https://youtu.be/srTvNOaJa3g?feature=shared
#ಯಡೇಹಳ್ಳಿ_ರಹಮತ್_ಬೇಗ್_ಯಾನೆ_ಪಾಪತ್
#ತಾನು_ಮಾಡುವ_ಕೆಲಸದಲ್ಲಿ_ತಲ್ಲೀನನಾಗುವ_ನಮ್ಮ_ಊರಿನ_ಯುವಕ.
#ಪಡೆಯುವ_ಹಣಕ್ಕೆ_ಮೋಸ_ಮಾಡದ_ಕೆಲಸ
#ಕಳ್ಳತನ_ಸುಳ್ಳುತನ_ಇಲ್ಲದ_ಪ್ರಾಮಾಣಿಕ
#ಕಳೆದ_ಒಂದು_ವರ್ಷದಿಂದ_ನಮ್ಮ_ಸಂಸ್ಥೆಯ_ಎಲ್ಲಾ_ಪೇಯಿಂಟಿಗ್_ಕೆಲಸ_ಈ_ಯುವಕನಿಗೆ.
ನಮ್ಮ ಊರಲ್ಲಿನ ಗೇರುಬೀಸು ರಸ್ತೆಯ ನಮ್ಮ ಜಮೀನಿನ ಎದುರಿನಲ್ಲಿ ಇರುವ ರಹಮತ್ ಬೇಗ್ ನನ್ನು ಅತಿ ಚಿಕ್ಕವನಿಂದ ನೋಡಿದ್ದೇನೆ.
ಒಂದೆರೆಡು ವರ್ಷ ಶಾಲೆಗೆ ಹೋಗಿದ್ದ ನಂತರ ಇವರ ಅಪ್ಪ ಸಾಕಿದ್ದ ಕುರಿ ಪಾಲನೆ ಇವನ ಜವಾಬ್ದಾರಿ ಆದ್ದರಿಂದ ವಿದ್ಯಾಭ್ಯಾಸ ಮೊಟುಕಾಯಿತು.
ನಂತರ ಅಂಗಡಿ ಕೆಲಸ, ದೂರದ ಭಟ್ಕಳದಲ್ಲಿ ಕೆಲಸ ನಂತರ ಕುಂದಾಪುರದಲ್ಲಿ ಹೋಟೆಲ್ ಕೆಲಸ, ಗುಜರಿ ವ್ಯಾಪಾರ, ವೆಲ್ಡಿಂಗ್ ಕೆಲಸ, ವೈರಿಂಗ್ ಕೆಲಸ, ಲಗೇಜ್ ರಿಕ್ಷಾ ಚಾಲಕ, ಗಾರೆ ಕೆಲಸದಿಂದ ಈಗ ಸ್ವತಂತ್ರವಾಗಿ ಪೈಂಟರ್ ಆಗಿದ್ದಾನೆ.
ಕಳೆದ ವರ್ಷ ಬೇರೆ ಪೈಂಟರ್ ಜೊತೆ ಹೆಲ್ಪರ್ ಆಗಿ ಬಂದಾಗಲೇ ಇವನ ಅವತಾರಗಳು ಗೊತ್ತಾಯಿತು ಈಗ ಮದುವೆ ಆಗಿ ಒಂದು ಮಗುವಿನ ತಂದೆ.
ಕಳೆದ ವರ್ಷದಿಂದ ರಹಮತ್ ಗೆ ನಮ್ಮ ಸಂಸ್ಥೆಯ ಎಲ್ಲಾ ಪೈಯಿಂಟಿಂಗ್ ಕೆಲಸ ವಹಿಸಿದ್ದೇನೆ.
ತಾನು ವಹಿಸಿಕೊಂಡ ಕೆಲಸದಲ್ಲಿ ಅವನಿಗಿರುವ ತನ್ಮಯತೆ ಮತ್ತು ವಹಿಸಿ ಕೊಂಡ ಕೆಲಸ ಸರಿ ಸಮಯದಲ್ಲಿ ಮುಗಿಸಿ ಕೊಡುವ ಪರಿ ನನಗಿಷ್ಟವಾಗಿದೆ.
ಬಳಸುವ ಹತ್ಯಾರ, ಪೆಯಿಂಟ್ ಗಳನ್ನು ಜೋಪಾನ ಮಾಡುವ ಬುದ್ಧಿ ಅನೇಕ ಕೆಲಸಗಾರರಲ್ಲಿ ನಾನು ನೋಡಿದಂತೆ ಇರುವುದಿಲ್ಲ ಆದರೆ ರಹಮತ್ ಬೇಗ್ ಮಾತ್ರ ಈವರೆಗೆ ನಮ್ಮ ಸಂಸ್ಥೆಯಲ್ಲಿ ಪೆಯಿಂಟ್ ಕೆಲಸ ಮಾಡಿದ ಬೇರೆಲ್ಲ ಪೆಯಿಂಟರ್ ಗಳಿಗಿಂತ ಉತ್ತಮ ಮತ್ತು ಪರ್ಪೆಕ್ಟ್ ಪೇಯಿಂಟರ್ ಎಂದು ನಾನು ದೃಡೀಕರಿಸುತ್ತೇನೆ.
ಒಂದೇ ಒಂದು ಹನಿ ಬಣ್ಣ ಚೆಲ್ಲದ ಕೆಲಸಗಾರ ಈ ರಹಮತ್ ಬಹುಶಃ ಈ ರೀತಿ ಬಣ್ಣದ ಕೆಲಸಗಾರನನ್ನ ಈವರೆಗೆ ನಾನು ನೋಡಿಲ್ಲ.
ವಿದೇಶಕ್ಕೆ ಹೋಗಿ ಅಲ್ಲಿ ಉದ್ಯೋಗ ಮಾಡಿ ಹೆಚ್ಚು ಸಂಪಾದಿಸುವ ಗುರಿ ಈತನದ್ದು.
ನಮ್ಮ ಊರ ಸುತ್ತಮುತ್ತಲಿನಲ್ಲಿ ಯಾರದ್ದಾದರು ಪೇಯಿಂಟ್ ಕೆಲಸ ಮಾಡಿಸುವುದು ಇದ್ದರೆ ಈ ಪ್ರಾಮಾಣಿಕ ಯುವಕನಿಗೆ ಅವಕಾಶ ನೀಡಿ ಅವನ ಕೆಲಸ ನೋಡಿ ಆ ಮೇಲೆ ನೀವೂ ನನ್ನಂತೆ ಇವನಿಗೆ ಶಿಪಾರಸ್ಸು ಮಾಡುವುದು ಗ್ಯಾರಂಟಿ ಅವನ ಸಂಪರ್ಕ ಸಂಖ್ಯೆ 73382 24475.
Comments
Post a Comment