Skip to main content

Blog number 1804. ಮೈನೂರು ರಾಜ್ಯ ಎನ್ನುವ ಹೆಸರನ್ನು ಕರ್ನಾಟಕ ರಾಜ್ಯ ಎಂದು ನಾಮಕರಣವನ್ನು 1 ನವೆಂಬರ್ 1973ರಂದು ವಿಧಾನ ಸೌಧದ ಎದುರು ಅಧಿಕೃತವಾಗಿ ಅನಾವರಣ ಮಾಡಿದ ಕನ್ನಡ ರಾಜ್ಯೋತ್ಸವಕ್ಕೆ ಈಗ ಸುವರ್ಣ ಮಹೋತ್ಸವದ ಚಿನ್ನದ ಲೇಪನ.

#ಕನ್ನಡ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವ_ವರ್ಷ_ಪೂರ್ತಿ_ಆಚರಣೆ.

#ಭೂಗೋಳಿಕವಾಗಿ_ರಾಜ್ಯದ_ಮಧ್ಯದಲ್ಲಿರುವ_ಶಿವಮೊಗ್ಗ_ಜಿಲ್ಲೆಗೆ_ವಿಶೇಷ_ಸಂಬಂದವಿದೆ

#ಕರ್ನಾಟಕ_ರಾಜ್ಯ_ನಾಮಕರಣ_1973_ನವೆಂಬರ್_1_ರಂದು_ವಿಧಾನ_ಸೌದದ_ಎದುರು_ಅನಾವರಣ.

#ಅನಾವರಣ_ಮಾಡಿದವರು_ಆಗಿನ_ಮುಖ್ಯಮಂತ್ರಿ_ದೇವರಾಜ_ಅರಸರು

#ಜೊತೆಯಲ್ಲಿದ್ದ_ಮಂತ್ರಿಗಳು_ಶಿವಮೊಗ್ಗ_ಜಿಲ್ಲೆಯ_ಬದರಿನಾರಾಯಣ_ಅಯ್ಯಂಗಾರ್_ಮತ್ತು_ಬಸಲಿಂಗಪ್ಪನವರು.

#ಕರ್ನಾಟಕ_ನಾಮಕರಣಕ್ಕೆ_ಕಾರಣವಾದ_ಮಂತ್ರಿ_ಖಾತೆ_ಹೊಂದಿದ್ದ_ಬದರಿನಾರಾಯಣ_ಅಯ್ಯಂಗಾರ್

#ನಮ್ಮ_ಊರು_ಆನಂದಪುರಂದವರು.

#ಕನ್ನಡಿಗರು_ತಮ್ಮ_ಮಕ್ಕಳಿಗೆ_ಕನಿಷ್ಟ_ಕನ್ನಡ_ಓದಿ_ಮರೆಯಲು_ಕಲಿಸಲಿ

#ಕನ್ನಡದ_ಬಗ್ಗೆ_ರೋಷಾವೇಷದ_ಉದ್ದುದ್ದ_ಬಾಷಣ_ಮಾಡುವ_ಕನ್ನಡದ_
#ಹೋರಾಟಗಾರರೆ_ನಿಮ್ಮ_ಮಕ್ಕಳಿಗೆ_ಕನಿಷ್ಟ_ಕನ್ನಡ_ಪ್ರಾಥಮಿಕ_ಶಾಲಾ_ಶಿಕ್ಷಣ_ಕೊಡಿಸಿದ್ದೀರಾ? 

#ಹೀಗಾದರೆ_ಕನ್ನಡ_ಭಾಷೆ_ಉಳಿದೀತೆ?.

#ಕನ್ನಡ_ರಾಜ್ಯೋತ್ಸವ_ಸುವರ್ಣ_ಮಹೋತ್ಸವ_2023_2024_ಸಕಾ೯ರಿ_ಕನ್ನಡ_ಪ್ರಾಥಮಿಕ_ಶಾಲಾ_ಶಿಕ್ಷಣದ_ಅಭಿಯಾನವಾಗಲಿ.

#ಕನ್ನಡದಲ್ಲೇ_ಪ್ರಾಥಮಿಕ_ಶಿಕ್ಷಣ_ಕಡ್ಡಾಯ_ನೀಡಿದ_ಇಂಗ್ಲೀಷ್_ಮಾಧ್ಯಮ_ಶಾಲೆಗಳಿಗೆ
#ಅವರಿಗೆ_ಸಹಕರಿಸುವ_ತಾಲ್ಲೂಕು_ಶಿಕ್ಷಣ_ಇಲಾಖೆಗಳಿಗೆ_ಎಚ್ಚರಿಸುವ_ಕೆಲಸ_ಕನ್ನಡ_ಸಂಘ_ಸಂಸ್ಥೆಗಳು_ಮಾಡಲಿ.


     ನನ್ನ ಬಹಳಷ್ಟು ಗೆಳೆಯರು ಕನ್ನಡ ಅಭಿಮಾನಿಗಳು, ಕನ್ನಡ ಕಡ್ಡಾಯ ಅಂತೆಲ್ಲ ಹೋರಾಟ ಮಾಡುವ ವಿಚಾರವಂತರು, ಸಾಹಿತಿಗಳು, ಪತ್ರಕರ್ತರು, ಲೇಖಕರು, ಕನ್ನಡ ಶಾಲೆ ಶಿಕ್ಷಕರು ಅವರೆಲ್ಲರ ಪ್ರಭಾವ ನನ್ನ ಮೇಲೆ ಇದ್ದಿದ್ದರಿಂದ ನನ್ನ ಮಕ್ಕಳನ್ನು ಸರ್ಕಾರಿ ಅಂಗನವಾಡಿಯಿಂದ ಪಿಯು ತನಕ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ಓದಿಸಿದೆ.
   ಇದರಿಂದ ಅವರೆಲ್ಲರಿಗೆ ಕನ್ನಡ ಸಾಹಿತ್ಯದ ಪರಿಚಯ ಆಯಿತು ಜೊತೆ ಜೊತೆಗೆ ಇಂಗ್ಲೀಷ್ - ಹಿಂದಿ ದಿನಪತ್ರಿಕೆ ಓದುವ ಹವ್ಯಾಸ ಮತ್ತು ಟೀವಿಯಲ್ಲಿ ಇಂಗ್ಲೀಷ್ ಹಿಂದಿ ಭಾಷೆ ವಾರ್ತೆ - ಸಿನಿಮಾ ನೋಡಲು ಹುರಿದುಂಬಿಸಿದ್ದರಿಂದ ಅವರೆಲ್ಲ ಹಿಂದಿ - ಇಂಗ್ಲೀಷ್ ಭಾಷೆಯಲ್ಲಿ ಮಾತಾಡಲು ವ್ಯವಹರಿಸಲು ಸುಲಭವಾಯಿತು.
   ಪ್ರೌಡ ಶಾಲಾ ಶಿಕ್ಷಣದ ಸಂದರ್ಭದಲ್ಲಿ ನಮ್ಮ ಊರಿನ ಕ್ರೈಸ್ತ ಸಂಸ್ಥೆಗೆ ಸೇವೆಗೆ ಬಂದಿದ್ದ ಕನ್ಯಾಸ್ತ್ರಿಗಳಾಗಿದ್ದ ಲೀಲಾ ಸಿಸ್ಟರ್ ಅವರಿಂದ ಇವರಿಗೆಲ್ಲ ಇಂಗ್ಲೀಷ್ ಸ್ಪೀಕಿಂಗ್ - ಗ್ರಾಮರ್ ತರಬೇತಿ ಕೊಡಿಸಿದ್ದೆ.
   ಇವರೆಲ್ಲ ನಾನು ಬರೆಯುವ ಕನ್ನಡದ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದುತ್ತಾರೆ ವಿಮರ್ಷಿಸುತ್ತಾರೆಂಬುದು ನನಗೆ ಸಮದಾನ 
   ಆದರೆ ಕನ್ನಡದ ಹೋರಾಟಗಾರ ಗೆಳೆಯರು ಖಾಸಾಗಿ ಕಾನ್ವೆಂಟ್ ನಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಿದರು... ಅಲ್ಲ ನಿಮ್ಮೆಲ್ಲ ಹೋರಾಟ ಕನ್ನಡದ ಅಭಿಮಾನ ಇದೇನಾ? ಅಂದಿದ್ದಕ್ಕೆ ಕನ್ನಡ ಮಾಧ್ಯಮ - ಸರ್ಕಾರಿ ಶಾಲೆಯಲ್ಲಿ ಎಕ್ಸ್ ಪೋಜರ್ ಸಿಗೋದಿಲ್ಲ ಅಂತಾರೆ.
    ಇದರಿಂದ  ಒಂದು ಅನುಕೂಲ ಆಗಿದೆ ನನ್ನ ಮಕ್ಕಳು ಕನ್ನಡದ ಸಾಹಿತ್ಯ ಎಲ್ಲಾ ಓದುತ್ತಾರೆ ನಾನು ಬರೆದ ಪುಸ್ತಕ ಲೇಖನ ವಿಮರ್ಶೆ ಮಾಡುತ್ತಾರೆ, ಆದರೆ ನನ್ನ ಕನ್ನಡ ಅಭಿಮಾನಿ ಇಂಗ್ಲೀಷ್ ಕಾರ್ಯಕಾರಿಣಿ ಮಿತ್ರರ ಮಕ್ಕಳು ಕನ್ನಡ ಸಾಹಿತ್ಯನೂ ಓದುವುದಿಲ್ಲ, ಇಂಗ್ಲೀಷ್ ಸಾಹಿತ್ಯವನ್ನು ಓದುವುದಿಲ್ಲ ಅಷ್ಟೆ ಅಲ್ಲ ಅವರ ಅಪ್ಪಂದಿರ ಪುಸ್ತಕ ಬರಹವೂ ಓದುವುದಿಲ್ಲ!!.
  ಹೋರಾಟ ಬಾಯಲ್ಲಿ ಮಾತ್ರ ಮಾಡುವ ಆದರೆ ಕೃತಿಯಲ್ಲಿ ಬೇರೆ ಮಾಡುವ ಓರಾಟಗಾರರ ಬಗ್ಗೆ ಬರೆಯಲೇ ಬೇಕು, ನಮ್ಮ ಕನ್ನಡ ಸಕಾ೯ರಿ ಶಾಲೆ ಶಿಕ್ಷಕರು ಕೂಡ ಅವರೇ ಪಾಠ ಮಾಡುವ ಶಾಲೆಯಲ್ಲಿ ಅವರ ಮಕ್ಕಳನ್ನೆ ಸೇರಿಸುವುದಿಲ್ಲ, ಇದೆಲ್ಲದರಿಂದ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚುತ್ತಿದೆ.
    ನಾನು ನನ್ನ ಊರಿನ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷನಾಗಿದ್ದೆ(ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ) ಆಗ ನನ್ನ ಇಬ್ಬರು ಮಕ್ಕಳು ಮತ್ತು ನನ್ನ ಅಣ್ಣನ ಇಬ್ಬರು ಮಕ್ಕಳನ್ನು ಮನೆ ಹತ್ತಿರದ ಈ ಶಾಲೆಗೆ ಸೇರಿಸಿದ್ದೆ, ಶಾಲಾ ಟೀಚರ್ ಗಳು ನನ್ನ ಪತ್ನಿ ಹತ್ತಿರ "ಹೋಗಿ ಹೋಗಿ ನಿಮ್ಮ ಯಜಮಾನರು ಬುದ್ದವಂತ ಮಕ್ಕಳನ್ನು ಇಲ್ಲಿ ಸೇರಿಸಿ ಅವರ ಭವಿಷ್ಯ ಹಾಳು ಮಾಡುತ್ತಿದ್ದಾರಂತ" ಅನುಕಂಪ ವ್ಯಕ್ತಪಡಿಸಿದ್ದರು.
   ಸರ್ಕಾರಿ  ಶಾಲೆಯಲ್ಲಿ ಶಿಕ್ಷಕ ವೃತ್ತಿ ಪಡೆದಿರುವ ಆದರೆ ತಮ್ಮ ಮಕ್ಕಳನ್ನು ಸದರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರೆ ದಡ್ಡರಾಗುತ್ತಾರೆ, ಮಕ್ಕಳ ಭವಿಷ್ಯ ಹಾಳು ಅನ್ನುವ ಅವರಿಗೆ  ನಾನು ಕೇಳುವುದು "ನೀವು ಮಾಡಿದ ಅಡುಗೆ ನಿಮ್ಮ ಮಕ್ಕಳಿಗೆ ಉಣಬಡಿಸಲಾಗದಷ್ಟು ಕಳಪೆಯಾ?..."  ಮನೆ ಹತ್ತಿರದ ಸರ್ಕಾರಿ ಶಾಲೆಗೆ ಸಲೀಸಾಗಿ ಮಕ್ಕಳನ್ನು ಓದಲು ಕಲಿಸದೆ 20-30 ಕಿ.ಮಿ.ದೂರದ ಕಾನ್ವೆಂಟ್ ಗೆ ಮಕ್ಕಳನ್ನು ವ್ಯಾನಿನಲ್ಲಿ ಕುರಿ ತುಂಬಿದಂತೆ ತುಂಬಿ ಕಳಿಸುವ ನಮ್ಮ ಜನರಿಗೆ ಏನಾಗಿದೆ? ಹೀಗಾದರೆ ಕನ್ನಡ ಭಾಷೆ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎನ್ನುವುದು ಎಲ್ಲಿದೆ?
   ಇಂತಹ ಮಾತೃ ಬಾಷಾ ನಿರಾಸಕ್ತಿ ತಮಿಳು, ಮಲೆಯಾಳ, ತೆಲಗು ಮತ್ತು ಮರಾಠಿ ಬಾಷಾ ಕುಟುಂಬದಲ್ಲಿ ಕಂಡುಬರುವುದಿಲ್ಲ ಅವರು ವಿದೇಶದಲ್ಲಿದ್ದರು ಮಾತೃ ಬಾಷೆಯಲ್ಲಿಯೇ ಅಕ್ಷರಬ್ಯಾಸ ಮಾಡಿಸುತ್ತಾರೆ.
   1997ರಲ್ಲಿ ಸುವರ್ಣ ಸ್ವಾತಂತ್ಯ ಆಚರಣೆಯ ಸ್ಮರಣೆಗೆ ಸರ್ಕಾರ ನಮ್ಮ ಜಿಲ್ಲೆಯಲ್ಲಿ ಪ್ರತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒ0ದು ಸರ್ಕಾರಿ ಶಾಲೆ ಅಂತೆ 27 ಹೊಸ ಶಾಲೆ ಪ್ರಾರಂಬಿಸಲು ಅನುಮತಿ ನೀಡಿತು ಆದರೆ ಬಹಳಷ್ಟು ಸದಸ್ಯರು ನಿರಾಸಕ್ತಿ ತೋರಿದರು ಆದರೆ ನಾನು ಅವರ ಅನುದಾನವೂ ಬಳಸಿ ನನ್ನ ಕ್ಷೇತ್ರದಲ್ಲಿ 10 ಕ್ಕೂ ಹೆಚ್ಚು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಪ್ರಾರಂಬಿಸಿದೆ ಈಗ ಇದರಲ್ಲಿ ಎರೆಡು ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ರದ್ದಾಗಿದೆ ಕಾರಣ ಕಾನ್ವೆಂಟ್ ಮೋಹ.
  ಕನ್ನಡ ಹೋರಾಟಗಾರರು ಈ ರೀತಿ ದ್ವಿಮುಖ ನೀತಿಗಿಂತ ಎಲ್ಲರೂ ಕನ್ನಡ ಬಾಷೆ ಒದುವುದು ಬರೆಯವುದು ಬೇಡ ನಮ್ಮದು ರಾಜಕಾರಣಕ್ಕೆ ಸೀಮಿತ  ಕನ್ನಡದ ಹೋರಾಟ ಅಂತ ಹೇಳಿಕೊಳ್ಳುವುದು ಒಳಿತು.
  ಇಲ್ಲಿ ಕನ್ನಡದ ಬಗ್ಗೆ ಪ್ರತಿಕ್ರಿಯಿಸುವವರು ತಮ್ಮ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸುತ್ತೀರಿ ಎಂಬುದು ತಿಳಿಸಬಹುದಾ?.
  ನಮ್ಮ ಹಳ್ಳಿಯಲ್ಲಿ ಧರ್ಮಸ್ಥಳ ಸಂಘದವರು ಆಗಾಗ್ಗ ಮದ್ಯ ವರ್ಜನ ಶಿಭಿರ ಮಾಡುತ್ತಾರೆ ಕಾಯ೯ಕ್ರಮ ಆಯೋಜಿಸಿದವರು ಮತ್ತು ಫಲಾನುಭವಿಗಳು ನನ್ನ ಶಿಷ್ಯರೇ ಆಗಿರುತ್ತಾರೆ, ಉದ್ಘಾಟನೆ ಮಾಡಿಸುವುದು ಶ್ರೀಮಂತರು ಪ್ರಸಿದ್ದರಾದವರಿ೦ದ (ಅವರೂ ನಿತ್ಯ ಮಧ್ಯಪಾನ ಮಾಡುವವರೆ) ಇದರಿಂದ ನೈತಿಕ ಪಾಠ ಏನು ಕಲಿಯಬಹುದು?.
   ಇದರ ಮದ್ಯದಲ್ಲಿ ಯಾರೋ ಒಬ್ಬರು ಅನ್ಯ ರಾಜ್ಯದ ಬ್ಯಾಂಕ್ ಸಿಬ್ಬಂದಿಗೆ ಕನ್ನಡದಲ್ಲಿ ಚೆಕ್ ಬರೆಯುವುದು ಅದನ್ನೇ ದೊಡ್ಡ ರಾದ್ಧಾಂತ ಮಾಡುವುದು, ಅದನ್ನು ಮಾಧ್ಯಮದವರು ಬೂತ ಕನ್ನಡಿಯಲ್ಲಿ ತೋರಿಸುವುದು ಮಾಡುತ್ತಾರೆ ಅಥವ ಹೊಟ್ಟೆಪಾಡಿಗಾಗಿ ಬೇರೆ ರಾಜ್ಯದಿಂದ ಬಂದ ಹೋಟೆಲ್ ಇತ್ಯಾದಿ ಸ್ಥಳದಲ್ಲಿ ಕೂಲಿ ಮಾಡುವ ಕಾರ್ಮಿಕರಿಗೆ ಕನ್ನಡದಲ್ಲಿ ಮಾತಾಡೆಂದು ದಮಕಿ ಹಾಕುತ್ತಾರೆ ಹಲ್ಲೆ ಮಾಡುತ್ತಾರೆ.
   ಸ೦ಸತ್ ನಲ್ಲಿ ಕನ್ನಡದಲ್ಲಿ ಮೊದಲ ಭಾಷಣ ಮಾಡಿದ ದಾಖಲೆಯ ನಮ್ಮ ಜಿಲ್ಲೆಯ ಸಂಸದರಾಗಿದ್ದ ನಂತರ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು.
 ರಾಷ್ಟ್ರಕವಿಗಳಾದ ನಮ್ಮ ಜಿಲ್ಲೆಯ ಕುವೆಂಪು ಕರ್ನಾಟಕ ನಾಮಕರಣಕ್ಕೆ ಕಾರಣರಾದ ಬದರಿನಾರಾಯಣ ಅಯ್ಯಂಗಾರ್ ಎಲ್ಲರೂ ಈ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಸ್ಮರಿಸೋಣ.
  ಜೊತೆಗೆ ಈ ವಿಶೇಷ ವರ್ಷ ಆಚರಣೆಗೆ ಮೆರಗು ನೀಡಿರುವುದು  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿಸಿದ ಮಾಜಿ ಮುಖ್ಯಮಂತ್ರಿ ಯಡೂರಪ್ಪ (ಇವರ ಹೆಸರನ್ನೇ ರಾಜ್ಯ ಸರ್ಕಾರ ಅನುಮೋದಿಸಿದ್ದರೂ ನಿರಾಕರಿಸಿದರು) ಮತ್ತು ಮೈಸೂರು ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿಗೆ ಕುವೆಂಪು ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿಸಲು ಕಾರಣರಾದ ಖ್ಯಾತ ಪತ್ರಕರ್ತರಾದ ಡಿ.ಪಿ. ಸತೀಶ್ ಎಂಬುದು ಮರೆಯದಿರೋಣ.
  2023ರ ಕನ್ನಡ ರಾಜ್ಯೋತ್ಸವ ಸಕಾ೯ರಿ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣದ ಅಭಿಯಾನ ಆಗಲಿ, ಇಂಗ್ಲೀಷ್ ಮಾದ್ಯಮದ ಶಾಲೆಯಲ್ಲಿ ಕೂಡ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ನೀಡಬೇಕೆಂಬ ಸರ್ಕಾರದ ಆದೇಶ ಇದೆ ಆದರೆ ಪಾಲಿಸುವುದಿಲ್ಲ ಮತ್ತು ಅಂತಹ ಶಾಲೆಯಲ್ಲಿ ಕಲಿಯುವ ಮಗು ಕನ್ನಡ ಶಬ್ದ ಉಚ್ಚರಿಸಿದರೆ ದಂಡ ಹಾಕುತ್ತಾರೆ ಇದನ್ನು ಹೆಮ್ಮೆಯಿಂದ ಹೊಗಳುವ ಮುಗ್ಧ ಕನ್ನಡದ ಪೋಷಕರು ಇದ್ದಾರೆ ಎನ್ನುವುದು ದುರಂತ.
   ಅಂತಹ ಶಾಲೆಗಳಿಗೆ ಮತ್ತು ಅವರಿಗೆ ಸಹಕರಿಸುವ ತಾಲ್ಲೂಕು ಶಿಕ್ಷಣ ಇಲಾಖೆಗಳಿಗೆ ಸ್ಥಳಿಯ ಕನ್ನಡ ಸಂಘ ಸಂಸ್ಥೆಗಳು ಎಚ್ಚರಿಸುವ ಕನ್ನಡದ ಕೆಲಸ ಮಾಡಲಿ ಇದರಿಂದ ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವ ಆಚರಣೆಗೆ ವಿಶೇಷ ಕೊಡುಗೆ ನೀಡಿದಂತೆ ಮತ್ತು ಅಥ೯ಪೂರ್ಣವಾಗಿ ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸಿದಂತೆ ಆಗಲಿ ಎಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ