Skip to main content

Posts

Showing posts with the label Govt should give him Rajyothsava Awarda

Blog number 948. ಆಸಮಾನ್ಯ ಡೊಳ್ಳಿನ ಕಲಾವಿದರಾದ ಕಣ್ಣೂರಿನ ಜೆ.ಸಿ.ಮಂಜಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬಾರದೇಕೆ? ಮ೦ಜಪ್ಪರ ರಷ್ಯಾ ಪ್ರವಾಸದ ಅನುಭವಗಳು, ಕು.ಶಿ.ಹರಿದಾಸ ಭಟ್ಟರ "ರಷ್ಯಾದಲ್ಲಿ ಡೊಳ್ಳಿನ ದಿಗ್ವಿಜಯ" ಪುಸ್ತಕದಲ್ಲಿ ಪ್ರಮುಖ ಕಲಾವಿದ ಜೆ.ಸಿ.ಮಂಜಪ್ಪ ಅಂತಲೇ ದಾಖಲಿಸಿದ್ದಾರೆ.

#ಅಸಮಾನ್ಯ_ಡೊಳ್ಳಿನ_ಕಲಾವಿದರು. #ಜಿ_ಸಿ_ಮಂಜಪ್ಪ_ಕಣ್ಣೂರು #ರಷ್ಯಾದಲ್ಲಿ_ಡೊಳ್ಳಿನ_ಪ್ರದರ್ಶನ_ನೀಡಿದವರು #ಕು_ಶಿ_ಹರಿದಾಸ_ಭಟ್ಟರು_ಬರೆದ_ರಷ್ಯಾದಲ್ಲಿ_ಡೊಳ್ಳಿನ_ದಿಗ್ವಿಜಯ_ಪುಸ್ತಕದಲ್ಲಿ_ಮುಖ್ಯಕಲಾವಿದ_ಜಿ_ಸಿ_ಮಂಜಪ್ಪ #ಎಂದೇ_ದಾಖಲಿಸಿದ್ದಾರೆ. #ಈ_ಬಾರಿಯ_ರಾಜ್ಯೋತ್ಸವ_ಪ್ರಶಸ್ತಿ_ಇವರಿಗೆ_ನೀಡ_ಬಾರದೇಕೆ ?    ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಗಳು ಎಂ.ಪಿ.ಪ್ರಕಾಶ್ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದಾಗ ರಷ್ಯಾ ಮತ್ತು ಭಾರತ ಕಲ್ಚರಲ್ ಎಕ್ಸ್ಚೆಂಜ್ ಪ್ರೋಗ್ರಾಂನಲ್ಲಿ ನಮ್ಮ ರಾಜ್ಯದಿಂದ ರಷ್ಯಾಕ್ಕೆ ಆಯ್ಕೆ ಆದ ತಂಡ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಕಣ್ಣೂರಿನ ಡೊಳ್ಳಿನ ತಂಡ ಮಾತ್ರ.    ಆಗಿನ ಕುಗ್ರಾಮದ ಗಂಡುಕಲೆ ಡೊಳ್ಳಿನ ಕಲಾವಿದರು ರಷ್ಯಾದಂತ ವಿದೇಶಕ್ಕೆ ವಿಮಾನದಲ್ಲಿ ಹೋಗುತ್ತಾರೆ ಅಲ್ಲಿ ಮೂರು ತಿಂಗಳು ಮಾಸ್ಕೋ- ತಾಷ್ಕೆಂಡ್ ಮುಂತಾದ ಪ್ರದೇಶದಲ್ಲಿ ನಮ್ಮ ರಾಜ್ಯದ ಕಲಾ ಪ್ರದರ್ಶನ ನೀಡುತ್ತಾರೆನ್ನುವ ಸುದ್ದಿಯೇ ರೋಮಾಂಚನವಾದ ಕಾಲ.   1987 ರಲ್ಲಿ ಉಡುಪಿಯ ಕು.ಶಿ.ಹರಿದಾಸ ಭಟ್ಟರು ಆಯ್ಕೆ ಆದ ಈ ಕಲಾವಿದರ ತಂಡದ ಮುಖ್ಯಸ್ಥರಾಗಿ ಹೋಗಿದ್ದರು.   ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಮತ್ತು ಎಂ.ಪಿ.ಪ್ರಕಾಶ್ ಮಾಸ್ಕೋದಲ್ಲಿ ನಡೆದ ಇವರ ಪ್ರದರ್ಶನ ನೋಡಲು ಹೋಗಿದ್ದರು, ಎಂ.ಪಿ.ಪ್ರಕಾಶ್ ನಮ್ಮ ಕಣ್ಣೂರಿನ ಡೊಳ್ಳಿನ ಕಲಾವಿದರ ಜೊತೆ ಕುಣಿದು ಕುಪ್ಪಳಿಸಿ ...