Skip to main content

Blog number 1788. ಸಾಕುಪ್ರಾಣಿಗಳ ಮೂಕ ಪ್ರೀತಿಯ ಪ್ರತಿಬಿಂಬಕ್ಕೆ ಜನುಮ ಜನುಮದ ಅನುಬಂಧ ಇರುತ್ತದೆ.

https://youtu.be/JGInH3VYNIE?feature=shared

#ನಿತ್ಯ_ರಾತ್ರಿ_ಮನೆ_ತಲುಪಿದಾಗ

#ನನ್ನ_ಪ್ರೀತಿಯ_ಶಂಭೂರಾಮನ_ಸ್ವಾಗತ.

#ಜನುಮ_ಜನುಮಗಳ_ಅನುಬಂದವಾದ_ಈ_ಗೆಳೆತನ


  ನನ್ನ ಶಂಭೂರಾಮ ನಾನು ಮನೆಯಿಂದ ಹೊರ ಹೋಗಿ ವಾಪಾಸು ಬರುವಾಗ ಕಾಯುತ್ತಿರುತ್ತಾನೆ, ನಾನು ಕಾಲಿಂಗ್‌ ಬೆಲ್ ಒತ್ತಿದಾಗ ಅವನಿಗೆ ನಾನೇ ಅಂತ ಗೊತ್ತಾಗುತ್ತದೆ ಬಾಗಿಲ ಲಾಕ್ ತೆಗೆಯಲು ಒಳಗಿದ್ದವರಿಗೆ ಅವಸರಿಸುತ್ತಾನೆ.
  ನಂತರ ಅವನ ಸಂಭ್ರಮವೇ ಬೇರೆ, ಅವನು ವ್ಯಕ್ತಪಡಿಸುವ ಪ್ರೀತಿಯ ಸಂವಹನಕ್ಕೆ ಭಾಷೆಯ ಹಂಗಿಲ್ಲ.
   ಇದು ಸಾಕುಪ್ರಾಣಿಗಳನ್ನು ಸಾಕಿದವರಿಗೆಲ್ಲ ಅನುಭವ ಆಗಿರುವಂತಹದ್ದೆ .
   ಸಾಕುಪ್ರಾಣಿಗಳು ನಮ್ಮ ಜೊತೆ ಸೇರಲು ಅಥವ ನಾವು ಸಾಕುಪ್ರಾಣಿ ಜೊತೆ ಸೇರಲು ಜನುಮ ಜನುಮಗಳ ಅನುಬಂದ ಕಾರಣ ಅನ್ನುತ್ತಾರೆ.
  ಮೂಕ ಪ್ರಾಣಿಗಳಾದರೂ ಅವುಗಳ ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
  ನನ್ನ ಅಳಿಯರು ಸೆರೆ ಹಿಡಿದ ಈ ಸುಂದರ ವಿಡಿಯೋ ಶಂಭೂರಾಮನ ಪ್ರೀತಿಯ ಸ್ವಾಗತದ ನನ್ನ ನೆನಪಿನ ದಾಖಲೆ ಆಗಿದೆ.

Comments