https://youtu.be/MIxq6Ohb6iI?feature=shared
#ವರದಳ್ಳಿ_ಶ್ರೀಧರ_ಸ್ವಾಮಿಯ_ಪ್ರವಚನದ_ಕಿರು_ಫಲಕಗಳು
#ವರದಳ್ಳಿಯ_ಮೆಟೈಲುಗಳ_ಪಕ್ಕದಲ್ಲಿ_ಇರಿಸಿದ್ದಾರೆ
#ಅದರಲ್ಲಿ_ಒಂದು_ಫಲಕ_ನನಗೆ_ಇವತ್ತಿನ_ಕಾಲಕ್ಕೆ_ಹೆಚ್ಚು_ಪ್ರಸ್ತುತ_ಅನ್ನಿಸಿತು.
"ದೇಶದಲ್ಲೆಂದೂ ಯಾವುದೇ ರೀತಿಯ ಕ್ಷೋಬೆ ಉಂಟಾಗದಿರಲಿ."
" ಒನರಲ್ಲಿ ಹೊಟ್ಟೆ ಕಿಚ್ಚಿನ ಭಾವನೆ ಇಲ್ಲದಿರಲಿ "
"ಯಾರೂ ಧೀನರಂತೆ ಬದುಕದಿರಲಿ"
"ಯಾರಲ್ಲಿಯೂ ಯಾವಾಗಲೂ ಯಾವುದೇ ರೀತಿಯ ಕೆಟ್ಟ ಬುದ್ದಿ ಇಲ್ಲದಿರಲಿ"
"ಯಾರಲ್ಲಿಯೂ ಪರಸ್ಪರ ದ್ವೇಷ ಹಗೆತನಗಳಿಲ್ಲದಿರಲಿ "
"ಸಮಗ್ರ ವಿಶ್ವದಲ್ಲೆಲ್ಲಿಯೂ ಯುದ್ಧಗಳು ಸಂಭವಿದಿರಲಿ"
: - ಭಗವಾನ್ ಶ್ರೀಧರ ಸ್ವಾಮಿಗಳು.
ಇವತ್ತು ಕಳೆದ ವರ್ಷದಂತೆ ನವರಾತ್ರಿಯ ದುರ್ಗಾ ಪಾರಾಯಣ ಮಾಡಿಸಲು ವರದಳ್ಳಿಯ ದುರ್ಗಾಂಬಾ ದೇವಾಲಯದಲ್ಲಿ ಹಣ ಪಾವತಿಸಿ ಸಂಕಲ್ಪ ಮಾಡಿ ನಂತರ ವರದಳ್ಳಿ ಶ್ರೀಧರ ಸ್ವಾಮಿಗಳ ಆಶ್ರಮಕ್ಕೆ ಅನ್ನ ಸಂತರ್ಪಣೆಗೆ ಅಕ್ಕಿ ನೀಡಿ, ಗೋಸೇವೆ ಮತ್ತು ಬಿಕ್ಷಾಸೇವೆ ರಶೀದಿ ಬರೆಯಿಸಿ
ನಂತರ ಶ್ರೀಧರ ತೀರ್ಥದಲ್ಲಿ ಕೈ ಕಾಲು ತೊಳೆದು, ತೀರ್ಥ ಸೇವಿಸಿ ಮೆಟ್ಟಲುಗಳು ಏರುವಾಗ ಎಡ ಬಾಗದಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ನುಡಿ ಸೂಕ್ತಿಗಳ ಕಿರು ಫಲಕ ಹಾಕಿದ್ದಾರೆ.
1970ರಲ್ಲೇ ಭಗವಾನ್ ಶ್ರೀಧರ ಸ್ವಾಮಿಗಳು ಸಮಗ್ರ ವಿಶ್ವದಲ್ಲೆಲ್ಲಿಯೂ ಯುದ್ಧಗಳು ಸಂಭವಿಸದಿರಲಿ ಎಂದು ತಿಳಿಸಿದ್ದಾರೆ ...
Comments
Post a Comment