Blog number 2133. ಭಾಗ - 3.ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಅವರೊಡನೆ ಮಾತುಕತೆ, ಸಾಕ್ಷರತಾ ಆಂದೋಲನ 90ರ ದಶಕದಲ್ಲಿ ಯಶಸ್ವಿಗೊಳಿಸಿದ ನೆನಪುಗಳು.
#ಭಾಗ_3.
#ಹೊಸನಗರ_ವಿಧಾನಸಭಾ_ಕ್ಷೇತ್ರದ_ಮಾಜಿ_ಶಾಸಕರಾದ
#ಬಿ_ಸ್ವಾಮಿರಾವ್_ಅವರೊಡನೆ_ಮಾತುಕತೆ
#ಅವರ_ಕ್ಷೇತ್ರದಲ್ಲಿ_ಸಾಕ್ಷರತಾ_ಆಂದೋಲನದ_ಯಶಸ್ಸಿನ_ನೆನಪುಗಳು.
https://youtu.be/Y-l93xJcxJc?feature=shared
ಶಿವಮೊಗ್ಗ ಜಿಲ್ಲೆಯ ಹೊಸನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ರಾಜ್ಯದ ಶಾಸಕರಲ್ಲೇ ವಿಭಿನ್ನ ನಡೆ ನುಡಿಯವರು, 2009 ರಿಂದ ಹೊಸನಗರ ವಿಧಾನ ಸಭಾ ಕ್ಷೇತ್ರವನ್ನು ಸಾಗರ - ತೀರ್ಥಹಳ್ಳಿ ಮತ್ತು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹರಿದು ಹಂಚಿದ್ದಾರೆ.
94 ನೇ ಹುಟ್ಟುಹಬ್ಬದ ಸಂಭ್ರಮ ಮಾಜಿ ಶಾಸಕರ ಅಭಿಮಾನಿಗಳಲ್ಲಿ ಈ ಸಂದರ್ಭದಲ್ಲೇ ಅವರ ಜೀವನ ವೃತ್ತಾಂತದ ಪುಸ್ತಕ #ನಾನು_ಹೇಳುವುದೆಲ್ಲ_ಸತ್ಯ ಬಿಡುಗಡೆ ಆಗಿದೆ.
ಅವರ 94ರ ವಯಸ್ಸಿನಲ್ಲಿ ಅವರ ಜೀವನ ವೃತ್ತಾಂತ ಪ್ರಸ್ತಕ ಅವರೇ ನನ್ನ ಕಛೇರಿಗೆ ಬಂದು ಅವರ ಸ್ಪಯಾಕ್ಷರದ ಸಹಿ ನಮೂದಿಸಿ ನನಗೆ ನೀಡಿದ್ದು ಅವರಿಗೆ ನನ್ನ ಮೇಲಿನ ಪ್ರೀತಿಯ ದ್ಯೋತಕವಾಗಿದೆ ಇದಕ್ಕಾಗಿ ನಾನು ಅವರಿಗೆ ಅಭಾರಿ.
ಈ ಸಂದರ್ಭದಲ್ಲಿನ ಅವರೊಡನೆ ಮಾತುಕಥೆಯ ಸಂದರ್ಶನಗಳನ್ನು ಮಾಡಿದ್ದೇನೆ ಅದರ 3 ನೇ ಭಾಗ ಇದು, ಸಾಕ್ಷರತಾ ಆಂದೋಲನ ಅವರ ಕ್ಷೇತ್ರದಲ್ಲಿ ಯಶಸ್ವಿ ಆಗಿ ನೆರವೇರಿಸಿದ ಆ ದಿನಗಳನ್ನ ಅವರು ನೆನಪು ಮಾಡಿಕೊಂಡರು.
ಈಗ ನಮ್ಮ ಹೆಬ್ಬೆಟ್ಟಿನ ಅಚ್ಚು ರೇಷನ್ ಕಾರ್ಡ್, ಆಸ್ತಿ ನೊಂದಾವಣೆ ಕಛೇರಿಯಲ್ಲಿ ಪಿಂಗರ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ನೀಡುವುದು ಮಾತ್ರ ಈಗಿನ ತಲೆಮಾರಿನವರಿಗೆ ಪರಿಚಿತ ಆದರೆ ಕಳೆದ 1995ನೆ ಇಸವಿ ತನಕ ಸಹಿ ಮಾಡಲು ಕೂಡ ಕಲಿಯಿದವರು ಅಸಂಖ್ಯ ಜನರಿದ್ದರು.
ಎಲ್ಲಾ ಕಛೇರಿಗಳಲ್ಲಿ ಇಂಕ್ ಪ್ಯಾಡ್ ಇರಲೇ ಬೇಕಿತ್ತು ಅರ್ಜಿದಾರರ ಎಡಗೈ ಹೆಬ್ಬೆಟ್ಟು ಹಾಕಿಸಿ ಕೊಂಡು ನಂತರ ಅದಕ್ಕೆ LHT ಅಂದರೆ ಲೆಪ್ಟ್ ಹ್ಯಾಂಡ್ ಟೊಂಬ್ ಇಂಪ್ರೆಷನ್ ಅಟೆಸ್ಟೆಡ್ ಬೈ ಅಂತ ಬರೆದು ಅಕ್ಷರ ಕಲಿತವರ ಪರಿಚಯಸ್ಥರ ಸಹಿ ಹಾಕಿಸ ಬೇಕಾಗಿತ್ತು.
ಆ ಕಾಲದಲ್ಲಿ ನಾನು ವಿದವಾ ವೇತನ ಮತ್ತು ವೃದ್ಧಾಪ್ಯ ವೇತನ ಪಡೆಯುತ್ತಿದ್ದ ಅನೇಕರಿಗೆ ಪೋಸ್ಟ್ ಮ್ಯಾನ್ ಅವರ ಮನಿ ಆರ್ಡರ್ ಪಾರಂಗಳಿಗೆ ಅಟೆಸ್ಟ್ ಸಹಿ ಮಾಡುತ್ತಿದ್ದೆ ಇದೆಲ್ಲ ನೆನಪು.
90ರ ದಶಕದಲ್ಲಿ ಜನರನ್ನ ಅವರ ವಯಸ್ಸು ಪರಿಗಣಿಸದೆ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವ ಸರ್ಕಾರದ ಸಾಕ್ಷರತಾ ಆಂದೋಲನ ಸಾರ್ವಜನಿಕವಾಗಿ ಕನಿಷ್ಟ ತಾವು ಸಹಿ ಮಾಡದಿದ್ದರೆ ಸರ್ಕಾರದ ಸವಲತ್ತುಗಳು ಸಿಗುವುದಿಲ್ಲ ಎಂಬ ವದಂತಿ ಹರಡಲು ಕಾರಣವಾಗಿ ನೂರಕ್ಕೆ ನೂರು ಜನ ಕನ್ನಡದಲ್ಲಿ ಸಹಿ ಮಾಡಲು ಕಲಿತರು.
ಈ ಆಂದೋಲನದಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಶಾಸಕರಾಗಿದ್ದ ಬಿ. ಸ್ವಾಮಿರಾವ್ ವಿಶೇಷ ಆಸಕ್ತಿ ವಹಿಸಿ ಯಶಸ್ವಿಗೆ ಕಾರಣರಾಗಿದ್ದರು.
ಸಾಕ್ಷರತಾ ಆಂದೋಲನದ ಸಮಾರೋಪ ಸಮಾರಂಭದಲ್ಲಿ ಹಳ್ಳಿ ಹಳ್ಳಿಗಳಿಂದ ಗುಡಿ-ಗುಂಡಾರಗಳಿಂದ ಪಲ್ಲಕ್ಕಿಗಳಲ್ಲಿ ಜನ ಅವರ ಊರ ದೇವರ ಮೆರವಣಿಗೆ ತಂದಿದ್ದರು, ಇಂತಹ ನೂರಾರು ದೇವರ ಪಲ್ಲಕ್ಕಿಗಳಲ್ಲಿ ತಾಲ್ಲೂಕಿನ ದೇವರುಗಳ ದೊಡ್ಡ ಸಮಾವೇಶಕ್ಕೆ ಸಾಕ್ಷರತಾ ಆಂದೋಲನ ಸಾಕ್ಷಿ ಆಗಿತ್ತು, ಇದೆಲ್ಲ ಈಗ ನೆನಪು ಮಾತ್ರ ಆಗೆಲ್ಲ ಸಾಮಾಜಿಕ ಜಾಲತಾಣ ಅಥವ ಟೀವಿ ಮಾಧ್ಯಮ ಇರಲಿಲ್ಲ ಎಂದು ಸ್ವಾಮಿರಾಯರು ನೆನಪಿಸಿಕೊಂಡರು.
Comments
Post a Comment