ಭಾಗ - 20, ತುಂಬೆ ಸುಬ್ರಾಯರು ಆ ಕಾಲದಲ್ಲಿ ಬದರೀನಾರಾಯಣ್ ಅಯ್ಯಂಗಾರರ ಪರಮಾಪ್ತರು, ಆಗಿನ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ನಂಬಿಕೆಯ ಗೆಳೆಯರು.
#ಭಾಗ_20. #ಬದರಿನಾರಾಯಣ್_ಅಯ್ಯ೦ಗಾರರ_ಅಚ್ಚುಮೆಚ್ಚಿನ_ತುಂಬೆ_ಸುಬ್ರಾಯರು_ಮತ್ತು_ಮೂಗಿಮನೆ_ಗಣೇಶ್_ಹೆಗ್ಗಡೆಯವರು #ಅಳ್ನಾವರ್_ಅಡಿಕೆ_ಕಂಪನಿ_ಅಧ್ಯಕ್ಷರಾಗಿದ್ದ_ತುಂಬೆ_ಸುಬ್ರಾಯರು #ಆನಂದಪುರಂನ_ಅಯ್ಯ೦ಗಾರರ_ಕಾಂಗ್ರೇಸ್_ಮುಖಂಡರಾದ_ಆಹ್ಮದ್_ಆಲೀ_ಖಾನರ_ಮುರಿದು_ಬಿದ್ದ_ಜಮೀನು_ವ್ಯಾಪಾರ. #ಮತೂ೯ರು_ಮೂಕಪ್ಪರನ್ನು_ಶಾಸಕರಾಗಿಸಿದವರು. ಬದರಿನಾರಾಯಣ ಅಯ್ಯಂಗಾರರ ರಾಜಕಾರಣ ಪ್ರಾರಂಭದಿಂದ ಉತ್ತುಂಗದಲ್ಲಿಂದ ಅಂತ್ಯದವರೆಗೆ ತುಂಬೆ ಸುಬ್ರಾಯರ ಗೆಳೆತನ ಮುಂದುವರಿದಿತ್ತು, ಬದರಿನಾರಾಯಣ ಅಯ್ಯಂಗಾರರು ಸಾಗರಕ್ಕೆ ಬಂದಾಗೆಲ್ಲ ಅವರ ಊಟ ಉಪಹಾರ ಮತ್ತು ವಸತಿ ತುಂಬೆಯ ಸುಬ್ರಾಯರ ಮನೆಯೇ ಆಗಿತ್ತು. ರಾಜಕಾರಣದ ವಿಚಾರದಲ್ಲಿ ಜೊತೆಗೆ ಮೂಗಿಮನೆ ಗಣೇಶ ಹೆಗ್ಗಡೆಯವರೂ (ಮೂಗಿಮನೆ ಗಣೇಶ್ ಹೆಗ್ಗಡೆಯವರು) ಸದಾ ಇರುತ್ತಿದ್ದರು (ತಾಳಗುಪ್ಪ ಮೂಗಿಮನೆ ಸುಬ್ರಾಯ ಹೆಗ್ಗಡೆ ತಂದೆ). ಸಾಗರ ಯಡಜಿಗಳೆಮನೆ ಮಾರ್ಗದ ಹಕ್ಕರೆ ಮಾರ್ಗದ ತುಂಬೆಗೆ ಆ ಕಾಲದಲ್ಲಿ ಬಸ್ ಇರಲಿಲ್ಲ, ಪ್ರತಿಷ್ಟಿತ ಅಳ್ನಾವರ ಕಂಪನಿಯ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾರಾಯರು ನಡೆದುಕೊಂಡೆ ಮಂಕಾಳೆ ಮೂಲಕ ಕಾಲು ದಾರಿಯಲ್ಲಿ ಸಾಗರದ ಹಾನ೦ಬಿ ಹೊಳೆ ದಾಟಿ ಬರುತ್ತಿದ್ದರಂತೆ ಹಾಗೆ ಬಂದವರು ವಾರದಲ್ಲಿ ಮೂರರಿಂದ ನಾಲ್ಕು ದಿನ ಈಗಿನ ವೀರಶೈವ ಕಲ್ಯಾಣ ಮಂಟಪದ ಎದರು ಗೊಜನೂರು ಓಣಿಯ ಬಾಡಿ...