Skip to main content

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು?

#ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ.

#ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ.

#ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು.

#ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ

#ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.


   ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. 
   ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.

  #ದೀರ್ಘವಾದರೂ_ಪೂರ್ಣ_ಲೇಖನ_ಓದಿ

  #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ....

ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ ..
ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ...

ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡಿ ಗಂಡ ಮಕ್ಕಳಿಗೆ ಕಾಫಿ ತಿಂಡಿ ಮಾಡಲು ಅನುವಾಗಬೇಕಿತ್ತು....
ಗಂಡ ಕುಟುಂಬದ ಯಜಮಾನರಾದ #ರಾಘವೇಂದ್ರ_ಕೇಕೋಡರು ಆ ಬೆಳಗಿನಲ್ಲಿ ಹೂ ಕೊಯ್ಯಲು ಚಿಕ್ಕ ದೋಟಿ ಮತ್ತು ಹೂ ಬುಟ್ಟಿ ಹಿಡಿದುಕೊಂಡು ಮನೆಯಂಗಳದ ಹೂ ಗಿಡಗಳಿಂದ ಹೂ ಕೊಯ್ದು  ನೆವೇರಿಸಲು ಹೋಗಬೇಕಿತ್ತು.
ಮನೆಯ ಎರಡು ಮುತ್ತಿನಂತಹ ಮಕ್ಕಳಾದ ಶ್ರೀರಾಮ ಮತ್ತು ಭರತರು  
ಕೊಟ್ಟಿಗೆ ಕೆಲಸ ಮಾಡಿ ಹಾಲು ಕರೆದು ಡೈರಿಗೆ ಹಾಲು ಕೊಂಡೊಯ್ಯಲು  ಸಿದ್ದವಾಗುವ ಸಮಯವಾಗಿತ್ತು....

#ಆದರೆ_ಆ_ಬೆಳಗಿನಲ್ಲಿ #ಅರಳಸುರಳಿಯ_ಶಂಕರಾಪುರ_ಗ್ರಾಮದ_ಕಲ್ಲೋಣಿಯಆ_ತಗ್ಗಿನ_ಮನೆಯಲ್ಲಿ_ಆದದ್ದೇ_ಬೇರೆ...

ಮೇಲೆ ಹೊಸನಗರ ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ವಾಕಿಂಗ್ ಹೋಗುವವರಿಗೆ ಕೆಳಗಿನ ರಾಘವೇಂದ್ರ ಕೇಕೋಡರ ಮನೆ ಯಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ...

ಅದೇ ಸಂಧರ್ಭದಲ್ಲಿ ಮನೆಯೊಳಗಿನಿಂದ ಭರತ ಕೇಕೋಡ ಹೊರಗೆ ಓಡಿ ಬಂದಿದ್ದಾನೆ. 
ವಾಕಿಂಗ್ ಮಾಡುತ್ತಿದ್ದವರು ದಾವಂತದಿಂದ  ರನ್ನಿಂಗ್ ಮಾಡಿ ಕೆಳಗೆ ಬಂದು ಬಾವಿಗೆ ಹಾರುತ್ತೇನೆಂದು ಓಡುತ್ತಿದ್ದ  ಭರತ ನನ್ನು ಹಿಡಿದು ನಿಲ್ಲಿಸಿ ದ್ದಾರೆ.

ಕ್ಷಣಾರ್ಧದಲ್ಲಿ ಅರಳಸುರಳಿ ಯ ಜನರು ಅಲ್ಲಿ ನೆರೆದು ಮನೆಯೊಳಗಿನ ಬೆಂಕಿ ನಂದಿಸಿದ್ದಾರೆ.

ಈ ನಡುವೆ ಶ್ರೀ ರಾಘವೇಂದ್ರ ಕೇಕೋಡರು, ಅವರ ಪತ್ನಿ ಶ್ರೀಮತಿ ನಾಗರತ್ನ ಕೇಕೋಡರು ಮತ್ತು ಹಿರಿಯ ಮಗ ಶ್ರೀ ರಾಮ ಕೇಕೋಡ ಬೆಂಕಿ ಅನಾಹುತದಿಂದ ಸತ್ತು ಹೋಗಿದ್ದಾರೆ.

ಹೌದು 
ಇವತ್ತು  ನಮ್ಮ ಊರಿನಲ್ಲಿ  ಈ ವಿಚಾರದಲ್ಲಿ ಅತಿ ಹೆಚ್ಚು ಚೆರ್ಚೆ ಯಲ್ಲಿರುವ ಸಂಗತಿ ಏನೆಂದರೆ ಈ ಬೆಂಕಿ‌ ಅನಾಹುತ ದಲ್ಲಿ ದುರ್ಮರಣಕ್ಕೀಡಾಗಿರುವ ಶವಗಳನ್ನು ನೋಡಿದಾಗ ಅವರುಗಳು ಹೆಚ್ಚು ಒದ್ದಾಡಿ ದಂತೆ ಕಾಣಿಸೋಲ್ಲ... ಎಂದು. ಸಾವು ಬದುಕಿನ ನಡುವೆ ಹೋರಾಟ ಮಾಡಿರುವ ಭರತ ಕೂಡ ತನ್ನ ತಂದೆ ತಾಯಿ ಯ ಆಕಸ್ಮಿಕ ಸಾವಿನಿಂದ ಅಣ್ಣ ಶ್ರೀರಾಮ ವಿಚಲಿತನಾಗಿ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ. ಇದರಲ್ಲಿ ನಾನೂ ಬಾಗಿಯಾಗಿದ್ದೆ ಆದರೆ ತನ್ನ ಅಸ್ತಮ ಸಮಸ್ಯೆ ಗೆ ಅಲ್ಲಿ ನಿಲ್ಲಲಾಗದೇ ಹೊರಬಂದೆ.... ಎಂದು ಹೇಳಿಕೆ ನೀಡಿದ್ದಾನೆ ಎಂಬ ಮಾತಿದೆ. 

ಇರಲಿ...
ಆದರೆ ಈ ಕುಟುಂಬ ಈ ಕೆಟ್ಟ ನಿರ್ಧಾರ ಕ್ಕೆ ಬರಲು ಆಸ್ತಿ ಸಂಬಂಧಿಸಿದ ತಗಾದೆಯೇ ಮೂಲ ಕಾರಣ ಎಂಬುದು ಹೆಚ್ಚಿನ ಎಲ್ಲರ ಧೃಡ ಅಭಿಪ್ರಾಯ. ಇನ್ನೂ ಕೆಲವರು ರಾಘವೇಂದ್ರ ಕೇಕೋಡರ ಹಿರಿಯ ಪುತ್ರ ಶ್ರೀರಾಮ ಕೇಕೋಡ ಅಡಿಕೆ ವ್ಯಾಪಾರ ಮಾಡಿಕೊಂಡು ಬೆಲೆ ಕುಸಿತದ ನಷ್ಟ ಬಾಬತ್ತಿನಿಂದ ದೊಡ್ಡ ಪ್ರಮಾಣದ ಸಾಲ ವಾಗಿ ಧೃತಿಗೆಟ್ಟು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಅಂತಲೂ ಅಭಿಪ್ರಾಯಿಸುತ್ತಾರೆ.

#ಅವಿಭಕ್ತ_ಕುಟುಂಬದ_ಆಸ್ತಿ_ಕಲಹಗಳು

ಇದು ಮಲೆನಾಡಿನ ನೂರಕ್ಕೆ ತೊಂಬತ್ತು ಪ್ರತಿಶತ ಅವಿಭಕ್ತ ಕುಟುಂಬದ ಸಾಮಾನ್ಯ ಸಮಸ್ಯೆ. 

ಒಂದು ಕುಟುಂಬ , ಅದರ ಯಜಮಾನರಿಗೆ  ಐದರಿಂದ ಹತ್ತು ಮಕ್ಕಳು . ಅವರಲ್ಲಿ ಯಾರೋ ಒಬ್ಬ ಮಗ "ಕೆರೆಗೆ ಹಾರ "  ಜಾನಪದ 
ಕಥೆಯ ನಾಯಕಿ‌ ಮಲ್ಲಾನ ಗೌಡನ  ಕಿರಿ ಸೊಸೆಯಂತೆ ಕೆರೆಗೆ ಹಾರಿ ಪ್ರಾಣಾರ್ಪಣೆ ಮಾಡಿ ಕೆರೆ ಒಡಲಲ್ಲಿ ನೀರುಕ್ಕಿಸಿದ ತ್ಯಾಗ ಮಯಿಯಂತೆ  ಹಳ್ಳಿಯ ಕೃಷಿ ಜಮೀನು ನೋಡಿ ಕೊಳ್ಳುತ್ತಾ , ವೃದ್ದ ತಂದೆ ತಾಯಿಗಳ ನೋಡಿಕೊಳ್ಳುತ್ತಾ ಕುಟುಂಬದಲ್ಲಿ ಅನೂಚಾನವಾಗಿ ನಡೆಸಿಕೊಂಡು ಬಂದ ಪೂಜೆ ಪುನಸ್ಕಾರ ವ್ರತ ಕಥೆ ವೈದೀಕ/ತಿಥಿ, ದೈಯ್ಯ ದೇವರುಗಳಿಗೆ ಹರಕೆ ನೆರವೇರಿಸುತ್ತಾ  
  ನೆಂಟರಿಷ್ಟರು ಬಂದು ಹೋಗುವ ಹೆಣ್ಣು ಮಕ್ಕಳು , ಕಿರಿಯ ತಮ್ಮ ತಂಗಿಯರ ವಿಧ್ಯಾಭ್ಯಾಸ, 
ಮದುವೆ ಹಬ್ಬ ಬಾಣಂತನ ಭಾಗ್ಯಾನ ಎಲ್ಲ  ನಡೆಸಿಕೊಂಡು ಹೋಗುತ್ತಿರುತ್ತಾನೆ.

ಇದೆಲ್ಲಾ ಒಂದಷ್ಟು ವರ್ಷ ಆದ ಮೇಲೆ ಕುಟುಂಬದಲ್ಲಿ ಕೊನೆಯದಾಗಿ ಉಳಿದ  ಎಂಬತ್ತೋ ತೊಂಬತ್ತೋ ವರ್ಷದ ತಂದೆ ಯೋ ತಾಯಿಯೋ ತೀರಿದ ಮೇಲೆ ಕುಟುಂಬದ ಹಕ್ಕು ದಾರರೆಲ್ಲ ಆ ಹಳ್ಳಿಯ ಮನೆಗೆ ತಮ್ಮ ತಮ್ಮ ಪಾಲಿನ ಆಸ್ತಿ ಗೆ ಬರುತ್ತಾರೆ. ಇದು ಬಹುತೇಕ ಕುಟುಂಬದ ಕಥೆ. ತಂದೆ ತಾಯಿ ಯ ಪಿತ್ರಾರ್ಜಿತ ಹಕ್ಕು ಕೇಳುವದು ಸಹಜ. ಹೀಗೆ ಕೇಕೋಡರ ಕುಟುಂಬದ ಸಹ ಸದಸ್ಯರು ಆಸ್ತಿ ಪಾಲು ಕೇಳಿರಬಹುದು. ಇದು ಖಂಡಿತವಾಗಿಯೂ ತಪ್ಪೇನಿಲ್ಲ.

ಆದರೆ ರಾಘವೇಂದ್ರ ಕೇಕೋಡರು ಅಡಿಕೆ ತೋಟ ಮಾಡುವುದರಲ್ಲಿ ಒಂದು ದೊಡ್ಡ ತಪ್ಪು ಹೆಜ್ಜೆ ಇಟ್ಟಿದ್ದಾರೆ. ತನ್ನದಲ್ಲದ ಸಹೋದರರ ಪಾಲಿನ  ಜಮೀನಿನಲ್ಲಿ ಅಡಿಕೆ ತೋಟ ವಿಸ್ತರಣೆ ಮಾಡಿ ನಂತರ ಆ ಜಮೀನಿನ ಹಕ್ಕುದಾರರು ಜಮೀನು ಕೇಳಿ ದಾಗ ಅದನ್ನು ಬಿಟ್ಟುಕೊಡಲಾಗದೇ ಒದ್ದಾಡಿ ಒತ್ತಡಕ್ಕೆ ಬಿದ್ದು ಇಡೀ ಕುಟುಂಬ ಸಹಿತ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದು ಇಡೀ ಘಟನೆಯ ಸಾರಾಂಶ.

 
ಮಲೆನಾಡಿನ ತೊಂಬತ್ತು ಪ್ರತಿಶತ ಕೂಡು ಕುಟುಂಬದಲ್ಲಿ ಈ "ಅನಿವಾಸಿ ದಯಾದಿ" 
ಗಳ ಆಸ್ತಿ ತಗಾದೆಗಳಿವೆ. ಹೆಚ್ಚಿನ‌ ಬುದ್ದಿವಂತ ರು ಈ ಸಮಸ್ಯೆ ಬರದಂತೆ ಮೊದಲೇ ಜಾಗೃತರಾಗಿ ತಮ್ಮ ಪಾಲಿನ ಆಸ್ತಿ ಗಡಿಯನ್ನು ಗಟ್ಟಿ ಮಾಡಿಕೊಳ್ಳುತ್ತಾರೆ.

ಮೂವತ್ತು ನಲವತ್ತು ವರ್ಷಗಳ ಹಿಂದೆ ಐದಾರು ಜನ ಒಂದೇ ಕುಟುಂಬದ ಅಣ್ಣ ತಮ್ಮಂದಿರಲ್ಲಿ ಯಾರೋ ಒಬ್ಬರು ಜಮೀನು ಅಪ್ಪಯ್ಯ ಅಮ್ಮ ನ ನೋಡಿಕೊಳ್ಳಲು ಉಳಿದುಕೊಂಡು,  ಉಳಿ ದವರು ಉತ್ತಮ ವಿಧ್ಯಾಭ್ಯಾಸ ಮಾಡಿ ಪಟ್ಟಣ ಸೇರಿ ಉತ್ತಮ ನೌಕರಿ ಸೇರಿ 
settle ಆಗುತ್ತಿದ್ದದ್ದು ಸಾಮಾನ್ಯ ಸಂಗತಿ ಯಾಗಿತ್ತು ‌ . 

ಇದಕ್ಕೆ ಮುಖ್ಯ ಕಾರಣ ಆಗ ಜಮೀನಿನ ಉತ್ಪತ್ತಿ ಸಾಲದೆಂಬುದೇ ಮುಖ್ಯ ಕಾರಣ.ಆಗ ಅಡಿಕೆ ತೋಟ ತೀರಾ ಕಡಿಮೆ ಮತ್ತು "ಲಾಭ" ಬರದ ಗದ್ದೆ ಹೆಚ್ಚು.

ಆಗ ಹೆಚ್ಚಿನ ಎಲ್ಲಾ ಮಲೆನಾಡಿಗರಿಗೆ ಪಂಪ್ ಸೆಟ್ , ಬೋರ್ ವೆಲ್ , ಜೆಸಿಬಿ ಗಳಿಲ್ಲದ ಕಾರಣದಿಂದ ಬೇಸಿಗೆಯಲ್ಲೂ "ಹದ " ಇರುವ ಕೆರೆ ಹಳ್ಳಗಳ ನಿಸರ್ಗ ಸಹಜ  ನೀರಾವರಿ ವ್ಯವಸ್ಥೆ ಇರುವ ಜಾಗದಲ್ಲಿ ಮಾತ್ರ ಅಡಿಕೆ ತೋಟ ಮಾಡುತ್ತದ್ದರು.
ಯಾವಾಗ ಪಂಪ್ ಸೆಟ್ ನೀರಾವರಿ ಕ್ರಾಂತಿ ಯಾಯಿತೋ ಮಕ್ಕಿ ಗದ್ದೆ , ಬ್ಯಾಣ ಬಯಲು ಹಾಡ್ಯಗಳೆಲ್ಲಾ ಅಡಿಕೆ ಬಾಗಾಯ್ತಾಗಿ ಪರಿವರ್ತನೆ ಯಾಯಿತು.

ಒಂದು ಜ್ಞಾಪಕ ದಲ್ಲಿಡಿ ಅಕಸ್ಮಾತ್ತಾಗಿ ಈ ನಲವತ್ತು ವರ್ಷಗಳ ಹಿಂದೆ ಇವತ್ತಿನ ಅಡಿಕೆ ತೋಟ, ಇವತ್ತಿನ ಅಡಿಕೆ ದರ , ಇವತ್ತಿನ ಕೃಷಿ ತಾಂತ್ರಿಕತೆ ಇದ್ದಿದ್ದರೆ ಖಂಡಿತವಾಗಿಯೂ  ಮಲೆನಾಡು ಇಷ್ಟು ದೊಡ್ಡ ವೃದ್ದಾಶ್ರಮ ಆಗುತ್ತಿರಲಿಲ್ಲ. ಇವತ್ತು ನಗರದಲ್ಲಿ ನೆಲೆ ಕಂಡುಕೊಂಡಿರುವ ಅನೇಕ ಅನಿವಾಸಿ ಮಲೆನಾಡಿಗರು ಖಂಡಿತವಾಗಿಯೂ ಆಗ ಮಲೆನಾಡು ಅಡಿಕೆ ಕೃಷಿ ಬಿಟ್ಟು ಹೋಗು ತ್ತಿರಲಿಲ್ಲ...!!. ಆಗ ಮನೆ ಬಿಟ್ಟು ಹೋಗಲೇ ಬೇಕಾದ್ದು ಅನಿವಾರ್ಯವಾಗಿತ್ತು. ಇಲ್ಲಿ ಉಳಿದರೆ ವರ್ಷಕ್ಕೊಂದು ಉತ್ಪತ್ತಿ ಯನ್ನು ವರ್ಷ ವಿಡೀ balance ಮಾಡುವ ಸರ್ಕಸ್ ಮಾಡಬೇಕಿತ್ತು. ಬುದ್ದಿವಂತ ಮಕ್ಕಳು ಈ ಕಡಿಮೆ ಉತ್ಪತ್ತಿ ಯ ಜಮೀನು, ಆ ಮೈಮುರಿವ ದುಡಿಮೆ , ಜೊತೆಗೆ ಹಿರಿಯರ ನೋಡಿಕೊಳ್ಳುವ ಜವಾಬ್ದಾರಿ ಇದ್ಯಾವುದೂ ಇಲ್ಲದ ನಗರದ 
ವೈಟ್ ಕಾಲರ್ ಜಾಬ್ ಗೆ ಪಾಲಾಯನ ಮಾಡಿದರು. 

ಇದು ಮಲೆನಾಡಿನ ಎಲ್ಲಾ ಕೃಷಿ ಕುಟುಂಬದ ವ್ಯಥೆ ಕಥೆಯ ವಾಸ್ತವ.
#ಪಂಚತಂತ್ರದಲ್ಲಿ_ಆಳಿಲು_ಮತ್ತು_ನರಿಯ_ಕೃಷಿ_ಮಾಡಿದ_ಕಥೆಯೊಂದು_ಬರುತ್ತದೆ. 
ಪ್ರತಿ ಸರ್ತಿಯೂ ನರಿ ಅಳಿಲಿನ ಬಳಿ ಶ್ರಮದ ಕೃಷಿ ಕೆಲಸ ಮಾಡಿಸಿ ಕೃಷಿ ಉತ್ಪನ್ನ ವನ್ನು ‌ನರಿ ತಿನ್ನುತ್ತದೆ. ಇದೇ ಬಗೆಯಲ್ಲಿ ನರಿ ಅಳಿಲು ಗೆಣಸಿನ ಬೆಳೆ ಬೆಳೆದು ಗೆಣಸು ನರಿಗೂ ಗೆಣಸಿನ ಬಳ್ಳಿ ಅಳಿಲಿನ   ಪಾಲಾಗುತ್ತದೆ.

ರಾಘವೇಂದ್ರ ಕೇಕೋಡರು ಒಟ್ಟು ಸಮಷ್ಟಿ ಜಮೀನು ಅಡವಿಟ್ಟು ಸಾಲ ಮಾಡಿ ಆ ಸಾಲದ ಹಣವನ್ನು ಕೊಂಡೊಯ್ದು ಗೋವಾದ ಕ್ಯಾಸಿನೊ ಗೆ ಹೋಗಿ ಜೂಜಾಡಿದರ...? ಕುಟುಂಬ ಸಹಿತ ಸಿಂಗಾಪುರ ಪ್ರವಾಸ ಮಾಡಿದರ..?
ಥಾಯ್ಲ್ತಾಂಡ್ ಗೆ ಹೋಗಿ ಮಸಾಜು ಮಾಡಿಸಿಕೊಂಡು ಬಂದರ...?
ಇಲ್ವಲ್ಲ...
ರಾಘವೇಂದ್ರ ಕೇಕೋಡರ ಅಡಿಕೆ ತೋಟದ ಕೃಷಿ ನೋಡಿದರೆ , ಮೂವತ್ತು ವರ್ಷಗಳಿಂದ ಆ ಕೃಷಿ ಭೂಮಿ ನೋಡಿದವರಿಗೆ ಅಲ್ಲಿ ಮೊದಲ ಏನಿತ್ತು..?
ಈಗ ಏನಿದೆ...? ಈಗಿರುವ ಸಮೃದ್ಧ ಅಡಿಕೆ ತೋಟಕ್ಕೆ ರಾಘವೇಂದ್ರ ಕೇಕೋಡರು ಮತ್ತು ಅವರ ಹೆಂಡತಿ ಮಕ್ಕಳು‌ ಅದೆಷ್ಟು ದೈಹಿಕ ಮಾನಸಿಕ ಶ್ರಮ ವಹಿಸಿದ್ದಾರೆ..?
ಮತ್ತು ರಾಘವೇಂದ್ರ ಕೇಕೋಡರು ಬರಡು ಮಕ್ಕಿ ಗದ್ದೆ ನಾಕು ತೆಂಗಿನ ಮರದ ಜಾಗವನ್ನು ಲಕ್ಷ ಲಕ್ಷ ಬಂಡವಾಳ ಸುರಿದು ಅಡಿಕೆ ತೋಟ ಮಾಡಿದ್ದು ಕಾಣಿಸುತ್ತದೆ.

ಇಷ್ಟು ದೊಡ್ಡ ಅಡಿಕೆ ತೋಟ ಮಾಡಿ un finished ಮನೆಯಲ್ಲಿ ರಾಘವೇಂದ್ರ ಕೇಕೋಡರು ಜೀವನ‌‌ ನೆಡೆಸುತ್ತಿದ್ದದ್ದೇ ರಾಘವೇಂದ್ರ ಕೇಕೋಡರ ಹಣ ಎಲ್ಲಿ ವಿನಿಯೋಗ ಮಾಡಿದ್ದಾರೆಂಬುದಕ್ಕೆ ನಿದರ್ಶನ.

ಶ್ರಮಿಕ ಕೃಷಿ ತಪಸ್ವಿ ದಂಪತಿಗಳಾದ ರಾಘವೇಂದ್ರ ಕೇಕೋಡರು ರಸ್ತೆ ಬದಿಯಿಂದ  ಸಗಣಿ ಹೆಕ್ಕಿ ತಂದು ಅದನ್ನು ಕರಡಿ ಕರಡಿ ಅಡಿಕೆ ಮರದ ಬುಡಕ್ಕೆ ಹಾಕುತ್ತಾ , ಪ್ರತಿ ಅಡಿಕೆ ಮರದ ಜೊತೆಗೂ ಪ್ರೀತಿಯ ಸಂಪರ್ಕ ಇಟ್ಟುಕೊಂಡು 
"ಶೂನ್ಯ  ಮೂಲದಿಂದ ಈಗಿನ ಹತ್ತಾರು ಎಕರೆ ಅಡಿಕೆ "   ವಿಸ್ತರಣೆ ಮಾಡಿದ್ದರು.

ರಾಘವೇಂದ್ರ ಕೇಕೋಡರ ಮುಗ್ಧತೆ ಅತಿ ಯಾದ ನಂಬಿಕೆ , ಹುಂಬತನ ಕೊನೆಯಲ್ಲಿ ಮೂರ್ಖತನದಿಂದ  ಈ ಅನಾಹುತಕ್ಕೆ ಕಾರಣವಾಯಿತು. 

ರಾಘವೇಂದ್ರ ಕೇಕೋಡರು ಸುಮ್ಮನೆ ತಮ್ಮ ಪಾಲಿನ ತೋಟ ಮಾಡಿಕೊಂಡು ಹೋಗುತ್ತಾ ಅತ್ಯಂತ ಬುದ್ದಿವಂತ ಮಕ್ಕಳಾದ ಶ್ರೀ ರಾಮ ಭರತರನ್ನ ಪಟ್ಟಣ ಕ್ಕೆ ಅಟ್ಟಿದ್ದರೆ ಖಂಡಿತವಾಗಿಯೂ ಈ ದುರಂತ ನೆಡೆಯುತ್ತಿರಲಿಲ್ಲ.

ಇವತ್ತು ಆಸ್ತಿ ಕಲಹಗಳಿಗೆ  ಕೇಕೋಡರಂತೆ ಜೀವ ಕಳೆದುಕೊಳ್ಳು ವುದಾದರೆ ಮಲೆನಾಡಿನಲ್ಲಿ ಸಹಸ್ರಾರು ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳ ಬೇಕಾಗುತ್ತದೆ.

ರಾಘವೇಂದ್ರ ಕೇಕೋಡರಂತಹ challenges ವ್ಯಕ್ತಿತ್ವ ದವರು ಇಂತಹ ಕೆಟ್ಟ ನಿರ್ಧಾರ ಕ್ಕೆ ಬರುವ ಅವಶ್ಯಕತೆ ಖಂಡಿತವಾಗಿಯೂ ಅತ್ಯಂತ ತಪ್ಪು ನಿರ್ಧಾರ.

ನೀವು ಗಮನಿಸಿ ವರ್ಲೆ ಹುತ್ತ ಕ್ಕೆ ನೀವು ಅದೆಷ್ಟೇ ಬಾರಿ ಹಾನಿ ಮಾಡಿದರೂ ಅದು ಮತ್ತೆ ಮತ್ತೆ ತನ್ನ ಗೂಡು (ಹುತ್ತವನ್ನ) ಕಟ್ಟಿ ಕೊಳ್ಳುತ್ತದೆ.‌ ಅದ್ಯಾವತ್ತೂ ಬೇಸರ ಮಾಡಿ ಕೊಳ್ಳದು. ಹಾಗೆಯೇ ರಾಘವೇಂದ್ರ ಕೇಕೋಡರು ಈ ತಗಾದೆಗಳಿಗೆ ಎದೆ ಗುಂದಬಾರದಿತ್ತು.

ರಾಘವೇಂದ್ರ ಕೇಕೋಡರು ನಲವತ್ತು ವರ್ಷಗಳ ಹಿಂದೆ ಶೂನ್ಯದಿಂದ ಇಷ್ಟೆಲ್ಲ ವಹಿವಾಟು ಮಾಡಿದ್ದರು. ಈಗ ಮತ್ತೆ ಶೂನ್ಯ ಕ್ಕೆ ಹೋಗಿ ಮುತ್ತಿನಿಂತ ಬುದ್ದಿವಂತ ಮಕ್ಕಳ ಕಟ್ಟಿ ಕೊಂಡು ಈ ಕೊಂಪೆ ಯಿಂದ ಹೊರ ಬಂದು ಮತ್ತೊಂದು ದೊಡ್ಡ ಸಾಹಸ ಮಾಡಿ ತೋರಿಸಲು ಸಾದ್ಯವಿತ್ತು.

ಹೆಂಡತಿಯ ಆಕಸ್ಮಿಕ ಸಾವಿಗೆ ರಾಘವೇಂದ್ರ ಕೇಕೋಡರು ಹೃದಯಾಘಾತಕ್ಕೊಳಗಾಗದಿದ್ದಲ್ಲಿ ರಾಘವೇಂದ್ರ ಕೇಕೋಡರು ಮತ್ತು ಮಕ್ಕಳು ಖಂಡಿತವಾಗಿಯೂ ಸಾಯುತ್ತಿರಲಿಲ್ಲವೇನೋ ಎಂಬುದು ನನ್ನ ಅಭಿಪ್ರಾಯ.
ಆದರೆ
ಈ ಆಸ್ತಿ ವಿಚಾರದಲ್ಲಿ ಖಂಡಿತವಾಗಿಯೂ ರಾಘವೇಂದ್ರ ಕೇಕೋಡರದ್ದು ತಪ್ಪಿದೆ. ಈ ಆಸ್ತಿ ತಗಾದೆಯನ್ನ ರಾಘವೇಂದ್ರ ಕೇಕೋಡರ ಕುಟುಂಬ ಅತಿಯಾಗಿ ಹೃದಯಕ್ಕೆ ಹಚ್ಚಿಕೊಂಡಿತ್ತು. 
ಬಹುಶಃ ಅದಕ್ಕೆ ರಾಘವೇಂದ್ರ ಕೇಕೋಡರ ಕುಟುಂಬ ತನು ಮನವನ್ನೂ ಅರ್ಪಣೆ ಮಾಡಿಕೊಂಡದ್ದೇ ಕಾರಣ.

ಇರಲಿ...

ಇವತ್ತು ಮಲೆನಾಡಿನಲ್ಲಿ ಅಷ್ಟು ದೊಡ್ಡ ಕುಟುಂಬ ಇಲ್ಲ. ಅಣ್ಣ- ತಂಗಿ , ಅಕ್ಕ- ತಮ್ಮ, ಅಣ್ಣ - ತಮ್ಮ ,  ಹೀಗಿನ ಕುಟುಂಬ ಗಳಿವೆ. ಇಂತಹ ಕುಟುಂಬದಲ್ಲಿ ಅಪರೂಪ ಕ್ಕೆ  ಮಲೆನಾಡಿನ ಹಳ್ಳಿಯಲ್ಲಿ ತಂದೆ ತಾಯಿ ಯ ಜೊತೆಗೆ ಜೀವ ಸವೆಸಿ ಕೃಷಿ ಮಾಡು ತ್ತಿರುವ ಯುವ ಕೃಷಿಕ ಬಂಧುಗಳು ತಮ್ಮ ತಮ್ಮ ಹಕ್ಕು ಗಳನ್ನು ಖಾತ್ರಿ ಮಾಡಿಕೊಂಡು  ಮುಂದೆಂದೋ ಹತಾಶ ರಾಗದಂತೆ ಎಚ್ಚರಿಕೆ ವಹಿಸುವುದು ಉತ್ತಮ.

ಅಂತಹ ಕುಟುಂಬದವರು ಇಂತಹ ದುರ್ಘಟನೆ ಯಿಂದ ಎಚ್ಚೆತ್ತಕೊಳ್ಳುವ ಪಾಠವೊಂದಿದೆ. ಹುಟ್ತಾ ಮಾತ್ರ ಅಣ್ಣ ತಮ್ಮ, ಅಕ್ಕ ತಮ್ಮ, ತಂಗಿ‌ ಅಣ್ಣ...  ಯಾವತ್ತೋ ಒಂದು ದಿನ‌ ದಾಯದ್ರೇ ಆಗುವುದು.‌ ಅಪ್ಪಯ್ಯ ಅಮ್ಮ ನ ಹೇಲು ಉಚ್ಚೆ ಬಾಚಿ ಅವರ ಸಾವಿನ‌ ಕರ್ಮಾಂಗದ ನಂತರ "ಅಕ್ಕಿ ಕಾಳಿನ ಪ್ರಸಾದದ ಜೊತೆಗೆ ಆಸ್ತಿ ಪ್ರಸಾದವನ್ನೂ ದಾಯಾದಿ  " ಕೋರೇ ಕೋರುತ್ತಾರೆ. ಅವರು ತ್ಯಾಗ ಮಾಡುವುದಾದರೆ ಅಪ್ಪಯ್ಯ ಅಮ್ಮ ಗಟ್ಟಿ ಇರಬೇಕಾದರೇ  ಮನೆ ಆಸ್ತಿ ವಿಚಾರದಲ್ಲಿ ಒಂದು ಗಟ್ಟಿ ನಿಲುವು ತೆಗೆದುಕೊಂಡರೆ ಅಣ್ಣ ನೋ ತಮ್ಮ ನಿಗೋ ನೆಮ್ಮದಿಯ ಭವಿಷ್ಯ...!!

ನಮ್ಮ ಮಲೆನಾಡಿನ ಅನೇಕ ಅವಿಭಕ್ತ ಕುಟುಂಬದ ಕಥೆ ಇಷ್ಟೆ...
ಒಂದು ವ್ಯತ್ಯಾಸ ವೆಂದರೆ ಬಹುತೇಕರು ಕೇಕೋಡರ ತರ ದುಡುಕಿ ಕೆಟ್ಟ ನಿರ್ಧಾರ ತೆಗೆದುಕೊಂಡಿಲ್ಲ ಅಷ್ಟೇ...

ಇವತ್ತು ನಮ್ಮ ಊರಿನವರು ಎಲ್ಲೇ ಹೋದರೂ ನಿಮ್ಮೂರಲ್ಲಿ ಏನೋ ದುರ್ಘಟನೆ ಯಂತೆ...!! ಏನು ಕಥೆ ..?
ಎಂದು ಕೇಳುತ್ತಾರೆ. ‌

ನಿಜಕ್ಕೂ ಯಾಕೆ ಹೀಗಾಯಿತು ಎಂಬುದು ಯಾವತ್ತೂ "ನಿಖರವಾಗಿ"  ಗೊತ್ತಾಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ಇಲ್ಲೊಂದಷ್ಟು ಭಾವೋದ್ರೇಕ ಹಠ ನಿರಾಸೆಯಿಂದ ಚೇತರಿಸಿಕೊಳ್ಳಲು ಆಗದಂತ "ಆತ್ಮಾಘಾತ" ವಾಗಿ ಈ ಎಲ್ಲಾ ಅನಾಹುತ ಆಯಿತು.

ರಾಘವೇಂದ್ರ ಕೇಕೋಡರ ಕುಟುಂಬದ ಆತ್ಮಗಳು  ಸದ್ಯಕ್ಕೆ ಶಾಂತವಾಗುವುದು ಅನುಮಾನ....

ರಾಘವೇಂದ್ರ ಕೇಕೋಡರು ದಿನಕ್ಕೆ ಎರಡು ಹೊತ್ತು ಪೂಜೆ ಮಾಡುತ್ತಿದ್ದ ಆಸ್ತಿಕ . ಕೃಷಿ ಯನ್ನು ಮನ ಪೂರ್ವಕವಾಗಿ ಮಾಡುತ್ತಿದ್ದ
"ಕೃಷಿ ತಪಸ್ವಿ".... ಕೇಕೋಡರ ಆತ್ಮ ಅಡಿಕೆ ತೋಟದ  ಪ್ರತಿ ಮರ ಮರದಲ್ಲೂ ಸದಾ ಇರುತ್ತದೇನೋ ಅಂತ ಅನ್ನಿಸುತ್ತದೆ...

#ಷರಾ
ರಾಘವೇಂದ್ರ ಕೇಕೋಡರ ಹಿರಿಯ ಪುತ್ರ ಶ್ರೀ ರಾಮ ಕೇಕುಡ  ಅಡಿಕೆ ವ್ಯಾಪಾರದಲ್ಲಿ ದೊಡ್ಡ ನಷ್ಟ ಮಾಡಿ ಕೊಂಡ ಕಾರಣಕ್ಕೆ ಸಾಲಭಾದೆ ತಾಳಲಾರದೇ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿತು.
ಮುಗೀತು.

Comments

  1. ಅರುಣ್ ಪ್ರಸಾದ್ ಅವರೇ...
    ಯಾವುದೇ ಕುಟುಂಬದಲ್ಲಿ ಈ ರೀತಿಯ ದುರ್ಘಟನೆ ನಡೆಯಬಾರದು. ಬೇರೆಯವರ ಕುಟುಂಬದ ವಿಚಾರದಲ್ಲಿ ಎಲ್ಲರೂ ತಮ್ಮ ನಾಲಿಗೆಯನ್ನು ಲಂಗು ಲಗಾಮು ಇಲ್ಲದೇ ಹರಿಯ ಬಿಡುವವರೇ . ನಿಮ್ಮ ಬಾಯಿ ಚಪಲಕ್ಕೆ, ಅಥವಾ ಬರೆಯಲು ಪಾಂಡಿತ್ಯ ಇದೆ, ಒಳ್ಳೊಳ್ಳೆ ಪದಗಳ ಬಳಕೆ ಗೊತ್ತಿದೆ ಅನ್ನುವ ಕಾರಣಕ್ಕೆ ದಯವಿಟ್ಟು ನಿಮ್ಮ ಮೂಗಿನ ನೇರಕ್ಕೆ ಅರಳಸುರಳಿಯ ಘಟನೆಯ ಬಗ್ಗೆ ಬರೆಯಬೇಡಿ. ವಾಸ್ತವವಾಗಿ ಪೊಲೀಸ್ ತನಿಖೆ ನಡೆಯುತ್ತಿರುವಾಗ ಈ ರೀತಿಯ ಯಾವುದೇ ಊಹಾಪೋಹಗಳನ್ನು ಹಬ್ಬಿಸಬಾರದು. ಇರಲಿ, ರಾಘವೇಂದ್ರ ಅವರ ಕುಟುಂಬದ ಜೊತೆ ರಾಘವೇಂದ್ರ ಅವರ ತಂದೆಯ ಕಾಲದಿಂದಲೂ ಅವರ ಕುಟುಂಬದ ಬಹುತೇಕ ಎಲ್ಲ ಆಗುಹೋಗುಗಳಲ್ಲಿಯೂ ಪಾಲ್ಗೊಂಡಿರುವ ಕಾರಣದಿಂದ ಒಂದೆರಡು ಸಂಗತಿಗಳನ್ನು ಇಲ್ಲಿ ಹೇಳುತ್ತಿದ್ದೇನೆ. ಮೊದಲನೆಯದಾಗಿ, ರಾಘವೇಂದ್ರ ಅವರ ಅಣ್ಣ ಪ.ರಾ. ಕೃಷ್ಣಮೂರ್ತಿ ಅವರು ಆರ್ ಎಸ್ ಎಸ್ ಪ್ರಚಾರಕರು .... ನಿಜ. ಆದರೆ ನರೇಂದ್ರ ಮೋದಿ ಅವರ ಜೊತೆ ಒಂದೇ ಕೋಣೆಯಲ್ಲಿದ್ದರು ಎಂಬುದು ಶುದ್ಧ ಸುಳ್ಳು.
    ರಾಘವೇಂದ್ರ ಕೇಕುಡ ನಿಜವಾಗಿಯೂ ಕಷ್ಟ ಪಟ್ಟು ಸಾವಯವ ಕೃಷಿ ಮಾಡಿ ತೋಟ ಚೆನ್ನಾಗಿ ಮಾಡಿದ್ದಾರೆ.ದುರಂತಕ್ಕೆ ರಾಘುಮಾವನ ( ರಾಘವೇಂದ್ರ ಕೇಕುಡ) ಮನಸ್ಥಿತಿಯೇ ಕಾರಣ ಹೊರತು, ಬೇರೆ ಯಾವುದೂ ಅಲ್ಲ. ಅವರ ಆಸ್ತಿ ವಿಭಾಗ ಆಗಿ 20 ವರ್ಷ ಆಗಿದೆ.
    ಇನ್ನು ಈ ಘಟನೆಗೆ " ಕೆರೆಗೆ ಹಾರ" , ಮಲೆನಾಡಿನ ಮನೆ ಮನೆ ಕಥೆ , ಮಲೆನಾಡಿನ ಜನರಿಗೊಂದು ಪಾಠ ಇತ್ಯಾದಿ ತಳುಕುಹಾಕಿ ದಯವಿಟ್ಟು ಕಾದಂಬರಿ ಬರೆಯಬೇಡಿ. ಪೋಲೀಸ್ ತನಿಖೆ ಮುಗಿಯುವವರೆಗೆ ಸಭ್ಯತೆಯಿಂದ ಇರಬೇಕಾಗಿ ಸಾಂದರ್ಭಿಕ ಕಾದಂಬರಿಕಾರರಲ್ಲಿ ವಿನಂತಿ.

    ReplyDelete

Post a Comment

Popular posts from this blog

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ