4128..ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ. ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ. 196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು.
ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ.
ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ.
196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು.
ಹೊಸಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯಲ್ಲಿದೆ.
ಮೈಸೂರು ಅರಸರ ಜನವಿರೋದಿ ಭೂಕಂದಾಯ, ಸುಂಕದ ವಿರುದ್ದ ಆನಂದಪುರಂ ಹೋಬಳಿಯಲ್ಲಿ ಬ್ಬಹತ್ ರೈತ ಸಮಾವೇಶ ನಡೆಯಿತು.
ಏಪ್ರಿಲ್ 1830ರಲ್ಲಿ ಕೆಳದಿ ಬಿದನೂರು ಸಂಸ್ಥಾನದ ರಾಜನೆಂದು ಬೂದಿ ಬಸಪ್ಪ ನಾಯಕರು ಘೋಷಣೆ ಮಾಡುತ್ತಾರೆ.
ಇತಿಹಾಸದಲ್ಲಿ ಬೂದಿಬಸಪ್ಪನಾಯಕರನ್ನು ದರೋಡೆಕೋರ ಎಂದು ಬರೆದು ಇತಿಹಾಸಕ್ಕೆ ಅಪಚಾರ ಮಾಡಿದ್ದಾರೆ.
ಬೂದಿ ಬಸಪ್ಪ ನಾಯಕ ಯಾರು?... ಅಂತ ಇತಿಹಾಸದ ದಾಖಲೆಗಳಲ್ಲಿ ಹುಡುಕಿದರೆ ಆತ ಶಿಕ್ಷೆಗೆ ಒಳಗಾದ ದರೋಡೆಕೋರ, ಕೆಳದಿ ಅರಸರ ಹಿತೈಷಿ ಜಂಗಮರ ಹತ್ತಿರದ ರಾಜ ಮುದ್ರೆ ಉಂಗುರ ಕದ್ದು , ತಾನು ಕೆಳದಿ ವಂಶಸ್ಥರವನು ಎಂದು ಹೇಳಿಕೊಂಡವ ಎಂದೆಲ್ಲ ಬರೆದಿದ್ದಾರೆ.
ಆದರೆ ಜನಪದದಲ್ಲಿ ಬೂದಿ ಬಸಪ್ಪನಾಯಕರು ನಿಜ ಹೋರಾಟಗಾರರು, ಅವರು ಮೈಸೂರು ಕೃಷ್ಣರಾಜ ಒಡೆಯರ್ III ರ ವಿಪರೀತ ಭೂಕಂದಾಯ ಮತ್ತು ಸುಂಕದ ವಿರುದ್ಧ ನಡೆಸಿದ ರೈತ ಹೋರಾಟ ಕೆಳದಿಬಿದನೂರು ಪ್ರಾಂತ್ಯ ಮಾತ್ರವಲ್ಲ ದೂರದ ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿಯ ಮುನಿರಾಬಾದ್ ತನಕ ವ್ಯಾಪಿಸುತ್ತದೆ.
ಇವರ ಜೊತೆ ಬಿದನೂರುನಗರ ಪ್ರಾಂತ್ಯದ ರಂಗಪ್ಪ ನಾಯಕರು ಕೈಜೋಡಿಸುತ್ತಾರೆ, ಆಗ ಇವರು ನಡೆಸುತ್ತಿದ್ದ ಸಾವಿರಾರು ರೈತರು ಸೇರುತ್ತಿದ್ದ ರೈತ ಸಮಾವೇಷಕ್ಕೆ ಶಿವಕೂಟ (ಕುಟ್ಟ೦ ಅಂತ ಬ್ರಿಟಿಷರ ದಾಖಲೆ)ಎಂದು ಕರೆಯುತ್ತಿದ್ದರು.
ಈ ಭಾಗದ ರೈತರು ಸಂಪೂರ್ಣ ಕರನಿರಾಕರಣೆಗೆ ಕಾರಣವೇನೆಂದರೆ ಕೆಳದಿ ಅರಸರ ಕಾಲದಲ್ಲಿ ರಾಜ ಶಿವಪ್ಪನಾಯಕರು ಭೂಮಿಯ ಪಲವತ್ತತೆಯ ವಿಂಗಡನೆಯ ಶಿಸ್ತು ಆದಾರದಲ್ಲಿ ಭೂಕಂದಾಯ ವಿದಿಸುತ್ತಿದ್ದರಿಂದ ಪ್ರಜೆಗಳಿಗೆ ಕೆಳದಿ ರಾಜ್ಯದ ಭೂ ಕಂದಾಯ ಹೊರೆ ಆಗಿರಲಿಲ್ಲ.
1763 ರಲ್ಲಿ ಹೈದರಾಲಿ ಕೆಳದಿ ಸಾಮ್ರಾಜ್ಯ ವಶ ಪಡಿಸಿಕೊಂಡಿದ್ದರಿಂದ ಕೆಳದಿ ರಾಜ್ಯ ಮೈಸೂರು ಸಂಸ್ಥಾನಕ್ಕೆ ಸೇರುತ್ತದ.
ನಂತರ 9 ಅಕ್ಟೋಬರ್ 1831 ರವರೆಗೆ ಸುಮಾರು 68 ವರ್ಷ ಮೈಸೂರು ಅರಸರ ಆಡಳಿತದಲ್ಲಿರುತ್ತದೆ.
1820 ರಲ್ಲಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಮಿತಿ ಮೀರಿದ ರಾಜವಂಶಸ್ಥರ ವೆಚ್ಚ, ಆಡಳಿತದಲ್ಲಿ ಬ್ರಷ್ಟಾಚಾರದ ನಿಯಂತ್ರಣ ಸಾಧ್ಯವಾಗದೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ.
ಅದರಿಂದ ಹೊರಬರಲು ಮೈಸೂರು ಅರಸರು ಶುರ್ಟಿ ಮತ್ತು ಸಾಯರ್ ಎಂಬ ಹೊಸ ತೆರಿಗೆ ಜಾರಿ ಮಾಡುತ್ತಾರೆ.
#ಶುರ್ಟಿ ಎಂಬ ಭೂಕಂದಾಯ ವಸೂಲಿಯಲ್ಲಿ, ಭೂಕಂದಾಯ ನೀಡುವ ರೈತರು ಮತ್ತು ಅದನ್ನು ಬೊಕ್ಕಸಕ್ಕೆ ಪಡೆಯುವ ರಾಜನ ಮದ್ಯೆ ಮಧ್ಯವತಿ೯ಗಳು ಹರಾಜು ಮೂಲಕ ನೇಮಕ ಆಗುತ್ತಾರೆ ಅವರು ರಾಜರು ನಿರ್ದರಿಸಿದ ಕಡಿಮೆ ಕಂದಾಯ ರಾಜರಿಗೆ ನೀಡಿ ರೈತರಿಂದ ಅನದಿಕೃತವಾಗಿ ವಿಪರೀತ ಕಂದಾಯ ಸುಲಿಗೆ ಮಾಡಲು ಪ್ರಾರಂಭಿಸುತ್ತಾರೆ.
ಸಾಗುವಳಿ ಮಾಡದ, ಪಲ ಭರಿತ ಅಲ್ಲದ ಜಮೀನಿಗೂ ರೈತರು ತೆರಿಗೆ ವಿದಿಸುತ್ತಾರೆ ಆದರೆ ಅದು ರೈತರಿಗೆ ಭರಿಸಲಾಗುವುದಿಲ್ಲ.
ಇದರ ಮೇಲೆ ರೈತರು ತಮ್ಮ ಫಸಲು ಸಾಗಾಣಿಕೆಗೆ ವಿಪರೀತ ಸುಂಕ ವಿದಿಸುವ #ಸಾಯರ್ ಪದ್ಧತಿಯಿಂದ ಕೆಳದಿ ಸಂಸ್ಥಾನದ ರಾಜರ ಆಡಳಿತದಲ್ಲಿ ನೆಮ್ಮದಿಯಲ್ಲಿದ್ದ ರೈತರು ಮೈಸೂರು ಅರಸರ ಕಾಲದಲ್ಲಿ ಸಂಕಷ್ಟಕ್ಕೆ ಈಡಾಗುತ್ತಾರೆ.
ಆಗ ಬಿದನೂರು ನಗರ ಪ್ರಾಂತ್ಯದಲ್ಲಿ ಪ್ರಸಿದ್ದ ಜನಪರ ಹೋರಾಟಗಾರ ರಂಗಪ್ಪ ನಾಯಕರ ನೇತೃತ್ವದಲ್ಲಿ ರೈತರು ಪ್ರತಿಭಟನೆಗೆ ತಯಾರಾಗುತ್ತಾರೆ.
ಆಗ ಬೂದಿಬಸಪ್ಪ ನಾಯಕರು ಈ ಹೋರಾಟಕ್ಕೆ ಹೊಸ ರೂಪ ನೀಡುತ್ತಾರೆ ಮತ್ತೊಮ್ಮೆ ಕೆಳದಿ ಸಂಸ್ಥಾನ ಆಡಳಿತ ಪಡೆಯುವ ಆಶಾಭಾವನೆಯಿಂದ ಜನಗಳೂ ಈ ಹೋರಾಟಕ್ಕೆ ದುಮುಕುತ್ತಾರೆ,
ಆಗ ಇಲ್ಲಿನ ಬಹುಸಂಖ್ಯಾತ ಲಿಂಗಾಯಿತರು ಮತ್ತು ದೇಶಸ್ಥ ಬ್ರಾಹ್ಮಣರು,ಸ್ಥಳಿಯ ಸರ್ಕಾರಿ ಅಧಿಕಾರಿಗಳಾಗಿದ್ದ ಶಾನುಬೋಗರು, ಪಟೇಲರುಗಳು ಬೂದಿ ಬಸಪ್ಪ ನಾಯಕರ ರೈತರ ಹೋರಾಟಕ್ಕೆ ಬೆಂಬಲಿಸುತ್ತಾರೆ.
ಮೈಸೂರು ಅರಸರಿಗೆ ತಮ್ಮ ಸೈನಿಕರಿಗೆ ಸುಮಾರು 18 ತಿಂಗಳು ಕಾಲ ಸಂಬಳವೇ ನೀಡಲಾಗದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ.
ಇದರಿಂದ ಪರಿಸ್ಥಿತಿ ವಿಕೋಪಗೊಂಡು ಸುಮಾರು 15 ಸಾವಿರ ಮೈಸೂರು ರಾಜ್ಯಕ್ಕೆ ಸೇರಿದ್ದ ಸೈನಿಕರು ಬೂದಿ ಬಸಪ್ಟ ನಾಯಕರ ಈ ಹೋರಾಟಕ್ಕೆ ಬೆಂಬಲಿಸಿ ಅವರ ಜೊತೆ ಸೇರುತ್ತಾರೆ.
ಇದೇ ಸಂದರ್ಭದಲ್ಲಿ ವಿವಾಹ ಆಗುವ ಬೂದಿ ಬಸಪ್ಪ ನಾಯಕರು ಏಪ್ರಿಲ್ 1830 ರಲ್ಲಿ ತಾವು ಬಿದನೂರು ನಗರದ ರಾಜ ಎಂದು ಘೋಷಿಸಿಕೊಳ್ಳುತ್ತಾರೆ.
1830 ರಲ್ಲಿ ಬೂದಿ ಬಸಪ್ಪ ನಾಯಕರ ಸೈನ್ಯ ಆನಂದಪುರಂ ಕೋಟೆಗೆ ಮುತ್ತಿಗೆ ಹಾಕುತ್ತದೆ ಆದರೆ ಬೂದಿಬಸಪ್ಪರ ಪ್ರಯತ್ನ ವಿಫಲವಾಗುತ್ತದೆ.
ಬೂದಿ ಬಸಪ್ಪ ನಾಯಕರು ಬಿದನೂರು ನಗರ ರಾಜರೆಂದು ಘೋಷಿಸಲು ಕಾರಣ ಬೂದಿ ಬಸಪ್ಪ ನಾಯಕರು ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿಯ ಕೊನೆಯ ಅರಸರ ಚೆನ್ನಬಸವ ನಾಯಕರ ಪ್ರೇಮ ವಿವಾಹದಿಂದ ಜನಿಸಿದ ರಾಜವಂಶಸ್ಥರು.
ಆದರೆ ಬ್ರಿಟಿಷರ ವಿರುದ್ಧ ಮತ್ತು ಮೈಸೂರು ಮಹಾರಾಜರ ವಿರುದ್ಧ ರೈತರನ್ನು ಹೋರಾಟಕ್ಕೆ ತಯಾರು ಮಾಡಿದ್ದ ಬೂದಿ ಬಸಪ್ಪರನ್ನು ಬ್ರಿಟೀಷರು ಮತ್ತು ಮೈಸೂರು ಅರಸರು ದರೋಡೆಕೋರನೆಂದೆ ದಾಖಲಿಸುತ್ತಾರೆ.
ಇಲ್ಲಿ ಜನಪದದ ಸಾಕ್ಷಿಯೊಂದಿದೆ ಕೆಳದಿ ಅರಸರು ಶಿಕಾರಿಗಾಗಿ ಹೊನ್ನಾಳಿ ಸಮೀಪದ ಬಿದಿರಳ್ಳಿ ಕಣಿವೆಗೆ ಹೋಗುವಾಗ ಯಾವಾಗಲೂ ಕುಂಸಿಯಲ್ಲಿ ತಂಗುತ್ತಿರುತ್ತಾರೆ.
ನಂತರ ಬಿದಿರಳ್ಳಿ ಕಣಿವೆಗೆ ಸಮೀಪದ ಚಿನ್ನಿಕಟ್ಟೆಯಲ್ಲಿ ವಾಡೆಯೊಂದನ್ನ ನಿರ್ಮಿಸಿ ಅಲ್ಲಿ ತಂಗುತ್ತಿರುತ್ತಾರೆ.
ಆಗ ಚಿನ್ನಿಕಟ್ಟೆಯಲ್ಲಿ ಸುಂದರ ಜಂಗಮ ಕನ್ಯೆಯಲ್ಲಿ ಕೆಳದಿ ರಾಜ ಚೆನ್ನಬಸವ ನಾಯಕರಿಗೆ
ಪ್ರೇಮ ಉಂಟಾಗಿ, ಚೆನ್ನಬಸವ ನಾಯಕರು ವಿವಾಹ ಆಗುತ್ತಾರೆ.
ಆಗ ಚೆನ್ನಬಸವ ನಾಯಕರು ಜಂಗಮ ಕನ್ಯೆಗೆ ನೀಡಿದ ರಾಜ ಮುದ್ರೆ ಉಂಗುರವೇ ಅವರ ಪುತ್ರ ಬೂದಿಬಸಪ್ಪ ನಾಯಕರಿಗೆ ತಾಯಿಯಿಂದ ಬಂದಿರುತ್ತದೆ.
23- ಆಗಸ್ಟ್ - 1830 ರಲ್ಲಿ ಅಂದರೆ 192 ವಷ೯ದ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಹೊಸಂತೆ ಊರಿನಲ್ಲಿ ಬೃಹತ್ ರೈತ ಸಮಾವೇಶ ಬೂದಿ ಬಸಪ್ಪ ನಾಯಕರು ಹಮ್ಮಿಕೊಳ್ಳುತ್ತಾರೆ.
ಈ ಐತಿಹಾಸಿಕ ರೈತ ಸಮಾವೇಶಕ್ಕೆ ಸಾವಿರಾರು ರೈತರು ನೂರಾರು ಎತ್ತಿನಗಾಡಿಗಳಲ್ಲಿ ಬಂದು ಭಾಗವಹಿಸುತ್ತಾರೆ,ದೂರ ದೂರದ ಊರಿನ ಪ್ರತಿನಿಧಿಗಳೂ ಇಲ್ಲಿಗೆ ಬಂದು ರೈತ ಸಮಾವೇಷದಲ್ಲಿ ಸೇರುತ್ತಾರೆ.
ಹೊಸಂತೆ ರೈತ ಸಮಾವೇಶದ ನಂತರ ಬಿದನೂರು ನಗರ ಪ್ರಾಂತ್ಯದ ರೈತರು ಎಲ್ಲಾ ಕಡೆಗೂ ಈ ಕರನಿರಾಕರಣೆಗಾಗಿ ಬೇವಿನ ಎಲೆಗಳನ್ನೇ ಆಹ್ವಾನ ಪತ್ರಿಕೆಯಂತೆ ಬಳಸುತ್ತಾ ಜನರನ್ನು ಕರನಿರಾಕರಣೆ ಆಹ್ವಾನಿಸುತ್ತಾರೆ.
ಇದರಿಂದ ಮೈಸೂರು ಅರಸರು ಆಡಳಿತದಲ್ಲಿ ವಿಫಲರಾಗುತ್ತಾರೆ ಈಸ್ಟ್ ಇಂಡಿಯಾ ಕಂಪನಿ ಮೈಸೂರು ರಾಜರಿಗೆ ಈ ಸ್ಥಳಗಳಿಗೆ ಸ್ವತಃ ಹೋಗಿ ಬಗೆಹರಿಸಲು ಸೂಚಿಸುತ್ತಾರೆ.
ಬ್ರಿಟೀಷರು ಇದನ್ನೆಲ್ಲ ಮದ್ರಾಸ್ ಪ್ರಾವಿನ್ಸಿಗೆ ವರದಿ ಮಾಡುತ್ತಾ ತಟಸ್ಥರಾಗಿರುತ್ತಾರೆ.
ಮೈಸೂರು ಒಡೆಯರ್ ಈ ಭಾಗದಲ್ಲಿ ಸಾಗುವಾಗ 7 ಡಿಸೆಂಬರ್ 1830 ರಲ್ಲಿ ಹೊನ್ನಾಳಿಯಲ್ಲಿ ಬೂದಿ ಬಸಪ್ಪ ನಾಯಕರ ಪ್ರಚೋದಿತ ರೈತ ಸಮಾವೇಶ ಶಿವಕೂಟಕ್ಕೆ (ಕುಟ್ಟಂನಲ್ಲಿ) 20 ಸಾವಿರಕ್ಕೂ ಮಿಕ್ಕಿದ ರೈತರು ಸೇರಿರುತ್ತಾರೆ.
ಇದನ್ನು ಸಹಿಸದ ಮೈಸೂರು ಮಹಾರಾಜರು ಬಿದನೂರು ನಗರದ ಅವರ ಆಡಳಿತಾಧಿಕಾರಿ ಕಿಶನ್ ರಾವ್ ನೇತೃತ್ವದಲ್ಲಿ ರೈತ ಸಮಾವೇಶದ ಮೇಲೆ ದೊಡ್ಡ ನರಮೇದಕ್ಕೆ ಅವಕಾಶ ನೀಡಿದ್ದು ಇತಿಹಾಸದಲ್ಲಿ ಘನ ಘೋರ ಕಪ್ಪು ಚುಕ್ಕೆ ಆಗಿದೆ.
ಈ ಚಳವಳಿ ನಿರತ ರೈತರ ಮೇಲೆ ನಿರಂತರ ಬಂದೂಕಿನ ಗೋಲಿ ಹಾರಿಸಿ ಚಳವಳಿಗಾರರನ್ನು ಕೊಂದ ನಂತರವೂ ಹೊನ್ನಾಳಿಯ ಮಾರಿಕೊಪ್ಪ ಹಳದಮ್ಮ ದೇವಾಲಯದಲ್ಲಿ ಅಡುಗಿದ್ದ ನೂರಾರು ರೈತ ಹೋರಾಟಗಾರನ್ನು ಹೊನ್ನಾಳಿ ಶಿಕಾರಿಪುರ ಮಾರ್ಗದ ಪ್ರತಿ ಬೇವಿನ ಮರಕ್ಕೆ ನೇಣಿಗೆ ಹಾಕುತ್ತಾರೆ.
ಹೋರಾಟಕ್ಕೆ ರೈತರನ್ನು ಸೇರಿಸಲು ಬೇವಿನ ಎಲೆಯನ್ನೆ ಸಂಕೇತಿಕ ಆಹ್ವಾನ ಪತ್ರಿಕೆ ಮಾಡಿದ್ದಕ್ಕೆ ಪ್ರತಿಯಾಗಿ ಬೇವಿನ ಮರಕ್ಕೆ ರೈತ ಹೋರಾಟಗಾರರನ್ನ ಬೇವಿನ ಮರಕ್ಕೆ ನೇಣು ಹಾಕುತ್ತಾರೆ.
12 ಮಾರ್ಚ್ 1831 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೈನ್ಯ ಹೊನ್ನಾಳಿ ವಶಪಡಿಸುಕೊಳ್ಳುತ್ತದೆ, 12 ಜೂನ್ 1831 ರಂದು ಬ್ರಿಟೀಷ ಸರ್ಕಾರ ರೈತ ಹೋರಾಟಗಾರರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ.
ಈ ಸಂದರ್ಭದಲ್ಲಿ ಬೂದಿ ಬಸಪ್ಪ ನಾಯಕರು ಹೈದ್ರಾಬಾದ್ ಸಂಸ್ಥಾನದ ಕಡೆ ಪರಾರಿ ಆದರು ಎಂದು ಮತ್ತು ರಂಗಪ್ಪ ನಾಯಕರು ಮರಣ ಹೊಂದಿದರೆಂಬ ಸುದ್ದಿ ಹರಡುತ್ತದೆ.
ಈ ರೀತಿ ಕೆಳದಿ ರಾಜ್ಯ ಪುನಃ ವಶಪಡಿಸಿಕೊಳ್ಳುವ ಕೆಳದಿ ರಾಜವಂಶಸ್ಥ ಬೂದಿ ಬಸಪ್ಪ ನಾಯಕರ ಪ್ರಯತ್ನ ವಿಫಲವಾಗುತ್ತದೆ.
ಒಂದು ಅಂದಾಜಿನಂತೆ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದಲ್ಲಿ ಜೀವಕಳೆದುಕೊಂಡವರ ಸಂಖ್ಯೆ ಕೆಲವು ಸಾವಿರವಾದರೂ ಬ್ರಿಟೀಷರ ದಾಖಲೆಗಳಲ್ಲಿ ಇದು ಕೇವಲ 700 ಅಂತ ದಾಖಲಾಗಿದೆ.
ಖ್ಯಾತ ಬರಹಗಾರ #ಪುರಶೋತ್ತಮಬಿಳಿಮಲೆ ಅವರ #ಅಮರ_ಸುಳ್ಯ_ರೈತ_ಹೊರಾಟ ಪುಸ್ತಕದಲ್ಲಿ ಬರುವ ಹೋರಾಟಗಾರ ಸ್ಟಾಮಿ ಅಪರಂಪರ/ ಕಲ್ಯಾಣಸ್ವಾಮಿ ವಿಫಲ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದ ನಾಯಕ ಹಾಗೂ 1830ರ ಏಪ್ರಿಲ್ ನಲ್ಲಿ ಕೆಳದಿ ರಾಜ್ಯದ ರಾಜನೆಂದು ಘೋಷಿಸಿಕೊಂಡ ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿ ಕೊನೆಯ ರಾಜ ಚೆನ್ನಬಸವ ನಾಯಕರ ಪುತ್ರ ಬೂದಿ ಬಸಪ್ಪ ನಾಯಕರೇ ಆಗಿರಬೇಕೆಂಬ ವಾದವೂ ಇದೆ, ಇದು ಸಂಶೋದನೆಯಾಗಬೇಕು.
ಬೂದಿ ಬಸಪ್ಪ ನಾಯಕರ ಐತಿಹಾಸಿಕ ಬೃಹತ್ ರೈತ ಸಮಾವೇಶ ನಡೆದ ಹೊಸಂತೆ ರೈತ ಸಮಾವೇಶ ನಮ್ಮ ದೇಶದ ಮೊದಲ ರೈತ ಸಮಾವೇಶ ಆಗಿದೆ.
#ಹೊಸಂತೆಯ ಈ ರೈತ ಹೋರಾಟದ ಸಮಾವೇಶದ ಕಿಚ್ಚು ದಿನದಿಂದ ದಿನಕ್ಕೆ ಬೃಹದಾಕಾರ ತಾಳಿ ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ತಮ್ಮ ರಾಜ್ಯ 4ನೇ ಆಂಗ್ಲೋ ಮೈಸೂರು ಯುದ್ದದಿಂದ ಪರೋಕ್ಷವಾಗಿ ಮೈಸೂರು ಆಡಳಿತ ನಡೆಸುತ್ತಿದ್ದ ಬ್ರಿಟೀಷರಿಗೆ ಬಿಟ್ಟುಕೊಡುವಂತಾಗುತ್ತದೆ (9 ಅಕ್ಟೋಬರ್ 1831).
50 ವರ್ಷಗಳ ಬ್ರಿಟಿಷ್ ಕಮಿಷನರ್‌ಗಳ ನೇರ ಆಡಳಿತದ ನಂತರ 1881 ರಲ್ಲಿ ಬ್ರಿಟಿಷರು ಅಧಿಕಾರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತುಪುತ್ರ ಹತ್ತನೇ ಚಾಮರಾಜ ಒಡೆಯರ್ ಅವರಿಗೆ ಹಸ್ತಾಂತರಿಸಿದರು.
ಇದನ್ನು ಇತಿಹಾಸದಲ್ಲಿ ಮೈಸೂರು ಪುನರರ್ಪಣೆ (Rendition of Mysore) ಎಂದು ಕರೆಯಲಾಗುತ್ತದೆ.
ಈ ರೀತಿ 50 ವರ್ಷ ಮೈಸೂರು ಆಡಳಿತ ಬ್ರಿಟೀಶರದ್ದಾಗಿ
ನಂತರ ಪುನಃ ಮೈಸೂರು ಮಹಾರಾಜರೇ ಆಡಳಿತಕ್ಕೆ ಬಂದಿದ್ದರಿಂದ ಈ ಘಟನೆಗಳು ಇತಿಹಾಸದ ಪುಟದಲ್ಲಿ ಕತ್ತಲಲ್ಲಿ ಇಡಲಾಗಿದೆ.
ಇತಿಹಾಸದಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪಾಗಿ ದಾಖಲಿಸಿ ಜನ ಮರೆಯುವಂತೆ ಮಾಡಿರುವ ಬೂದಿ ಬಸಪ್ಪ ನಾಯಕರ ಚರಿತ್ರೆ ಬಗ್ಗೆ ಮುಂದಿನ ದಿನದಲ್ಲಿ ಹೆಚ್ಚಿನ ಸಂಶೋದನೆಗಳಾಗಲಿ ಎಂದು ಹಾರೈಸುತ್ತೇನೆ.
#hosante #raithasamavesha #budibasappanayaka #bidanuru #keladi #mysore #british #anandapuram
Comments
Post a Comment