Blog number 1964.ದುಡಿಮೆಯ ಶ್ರಮದ ನಡುವಿನ ಪ್ರವಾಸಗಳು ದುಡಿಮೆಗೆ ಹೆಚ್ಚಿನ ಶಕ್ತಿ ನೀಡುವುದು, ನಮ್ಮ ಊರಿನ ಗೆಳೆಯರ ತಂಡ ಪ್ರತಿ ವರ್ಷ ಕುಟುಂಬ ಸಮೇತ ಪ್ರವಾಸ ಮಾಡುತ್ತಾರೆ
#ನಮ್ಮ_ಊರಿನ_ದಾಸಕೊಪ್ಪದ_ಗೆಳೆಯರ_ವಾರ್ಷಿಕ_ಪ್ರವಾಸ #ಈ_ವಷ೯_ಉತ್ತರ_ಭಾರತ_ಪ್ರವಾಸ_ಮಾಡುತ್ತಿದ್ದಾರೆ #ಮುಂದಿನ_ವರ್ಷ_ಅಂಡಮಾನ್_ನಿಕೋಬಾರ್_ಪ್ರವಾಸ_ಮಾಡಲಿ #ನಮ್ಮೂರ_ಗೆಳಿಯರ_ಪ್ರವಾಸ_ಸುಖಕರ_ಆಗಿರಲಿ_ಎಂದು_ಶುಭ_ಹಾರೈಸುತ್ತೇನೆ. ವಿಶ್ವ ಪ್ರವಾಸೋದ್ಯಮದ ದಿನ 27 ಸೆಪ್ಟಂಬರ್ ಪ್ರತಿ ವರ್ಷ ಆಚರಿಸಲಾಗುತ್ತದೆ. ಪ್ರವಾಸ ಮನುಷ್ಯ ಯಾವಾಗಿಂದ ಪ್ರಾರಂಭಿಸಿದ ಗೊತ್ತಿಲ್ಲ ಆದರೆ ಪ್ರವಾಸಗಳಲ್ಲಿ ಹಲವು ವಿಧಗಳಿವೆ ಅದರಲ್ಲಿ ಧಾರ್ಮಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ವಾರಂತ್ಯದ ಪ್ರವಾಸ, ವಿದೇಶ ಪ್ರವಾಸ ಹೀಗೆ... ಯುರೋಪಿಯನ್ನರು ಹೆಚ್ಚು ಪ್ರವಾಸವನ್ನು ಮಾಡುವ ಗುರಿಯನ್ನು ಅವರ ಜೀವನದಲ್ಲಿ ಹೊಂದಿರುತ್ತಾರೆ ಅದಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಾರೆ. ಇತ್ತೀಚೆಗೆ ಭಾರತೀಯರಲ್ಲೂ ಯುವ ಜನಾಂಗ ಪ್ರವಾಸದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿಯನ್ನು ಪಡೆಯುತ್ತಿದೆ ಪ್ರತಿ ಪ್ರವಾಸವು ನಮ್ಮ ಮನಸ್ಸನ್ನು ರಿಚಾರ್ಜ್ ಮಾಡುತ್ತದೆ ಆದ್ದರಿಂದ ಪ್ರವಾಸ ಅತಿ ಮುಖ್ಯವಾದ ಒಂದು ರೀತಿಯ ಚಿಕಿತ್ಸೆ ಕೂಡ . ಕನ್ನಡಿಗರು ತಮ್ಮ ಊರು ಜಿಲ್ಲೆ ರಾಜ್ಯ ಬಿಟ್ಟು ಹೊರಹೋಗಲು ಅಳುಕುತ್ತಾರೆ ಅದೇ ಕೇರಳಿಗಳು, ತಮಿಳು ಜನಗಳು ಹಾಗೂ ತೆಲುಗು ಜನರು ದೇಶದ ವಿದೇಶದ ಯಾವುದೇ ಮೂಲೆಗೆ ಹೋಗಲು ಅಳುಕುವುದಿಲ್ಲ. ಇದಕ್ಕೊಂದು ಪ್ರಸಿದ್ದ ಗಾದೆ ಇದೆ ಚಂದ್ರಲೋಕದಲ್ಲಿ ಮೊದಲಿಗೆ ಇಳಿದವರು ಅಲ್ಲಿ ಮಲೆಯಾಳಿ ಕಾಕನ ಟೀ ಕ್ಯಾಂಟೀನ್...