https://youtu.be/mc3Y0JsH5zU?feature=shared
#ನನ್ನ_ಮೊದಲ_ಪಾದರಕ್ಷೆಗಳು_ಹವಾಯ್_ಚಪ್ಪಲಿಗಳು.
#ಪಾದ_ರಕ್ಷಣೆಗೆ_ಚಪ್ಪಲಿ_ಬೇಕಾ_ಏಕೆ_ಎಂಬ_ಕಾಲ_ಅದು.
#ಬಡವ_ಶ್ರೀಮಂತ_ಎಂಬ_ಬೇದ_ಹವಾಯಿ_ಚಪ್ಪಲಿಗೆ_ಇಲ್ಲ
#ಅಕ್ಯೂಪ್ರಷರ್_ಹವಾಯಿ_ಚಪ್ಪಲಿಗಳು_ಉಪಯುಕ್ತ
#ಹವಾಯಿ_ಚಪ್ಪಲಿ_ಮೂಲ?
ಐದನೆ ತರಗತಿಯಿಂದ 7 ನೇ ತರಗತಿವರೆಗೆ ಮದ್ಯಾಹ್ನ ಊಟದ ಬೆಲ್ ಹೊಡೆದ ಕೂಡಲೆ ಆನಂದಪುರಂನ ದಾಸಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಿಂದ ಯಡೇಹಳ್ಳಿ ತನಕ 2 ಕಿಮಿ ಓಡುತ್ತಾ ಬಂದು ಅವಸರದಲ್ಲಿ ಗಬಗಬ ಊಟ ಮಾಡಿ ಪುನಃ ವಾಪಾಸ್ 2 ಕಿಮಿ ಓಡಿ ಮಧ್ಯಾಹ್ನದ ತರಗತಿಗೆ ತಲುಪುತ್ತಿದ್ದ ನಮ್ಮ ಯಡೇಹಳ್ಳಿ ವಿದ್ಯಾರ್ಥಿಗಳ ನಿತ್ಯದ ಹವ್ಯಾಸ ಆಗಿತ್ತು.
ಬಿರು ಬೇಸಿಗೆಯಲ್ಲಿ ಕಾಲು ಸುಡುವ ಟಾರ್ ರಸ್ತೆಗಳು, ಕಲ್ಲು-ಮುಳ್ಳಿನ ಬಯಲುಗಳಲ್ಲೂ ಬರಿಗಾಲಲ್ಲಿ ಓಡಿಯೂ ಕಾಲಿನ ಪಾದ ಸುರಕ್ಷಿತವಾಗಿ ಇಟ್ಟುಕೊಳ್ಳುವ ಕೌಶಲ್ಯ ನಮ್ಮದಾಗಿತ್ತು ಆದ್ದರಿಂದ ಚಪ್ಪಲಿಗಳು ನಮಗೆ ಲೆಕ್ಕಕ್ಕೆ ಇರಲಿಲ್ಲ.
ಹವಾಯಿ ಚಪ್ಪಲಿ ಕಡಿಮೆ ಬಜೆಟ್ ನ ಪಾದ ರಕ್ಷಣೆಯ ಚಪ್ಪಲಿ ಇದರ ಮೂಲ ಜಪಾನಿನ ಸ್ಯಾಂಡಲ್ ಝೋರಿ ಎನ್ನುತ್ತಾರೆ ನಂತರ ಅಮೇರಿಕಾದ ಹೊನಲೂಲು ರಾಜ್ಯದ ರಾಜಧಾನಿ ಹವಾಯಿ ದ್ವೀಪದ ಟಿ ಮರದ ರಬ್ಬರ್ ಶೀಟ್ ಬಳಸಿ ತಯಾರಿಸಿದ್ದರಿಂದ ಹವಾಯಿ ಚಪ್ಪಲಿ ಎಂದು ಹೆಸರು ಬಂದಿದೆ ಅಂತೆ.
ಭಾರತೀಯ ಬಾಟಾ ಕಂಪನಿ ಹವಾಯಿ ಬ್ರಾಂಡ್ ಪ್ರಾರಂಬಿಸಿ 2008ರಲ್ಲಿ ಬ್ರಿಜಿಲ್ ಕಂಪನಿಗೆ ತನ್ನ ಹವಾಯಿ ಬ್ರಾಂಡ್ ಮಾರಾಟ ಮಾಡಿದೆ.
ಹವಾಯಿ ಜನಸಾಮಾನ್ಯರ ಕೈಗೆ ಎಟುಕುವ ಚಪ್ಪಲಿ ಆದರೂ ಇದರ ಹಗುರ ಮತ್ತು ಸರಳತೆಯಿಂದ ಬಡವ ಶ್ರೀಮಂತರೂ ಬಳಸುವಂತಾಗಿದೆ.
ನಮ್ಮ ಪ್ರದಾನಿಗಳು ಶಿಮ್ಲಾ ದೆಹಲಿ ಸಂಪರ್ಕದ ಮೊದಲ ಉಡಾನ್ ವಿಮಾನ ಪ್ಲಾಗ್ ಆಫ್ ಮಾಡಿದಾಗ " ಹವಾಯಿ ಜಹಾಜ್ ನಲ್ಲಿ ಹವಾಯಿ ಚಪ್ಪಲ್ ಧರಿಸಿ ಜನರನ್ನು ನೋಡಲು ಬಯಸುತ್ತೇನೆ" ಎಂದು ಹೇಳಿರುವುದು ವಿಶೇಷ ಅರ್ಥ ಕಲ್ಪಿಸುತ್ತದೆ.
ಈಗೆಲ್ಲ ಡಯಾಬಿಟೀಸ್ ಇರುವವರಿಗೆ ಪಾದ ರಕ್ಷಣೆ ಬಗ್ಗೆ ವೈದ್ಯರು ವಿಶೇಷ ಕಾಳಜಿ ವಹಿಸಲು ಹೇಳುತ್ತಾರೆ, ಕಲ್ಲು- ಗಾಜು - ಮೊಳೆ- ಮುಳ್ಳು ತಾಗಿ ಗ್ಯಾಂಗ್ರೀನ್ ಆಗಬಾರದೆಂದು, ಮನೆಯ ಒಳಗೂ ಪ್ರತ್ಯೇಕ ಹವಾಯಿ ಚಪ್ಪಲಿ ನಾನೂ ಬಳಸುತ್ತೇನೆ.
ಮೃದುವಾದ ನುಣುಪಾದ ಹವಾಯಿ ಚಪ್ಪಲಿ ಜಾಗದಲ್ಲಿ ಅಕ್ಯೂಪ್ರೆಷರ್ ಹವಾಯಿ ಚಪ್ಪಲಿಗಳು ಈಗ ಪ್ರಸಿದ್ದಿ ಪಡೆದಿದೆ ಎಲ್ಲಾ ಪ್ರಖ್ಯಾತ ಬ್ರಾಂಡ್ ಗಳು ಇಂತಹ ಅಕ್ಯೂಪ್ರೆಷರ್ ಹವಾಯಿ ಚಪ್ಪಲಿಗಳನ್ನು ಅಮೇಜಾನ್ - ಪ್ಲಿಪ್ ಕಾರ್ಟ್ ನಲ್ಲಿ ಮಾರಾಟಕ್ಕೆ ಇಟ್ಟಿದೆ.
ಅಂಗಾಲಿಗೆ ಮಸ್ಸಾಜ್ ಆಗುವ, ಪಾದದಲ್ಲಿ ರಕ್ತ ಸಂಚಾರ ಸರಾಗವಾಗಿಸುವ, ತಳ ಪಾದದ ಸ್ನಾಯುಗಳು ಶಕ್ತಿಯುತ ಮಾಡುವ,ನೋವು ನಿವಾರಕ ಮತ್ತು ಆರ್ಥರೀಟೀಸ್ ಶಮನ ಮಾಡುವ ಅಕ್ಯೂ ಪ್ರೆಶರ್ ಚಪ್ಪಲಿಗಳು ನಿಜಕ್ಕೂ ಉಪಯುಕ್ತ.
Comments
Post a Comment