂಗದ ಕಂಚಿನ ಕಲ್ ಈರಪ್ಪಣ್ಣ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಕುಂಚಿಕಲ್ ಪಾಲ್ಸ್ ಇರುವುದರ ಬಗ್ಗೆ ಅದನ್ನ ಅವರ ಬಾಲ್ಯದಲ್ಲಿ ಅವರ ಪೂರ್ವಿಕರ ಜೊತೆ ನೋಡಿದ ಬಗ್ಗೆ ವಿವರಿಸಿದ್ದರು.
1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಈ ಜಲಪಾತ ನೋಡಲು ಇದೇ ಕಂಚಿನಕಲ್ಲು ಈರಪ್ಪಣ್ಣ ನೇತೃತ್ವದಲ್ಲಿ ಒಂದು ತಂಡ ಮಾಡಿಕೊಂಡೆವಾದರೂ ನಮ್ಮ ಪ್ರಯತ್ನ ಕಾರ್ಯರೂಪಕ್ಕೆ ಬರಲಿಲ್ಲ.
2018ರಲ್ಲಿ ಮಧ್ಯ ಮುಂಗಾರು ಮಳೆಗಾಲದಲ್ಲಿ ವಿಪರೀತ ಮಳೆ ಮತ್ತು ಗಾಳಿಯ ಜೊತೆ ಮಾರು ದೂರವೂ ಕಾಣದ ಮಂಜು,ಕಾಲಿಟ್ಟಲ್ಲಿ ಕಚ್ಚಿಕೊಳ್ಳುವ ಜಿಗಣೆಗಳಿದ್ದ ಅಪಾಯಕಾರಿ ಸಮಯದಲ್ಲಿ ಈ ಸ್ಥಳಕ್ಕೆ ಬೇಟಿ ನೀಡಿದ ಸ್ಥಳಿಯ ಸಾಹಸಿಗಳ ಮೊದಲ ತಂಡದ ನಗರದ ನಾರಾಯಣ ಕಾಮತ್, ಸುಬ್ರಮಣ್ಯ ಭಾಗವತ್, ಅನಂತಮೂರ್ತಿ ಶೆಣೈ, ಕಿರಣ್ ದಾಸ್ ಮತ್ತು ಅವರಿಗೆ ಮಾರ್ಗದರ್ಶಕರಾಗಿದ್ದ ಮಾಸ್ತಿಕಟ್ಟೆಯ ರಿಕ್ಷಾ ಚಾಲಕರು ಸೇರಿದ (ಅವರ ಹೆಸರು ಮರೆತಿದ್ದಾರೆ) ತಂಡ ಅಲ್ಲಿ ಚಿತ್ರಿಕರಿಸಿದ ವಿಡಿಯೋ ಕುಂಚಿಕಲ್ ಪಾಲ್ಸ್ ನ ಮೊದಲ ವಿಡಿಯೋ ಆಗಿದೆ.
ಅನೇಕ ಸಾಹಸಿ ಚಾರಣಿಗರು ಬೇಸಿಗೆ ಮತ್ತು ಮುಂಗಾರು ಪೂವ೯ದಲ್ಲಿ ಕುಂಚಿಕಲ್ ಪಾಲ್ಸ್ ಗೆ ಭೇಟಿ ನೀಡಿದ್ದಾರೆ ಆದರೆ ಮಧ್ಯ ಮಳೆಗಾಲದಲ್ಲಿ ಅಲ್ಲಿಗೆ ಹೋದ ತಂಡ ನಗರ ನಾರಾಯಣ ಕಾಮತ್ ತಂಡ ಮೊದಲಿಗರು.
ಎಲ್ಲರೂ ಈ ಪಾಲ್ಸನ ಎರಡನೆ ಹಂತದ ಮಧ್ಯದಲ್ಲಿ ಮಾತ್ರ ಜಲಪಾತ ತಲುಪಲು ಸಾಧ್ಯವಿದೆ.
ನಾಲ್ಕು ಹಂತದ 1493 ಅಡಿಯ ಜಲಪಾತದ ವಿವಿದ ಹಂತಗಳನ್ನು ತಲುಪುವುದು ಮತ್ತು ವೀಕ್ಷಿಸುವುದು ಕಷ್ಟ ಸಾಧ್ಯವಾಗಿದೆ, ಜಲಪಾತದ ಮೇಲುಗಡೆಯಿಂದ ಕರ್ನಾಟಕ ಪವರ್ ಕಾರ್ಪೋರೇಷನ್ ಇಂಜಿನಿಯರ್ ತಂಡ ಕುಂಚಿಕಲ್ ಪಾಲ್ಸ್ ಎತ್ತರದ ಅಳತೆಗೆ ತೊಡಗಿ ತುಂಬಾ ಪ್ರಯಾಸದಿಂದ ಅರ್ದ ಭಾಗ ತಲುಪಿದರಾದರು ನಂತರದ ಭಾಗದ ಅಳತೆಗೆ ಹೊಸಂಗಡಿ ಭಾಗದ ಕೆಳಬಾಗದಿಂದ ಎತ್ತರಕ್ಕೆ ಅಳತೆ ಮಾಡಿದರೆಂದು ಆ ಭಾಗದಲ್ಲಿ ಪ್ರಕೃತಿ ನಿರ್ಮಿತವಾದ ಅಗಾದವಾದ ಬಂಡೆಗಳು ಪ್ರಪಾತಗಳು ಇದೆಯೆಂದು ತಿಳಿಯಿತಂತೆ.
1493 ಅಡಿ ಎತ್ತರದ ಜಲಪಾತ ಎಂದರೆ ದೇಶದಲ್ಲೇ ಅತ್ಯಂತ ಎತ್ತರದ ಜಲಪಾತ ಎಂದು ದಾಖಲಾದರೂ ದೇಶದ ಜಲಪಾತಗಳ ಪಟ್ಟಿ ಪರಿಷ್ಕರಣೆಗೆ 45 ವರ್ಷಗಳು ಬೇಕಾಯಿತು.
ಸ್ಥಳಿಯ ಮೂಲ ಗುಡ್ಡಗಾಡು ವಾಸಿಗಳಾದ ಕುಣುಬಿ ಜನಾಂಗದವರು ಈ ಜಲಪಾತ ಮೊದಲು ನೋಡಿದವರು ಮತ್ತು ತುಂಬಾ ಅಪಾಯಕಾರಿ ಆದ ಈ ಸ್ಥಳದ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇತ್ತು, ಇಂತಹ ದಟ್ಟ ಅರಣ್ಯದ ಮಧ್ಯದಲ್ಲಿ ಅಪಾಯಕಾರಿ ಸ್ಥಳದಲ್ಲಿ ಹರಿಯುವುದರಿಂದ ಈ ಜಲಪಾತ ತ ಸಾರ್ವಜನಿಕರಿಗೆ ಮುಕ್ತವಾಗಿಲ್ಲ ಆದ್ದರಿಂದ ಇದು ಒಂದು ರೀತಿ ನಿಗೂಡ ಜಲಪಾತವೇ ಆಗಿದೆ.
ಸುದ್ದಿ ಸಂಸ್ಥೆಯೊಂದು ಹೆಲಿಕಾಫ್ಟರ್ ಬಳಸಿ ಈ ಜಲಪಾತದ ಬಗ್ಗೆ ಹೆಚ್ಟಿನ ಮಾಹಿತಿ ದೇಶವಾಸಿಗಳಿಗೆ ತಿಳಿಸಲು ತಯಾರಿ ನಡೆಸಿದ್ದಾರೆಂಬ ಸುದ್ದಿ ಕೂಡ ಬಂದಿದೆ.
ಅತಿ ಹೆಚ್ಚು ಮಳೆ ಬೀಳುವ ದಾಖಲೆ ಹೊಂದಿದ ಮಾಸ್ತಿಕಟ್ಟೆ ಸಮೀಪದಲ್ಲೇ ದೇಶದ ಅತ್ಯಂತ ಎತ್ತರದ ಜಲಪಾತ ದಾಖಲಾಗಿದೆ ಹಾಗೂ ಸಮೀಪದಲ್ಲೇ ದಕ್ಷಿಣ ಭಾರತದ ಎವರೆಸ್ಟ್ ಎನ್ನುವ ಅತ್ಯಂತ ಎತ್ತರದ ಕೊಡಚ್ಚಾದ್ರಿ ಬೆಟ್ಟವೂ ಇದೆ, ವಿಶ್ವದಲ್ಲೇ ಸುಂದರವಾದ ಜೋಗ ಜಲಪಾತವೂ ಇದೆ.
ಇದೆಲ್ಲವೂ ಶಿವಮೊಗ್ಗ ಜಿಲ್ಲೆಯ ಹಿರಿಮೆ ಮತ್ತು ಶಿವಮೊಗ್ಗ ಜಿಲ್ಲೆ ನಮ್ಮ ಜಿಲ್ಲೆ ಎಂಬ ಹೆಮ್ಮೆ ನಮ್ಮದು.
ದೇಶದ ಅತ್ಯಂತ ಎತ್ತರದ ಕುಂಚಿಕಲ್ ಪಾಲ್ಸ್ ಸಂದರ್ಶಿಸಿದ ಉತ್ಸಾಹಿ ಸಾಹಸಿಗಳು ತೆಗೆದ ಪೋಟೋ ನಾಳೆಯಿಂದ ದಿನಕ್ಕೊಂದು ಪ್ರಕಟಿಸಲಿದ್ದೇನೆ.
Comments
Post a Comment