Blog number 1803. ಕಳೆ ಗಿಡದಂತೆ ಪರಿಗಣಿಸಿದ ಕಾಕಿ ಹಣ್ಣಿನ ಗಿಡದಲ್ಲಿರುವ ಔಷದದ ಗುಣಗಳು ಹೆಚ್ಚು ಹೆಚ್ಚು ಜನರಿಗೆ ತಲುಪಲಿ.
https://youtube.com/shorts/J1S0ywS2JpM?feature=shared
#ಬೀಜ_ಪ್ರಸಾರಣದ_ವಿಸ್ಮಯ_ಜಗತ್ತು.
#ನನ್ನ_ಬೆಳಗಿನ_ವಾಕಿಂಗ್_ಪಾತಿನ_ಗಾರ್ಡನ್_ಪಾಟಲ್ಲಿ_ಕಾಕಿ_ಹಣ್ಣಿನ_ಗಿಡ
#ನಾವ್ಯಾರು_ನಟ್ಟಿ_ಬೆಳೆಸಿದ್ದಲ್ಲ.
#ಕಾಗೆ_ಅಥವ_ಇನ್ನಾವುದೋ_ಪಕ್ಷಿ_ಕಾಕಿ_ಹಣ್ಣು_ತಿಂದು_ಈ_ಪಾಟಿನಲ್ಲಿ_ವಿಸರ್ಜಿಸಿರಬೇಕು.
#ರೊಟ್ಟಿ_ಜಾರಿ_ತುಪ್ಪದ_ಪಾತ್ರೆಗೆ_ಬಿದ್ದಂತೆ_ಔಷದಿಯುಕ್ತ_ಸಸ್ಯ_ನಮ್ಮ_ಗಾರ್ಡನ್_ಪಾಟಿನಲ್ಲಿ.
ಕಾಕಿ ಹಣ್ಣು - ಕಾಕ ಮಾಚಿ -ಕಾಗೆಸೊಪ್ಪಿನ ಹಣ್ಣು ಎಂದು ಕರೆಯುವ ಈ ಡಾರ್ಕ್ ನೈಟ್ ಶೇಡ್ ಎಂದು ಇಂಗ್ಲೀಷಿನಲ್ಲಿ ಕೆರೆಯುವ ಮತ್ತು 61 ದೇಶಗಳಲ್ಲಿ ಕಳೆ ಸಸ್ಯ ಎಂದು ಘೋಷಿಸಿರುವ ಕಾಕಿ ಹಣ್ಣು ಬೇಲಿ ಸಾಲಿನ ಕಪ್ಪು ದ್ರಾಕ್ಷಿಯ ಮಿನಿಯೇಚರನಂತ ಸಿಹಿ ಹುಳಿಯ ಹಣ್ಣು ಮಲೆನಾಡಿನ ಮಕ್ಕಳಿಗೆ ಹೆಚ್ಚು ಪರಿಚಿತ.
ಗುಲಗುಂಜಿ ಗಾತ್ರದ ಕಪ್ಪು ಹಣ್ಣಿನಲ್ಲಿ 40 ಬೀಜಗಳಿದ್ದರು ಇದು ಅದಾಗಿಯೇ ಮಣ್ಣಿನಲ್ಲಿ ಬಿದ್ದು ಗಿಡವಾಗುವುದಿಲ್ಲ, ಈ ಬೀಜ ಕಾಗೆ ಇನ್ನಿತರ ಪಕ್ಷಿ ಹೊಟ್ಟೆ ಸೇರಿ ಅಲ್ಲಿ ಇದರ ಬೀಜ ಜೀರ್ಣಾಂಗದ ಮೂಲಕ ಹಾದು ಅದು ಮೊಳಕೆ ಒಡೆಯುವ ಹಂತಕ್ಕೆ ಬೇಕಾದ ಉಷ್ಣಾಂಶ ಪಡೆದು ಹಕ್ಕಿಯ ವಿಸರ್ಜನೆ ಮಣ್ಣಿಗೆ ಸೇರಿ ಮುಂಗಾರಿನ ಮಳೆಯ ತೇವಾಂಶ ಪಡೆದು ಚಿಗುರಿ ಗಿಡವಾಗಿ ಅಕ್ಟೋಬರ್ - ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹಣ್ಣು ಬಿಡುವ ಸಸ್ಯ ಇದುಇದೇ ರೀತಿ ಜೀರಿಗೆ ಮೆಣಸಿನ ಬೀಜ ಪ್ರಸಾರ ಕೂಡ ಆಗುತ್ತದೆ.
ತೆಂಗಿನ ಮರ ಎತ್ತರ ಎತ್ತರಕ್ಕೆ ಬೆಳೆದು ಅದರ ಕಾಯಿ ಉದುರಿ ಪುಟಿದು ದೂರ ದೂರಕ್ಕೆ ತಲುಪಿ ಅಮೇರಿಕಾದ ಸಮುದ್ರ ತೀರ ದಾಟಿ ಆಫ್ರಿಕಾ ಖಂಡ ದಾಟಿ ಭಾರತದ ಪಶ್ಚಿಮ ಕರಾವಳಿ ತಲುಪಿದ ಕಥೆಗೆ ವೈಜ್ಞಾನಿಕ ಸಾಕ್ಷಿ - ಸಬೂತುಗಳಿದೆ.
ಕಾಗೆಯಿಂದಲೇ ಈ ಕಾಕಿ ಹಣ್ಣು ಬೀಜ ಪ್ರಸಾರ ಆಗುವುದರಿಂದ ಇದಕ್ಕೆ ಕಾಗೆ ಸೊಪ್ಪಿನ ಹಣ್ಣು, ಕಾಕ ಮಾಚಿ ಮತ್ತು ಕಾಕಿ ಹಣ್ಣು ಅಂತ ಹೆಸರು ಬಂತಾ? ಗೊತ್ತಿಲ್ಲ ....
ಈ ಗಿಡ ಮತ್ತು ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಬಿ ಯಥೇಚ್ಛವಾಗಿದೆ, ರೋಗ ನಿರೋಧಕ ಶಕ್ತಿ ವಿಪುಲವಾಗಿದೆ, ಶೀಥ - ಕಫ - ಜ್ವರ ಗುಣ ಪಡಿಸುವ ಔಷದಿಯುಕ್ತ ಈ ಸಸ್ಯದ ಎಲೆಯ ತಂಬುಳಿ ಮಲಬದ್ದತೆ ನಿವಾರಣೆ ಮಾಡುತ್ತದೆ.
ಕಾಕಿ ಹಣ್ಣಿನ ಎಲೆ ಎಣ್ಣೆಯಲ್ಲಿ ಕುದಿಸಿ ಚರ್ಮದ ಮೇಲೆ ಲೇಪಿಸಿದರೆ ಚರ್ಮ ರೋಗ ನಿವಾರಣೆ ಆಗುತ್ತದೆ.
ಜೇನಿನ ಜೊತೆ ಬೆರೆಸಿ ಸೇವಿಸಿದರೆ ರಕ್ತ ಸ್ರಾವ ನಿಯಂತ್ರಣ ಆಗಲಿದೆ.
ಉರಿ ಮೂತ್ರ - ಮೂಲ ವ್ಯಾದಿ ಮತ್ತು ಬಾಯಿ ಹುಣ್ಣು ಗುಣಪಡಿಸಲು ಕಾಕಿ ಹಣ್ಣಿನ ಎಲೆಗಳು ರಾಮ ಬಾಣವಾಗಿ ಭಾರತೀಯ ಆಯುರ್ವೇದದಲ್ಲಿ ಬಳಸುತ್ತಾರೆ.
Comments
Post a Comment