Skip to main content

Blog number 1797. ಮುಂಬೈನ ಪ್ರತಿಷ್ಠಿತ ಕನ್ನಡ ಕಲಾ ಕೇಂದ್ರದ ಸತತ ಎರಡನೆ ಅವದಿ ಅಧ್ಯಕ್ಷರಾಗಿ ಯಶಸ್ವಿಯಾಗಿ 64ನೇ ಕನ್ನಡ ನಾಟಕೋತ್ಸವ ನಡೆಸುತ್ತಿರುವ ಟಿ.ಆರ್.ಮದುಸೂದನ್ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದವರೆಂಬುದೇ ನಮಗೆಲ್ಲ ಹೆಮ್ಮೆಯ ವಿಷಯ.

#ಮುಂಬೈನ_ಪ್ರತಿಷ್ಟಿತ_ಕನ್ನಡ_ಕಲಾ_ಕೇಂದ್ರದ_ಅಧ್ಯಕ್ಷರು_ಸಾಗರದ_ಟಿಆರ್_ಮದುಸೂದನ್

#ಕನ್ನಡ_ಕಲಾ_ಕೇಂದ್ರ_ಅಸ್ತಿತ್ವಕ್ಕೆ_ಬಂದಿದ್ದು_1954ರಲ್ಲಿ

#ಮೊದಲ_ನಾಟಕೋತ್ಸವ_ಪ್ರಾರಂಭ_ಆಗಿದ್ದು_1964ರಲ್ಲಿ

#ಈ_ವರ್ಷದ_ನಾಟಕೋತ್ಸವ_64ನೇ_ವರ್ಷದ್ದು.

#ಈ_ವರ್ಷದ_ಕರ್ನಾಟಕ_ಸುವರ್ಣ_ಮಹೋತ್ಸವದಲ್ಲಿ_ಮುಂಬೈನ_ಕನ್ನಡ_ಕಲಾ_ಕೇಂದ್ರಕ್ಕೆ_ಮತ್ತು_ಅಧ್ಯಕ್ಷ_ಮದುಸೂದನರಿಗೆ
#ರಾಜ್ಯೋತ್ಸವ_ಪ್ರಶಸ್ತಿ_ರಾಜ್ಯ_ಸರ್ಕಾರ_ಘೋಷಿಸಬೇಕು.
   ಮುಂಬೈ ಕನ್ನಡ ಕಲಾ ಕೇಂದ್ರದ ಬಗ್ಗೆ ವಿಸ್ತಾರವಾಗಿ ಇರುವ ಮಾಹಿತಿ ದಯಾನಂದ ಸಾಲ್ಯಾನರು #ವಾರ್ತಾಭಾರತಿ ದಿನಪತ್ರಿಕೆಯ ಮುಂಬೈ ಸ್ವಗತ ಕಾಲಂನಲ್ಲಿದೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಬಹುದು 
https://www.varthabharati.in/article/2021_06_25/296195.
   ಇಂತಹ ಪ್ರತಿಷ್ಟಿತ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾಗಿ ಎರಡನೆ ಅವಧಿಯ ಆಡಳಿತ ನಡೆಸುತ್ತಿರುವ ಟಿ.ಆರ್. ಮದುಸೂದನ್ ಇವರ ಇನ್ಷಿಯಲ್ ಟಿ ಆರ್ ಅಂದರೆ ತೀರ್ಥಹಳ್ಳಿ ರಾಮಕೃಷ್ಣ ಇವರ ತಂದೆ ಇವರೂ ಕಲಾವಿದರು ಸಾಗರದ ಮುನ್ಸಿಪಲ್ ಸಂಸ್ಥೆ ಉದ್ಯೋಗಿ ಆಗಿದ್ದರೂ ಪ್ರತಿ ವರ್ಷ ನವರಾತ್ರಿಯಲ್ಲಿ ತೀರ್ಥಹಳ್ಳಿಯಲ್ಲಿ ಹುಲಿ ವೇಶ ಸೇವೆ ತಪ್ಪಿಸಿದವರಲ್ಲ, ಸಾಗರದ ಮುನ್ಸಿಪಲ್ ಕಛೇರಿಯ ನೌಕರರಿಗೆ ಸದಾ ಸಹಕಾರ ಸಹಾಯ ನೀಡಿ ಜನಪ್ರಿಯರಾಗಿದ್ದರು.
   ಇವರ ಪುತ್ರ ಟಿ.ಆರ್. ಮದುಸೂದನ್ ಸವಿಸಿದ ಜೀವನದ ಹಾದಿ ಕಲ್ಲು ಮುಳ್ಳಿನದ್ದು, ಭದ್ರಾವತಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮ ಉನ್ನತ ಶ್ರೇಣಿಯಲ್ಲಿ ಮುಗಿಸಿ ಪ್ರತಿಷ್ಟಿತ ಮಣಿಪಾಲ್ ಸಂಸ್ಥೆಯಲ್ಲಿ ಉದ್ಯೋಗ ಮಾಡಿ ನಂತರ ಮುಂಬೈ ಟಾಟಾ ಕಂಪೆನಿಯಲ್ಲಿ ಉದ್ಯೋಗ ಮಾಡಿ ಈಗ ಸ್ವತಂತ್ರವಾಗಿ ಇದರದ್ದೇ ಖಾಸಾಗಿ ಬಿಲ್ಡರ್ ಸಂಸ್ಥೆ ಸ್ಥಾಪಿಸಿ ಮುಂಬೈನಲ್ಲಿ ಪ್ರಸಿಧ್ಧಿ ಪಡೆದಿದ್ದಾರೆ.
  ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಮದುಸೂದನ್ ಬಂಗಾರದ ಮನುಷ್ಯ ಚಲನಚಿತ್ರದ ಡಾಕ್ಟರ್ ರಾಜ್ ಕುಮಾರ್ ಇದ್ದಂತೆ ಅವರ ಜೀವನ.
 ಸಾಗರದ ಉಡುಪಿ ಮೆಡಿಕಲ್ಸ್ ನ ಚಂದ್ರು ಅವರ ತಂದೆ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣ ಮತ್ತು ಮದುಸೂದನರ ತಂದೆ ರಾಮಕೃಷ್ಣಣ್ಣ ಕಸಿನ್ ಬ್ರದರ್ಸ್.
   ಇವರು ಯಶಸ್ವಿಯಾಗಿ ಒಂದು ಅವಧಿಯ ಮುಂಬೈನ ಪ್ರತಿಷ್ಟಿತ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾಗಿ ಈಗ ಎರಡನೆ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ ಅಂದರೆ ಅರ್ಥವಾದೀತು ಅವರ ಸಾಧನೆ.
  1954 ರಲ್ಲಿ ಅಸ್ತಿತ್ವಕ್ಕೆ ಬಂದ ಮುಂಬೈ ಕನ್ನಡ ಕಲಾ ಕೇಂದ್ರ ಭಾಷಾವಾರು ಪ್ರಾಂತ್ಯ ವಿಂಗಡನೆ ಕಾಲದಲ್ಲಿ ಮುಂಬೈ ಸರ್ಕಾರ ಈ ಕನ್ನಡ ಕಲಾ ಕೇಂದ್ರದಲ್ಲಿ ಕನ್ನಡ ನಾಟಕ ಪ್ರದರ್ಶನ - ನಾಟಕೋತ್ಸವ ನಿಷೇದ ಮಾಡಿತ್ತು.
  1964 ರಲ್ಲಿ ಈ ಸಂಘಟನೆ ಸರ್ಕಾರದ ನೀತಿಗೆ ಸೆಡ್ಡು ಹೊಡೆದು ಮೊದಲ ನಾಟಕೋತ್ಸವ 12 - ಡಿಸೆಂಬರ್ -1964 ರಿಂದ 26 - ಡಿಸೆಂಬರ್ -1964 ರವರೆಗೆ ಯಶಸ್ವಿಯಾಗಿ ನಡೆಸಿತು, ಈ ಸಂಘಟನೆ ಅತಿರಥ ಮಹಾರಥರಾದ ಕನ್ನಡಿಗರು ಮುನ್ನಡೆಸಿದ್ದಾರೆ ಇಲ್ಲಿ ಜಾತಿ ಅಂತಸ್ತುಗಳಿಲ್ಲದೆ ನಮ್ಮ ಮಾತೃ ಭಾಷೆ ಕನ್ನಡದಿಂದ ಒಂದಾದ ಸಂಸ್ಥೆ ಆಗಿದೆ.
 ಈ ವರ್ಷದ ನಾಟಕೋತ್ಸವ 64 ನೆಯದ್ದು ಇದರ ಅಧ್ಯಕ್ಷರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಪಟ್ಟಣದ ಟಿ.ಆರ್. ಮದುಸೂದನ್ ಎಂಬುದು ಹೆಮ್ಮೆಯ ಸಂಗತಿ ಆಗಿದೆ.
  ಈ ವರ್ಷ ಕರ್ನಾಟಕ ನಾಮಕರಣಕ್ಕೆ 50 ನೇ ವಾರ್ಷಿಕೋತ್ಸವ, 1972 ರಲ್ಲಿ ಕರ್ನಾಟಕ ನಾಮಕರಣದ ಫಲಕ ವಿಧಾನ ಸೌದದ ಎದರು ಅನಾವರಣ ಮಾಡಿದವರು ಆಗಿನ ಮುಖ್ಯಮಂತ್ರಿ ದೇವರಾಜ ಅರಸರು ಮತ್ತು ನಮ್ಮ ಆನಂದಪುರ೦ನವರೇ ಆದ ಆಗಿನ ವಿದ್ಯಾಮಂತ್ರಿ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್.
   ಸುವರ್ಣ ಕರ್ನಾಟಕದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಪ್ರತಿಷ್ಠಿತ ಕನ್ನಡ ಕಲಾ ಕೇಂದ್ರದ ಸಾಧನೆಗಾಗಿ ಈ ಕಲಾ ಕೇಂದ್ರಕ್ಕೆ ಮತ್ತು ಇದರ ಎರಡು ಅವಧಿಗೆ ಅಧ್ಯಕ್ಷರಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಪಟ್ಟಣದ ಪ್ರತಿಭಾವಂತ ಕನ್ನಡಿನ ಟಿ.ಆರ್.ಮದುಸೂದನ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ವಿನಂತಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...