Skip to main content

Posts

Showing posts with the label Ex chief minister Bangarappa connection with Anandapuram

Blog number 1078. ಆನಂದಪುರಂ ಇತಿಹಾಸ ಸಂಖ್ಯೆ - 85. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನಂದಪುರಂನ ಬೆಸ್ತರ ಗಂಗಾ ಮಠವಿತ್ತು ಈ ಮಠದಲ್ಲಿ ಸಭಾ ಭವನ ನಿಮಿ೯ಸಲು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಶಂಕುಸ್ಥಾಪನೆ ಮಾಡಿದರೂ ನಿಮಾ೯ಣವಾಗಲಿಲ್ಲ ಬೆಸ್ತರ ಸಮೂದಾಯದ ಇಚ್ಚಾಶಕ್ತಿ ಕೊರತೆ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರ೦ತ ಪ್ರೇಮ ಕಥೆಯ ಜಾತಿ ಕಾರಣದ ಮುಂದಿನ ಭಾಗವಾಗಿದೆ

#ಆನಂದಪುರಂ_ಇತಿಹಾಸ_ಸಂಖ್ಯೆ_85. #ಆನಂದಪುರಂಗೂ_ಬಂಗಾರಪ್ಪರಿಗೂ_ಇದ್ದ_ನಂಟು #ಮದ್ಯಕಣ್ಣೂರಿಂದ_ಸೈಕಲ್_ಮೇಲೆ_ಯಡೇಹಳ್ಳಿ_ಪ್ರವಾಸಿಮಂದಿರದಲ್ಲಿ_ನಡೆಯುತ್ತಿದ್ದ #ಶರಾವತಿ_ಮುಳುಗಡೆ_ವಿಶೇಷ_ಕೋರ್ಟಗೆ_ಬರುತ್ತಿದ್ದರು #ಬೆಸ್ತರ_ಸಮುದಾಯದ_ಅಭಿವೃದ್ಧಿಗಾಗಿ_ಶ್ರಮಿಸುತ್ತಿದ್ದ_ಕೋರ್ಟ್_ಹಾಲಪ್ಪನವರು. #ಐತಿಹಾಸಿಕ_ಗಂಗಾಮಠದ_ಅಭಿವೃದ್ದಿಗೆ_ಅಡೆ_ತಡೆ #ಬಂಗಾರಪ್ಪರ_ಬಾಷಣ_ಅಜಿ೯_ಹಾಕಿ_ಯಾರೂ_ಇಂತಹ_ಜಾತಿಯಲ್ಲಿ_ಹುಟ್ಟಲು_ಸಾಧ್ಯವಿಲ್ಲ.    ಸಾರೇಕೊಪ್ಪದ ಬಂಗಾರಪ್ಪನವರೆಂದರೆ ಕಲರ್ ಪುಲ್ ರಾಜಕಾರಣಿ ಎಂದೇ ಅಘೋಷಿತ ಬಿರುದು ಅದಕ್ಕೆ ಕಾರಣ ಅವರ ಆಕರ್ಷಕ ದಿರಿಸು,ಕೂಲಿಂಗ್ ಗ್ಲಾಸ್, ಲಗ್ಜುರಿ ಕಾರ್, ಅವರ ಭಾಷಣ, ರಾಜಕಾರಣದ ತಂತ್ರಗಾರಿಕೆಗಳು.   ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೆ ಕಾಯ೯ಕ್ರಮ ಉದ್ಘಾಟಿಸಿದ ನಂತರ ರಾತ್ರಿ ಊಟ ನಮ್ಮ ಮನೆ ಸಮೀಪದ ಪ್ರವಾಸಿ ಮಂದಿರದಲ್ಲಿ (ಒಂದು ಕಾಲದ ಬ್ರಿಟೀಷ್ ಬಂಗ್ಲೆ ).    ಜಿಲ್ಲಾ ಮಟ್ಟದ ಯುವಜನ ಮೇಳದ ಸ್ಪರ್ದಾಳುಗಳ ಜೊತೆ ಸ್ಥಳಿಯರೂ ಸೇರಿ ಸುಮಾರು 10 ಸಾವಿರ ಜನ ಸೇರಿದ ಯಶಸ್ವಿ ಸಭೆ ಬಂಗಾರಪ್ಪರಿಗೆ ಹುರುಪು ನೀಡಿತ್ತು.   ಪ್ರವಾಸಿ ಮಂದಿರದಲ್ಲಿ ಊಟ ಮಾಡುವಾಗ ಅವರಿಗೆ ಈ ಬ್ರಿಟೀಶ್ ಬಂಗಲೆಯಲ್ಲಿ ಅವರ ವಕೀಲಿ ವೃತ್ತಿಯ ಪ್ರಾರಂಭದಲ್ಲಿ ಕೋರ್ಟ್ ಕಲಾಪದಲ್ಲಿ ಭಾಗವಹಿಸಿದ ನೆನಪಾ...