Skip to main content

Posts

Showing posts with the label Dark night shade plant and it's fruits are more medicine value but lack of knowledge it is not popular

Blog number 1803. ಕಳೆ ಗಿಡದಂತೆ ಪರಿಗಣಿಸಿದ ಕಾಕಿ ಹಣ್ಣಿನ ಗಿಡದಲ್ಲಿರುವ ಔಷದದ ಗುಣಗಳು ಹೆಚ್ಚು ಹೆಚ್ಚು ಜನರಿಗೆ ತಲುಪಲಿ.

https://youtube.com/shorts/J1S0ywS2JpM?feature=shared #ಬೀಜ_ಪ್ರಸಾರಣದ_ವಿಸ್ಮಯ_ಜಗತ್ತು. #ನನ್ನ_ಬೆಳಗಿನ_ವಾಕಿಂಗ್_ಪಾತಿನ_ಗಾರ್ಡನ್_ಪಾಟಲ್ಲಿ_ಕಾಕಿ_ಹಣ್ಣಿನ_ಗಿಡ #ನಾವ್ಯಾರು_ನಟ್ಟಿ_ಬೆಳೆಸಿದ್ದಲ್ಲ. #ಕಾಗೆ_ಅಥವ_ಇನ್ನಾವುದೋ_ಪಕ್ಷಿ_ಕಾಕಿ_ಹಣ್ಣು_ತಿಂದು_ಈ_ಪಾಟಿನಲ್ಲಿ_ವಿಸರ್ಜಿಸಿರಬೇಕು. #ರೊಟ್ಟಿ_ಜಾರಿ_ತುಪ್ಪದ_ಪಾತ್ರೆಗೆ_ಬಿದ್ದಂತೆ_ಔಷದಿಯುಕ್ತ_ಸಸ್ಯ_ನಮ್ಮ_ಗಾರ್ಡನ್_ಪಾಟಿನಲ್ಲಿ.   ಕಾಕಿ ಹಣ್ಣು - ಕಾಕ ಮಾಚಿ -ಕಾಗೆಸೊಪ್ಪಿನ ಹಣ್ಣು ಎಂದು ಕರೆಯುವ ಈ ಡಾರ್ಕ್ ನೈಟ್ ಶೇಡ್ ಎಂದು ಇಂಗ್ಲೀಷಿನಲ್ಲಿ ಕೆರೆಯುವ ಮತ್ತು 61 ದೇಶಗಳಲ್ಲಿ ಕಳೆ ಸಸ್ಯ ಎಂದು ಘೋಷಿಸಿರುವ ಕಾಕಿ ಹಣ್ಣು ಬೇಲಿ ಸಾಲಿನ ಕಪ್ಪು ದ್ರಾಕ್ಷಿಯ ಮಿನಿಯೇಚರನಂತ ಸಿಹಿ ಹುಳಿಯ ಹಣ್ಣು ಮಲೆನಾಡಿನ ಮಕ್ಕಳಿಗೆ ಹೆಚ್ಚು ಪರಿಚಿತ.    ಗುಲಗುಂಜಿ ಗಾತ್ರದ ಕಪ್ಪು ಹಣ್ಣಿನಲ್ಲಿ 40 ಬೀಜಗಳಿದ್ದರು ಇದು ಅದಾಗಿಯೇ ಮಣ್ಣಿನಲ್ಲಿ ಬಿದ್ದು ಗಿಡವಾಗುವುದಿಲ್ಲ, ಈ ಬೀಜ ಕಾಗೆ ಇನ್ನಿತರ ಪಕ್ಷಿ ಹೊಟ್ಟೆ ಸೇರಿ ಅಲ್ಲಿ ಇದರ ಬೀಜ ಜೀರ್ಣಾಂಗದ ಮೂಲಕ ಹಾದು ಅದು ಮೊಳಕೆ ಒಡೆಯುವ ಹಂತಕ್ಕೆ ಬೇಕಾದ ಉಷ್ಣಾಂಶ ಪಡೆದು ಹಕ್ಕಿಯ ವಿಸರ್ಜನೆ ಮಣ್ಣಿಗೆ ಸೇರಿ ಮುಂಗಾರಿನ ಮಳೆಯ ತೇವಾಂಶ ಪಡೆದು ಚಿಗುರಿ ಗಿಡವಾಗಿ ಅಕ್ಟೋಬರ್ - ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹಣ್ಣು ಬಿಡುವ ಸಸ್ಯ ಇದು ಇದೇ ರೀತಿ ಜೀರಿಗೆ ಮೆಣಸಿನ ಬೀಜ ಪ್ರಸಾರ ಕೂಡ ಆಗುತ್ತದೆ.  ...