BLOG ARTICLES 954. ಅತೀಂದ್ರೀಯ ಶಕ್ತಿ ಇದಿಯಾ? ನನ್ನ ಜೀವನದ ಹಲವು ಘಟನೆಗಳು ನನಗೆ ಅತೀಂದ್ರಿಯ ಶಕ್ತಿ ನಂಬುವಂತೆ ಮಾಡಿದೆ ಅಂತದರಲ್ಲಿ ಈ ಘಟನೆಯೂ ಕೂಡ ಒಂದು
#ಅತೀಂದ್ರಿಯ_ಶಕ್ತಿ_ಇದೀಯಾ? #ಇಲ್ಲದಿದ್ದರೆ_ಈರೀತಿ_ಘಟನೆಗೆ_ಕಾರಣ ? #ಇಂತಹ_ಅನೇಕ_ಘಟನೆ_ನನ್ನ_ಜೀವನದಲ್ಲಿ_ಅನುಭವ_ಆಗಿದೆ. #ಹಾಗಂತ_ಆ_ವಿಸ್ಮಯ_ಶಕ್ತಿ_ನನ್ನ_ನಿಯಂತ್ರಣದಲ್ಲಿಲ್ಲ. ಮನುಷ್ಯನ ಮನಸ್ಸಿಗೆ ದೃಷ್ಟಿಗೆ ಎದುರಿನ ವಸ್ತು ಪುಡಿ ಮಾಡುವ ಶಕ್ತಿ ಇದಿಯಾ? ಕೆಲವರಿಗೆ ನಿಸರ್ಗದಲ್ಲಿ ಹಿಂದಿನ ಜನ್ಮದ ಕೆಲ ಸನ್ನಿವೇಶಗಳು ಪುನಃ ಕಾಣುವಂತದ್ದು ಇರುತ್ತದೆ ಅನ್ನುತ್ತಾರೆ, ಇದೆಲ್ಲ ಸತ್ಯವಾ? ಕಾಕತಾಳಿಯನಾ? ನನ್ನ ಅನೇಕ ಅನುಭವದಲ್ಲಿ ಇದೂ ಒಂದು ಘಟನೆ ಕೇಳಿ... 1989 ರಲ್ಲಿ ಗಜಾನನ ಎಂಬ ನಮ್ಮ ಜಿಲ್ಲೆಯ ಪ್ರತಿಷ್ಠಿತ ಖಾಸಾಗಿ ಬಸ್ಸಿನಲ್ಲಿ ನಮ್ಮ ಊರು ಆನಂದಪುರಂನಿಂದ ಶಿವಮೊಗ್ಗಕ್ಕೆ ಆಗಿನ ಸಾಗರದ ಪತ್ರಕರ್ತ ತೀ.ನಾ. ಶ್ರೀನಿವಾಸ್ (ನಂತರ ಸಾಗರ ಪುರ ಸಭಾ ಅಧ್ಯಕ್ಷರಾಗಿದ್ದರು ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದೆವು. ಶಿವಮೊಗ್ಗ 30 km ಹಿಂದೆ ಇರುವಾಗ ನಾನು ಬಸ್ಸಿನ ಎಡ ಭಾಗದ ಗ್ಲಾಸ್ ದಿಟ್ಟಿಸುತ್ತಿದ್ದೆ....ಮನಸ್ಸಿನಲ್ಲಿ ಏನೋ ಒಂದು ರೀತಿ ಅನಿಸುತ್ತಿತ್ತು. ಆಗ ಗೆಳೆಯರು "ಏನು ಮೌನವಾಗಿ ಆಕಡೆ ನೋಡುತ್ತಿದ್ದಿಯಾ?" ಅಂದಾಗ ನಾನು ಒಂದು ರೀತಿ ಎಚ್ಚೆತ್ತು ನನಗೆ ಅನಿಸಿದ್ದು ಅವರು ಒತ್ತಾಯಿಸಿ ಕೇಳಿದಾಗ ಹೇಳಿದೆ ಆದೇನೆಂದರೆ "ಈ ಬಸ್ಸಿನ ಡೈವರ್ರ ಎಡ ಬಾಗದ ಗ್ಲಾಸ್ (ವಿಂಡ್ ಶೀಲ್ಡ್) ಒಡೆ...