Skip to main content

4150.ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?..ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ...ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...


ಈಶಾ_ಸಂಸ್ಥೆಯ_80_ಚಾರಣಿಗರು_ಎಲ್ಲಿ?..
ಸದ್ಗುರು_ಜಗ್ಗಿ_ವಾಸುದೇವರ_ಸೃಷ್ಟಿಕರಣ...
ನೇಪಾಳದ_ಪ್ಲಾಶ್_ಪ್ಲಡ್_ಕಾರಣ ...

  ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ದುರಂತದ ದೃಶ್ಯಗಳು ಎಂತವರನ್ನು ಅಧೀರನಾಗಿಸುತ್ತದೆ.

   ಈ ಮಾಹಿತಿ ಪೂರ್ಣ ಲೇಖನ ಪೂರ್ತಿ ಓದಿ ನಿಮ್ಮ ಆಪ್ತರಿಗೆ ಶೇರ್ ಮಾಡಲು ವಿನಂತಿ.

   26 ಆಗಸ್ಟ್ 2026 ರಂದು ಟಿಬೆಟ್–ನೇಪಾಳ ಗಡಿ ಭಾಗದಲ್ಲಿ ಭೋಟೆ ಕೋಶಿ ನದಿ  ಪಾತ್ರದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ #ಈಶಾ_ಫೌಂಡೇಶನ್‌ನ 80 ಯಾತ್ರಿಕರ ತಂಡ ನಾಪತ್ತೆ ಆಗಿದೆ.

   ಸದ್ಗುರು ಅವರ ಈಶಾ ಫೌಂಡೇಶನ್ ವತಿಯಿಂದ ಪ್ರತಿವರ್ಷ ಆಯೋಜಿಸುವ 'ಈಶಾ ಸೇಕ್ರೆಡ್ ವಾಕ್ಸ್' ಅಡಿಯಲ್ಲಿ ಯಾತ್ರಿಕರು ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು.  

  ಈಶಾ ಫೌಂಡೇಶನ್ ಆಯೋಜಿಸುವ '#ಈಶಾ_ಸೇಕ್ರೆಡ್_ವಾಕ್ಸ್'  ಕೈಲಾಶ ಮಾನಸ ಸರೋವರ ಯಾತ್ರೆಯ ಶುಲ್ಕವು
​ಸಾಮಾನ್ಯ (ಭೂಮಾರ್ಗ) ಪ್ಯಾಕೇಜ್ ತಲಾ ಸುಮಾರು ₹3.5 ಲಕ್ಷದಿಂದ ₹4.5 ಲಕ್ಷ ಭಾರತೀಯ ನಾಗರಿಕರಿಗೆ.

​ಹೆಲಿಕಾಪ್ಟರ್ ಮಾರ್ಗ / ಪ್ರೀಮಿಯಂ ಪ್ಯಾಕೇಜ್ ತಲಾ ಸುಮಾರು ₹5 ಲಕ್ಷದಿಂದ ₹6.5 ಲಕ್ಷ.

  ​ವಿದೇಶಿ ಪೌರತ್ವ ಹೊಂದಿದವರಿಗೆ (NRI / Foreigners) ಸುಮಾರು $5,000 ದಿಂದ $6,500 ಡಾಲರ್,ಭಾರತೀಯ ರೂಪಾಯಿಗಳಲ್ಲಿ ಸುಮಾರು ₹4.2 ಲಕ್ಷದಿಂದ ₹5.5 ಲಕ್ಷಕ್ಕೂ ಹೆಚ್ಚು.

 ​ಕಠ್ಮಂಡುವಿನಿಂದ ಚೀನಾ/ಟಿಬೆಟ್ ಗಡಿಯವರೆಗಿನ ಸಾರಿಗೆ ಮತ್ತು ವಾಹನ ವ್ಯವಸ್ಥೆ,ಟಿಬೆಟ್ ಪ್ರವೇಶ ಪರವಾನಗಿ (Tibet Entry Permit) ಮತ್ತು ಚೀನಾ ಗ್ರೂಪ್ ವೀಸಾ ಶುಲ್ಕ ಸೇರಿರುತ್ತದೆ.
 
 ​ಯಾತ್ರೆಯ ಅವಧಿಯ ವಸತಿ, ಪೌಷ್ಟಿಕ ಸಾತ್ವಿಕ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ,
​ತುರ್ತು ಆಮ್ಲಜನಕ ಸಿಲಿಂಡರ್‌ಗಳು, ವೈದ್ಯಕೀಯ ತಂಡ ಮತ್ತು ಈಶಾ ಸ್ವಯಂಸೇವಕರ ನೆರವು,
​ಸ್ಥಳೀಯ ಶೆರ್ಪಾ (Sherpa) ಮತ್ತು ಟಿಬೆಟಿಯನ್ ಗೈಡ್‌ಗಳ ಸೇವೆ ಸೇರಿದೆ.
  ವಿಮಾನ ಟಿಕೆಟ್ ವೆಚ್ಚ, ವೈಯಕ್ತಿಕ ಕುದುರೆ ಅಥವಾ ಪೋರ್ಟರ್ ಬಾಡಿಗೆ, ಮತ್ತು ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ವೆಚ್ಚಗಳು ಈ ಮೂಲ ಶುಲ್ಕದ ಹೊರತಾಗಿರುತ್ತವೆ.

#ಇವರೆಲ್ಲ_ದುರಂತದಲ್ಲಿ_ಹೇಗೆ_ಸಿಲುಕಿದರು?..    
   ಅವರೆಲ್ಲ ಯಾತ್ರೆಯನ್ನು ಮುಗಿಸಿ ನೇಪಾಳದ ಮಾರ್ಗವಾಗಿ ವಾಪಸ್ ಮರಳುತ್ತಿದ್ದ ಯಾತ್ರಿಕರ ತಂಡವು #ಗೈರಾಂಗ್ ಇಮಿಗ್ರೇಷನ್ ಕಚೇರಿಯಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಕ್ಲಿಯರೆನ್ಸ್ ಪ್ರಕ್ರಿಯೆಗಾಗಿ ತಂಗಿತ್ತು.

   ಆ ಸಮಯದಲ್ಲಿ ಬೆಳಿಗ್ಗೆ ಸುಮಾರು 9:14 AM ಗೆ  ಮೇಲ್ಭಾಗದ #ಭೋಟೆ_ಕೋಶಿ ಉಪನದಿಯಲ್ಲಿ ಉಂಟಾದ ಬೃಹತ್ ಜಲಪ್ರಳಯವು ಕ್ಷಣಾರ್ಧದಲ್ಲಿ ಇಮಿಗ್ರೇಷನ್ ಕಚೇರಿ ಕಟ್ಟಡವನ್ನೇ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಯಿತು.  

  ಈಶಾ ಫೌಂಡೇಶನ್‌ನ 77 ಯಾತ್ರಿಕರು, 3 ಜನ ಸ್ವಯಂಸೇವಕರು,ಮುಖ್ಯ ಸಮನ್ವಯಕಾರ ಇಶಾಂಗ ಪ್ರವೀಣ್ ಸೇರಿದಂತೆ ಹಾಗೂ ಒಬ್ಬ ವೈದ್ಯರು ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ.  

  ಈ 80 ಜನರಲ್ಲಿ ಬಹುತೇಕರು ಅಮೆರಿಕ (22), ಕೆನಡಾ (12), ಆಸ್ಟ್ರೇಲಿಯಾ (11), ಯುಕೆಯಂತಹ (9) ವಿವಿಧ ದೇಶಗಳ ವಿದೇಶಿ ಪೌರತ್ವ ಹೊಂದಿರುವ ಯಾತ್ರಿಕರಾಗಿದ್ದರು.  

 ಆ ಸಮಯದಲ್ಲಿ ಈಶಾ ಫೌಂಡೇಶನ್‌ನಿಂದ ತೆರಳಿದ್ದ ಒಟ್ಟು 21 ತಂಡಗಳ ಪೈಕಿ 495 ಜನರು ಸುರಕ್ಷಿತವಾಗಿ ಮರಳಿದ್ದು ಇತರ ತಂಡಗಳು ಬೇರೆ ಸುರಕ್ಷಿತ ಕ್ಯಾಂಪ್‌ಗಳಲ್ಲಿದ್ದವು.  

​ಈ ದುರಂತದ ಮಾಹಿತಿ ತಿಳಿಯುತ್ತಿದ್ದಂತೆ #ಸದ್ಗುರು_ಜಗ್ಗಿ_ವಾಸುದೇವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಹಂಚಿಕೊಂಡು, ಕಣ್ಣೀರಿಟ್ಟು ತೀವ್ರ ಆಘಾತ ವ್ಯಕ್ತಪಡಿಸಿದರು.  

  ಅವರು ಸಾ ಗಾ  ಪ್ರದೇಶದಿಂದ ಗೈರಾಂಗ್ ಕಡೆಗೆ ತೆರಳಿ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಅನುಮತಿ ನೀಡುವಂತೆ ಚೀನಾ ಹಾಗೂ ಭಾರತೀಯ ರಾಯಭಾರ ಕಚೇರಿಗಳಿಗೆ ಮನವಿ ಮಾಡಿದರು.

  ​ಭಾರತೀಯ ವಿದೇಶಾಂಗ ಇಲಾಖೆ, ನೇಪಾಳ ಮತ್ತು ಚೀನಾದ ತುರ್ತು ರಕ್ಷಣಾ ಪಡೆಗಳು ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳ ಮೂಲಕ ನದಿ ಪಾತ್ರದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿವೆ.

 ​ ಟಿಬೆಟ್–ನೇಪಾಳ ಗಡಿಯ ಲೆಹೆಂಡೆ ಖೋಲಾ  ಹಾಗೂ ಭೋಟೆ ಕೋಶಿ – ತ್ರಿಶೂಲಿ ನದಿ ಪಾತ್ರ,ನೇಪಾಳದ #ರಸುವಾ ಮತ್ತು ನುವಾಕೋಟ್ ಜಿಲ್ಲೆಗಳು ಹಾಗೂ ಟಿಬೆಟ್‌ನ ಗೈರಾಂಗ್/ಜಿಲಾಂಗ್ ಪ್ರದೇಶದಲ್ಲಿ ಅದ ಈ ದುರಂತಕ್ಕೆ ಕಾರಣ ​ಹಿಮನದಿ ಕುಸಿತ ಮತ್ತು ಕಲ್ಲು-ಮಣ್ಣಿನ ಹಿಮಪಾತ, ಟಿಬೆಟ್ ಭಾಗದ ಸುಮಾರು 5,200 ಮೀಟರ್ ಎತ್ತರದಲ್ಲಿ ಹಿಮನದಿಯ ಬೃಹತ್ ಭಾಗ ಕಡಿದು ಕಣಿವೆಯ ನದಿಗೆ ಬಿದ್ದಿತು.

​  ಕುಸಿದು ಬಿದ್ದ ಬಂಡೆಗಳು ಮತ್ತು ಮಂಜುಗಡ್ಡೆ ನದಿಯ ಕಿರಿದಾದ ಪಾತ್ರವನ್ನು ಕ್ಷಣಾರ್ಧದಲ್ಲಿ ಬ್ಲಾಕ್ ಮಾಡಿ ಕೃತಕ ಜಲಾಶಯ ಸೃಷ್ಟಿಸಿದವು. 

  ಅಪಾರ ಪ್ರಮಾಣದ ನೀರು ಮತ್ತು ಒತ್ತಡ ತಾಳಲಾರದೆ ಈ ಕೃತಕ ತಡೆಗೋಡೆ ಒಡೆದ ಪರಿಣಾಮ ಕೇವಲ 30 ನಿಮಿಷಗಳಲ್ಲಿ 7 ರಿಂದ 9 ಮೀಟರ್‌ಗಳಷ್ಟು ಎತ್ತರದ ಕೆಸರು, ಬೃಹತ್ ಬಂಡೆಗಳು ಮತ್ತು ನೀರಿನ ಮಹಾ ಪ್ರವಾಹ ಕೆಳಭಾಗಕ್ಕೆ ನುಗ್ಗಿತು.

​ ಕೈಲಾಶ ಮಾನಸ ಸರೋವರ ಯಾತ್ರಿಕರು, ಪ್ರವಾಸಿಗರು ಮತ್ತು ಸ್ಥಳೀಯರು ಸೇರಿದಂತೆ ನೂರಾರು ಜನರು ನಾಪತ್ತೆಯಾಗಿದ್ದಾರೆ.

​ ಚೀನಾ-ನೇಪಾಳ ಗಡಿ ಸಂಪರ್ಕದ ಪ್ರಮುಖ ಕೇಂದ್ರವಾದ ಗೈರಾಂಗ್  ಹಾಗೂ ರಸುವಾಗಢಿ ಭಾಗದ ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.

  ಈ ಪ್ರವಾಹವು ತ್ರಿಶೂಲಿ ಮತ್ತು ನಾರಾಯಣಿ ನದಿಗಳ ಮೂಲಕ ಭಾರತದ ಗಂಡಕ್ ನದಿ ವ್ಯವಸ್ಥೆಗೆ ಹರಿದು ಬಂದ ಕಾರಣ ಭಾರತದ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೂ ಎಚ್ಚರಿಕೆ ವಹಿಸಲಾಯಿತು.

 ​ಕೋಶಿ ನದಿಯು ಮುಖ್ಯವಾಗಿ ಟಿಬೆಟ್ (ಚೀನಾ) ಮತ್ತು ನೇಪಾಳದ ಹಿಮಾಲಯ ಶ್ರೇಣಿಗಳಲ್ಲಿ ಹಿಮನದಿಗಳಿಂದ ಉಗಮಿಸುತ್ತದೆ.  

​ಇದು ಮೂರು ಪ್ರಮುಖ ಹಿಮಾಲಯ ಉಪನದಿಗಳಾದ ಅರುಣ್, ಸುನ್ ಕೋಶಿ ಮತ್ತು ತಮೂರ್  ನದಿಗಳು ಪೂರ್ವ ನೇಪಾಳದ 'ತ್ರಿವೇಣಿ' ಎಂಬಲ್ಲಿ ಸಂಗಮಗೊಳ್ಳುವುದರಿಂದ ರೂಪುಗೊಳ್ಳುತ್ತದೆ.  

 ​ನೇಪಾಳದಲ್ಲಿ ಇದಕ್ಕೆ 'ಸಪ್ತಕೋಶಿ'  ಎಂದೂ ಕರೆಯುತ್ತಾರೆ (ಏಳು ನದಿಗಳ ಜಾಲವನ್ನು ಹೊಂದಿರುವುದರಿಂದ).  

​ಕೋಶಿ ನದಿಯು ನೇರವಾಗಿ ಸಮುದ್ರವನ್ನು ಸೇರುವುದಿಲ್ಲ ಬದಲಾಗಿ ಇದು ಗಂಗಾ ನದಿಯ ಪ್ರಮುಖ ಉಪನದಿಯಾಗಿದೆ.
 
#ಗಂಗಾ_ನದಿಯೊಂದಿಗೆ ಸಂಗಮ: ಭಾರತದ ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯ ಕುರ್ಸೇಲಾ ಬಳಿ ಕೋಶಿ ನದಿಯು ಗಂಗಾ ನದಿಯನ್ನು ಸೇರುತ್ತದೆ.  

​ ಗಂಗಾ ನದಿಯೊಂದಿಗೆ ಸೇರಿದ ನಂತರ ಆ ನೀರು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಅಂತಿಮವಾಗಿ ಬಂಗಾಳಕೊಲ್ಲಿಯನ್ನ ಸೇರುತ್ತದೆ. 
 
 ಕುರ್ಸೇಲಾ ಬಳಿ ಕೋಶಿ ನದಿ ಗಂಗೆಯನ್ನು ಸೇರಿದ ನಂತರ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಂಡು 'ಗಂಗಾ' ಎಂದೇ ಮುಂದುವರಿಯುತ್ತದೆ.  

​  ಗಂಗಾ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸಿದಾಗ ಅದಕ್ಕೆ 'ಪದ್ಮಾ' ಎಂದು ಕರೆಯಲಾಗುತ್ತದೆ.

  ಮುಂದೆ ಇದು ಬ್ರಹ್ಮಪುತ್ರ (ಬಾಂಗ್ಲಾದೇಶದಲ್ಲಿ ಜಮುನಾ) ಹಾಗೂ ಮೇಘ್ನಾ ನದಿಗಳೊಂದಿಗೆ ಸೇರಿ, ಅಂತಿಮವಾಗಿ 'ಮೇಘ್ನಾ' ಎಂಬ ಹೆಸರಿನಿಂದಲೇ ಬಂಗಾಳಕೊಲ್ಲಿ ಸಮುದ್ರವನ್ನು ಸೇರುತ್ತದೆ.  

​ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಕೋಶಿ ನದಿಯನ್ನು 'ಕೌಶಿಕಿ' ಎಂದು ಕರೆಯಲಾಗುತ್ತಿತ್ತು.

 ಬಿಹಾರದಲ್ಲಿ ನಿರಂತರವಾಗಿ ದಿಕ್ಕು ಬದಲಿಸಿ ಪ್ರವಾಹ ಉಂಟುಮಾಡುವುದರಿಂದ ಇದನ್ನು "ಬಿಹಾರದ ಕಣ್ಣೀರು"  ಎಂದೂ ಕರೆಯಲಾಗುತ್ತದೆ.

  ನೇಪಾಳದ ಕಡಿದಾದ ಪರ್ವತ ಭೂಪ್ರದೇಶ, ನದಿಗಳ ಜಾಲ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿ ಹಠಾತ್ ಪ್ರವಾಹಗಳು (Flash Floods) ಆಗಾಗ ಸಂಭವಿಸುತ್ತವೆ. 

  ನೇಪಾಳದ ಇತಿಹಾಸದಲ್ಲಿ ಈ ಹಿಂದೆ ಅನೇಕ ಈ ರೀತಿಯ #ದುರಂತಗಳು ನಡೆದಿದೆ ಅತ್ಯಂತ ವಿನಾಶಕಾರಿ ಎನಿಸಿದ 2015ರ ಮಹಾ ಭೂಕಂಪ ಗೋರ್ಖಾ ಭೂಕಂಪ ದುರಂತ
​25 ಏಪ್ರಿಲ್ 2015ರ ಶನಿವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 11:56 AM ಗೋರ್ಖಾ ಜಿಲ್ಲೆಯ ಬಾರ್ಪಾಕ್',ಕಠ್ಮಂಡುವಿನಿಂದ ವಾಯುವ್ಯಕ್ಕೆ ಸುಮಾರು 80 ಕಿ.ಮೀ ದೂರದಲ್ಲಿ ಸಂಭವಿಸಿದ
​ ರಿಕ್ಟ ಭಾರತೀಯ ಟೆಕ್ಟೋನಿಕ್ ಪ್ಲೇಟ್ (Indian Plate) ಯುರೇಷಿಯನ್ ಪ್ಲೇಟ್‌ನ (Eurasian Plate) ಅಡಿಗೆ ನಿರಂತರವಾಗಿ ಚಲಿಸುತ್ತಿರುವ ಕಾರಣ ಉಂಟಾದ ಬೃಹತ್ ಭೂಗರ್ಭ ಒತ್ತಡ ಬಿಡುಗಡೆಯಾಗಿ ಈ ಪ್ರಬಲ ಭೂಕಂಪ ಸಂಭವಿಸಿತು.
 
 ​ ಈ ದುರಂತದಲ್ಲಿ ಸುಮಾರು 9,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 22,000ಕ್ಕೂ ಹೆಚ್ಚು ಜನರು ಗಾಯಗೊಂಡರು.

​ಎವರೆಸ್ಟ್ ಶಿಖರದಲ್ಲಿ ಹಿಮಪಾತ (Avalanche) ಸಂಭವಿಸಿ ಅನೇಕ ಪರ್ವತಾರೋಹಿಗಳು ಮೃತಪಟ್ಟರು.

 ​ಕಠ್ಮಂಡು ಕಣಿವೆಯಲ್ಲಿದ್ದ ಪ್ರಸಿದ್ಧ 'ಧರಹರಾ ಗೋಪುರ' ಸೇರಿದಂತೆ ಯುನೆಸ್ಕೋ ಪಾರಂಪರಿಕ ತಾಣಗಳು ಮತ್ತು ನೂರಾರು ಪ್ರಾಚೀನ ದೇವಾಲಯಗಳು ನೆಲಸಮವಾದವು.

​  ಸೆಪ್ಟೆಂಬರ್ 2024 ಕಠ್ಮಂಡು ಕಣಿವೆ ಪ್ರವಾಹ ಮಾನ್ಸೂನ್ ಕೊನೆಯಲ್ಲಿ ಸುರಿದ ಅತಿಭಾರೀ ಮಳೆ ಮತ್ತು ಮೇಘಸ್ಫೋಟದಿಂದ ಬಾಗ್ಮತಿ ನದಿ ಉಕ್ಕಿ ಹರಿದು 240ಕ್ಕೂ ಹೆಚ್ಚು ಜನರು ಮೃತಪಟ್ಟರು.
  
  ​ ಎವರೆಸ್ಟ್ ಪ್ರದೇಶದ ಥಾಮೆ ಗ್ರಾಮದಲ್ಲಿ ಹಿಮನದಿ ಸರೋವರ ಒಡೆದು ಹಠಾತ್ ಪ್ರವಾಹ ಉಂಟಾಗಿ ಇಡೀ ಗ್ರಾಮವೇ ಜಲಾವೃತವಾಯಿತು.  

  ​ಜೂನ್ 2021 ರಂದು ಸಿಂಧುಪಾಲ್‌ಚೌಕ್ ಜಿಲ್ಲೆಯ ಮೇಲಾಂಚಿ ನದಿ ಪಾತ್ರದಲ್ಲಿ ಭಾರಿ ಭೂಕುಸಿತ ಮತ್ತು ಮಳೆಯಿಂದ ಅಣೆಕಟ್ಟಿನಂತೆ ನಿಂತಿದ್ದ ನೀರು ಒಡೆದು ಹಠಾತ್ ಪ್ರವಾಹ ಸೃಷ್ಟಿಯಾಗಿ ಭಾರೀ ಹಾನಿ ಉಂಟುಮಾಡಿತು.  

  ಈ ವರ್ಷ ​ ಮೊನ್ನೆ ನಡೆದ ಆಗಸ್ಟ್ 2026 ಭೋಟೆ ಕೋಶಿ ನದಿ ದುರಂತ ಕೂಡ ಅಂತಹದ್ದೇ ಆಗಿದೆ.

  ಚೀನಾ-ನೇಪಾಳ ಗಡಿ ಭಾಗದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಭೋಟೆ ಕೋಶಿ ನದಿಯಲ್ಲಿ 30 ಅಡಿಗೂ ಎತ್ತರದ ಅಲೆಗಳೊಂದಿಗೆ ಹಠಾತ್ ಪ್ರವಾಹ ಉಕ್ಕಿ ಹರಿದು ನೂರಾರು ಮನೆಗಳು ಮತ್ತು ಮೂಲಸೌಕರ್ಯಗಳು ಕೊಚ್ಚಿಹೋದವು.  
  
  ಈ ಸಂದರ್ಭದಲ್ಲಿ ನಿಮ್ಮ ಪರಿಚಿತರಾಗಿರುವ ಯಾರಾದರೂ ನೇಪಾಳ ಪ್ರವಾಸದಲ್ಲಿದ್ದರಾ? ಅವರು ಸುರಕ್ಷಿತರಾಗಿದ್ದಾರ ಕಾಮೆಂಟ್ ಮಾಡಿ.

#nepala #tibet #china #koshiriver #splashflood 
#eshafoundation #sadguru #jaggivasudev

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...